Wednesday, December 31, 2014

Tuesday, December 30, 2014

ಬೇತೂರಿನ ವಿಜಯಪಾಂಡ್ಯದೇವನ ಶಾಸನ

ದಾವಣಗೆರೆ ತಾಲ್ಲೂಕು ಬೇತೂರಿನ ವಿಜಯಪಾಂಡ್ಯದೇವನ ಅಪ್ರಕಟಿತ ಶಾಸನ
ಬುರುಡೇಕಟ್ಟೆ ಮಂಜಪ್ಪ
[ಶಕ 1033 ಖರಸಂವತ್ಸರ ಕ್ರಿ.ಶ. 1111 ಕಲ್ಯಾಣಿ ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲದೇವರು-ಆತನ ಮಹಾ ಮಾಂಡಳೇಶ್ವರ ವಿಜಯಪಾಂಡ್ಯದೇವರು - ಆತನ ಮಾಸಾಮಂತ ಹೆಮ್ಮಾಡಿ ಉದಿಯಾದಿತ್ಯ, ಆತನ ಪ್ರಧಾನ ದಂಡನಾಯಕ ಬಮ್ಮಯ್ಯನು ಬೇಲ್ತೂರ ದೇಮೇಶ್ವರ-ಸಂಗಮೇಶ್ವರ ದೇವಾಲಯಕ್ಕೆ ಭೂದಾನ ನೀಡಿ ಹಾಕಿಸಿದ ಶಾಸನ]
1 ಶ್ರೀ ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರಚಾರವೇ ತ್ರೈಲೋಕ್ಯ ನಗರಾರಂಭ ಮೂಲ
2 ಸ್ತಂಭಾಯ ಶಂಭುವೇ ||ನಮಸ್ತುಂಗ ಜಟಾಜೂಟ ಚಂದ್ರ ಚಂದ್ರಿಕಾಬೋಗ ಭೂತಯೇ
3 ಭವಾನಿ ದೋರ್ಲತಾಯ ಗಾಢ ಪರಿರಂಭಾಯ ಸಂಭುವೇ || ಸ್ವಸ್ತಿ ಸಮಸ್ತ ಭುವನಾಶ್ರಯ
4 ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ರಾಜಪರಮೇಶ್ವರ ಪರಮ ಭಟ್ಟಾರಕ ಸತ್ಯಾಶ್ರಯ ಕುಳತಿಳ
5 ಕಂ ಚಾಳುಕ್ಯಾಭರಣ ಶ್ರೀಮತ್ ಪ್ರತಾಪಚಕ್ರವರ್ತಿ ಜಗದೇಕಮಲ್ಲದೇವರು ವಿಜಯ ರಾಜ್ಯರಾಜ್ಯ ಮುತ್ತರೋ
6 ತ್ತರಾಭಿವೃದ್ಧಿ ಪ್ರವರ್ಧಮಾನಮಾಚಂದ್ರಾರ್ಕ ತಾರಾಂಬರಂ ಸಲುಮಿತ್ತಮಿರೆ ತತ್ಪಾದ ಪದ್ಮೋಪಜೀವಿ
7 *ಸ್ವಸ್ತಿ ಸಮದಿಗತ ಪಂಚಮಹಾ ಶಬ್ಧ ಮಹಾಮಾಂಡಳೇಶ್ವರಂ ಕಾಂಚಿಪುರವರಾದೀಶ್ವರಂ ಯದುವಂಶಾಂಬರ ದ್ಯು
8 ಮಣಿ ಸುಭಟಚೂಡಾಮಣಿ ಮಣಿಮಹೇಂದ್ರ ಮಣಿಮುಕುಟ ಕೋಟಿವಿಘಟಿತ ನಿಜವಿಜಯ
ಕರಕಂಕಣಂ ಲೀಲಾಮಾತ್ರ ಸಾದಿತ ಸಪ್ತಕೊಂಕಣಂ ಕನಕ ನಗರ ಶಿಳಾತಳ ಸ್ತಾಪಿತ ಪಾಠೀನಲಾಂಛನಂ ಜ
9 ಯಸ್ತಂಭಂ ದೂರೀಕೃತಾರಾತಿ ವೀರಾವಶ್ಠಂ ತಾಂಬ್ರಪಣ್ರ್ನೀಕ್ತಂ ಮೌಕ್ತಿಕ ಮುಕ್ತಾನೇಕ ರತ್ನಾಕರಾ
10 ಮುದ್ರಾಂಕಿತ ಸಮುದ್ರ ಭಾಡಾಗಾರಂ ಸಾರಂ ಮಳಯಗಿರಿ ಚಂದನ ನಂದನ ಮದ್ಯಾದೇಶ £ವೇಶಿತ ಶೃ
11 ಂಗಾರಗಾರಂ ಕಿಂಕರೀಕೃತ ಚೂತವಿತಾಳಂ ಸ್ವೀಕೃತಾನೇಕ ರಿಪು ನೃಪತಿ ಮಂಡಳಂ ಹೇಳಾ ನೃಪಾಳ ವೇಳಾನೀತಿ
12 ಜಳಶೈಳದುರ್ಗನಂದಿ ಕೃತಾರಾತಿ ವೀರಮಾಂಡಳಿಕ ವರ್ಗಂ || ಶ್ರೀ ಶಂಕರನಾರಾಯಣ ಚರಣಾ ಸ್ಮರಣ
13 ಪರಿಣಿತಾಂತಕರಣ ಯಾದವಾಭರಣ ಪಾಂಡ್ಯ ಕುಳಕಮಳ ಮಾರ್ತಾಂಡಂ ಪರಿಚ್ಛೇದಿ ಗಂಡಂ ರಾ
14 ಜಿಗಚೋಳ ಮನೋಭಂಗ ಶ್ರೀಮಜ್ಜಗದೇಕ ಮಲ್ಲದೇವರ ಪಾದಾಬ್ಜಬೃಂಗ ನಾಮಾದಿ ಸಮಸ್ತ ಪ್ರಶಸ್ತಿ ಸಹಿತ ಶ್ರೀಮ
15 ನ್ ಮಹಾಮಾಂಡಳೇಶ್ವರಂ ಶ್ರೀ ವಿಜಯ ಪಾಂಡ್ಯದೇವರು ನೊಣಂಬವಾಡಿ ಮೂವತ್ತಿರ ಚ್ಛಾಸಿರಮಂ ದುಷ್ಟ £ಗ್ರಹ ಶಿಷ್ಟ ಪ್ರತಿಪಾಳನಂ ಮಾ
16 ಡಿ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತ ಮಿರೆ ಶ್ರೀಮದುಚ್ಚಂಗಿಯ ನೆಲೆಬೀಡಿ£ಂ ಪ್ರಿಥ್ವೀ
17 ರಾಜ್ಯಂಗೆಯ್ಯುತ್ತಮಿರೆ ಚಮೂರಾಜ ಶ್ರೀಮನ್ಮಹಾ ಪ್ರಧಾನ ವಿಜಯಹೆಂಮಾಡಿ ದಂಡನಾಯಕರು
18 **************************************ಮ
19 ಲೆಯಾದಿರಾಜ ಮಹಾನಾಯಕ ಮಣಿ ವುದಿಯಾದಿತ್ಯನುಂ ನಾಯಕ ಬಮ್ಮಯ್ಯನು ಮ
20 **ಸಕವರಿಷ 1034ನೆಯ ಖರ ಸಂವತ್ಸರ ಮಾಘಬಹುಳ ಮಂಗಳವಾರ ಸೂ
21 ರ್ಯಗ್ರಹಣ ವ್ಯತೀಪಾತದಂದು ಹಿರಿಯ ಬೆಳ್ತೂರ ದೇಮೇಶ್ವರದೇವಗ್ರ್ಗೆ*****ಹಿರಿಯ ಕೆರೆಯ ಯೇರಿ
22 ಕೆಳಗೆ ಗದ್ದೆ ಮತ್ತರೊಂದು ಮೂಡಣಕೋಡಿಯ ಬಡಗಣ ಕೆಳಗೆ ಮತ್ತ
23 ರೆರಡು ಸಂಗಮೇಶ್ವರ ದೇವರಂಗ ಬೋಗಂಗಬೋಗ ಖಂಡಸ್ಫುಟಿತ ಜೀರ್ಣೋದ್ಧಾರಕ್ಕೆ ಸರ್ವನ
24 ಮಸ್ಯವಾಗಿ ಸಂಗಮೇಶ್ವರ ಪಂಡಿತಗ್ರ್ಗೆ ಧಾರಾಪೂರ್ವಕಂ ಮಾಡಿ ಕೊಟ್ಟರು|| ನ ವಿಶಂ
25 ವಿಷ ಮಿತ್ಯಾóಶು ದೇವಸ್ವಂ ವಿಷಮುಚ್ಛತೇ ವಿಷ ಮೇ ಕಾಕಿನಾಂ ಹಂತಿ ದೇವಸ್ವಂ
26 ಪುತ್ರ ಪೌತ್ರಕಂ | ವಿಂತೀ ಧರ್ಮವಂ ಪ್ರತಿಪಾಳಿಸುವಗ್ರ್ಗೆ ವಾರಣಾಸಿ ಕುರುಕ್ಷೇತ್ರದಲು
27 ಸಾಯಿರ ಕವಿಲೆಯಂ ವೇದಪಾರಂಗತರಪ್ಪ ಬ್ರಾಹ್ಮಣಗ್ರ್ಗೆ ಸೋಮಸೂರ್ಯ ಗ್ರಹಣದಂದು                                                          
28 ಮಹಾಪುರುಷನಕ್ಕು ಅದನ್ನಳಿದವರಾ ಮಹಹಾ ಪಾಪಿಯಕ್ಕು//ಸ್ವದತ್ತಾಂ ಪರದತ್ತಾಂ
29 ವಾ ಯೋ ಹರೇತಿ ವಸುಂಧರಾಂ ಷಷ್ಠಿರ್ವ***************** ಮಂಗಳ ಮಹಾ ಶ್ರೀ
ಶಾಸನದ ಮಹತ್ವ
ಚಾಲುಕ್ಯ ಚಕ್ರವರ್ತಿ ಒಂದನೇ ಪ್ರತಾಪ ಚಕ್ರವರ್ತಿ ಜಗದೇಕಮಲ್ಲನ ಮಹಾಮಾಂಡಳೇಶ್ವರನಾದ ಉಚ್ಚಂಗಿ ಪಾಂಡ್ಯರ ವಿಜಯಪಾಂಡ್ಯ ಒಬ್ಬನಲ್ಲ, ಇಬ್ಬರು ವಿಜಯ ಪಾಂಡ್ಯರು ಬರುತ್ತಾರೆಂಬ ಅಂಶವನ್ನು ಪ್ರಸ್ತುತಪಡಿಸುವುದೇ ಈ ಶಾಸನದ ಮಹತ್ವವಾಗಿದೆ.
ಮಹಾಮಾಂಡಳೇಶ್ವರ ಒಂದನೇ ವಿಜಯಪಾಂಡ್ಯನ ಶಾಸನ
ಚಾಳುಕ್ಯ ಚಕ್ರವರ್ತಿ ಒಂದನೆಯ ಪ್ರತಾಪಚಕ್ರವರ್ತಿ ಜಗದೇಕಮಲ್ಲನ ಆಳ್ವಿಕೆಯಲ್ಲಿ ಮಹಾಮಾಂಡಳೇಶ್ವರ ಮೊದಲನೇ ವಿಜಯಪಾಂಡ್ಯನ ಸಾಮಂತಾಧಿಪತಿ ಮಲೆಯಾದಿರಾಜ ವುದಿಯಾದಿತ್ಯ ಪೆರ್ಮಾಡಿದೇವನು ಆತನ ಪ್ರಚಂಡ ದಂಡನಾಯಕ ನಾಯಕಮಣಿ ಬಂಮಯ್ಯನು ಬೇಲ್ತೂರ ದೇಮೇಶ್ವರ ಮತ್ತು ಸಂಗಮೇಶ್ವರ ದೇವರ ಅಂಗಭೋಗರಂಗಭೋಗ, ಖಂಡಸ್ಫುಟಿತ ಜೀರ್ಣೋದ್ಧಾರಕ್ಕೆ ಹಿರಿಯ ಕೆರೆಯ ಕೆಳಗೆ ಭೂದಾನ ನೀಡಿ ಹಾಕಿಸಿದ ಶಾಸನ. ಕಾಲದ ಉಲ್ಲೇಖದಲ್ಲಿ ಸಕವರ್ಷ 1034 ಖರ ಸಂವತ್ಸರ ಮಂಗಳವಾರ ಸೂರ್ಯಗ್ರಹಣ ವ್ಯತೀಪಾತವಿದ್ದು ಖರ ಸಂವತ್ಸರವು ಸಕ 1033 ಆಗಿದ್ದು ಕ್ರಿ.ಶ. 1113 ಆಗುತ್ತದೆ. ಈ ಸಮಯದಲ್ಲಿ ಪ್ರತಾಪ ಚಕ್ರವರ್ತಿ ಇಮ್ಮಡಿ ಜಗದೇಕಮಲ್ಲನ ಆಳ್ವಿಕೆಯೂ ಆರಂಭವಾಗಿರುವುದಿಲ್ಲ. ಇಮ್ಮಡಿ ಜಗದೇಕಮಲ್ಲನ ಆಳ್ವಿಕೆಯ ಕಾಲ 1139ರಿಂದ 1150ರ ವರೆಗೆ. ಹಾಗಾದರೆ ಇಲ್ಲಿ ಬರುವ ಪ್ರತಾಪ ಚಕ್ರವರ್ತಿ ಜಗದೇಕಮಲ್ಲದೇವ ಮೊದಲನೆ ಜಗದೇಕಮಲ್ಲನಾಗಿದ್ದಾನೆ.
ಮಹಾಮಾಂಡಳೇಶ್ವರ ವಿಜಯಪಾಂಡ್ಯನ ಆಳ್ವಿಕೆಯ ಕಾಲ ಸು. ಕ್ರಿ.ಶ. 1168 ರಿಂದ 1208 ರವರಗೆ ಇಲ್ಲಿ ಬರುವ ಕಾಲಕ್ಕು ಈ ವಿಜಯಪಾಂಡ್ಯನಿಗೂ ಹೊಂದುವುದಿಲ್ಲ. ಶಾಸನಗಳ ಪ್ರಕಾರ ಕ್ರಿ.ಶ.1108 ಮತ್ತು 1110ರಲ್ಲಿ ವಿಜಯಪಾಂಡ್ಯನು ಜಗದೇಕಮಲ್ಲನ ಆಳ್ವಿಕೆಯಲ್ಲಿ ಮಹಾಮಾಂಡಳೇಶ್ವರನಾಗಿ ಆಳುತ್ತಿದ್ದ ಮಾಹಿತಿ ಸಿಗುತ್ತದೆ. ಹೀಗಾಗಿ ಇಲ್ಲಿ ಬರುವ ವಿಜಯಪಾಂಡ್ಯನನ್ನು ಮೊದಲನೇ ವಿಜಯಪಾಂಡ್ಯನೆಂದು ಹೇಳಬಹುದು. ಆದರೂ ಇದೇ ಅಂತಿಮವಲ್ಲ. ಬಾಗಳಿ ಕ್ರಿ.ಶ.1108 (ಹರಪ-180), ಬಾಗಳಿ, ಕ್ರಿ.ಶ.1110 (ಹರಪ-181), ಚಿತ್ರದುರ್ಗ ಕ್ರಿ.ಶ.1124 (ಚಿತ್ರ-13), ಹಾಗು ಪ್ರಸ್ತುತ ಬೇತೂರು ಕ್ರಿ.ಶ.1113 (ದಾವಣ-ಬು.ಮ) ಶಾಸನಗಳ ಪ್ರಕಾರ ಕ್ರಿ.ಶ.1108 ರಿಂದ 1124ರವರೆಗೆ ಒಂದನೇ ವಿಜಯಪಾಂಡ್ಯ ಆಳ್ವಿಕೆ ಮಾಡಿದ್ದನೆಂಬ ಅಂಶ ಕಂಡುಬರುತ್ತದೆ.
ಆದರೆ ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯದ ಚಕ್ರವರ್ತಿ ಆರನೇ ವಿಕ್ರಮಾದಿತ್ಯನಾಗಿದ್ದು ಪ್ರತಾಪ ಚಕ್ರವರ್ತಿ ಜಗದೇಕಮಲ್ಲನೆಂಬ ಹೆಸರಿನ ಆತನ ಸಹೋದರನೋ, ಸಾಮಂತನೋ ಇದ್ದಿರಬೇಕು ಅಥವಾ ಆರನೇ ವಿಕ್ರಮಾದಿತ್ಯನಿಗೇ ಈ ಬಿರುದು ಇತ್ತೇ ಎಂಬುದನ್ನು ಶೋಧಿಸಬೇಕಾಗಿದೆ.
 `ಕುಂಭಶ್ರೀ’, 789/11, ಜಯನಗರ `ಎ’ ಬ್ಲಾಕ್, ದಾವಣಗೆರೆ-577004.

Saturday, December 27, 2014

ಹಳ್ಳಿಕೆರೆ ರಾಷ್ಟ್ರ ಕೂಟ ಅಸಗನ ಶಾಸನ


ಹರಪನಹಳ್ಳಿ ತಾಲ್ಲೂಕು ಹಳ್ಳಿಕೆರೆ ರಾಷ್ಟ್ರಕೂಟರ
ಅಸಗನ ಶಾಸನ
ರಾಘವೇಂದ್ರಾಚಾರಿ ಕೆ.ಎಂ
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು, ಹಳ್ಳಿಕೆರೆ ಗ್ರಾಮವು ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ಅಂತರದಲ್ಲಿದೆ. ಈ ಗ್ರಾಮದ ಕೆರೆಯಲ್ಲಿರುವ ಕಲ್ಲೇಶ್ವರ ದೇವಾಲಯವು ಬಹಳ ಪ್ರಾಚೀನತೆಯನ್ನು ಹೊಂದಿದೆ. ಈ ದೇವಾಲಯ ದಕ್ಷಿಣ ಭಾಗದ ಗೋಡೆಗೆ ನಿಲ್ಲಿಸಿರುವ ಎರಡು ಶಾಸನಗಳಲ್ಲಿ ಒಂದು ಶಾಸನವು ರಾಷ್ಟ್ರಕೂಟರ ಅಸಗರಸನು ಕ್ರಿ.ಶ.1073ರಲ್ಲಿ ಸ್ವಯಂಭೂ ಮಲ್ಲಿಕಾರ್ಜುನದೇವರು ಮತ್ತು ಆದಿತ್ಯದೇವರ ದೇವಾಲಯ ಮತ್ತು ಗೋಪುರವನ್ನು ಕಟ್ಟಿಸಿ, ದೇವಾಲಯದ ಪೂಜಾ ಕೈಂಕರ್ಯಗಳಿಗೆ ಭೂದಾನವನ್ನು ಮಾಡಿದ್ದಂತೆ ತಿಳಿಸುತ್ತದೆ.
ಪ್ರಸ್ತುತ ಶಾಸನವು ರಾಷ್ಟ್ರಕೂಟರ ಅಸಗರಸನ ಪರಾಕ್ರಮವನ್ನು ವರ್ಣಿಸಲು ಮೀಸಲಾಗಿರುವ ಶಾಸನವಾಗಿದೆ. ಈ ಶಾಸನದಲ್ಲಿ ಮೂವತ್ತು ಸಾಲುಗಳಿದ್ದು, ಯಾವುದೇ ದೇವತಾ ಶ್ಲೋಕಗಳಿಲ್ಲದೆ ನೇರವಾಗಿ ಅಸಗರಸನನ್ನು ಅವನ ವೀರ ಪರಾಕ್ರಮವನ್ನು ವರ್ಣಿಸುತ್ತದೆ. ಈ ಶಾಸನದ ಆರಂಭದ ಭಾಗ ಬೇರೊಂದು ಕಲ್ಲಿನಲ್ಲಿದೆ. ಆ ಶಾಸನದ ಶೋಧ ಮಾಡಬೇಕಾಗಿದೆ. ಈ ಶಾಸನವು ಅಸಗರಸನು ಸೂರ್ಯ ವಂಶದಲ್ಲಿ ಉದ್ಭವಿಸಿದ ಕಣ್ವನಿಗಿಂತ ಮಿಗಿಲಾದ ವೀರಲಕ್ಷ್ಮಿಯನ್ನು ಧರಿಸಿದ ಸತ್ಕ್‍ವೀಂದ್ರ ನೆನೆಸಿ ಕೀರ್ತಿಲಕ್ಷ್ಮಿ ಒಲಿಸಿಕೊಂಡು ವಿಜೃಂಭಿಸಿದನು. ರಟ್ಟರಾಜೇಂದ್ರಭೂಪ ಎಂದು ಎತ್ತೆತ್ತ ನೋಡಿದರು ಅಸಗರಸನ ಕೀರ್ತಿಯೇ ತುಂಬಿರಲು ಧೀರ ವಿಕ್ರಮ ಭೂಪತಿ ರಟ್ಟನಾರಾಯಣನೆಂಬ ಕೀರ್ತಿಗೆ ಪಾತ್ರವಾಗಿದ್ದಾನೆ.
ರಾಷ್ಟ್ರಕೂಟರ ಶಂಕರಗಂಡನ ಪೂರ್ವಜರಲ್ಲಿ ಅಸಗರಸನ ಉಲ್ಲೇಖ ಉಪ್ಪಿನ ಬೆಟಗರಿ ಮತ್ತು ಕೊಲ್ಲಿಪಾಕಿ ಶಾಸನಗಳಲ್ಲಿ ಬರುತ್ತದೆ. ಈ ಮನೆತನದ ತಲೆಮಾರಿನಲ್ಲಿ ಒಬ್ಬ ವ್ಯಕ್ತಿಗೆ ಈ ಹೆಸರನ್ನಿಟ್ಟುದ್ದು, ಈ ವಂಶದ ಪಾರಂಪರಿಕ ಬಿರುದುಗಳೊಂದಿಗೆ ಈತನ ಹೆಸರಿನ ಅಸಗೇಶ್ವರ ದೇವಾಲಯಗಳು ಇವೆ. ಈ ಅರಸನ ವಿಷಯವಾಗಿ ಇನ್ನು ಶೋಧನೆ ನಡೆಯಬೇಕಿದೆ.
ಶಾಸನಪಾಠ
1 ಆತನಕ್ಷ ಚೋಳ ಮಾಡುತರದಿ . . ನಿದ್ದರಣ್ಯಾನ್ಮಕ್ಷರಕ್ರ . . . . . ಮ.ಕ್ಷ . . . ನಂ
2 ಗತರಾ.ದನ್ತಿಯೊಳಿಕಲೆವಿವಿೂಗಳನಳದ್ವಿಕ್ರಮಶ್ರೀ . . . ಣ ಪೇಳ
3 ಯಾ£ಡುಞವಾ : ಣ್ಡನದಂಲ್ಯಾಕಾನ್ತಮಂ ಪಕ್ಷದ್ವಳಿಸಗರಿಪುಳ್ವ . ಕಸ್ದ . ಭೂಪ|| ಶ್ರೀಣೇತ್ರಾ
4 ಶ್ರೀಯಂತಕ್ರ್ಕಯ್ಯ ವಕ್ಷ ಸ್ಥಳದೊಳವಿಸಿಕಣ್ವಣೋಲ್ತೊ ಮೇಲ್ವಾಯ್ದ ವೀರಶ್ರೀ
5 ಯಂಕೈಕೊಣ್ಡ | ದೋದ್ರ್ದಣ್ಡದೊಳಿರಿಸಿ ವಹಾಧಿಸ್ತಾವತನೈಸದಿಂ ವಾರ್ಕಶ್ರೀಯಂತಾಳ್ದಯ್ದ
6 ವಕ್ತ್ರಾಂಬು ಜಗೋಳಿರಿಸಿಪೃಇಷ್ಟಾತ್ರ್ಥಮಂ ಕೊಟ್ಟು ಕೀರ್ತಿಶ್ರೀಯಂ ಸ್ವೇಛ್ಛಾದಿಹಾರಕ್ರಮದಳಿರಿಸುಗಂರ
7 ಟ್ಟ ಮಾತ್ರ್ತಾಣ್ಡದೇವ || ಸಂಗರದೇ(ಳ್ದೆ)     ಂಬಿದರಕಂತ    ದಿದೇಜಯಾಂಗ ನಾಸಮಾಲಿಂಗನೆ ಗೆಯ್ದುವ.
8 ರಳವಟ್ಟಿರೆ ಮಾಡಿದ £ನ್ನ ಬೀರಚಾಶಾಂ: ನೆಯರ್ಕಳಾ (ನ್ನ) ಲಿಯಲಾರ್ಕದ . . . .ಯ್ದಗಣ್ಡರನೆಯ್ದೆಸೆಹ್ದಾವೆ
9 ಟಂಗೋಳಿಸಿತ್ತೂಗಣ್ಡಮುಮದರ್ಪಣಗಣ್ಡರ ಹಿವ ಭೂಪತಿ || ಆವಿಭೂಭ್ರಿದ್ಗೋತ್ರಿಗೋತ್ರಾಛಳಕುಳದೊಳೀ
10 ಶಂ ಬನ್ದುವಗ್ರ್ಗೊಬ್ಟಿಂನ(ವಾ) ಸರನಾಥಂ ಸತ್ಕವೀಂದ್ರ ದ್ವಿಜಮುನಿಜಂನರದ್ವಪ್ರಮಂವೀರ. . ತಾತಾರಾಳ್ದು ಪಾಂಗಾಸಿತಂದಿ
11 ವರಸರಸಸರಶ್ಚಂದ್ರಮಂ ಕೀತಿರ್() ಲಕ್ಷ್ಮೀಧರಹಾಸಂ ಸ್ತೈ ಪು ಸ್ವ ನ್ಮ ಣಿ ಮಯಮುಣಳಂರಟ್ಟರಾಜೇಯ
12 ಭೂಪ|| ಛಲದಿಂ ನಮ್ಮಂದು ಚೋಳ ದ್ವೀರದ ಪುಟಗಳದ್ವಿತ್ತೆದಣ್ಡಾದುದೆಲ್ಲಂ ತಲುಸೆದ್ದ್ಯಾಟಲ್ಕೆನಿನಾಂ
13 ತಿ   ದಿ   ದೇದೆಯೊಳುವ್ಯಾಳಮಾಣ್ಡಾಳೆಕಂಬ ಸ್ತಳ ನಿಯ್ರ್ಯಾದ್ರಕ್ತಮುಕ್ತಾತತಿವಿತತಿಗಳಿಂ . ಸಂಗರಪ್ರಾಂಗ
14 ಣಂ ಪೋವಲಿಗೆಯ್ದಂತಿ     ದಾಶ್ಚಯ್ರ್ಯಂಮ(ನೊ) ದವಿಷ್ಟಾತ್ರ್ಥಕೊಂತೆÀ್ತಕಾಂತೆಯಭೂಪಾ||ಮದನ(ವಿ)ರೋದಿ
15 ಗಿಲ್ಲದವಿಭೂತಿಮಹಾತ್ಪತೆಗೆಲ್ಲದೊಂದು ಸಂಪದವಿನ . . ಸಹಾಪಿ . . . ವಿಜೇಂದ್ರದಂತಿಗಿ.
16 ಲ್ಲದಮದದಾನಮಂಬುಗಿದ್ವಿಗಿಲ್ಲದ ಪಾರಗಂಭೀರ ಮಾಗ್ಗೆವಿಲ್ಲದ . ಗ್ವಿದ್ಯೆಯ(ಬ)ಣ್ನಿಸುವೊಂದೊಪ್ಪದೆ
17 ವಿಕ್ರಮಧೀರಭೂಪತಿ ||ಎತ್ತೆತ್ತಲಸಗನ ಪೇವ್ದಿತ್ತೆತ್ತಲಾ ಚಕ್ರಿಯೋ . . . . .(ಶಿ)ಮಿ  ್ದಮ  ್ದನಯಂಬೆ
18 ತ್ತೂಪತಕಲಿಸಿಸಲೆಡಿಗ್ಭಿತ್ತಿವರಂ ಪೇಕ್ಷಿಸುಚ್ಚಿದಳ್ಳಿಸುತಿರ್ಕು || ಹೊಚ್ಚಾ . . . . ಜ.ಳದಿಲೆರೊರ್ವರೆವರನ
19 ಮತ್ತಸೇತೂವಿತ್ತಲ್ನಹಿಮಹತ್ಪಕ್ಷಂತಂಮೆಮೆರತಜದ ಪಬ್ರ್ಬನಿಸಿದಂರು(ದಿ)ಸಿರಟ್ಟನಾರಾಯಣನ@|
20 ಆತನರಿಪುನೃಪರಬಲಮೆನೆತೆಣ ತ್ಯಮನವಯ ವದೇಮಾಂಗಲ ಸಗಂನೆಕೊಂತಂತಿನಿ (ಣ) ದೇರಳ್ಗನೆಯ್ದವಾಸು
21 ಗಿಯೆನೇರಣಮುಖದೊಳಾನಿಹಶ್ರಮು . ಮುಂಚೊಕ್ರ್ಕ || ಭುವನಕಾದ.ರದಪ್ಪಮನದಿಪ್ರ್ಪಂ£ನ್ನಯಗೆಣ
22 ತಕ್ರ್ಕನೋಸ್ನವಬಿಪಾವಾಸದೊ   . . . ಮಲ್ಯಾವರಲ್ಪಚದಣ್ಡ . ಗಳ್ವ ಪತ್ತು . . ಮಿವ್ವೆತ್ತುಚೊತ್ತೂವಕುಹಳ್ಚಾದಕ
23 ಪ್ಪಿಸುವಾಂಕೆಗೊಳ್ವಖಿಚ್ರ್ಚುವಸೆಳೆವುಚ್ರ್ಚ . ಗಪ್ಪೆಶಷತ್ತನ್ಯತಗಣ್ದರ . . ಭೂಪತಿ || ಪರಚಕ್ರಾದ್ವಂ
24 ಚೋಳಾಸುರಕಟಕಮುರದ್ವಂಸಿಞಪ್ಪೆಮ್ಮಹಾಗಣ್ಡರ . . . . . . ನಿನ್ನೆದಳಕೆ ಪರಲೋರಳ್ಕಯ್ಯ
25 ಮತ್ತ್ರ್ಯವನಿಪ . . . . ಯಿಲ್ಯುಕೊಡ . . . ದ್ವವ.ಸೆ . . . . . . ಳು . . ಸರಪು
26 ದು . . . ದ್ರಾಹನದಿವಿದಿವಿ . . . .  ಯಮಾವ್ಯೆ . . . . . . . . . . ಣಿಲ್ಲಳಂಮುಡಿ . . ಣ್ನಂ . . .
27 ಬಿದಪಣ್ಡು . . ತಳಿತೆಮಿದ್ದಳ ಪವಣ್ಬಪೇತಿಪು . . . . . . . . . . . .ರೆದಿರೆಕ . . . ಟ್ಟಿಪಿ . . . . .
28 ಸವಮಂನಸ . . . . ಚಾಳುತೂಂಪ . ಸುತ್ಯ . ಲ್ದ . ಬಿರಸಿ . ರಿ . ತೋಟಿದೆ ಪಲರೊದೆಗಣ್ಡನಂ
29 ಶ್ರೀರಟ್ಟಾನ್ವಯೇಸಂದೇತಮಂತಕೋತೆಯ ಭೂಭೂದೇಃತತ್ಪಾದಪ . ಪಚಿಲಿರತ್ನರಾ . . .
30 ಲಿಖ್ಯತೇ | ಶ್ರೀ
 ಟೈಲ್ಸ್ ಮೇಸ್ತ್ರಿ, 3ನೇ ಕ್ರಾಸ್, ಭಾರತ್ ಕಾಲೋನಿ, ದಾವಣಗೆರೆ-3.



Thursday, December 25, 2014

ಮರುವಸೆಯ ಕದಂಬರ ಕಾಲದ ಅಪ್ರಕಟಿತ ಶಾಸನ


ತೀರ್ಥಹಳ್ಳಿ ತಾಲ್ಲೂಕು ಮರುವಸೆಯ ಕದಂಬರ ಕಾಲದ
ಅಪ್ರಕಟಿತ ಶಾಸನ
ಪೆÇ್ರ ಜಿ.ಕೆ. ದೇವರಾಜ ಸ್ವಾಮಿ
ತೀರ್ಥಹಳ್ಳಿ ತಾಲ್ಲೂಕಿನ ಮರುವಸೆಯು ಪೌರಾಣಿಕ ಕಥಾನಕಗಳನ್ನೊಗೊಂಡು ತನ್ನ ಪ್ರಾಚೀನತೆಯನ್ನು ತಿಳಿಸುತ್ತದೆ. ಮರುವಸೆ (ಮೃಗವಧೆ)ಯಲ್ಲಿ ಪ್ರಾಚೀನ ಕಾಲದ ಆದಿ ಮಾನನು ಕ್ರಿ.ಪೂ. ಕಾಲದಲ್ಲಿ ಬರೆದ ಬಂಡೆಯ ರೇಖಾಚಿತ್ರಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೂತನ ಶಿಲಾಯುಗದ ಆಯುಧಗಳು ದೊರೆತಿದೆ.1
ಮರುವಸೆಯಲ್ಲಿ ಕೆಳದಿ ಅರಸರ ಕಾಲದಲ್ಲಿ ಜೀರ್ಣೋದ್ಧಾರವಾದ ಮಲ್ಲಿಕಾರ್ಜುನ ದೇವಾಲಯವಿದೆ. ದೇವಾಲಯದ ಆವರಣದಲ್ಲಿ ಕ್ರಿ.ಶ. 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ತ್ರುಟಿತ ಶಾಸನವಿದೆ. ಕ್ರಿ.ಶ. 1162ರ ಕೋಡಿಮಠದ ಶಾಸನದಲ್ಲಿ ಮರುವಸೆಯನ್ನ ಕೇದಾರೇಶ್ವರ ದೇವಾಲಯದ ಕೈಂಕರ್ಯಗಳಿಗಾಗಿ ದಾನ ನೀಡಿದ್ದನ್ನು ದಾಖಲಿಸಿದೆ.2
ಮಲ್ಲಿಕಾರ್ಜುನ ದೇವಾಲಯವು ‘ಬ್ರಾಹ್ಮೀ’ ಎಂಬ ಚಿಕ್ಕನದಿಯ ದಂಡೆಯ ಮೇಲಿದೆ. ಇಲ್ಲಿಂದ ಎರಡು ಕಿ.ಮೀ. ದೂರದಲ್ಲಿ ಇದೇ ನದಿಗೆ ಹೊಂದಿಕೊಂಡಿರುವ ಬಂಡೆಯಲ್ಲಿ ಆದಿಮಾನವನು ಬರೆದ ಚಿತ್ರಗಳಿವೆ.
ಪ್ರಸ್ತುತ ಶಾಸನವು ಪ್ರಸ್ತುತ ದೇವಾಲಯದ ಹಿಂಭಾಗದ ಚೌಕಿಯ ಗೋಡೆಯಲ್ಲಿ ಸ್ಥಾಪಿತವಾಗಿದೆ. ಕಣಶಿಲೆಯಲ್ಲಿರುವ ಶಾಸನವು ಸುಮಾರು ಎರಡು ಅಡಿ ಉದ್ದ ಹಾಗೂ ಒಂದೂವರೆ ಅಡಿ ಅಗಲವಾಗಿದೆ. ಶಾಸನವು ಯಾವುದೇ ಚಿತ್ರಗಳಿಲ್ಲದೆ ಎರಡು ಸಾಲುಗಳಲ್ಲಿ ಕ್ರಮವಾಗಿ ನಾಲ್ಕು ಅಕ್ಷರದಂತೆ ಒಟ್ಟು ಎಂಟು ಅಕ್ಷರಗಳನ್ನು ಹೊಂದಿದೆ. ಅಕ್ಷರಗಳು ಸರಾಸರಿ ಎರಡೂವರೆ ಇಂಚು ಉದ್ದ ಹಾಗೂ ಎರಡು ಇಂಚು ದಪ್ಪವಾಗಿದ್ದು ಅಲಂಕಾರಯುತವಾಗಿದೆ. ಶಾಸನ ಪಾಠ: 1. ಗು ವ ಕ ದು, 2. ಯ ಮ ವಾ ದ ಅಕ್ಷರಗಳ ತಲೆಕಟ್ಟುಗಳನ್ನು ಚೌಕ ಮತ್ತು ಆಯುತಾಕಾರದಲ್ಲಿ ರಚಿಸಿ ಆಳವಾಗಿ ಕೊರೆಯಲಾಗಿದೆ. ಮೊದಲ ಸಾಲಿನ ಅಕ್ಷರಗಳಿಗೆ ಕೊಂಬು ನೀಡುವಾಗ ತಂಬಾ ಕೆಳಮುಖವಾಗಿ ಇಳಿಸಿ ಎಡದಿಂದ ಮೇಲ್ಭಾಗಕ್ಕೆ ಚಲಿಸಿ ಮೂಲ ಅಕ್ಷರಕ್ಕೆ ಸೇರಿಸಿ ಕೊಂಬು ನೀಡಲಾಗಿದೆ. ‘ವ’ ಅಕ್ಷರವನ್ನು ಕೆಳಮುಖವಾಗಿ ಇಳಿಸಿ ತುಂಬಾ ಉದ್ದರಚನೆಯನ್ನು ಹೊಂದಿದ್ದು ತಲೆಕಟ್ಟು ಮತ್ತು ಮೂಲ ಅಕ್ಷರದ ಅಂತರವನ್ನು ಹೆಚ್ಚಿಸಿದೆ.
‘ಕ’ಕಾರವು ‘ವ’ಕಾರದಂತೆ ಕಂಡರೂ ‘ಕ’ ಅಕ್ಷರದ ಅಡ್ಡಗೆರೆಯು ಬಲಕ್ಕೆ ಮುಂದುವರೆದು ಬಾಗಿದೆ. ‘ಕ’ ಅಕ್ಷರದ ಎಡಭಾಗ ಮತ್ತು ಬಲಭಾಗದಲ್ಲಿ ಕಲ್ಲುಚಕ್ಕೆ ಎದ್ದಿದೆ.
ಎರಡನೆಯ ಸಾಲಿನಲ್ಲಿ ಸಮಚೌಕಾಕೃತಿಯಲ್ಲಿ ಅಕ್ಷರಗಳಿದ್ದು, ತಲೆಕಟ್ಟನ್ನು ಚೌಕವಾಗಿ ರಚಿಸಲಾಗಿದೆ. ‘ವ’ ಅಕ್ಷರದ ತಲೆಕಟ್ಟು ಬಲಕ್ಕೆ ವೃದ್ಧಿಸಿ ತ್ರಿಕೋನಾಕೃತಿ ಹೊಂದಿದ್ದು. ‘ವಾ’ ದೀರ್ಘಾಕ್ಷರವನ್ನು ಸೂಚಿಸುವಂತೆ ರಚಿಸಿದೆ. ಬಲಭಾಗದ ರೇಖೆಗೆ ಸಮಾನಾಂತರ ರೇಖೆಯನ್ನು ಎಳೆದಿದೆ. ಇದು ಶಿಲ್ಪಿಯ ಅಚಾತುರ್ಯವೋ ಅಥವಾ ‘ವಾ’ ದೀರ್ಘಸೂಚನೆಯೇ ತಿಳಿಯದು.
ಈ ರೀತಿಯ ಲಿಪಿ ಸ್ವರೂಪದ ಕದಂಬ ಶಾಸನಗಳು ಕರ್ನಾಟಕದಲ್ಲಿ ದೊರೆತಿಲ್ಲದಿದ್ದರೂ ಸಾಮಾನ್ಯ ಹೋಲಿಕೆ ಇರುವ ಒಂದು ಶಾಸನ ಚಿತ್ರದುರ್ಗದ ಚಂದ್ರವಳ್ಳಿ ಸಮೀಪ ಹುಲಿಗೊಂದಿಯ ಬಂಡೆಯ ಮೇಲಿದೆ.3 ಇದರಲ್ಲಿ ಮೂರು ಅಕ್ಷರಗಳಿದ್ದು ‘ಮಯಮ’ ಎಂದಿದೆ. ಈ ಶಾಸನದ ‘ಮ’ ಮತ್ತು ‘ಯ’ ಅಕ್ಷರಗಳು ಮರುವಸೆಯ ಶಾಸನದ ‘ಮ’ ಮತ್ತು ‘ಯ’ ಅಕ್ಷರಗಳನ್ನು ಹೋಲುತ್ತವೆ. ಆದರೆ ಮರುವಸೆಯ ಶಾಸನದ ಅಕ್ಷರಗಳ ತಲೆಕಟ್ಟು ಸ್ಪಷ್ಟ ಚೌಕಾಕಾರ ಹೊಂದಿದ್ದು ಸ್ಪಷ್ಟ ಕದಂಬ ಲಿಪಿಯನ್ನು ಹೊಂದಿದೆ. ಚಿತ್ರದುರ್ಗದ ಶಾಸನ ಲಿಪಿಯು ಆಂತರಿಕ ಆಧಾರಗಳಿಂದ ಶಾತವಾಹನರ ಕಾಲದ್ದೆಂದು ಪÉÇ್ರ. ಲಕ್ಷ್ಮಣ ತೆಲಗಾವಿ ಅವರು ಕೃತಿಯಲ್ಲಿ ತಿಳಿಸಿದ್ದಾರೆ.4
ಮರುವಸೆಯ ಶಾಸನವು ಕದಂಬ ಕಾಲದ್ದೆಂದು ಸ್ಪಷ್ಟತೆಗೆ ಕಾರಣ ಲಿಪಿ ಸ್ವರೂಪ ಹಾಗೂ ಮಲ್ಲಿಕಾರ್ಜುನ ದೇವಾಲಯದ ಬಲಭಾಗದ ಕಾಡಿನಲ್ಲಿ ಗುರುತಿಸಲಾಗುತ್ತಿರುವ ಅರಮನೆ ಕೋಟೆ ಎಂದು ಗುರುತಿಸುತ್ತಿರುವ ಸ್ಥಳದ ಪ್ರಾಚ್ಯಾವಶೇಷಗಳು. ಇಲ್ಲಿ ಎತ್ತರವಾದ ದಿಣ್ಣೆ ಹಾಗೂ ಗೋಡೆ ರೀತಿಯಲ್ಲಿರುವ ರಚನೆ, ತಳಪಾಯಗಳು ಇತ್ಯಾದಿ. ಮುಖ್ಯವಾಗಿ ಈ ಕಟ್ಟಡಗಳಿಗೆ ಬಳಸಿದ ಇಟ್ಟಿಗೆಯು ಈವರೆಗೆ ಕದಂಬರ ಕಾಲದ್ದೆಂದು ಹೇಳುವ ಇಟ್ಟಿಗೆಗೆ ಸಮನಾದ ಉದ್ದ ಹಾಗೂ ದಪ್ಪಗಳನ್ನು ಹೊಂದಿದೆ. ಇಟ್ಟಿಗೆಯ ಬಣ್ಣವೂ ಕೂಡ ಕದಂಬ ಉತ್ಖನನಗಳಲ್ಲಿ ದೊರೆತ ಇಟ್ಟಿಗೆ ಬಣ್ಣಕ್ಕೆ ಸರಿ ಹೊಂದುತ್ತದೆ. ಈಗಲೂ ಇಟ್ಟಿಗೆಗಳನ್ನು ಕಾಣಬಹುದಾಗಿದೆ. ಸ್ಥಳೀಯ ವಿದ್ವಾಂಸರೂ ಸಂಶೋಧಕರೂ ಆದ ಶ್ರೀಧರ ಅವರು ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದಾರೆ.
ಮರುವಸೆ ಪ್ರದೇಶವು ಬನವಾಸಿ ಮಹಾಮಂಡಲಕ್ಕೆ ಸೇರಿದ ಸ್ಥಳವೂ, ನಂತರ ನಾಗರಕಂಡ 70ರ ಭಾಗವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಶಾಸನ, ಪ್ರಾಚ್ಯಾವಶೇಷ ಹಾಗೂ ಇಂದಿಗೂ ‘ಮರುವಸೆ’ ‘ಹೊಸಬೀಡು’ ‘ಅರಮನೆಕೇರಿ’ ಎಂಬ ಸ್ಥಳನಾಮಗಳನ್ನು ಎರಡು ಕಿ.ವಿೂ. ಅಂತರದಲ್ಲಿ ಹೊಂದಿದೆ. ಇದನ್ನು ಗಮನಿಸಿದಾಗ ಸ್ಥಳೀಯ ರಾಜವಂಶ (ಕದಂಬಶಾಖೆ?)ವು ಕಾರಣಾಂತರದಿಮದ ಈ ಸ್ಥಳಗಳಲ್ಲಿ ಸ್ಥಾನಪಲ್ಲಟವಾಗಿರುವುದನ್ನು ಸೂಚಿಸುತ್ತದೆ.
ಪ್ರಸ್ತುತ ಶಾಸನವು ಅಲಂಕಾರಿಕ ಲಿಪಿ ಸ್ವರೂಪ ರಚನೆ ಇದ್ದು ಕದಂಬ ಕಾಲದ ಲಿಪಿ ಅಧ್ಯಯನ ದೃಷ್ಟಿಯಿಂದ ಮಹತ್ವದ್ದಾಗಿದೆ. ಶಾಸನೋಕ್ತ ‘ಗುವಕದು’ ಮತ್ತು ‘ಯಮವಾದ’ ಎಂಬ ಪದಗಳ ಅರ್ಥ ಸ್ಪಷ್ಟವಿಲ್ಲ. ಕದಂಬ ಕೃಷ್ಣವರ್ಮನ ಅರೇತಲಗದ್ದೆ ಶಾಸನದಲ್ಲಿ 109 ಬ್ರಾಹ್ಮಣರ ಗೋತ್ರ ಚರಣ ಹೆಸರಿಸಿದೆ ಈರೀತಿಯ ಹೋಲಿಸಬಹುದಾದ ಪದಗಳು ಮರುವಸೆ ಶಾನಸದಲ್ಲಿ ಬಂದಿವೆ.5 ಉದಾಹರಣೆ: ಗೋದುಕನ್ದ, ಗೋದುಭವ, ಗೋದುದಿವಾ ಮುಂತಾದವು. ಆದ್ದರಿಂದ ಈ ಶಾಸನೋಕ್ತ ಪದಗಳು ವ್ಯಕ್ತಿಯ ಹೆಸರಿಗೆ ಸಂಬಂಧಿಸಿದ್ದಾಗಿರಬೇಕು. ಈ ಶಾಸನದ ಕಾಲವನ್ನು ಕ್ರಿ.ಶ. ಸುಮಾರು 5ನೇ ಶತಮಾನವೆಂದು ಹೇಳಬಹುದು. ಉತ್ಖನನವಾದಲ್ಲಿ ಹೆಚ್ಚಿನ ಐತಿಹಾಸಿಕ ಅಂಶವು ದೊರೆಯುವುದು. ಒಟ್ಟಾರೆ ಮರುವಸೆ (ಮೃಗವಧೆ)ಯು ಪ್ರಾಗೈತಿಹಾಸಿಕ ಕಾಲದಿಂದ ಈ ವರೆಗೂ ಜನಸಮುದಾಯದಿಂದ ಕೂಡಿ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡು ಪ್ರಸ್ತುತ ಪ್ರಸಿದ್ಧ ಕ್ಷೇತ್ರವಾಗಿದೆ.
[ಈ ಸಂಶೋಧನೆಯಲ್ಲಿ ನನಗೆ ಹೆಚ್ಚಿನ ಮಾಹಿತಿ ಹಾಗೂ ಸಹಾಯ ನೀಡುತ್ತಿರುವ ಮೃಗವಧೆಯ ಗೆಳೆಯರಾದ ಶ್ರೀಧರ್ ಹಾಗೂ ಸೂರ್ಯನಾರಾಯಣ ಸಹೋದರರಿಗೆ ನನ್ನ ಕೃತಜ್ಞತೆಗಳು.]

ಆಧಾರಸೂಚಿ ಮತ್ತು ಟಿಪ್ಪಣಿಗಳು
1. ಇತಿಹಾಸ ದರ್ಶನ ಸಂಪುಟ, 16, (2001), ಮೃಗವಧೆಯಲ್ಲಿ ಪ್ರಾಗೈತಿಹಾಸಿಕ ಚಿತ್ರಗಳು, ಪುಟ 12-13.
2. E.C. Nl VIII part I,, ಶಿಕಾರಿಪುರ 102 102 (Rice) page 192-193, [ಮರುವಸೆ ಬಗ್ಗೆ ಸ್ಪಷ್ಟವಾಗುತ್ತಿಲ್ಲವೆಂದು ವಿದ್ವಾಂಸರು ಬರೆದಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆಯೇ ಮರುವಸೆ ಎಂಬುದರಲ್ಲಿ ಸಂಶಯವಿಲ್ಲ. ಲೇ].
3. ಮೌರ್ಯ ಮತ್ತು ಶಾತವಾಹನ ಯುಗ, ಪÉÇ್ರ. ಲಕ್ಷ್ಮಣ ತೆಲಗಾವಿ, ಪ್ರಸಾರಂಗ, ಕ.ವಿ.ವಿ., ಹಂಪಿ, 2004,  ಪುಟ 156-157.
4. ಅದೇ.
5. ಕದಂಬರ ಅರತಲಗದ್ದೆಯ ಅಪೂರ್ವ ತಾಮ್ರ ಶಾಸನಗಳ ಭಂಡಾರ, ಡಾ. ಎಸ್.ಜಿ. ಸಾಮಕ್, ಡಾ. ಜಗದೀಶ, ಡಾ.
ಎಂ.ವಿ. ರಮೇಶ್ ಜೋಯಿಸ್, ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ, 2008, ಪುಟ 10-11.

   # 56, `ತ್ರಯೀ’ ಮೈಸೂರು ಲ್ಯಾಂಪ್ಸ್ ಲೇಔಟ್, ಚನ್ನನಾಯಕನ ಪಾಳ್ಯ, 2ನೇ ಹಂತ, ನಾಗಸಂದ್ರ ಅಂಚೆ, ಬೆಂಗಳೂರು-72.

Wednesday, December 24, 2014

ನವಶಿಲಾಯುಗದ ನೆಲೆ ಬೆನಕನಮಟ್ಟಿ

ನವಶಿಲಾಯುಗದ ನೆಲೆ ಬೆನಕನಮಟ್ಟಿ: ಒಂದು ಟಿಪ್ಪಣಿ
ಡಾ. ಸಿ. ಮಹದೇವ
ಧಾರವಾಡಕ್ಕೆ ಸಮೀಪದಲ್ಲಿರುವ ಚಂದನಮಟ್ಟಿ ಗ್ರಾಮಕ್ಕೆ ಸೇರಿದ ಬೆನಕನಮಟ್ಟಿ ವಿಶಾಲವಾದ ಬಯಲಿನ ನಡುವೆ ಇರುವ ಗುಡ್ಡಪ್ರದೇಶ. ಇದು ಚಂದನಮಟ್ಟಿ ಗ್ರಾಮದಿಂದ ದಕ್ಷಿಣಕ್ಕೆ 1 ಕಿ.ಮೀ. ಅಂತರದಲ್ಲಿದೆ. ಮಟ್ಟಿ ಸುತ್ತಲೂ ಹೊಲಗಳಿವೆ. ಧಾರವಾಡ ಜಿಲ್ಲೆಯ ದೇವಾಲಯಗಳ ಸರ್ವೇಕ್ಷಣೆ ಮತ್ತು ದಾಖಲಾತಿ ಸಂದರ್ಭದಲ್ಲಿ ಬೆನಕನಮಟ್ಟಿಯ ನೆತ್ತಿಯಲ್ಲಿರುವ ಪರ್ವತ ಮಲ್ಲಯ್ಯನ ಗುಡಿಗೆ ಹೋದಾಗ ಆಶ್ಚರ್ಯವೇ ಕಾದಿತ್ತು. ಈಗ್ಗೆ ಕೆಲವು ದಶಕಗಳ ಹಿಂದೆ ನಿರ್ಮಿಸಿದ ಈ ಕೊಠಡಿಯಲ್ಲಿ ಸಣ್ಣ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಲಿಂಗದ ಮುಂದಿಟ್ಟಿರುವ ನಚಿiÀು ಮಾಡಿದ ಆರು ಶಿಲಾಕೊಡಲಿಗಳು ಮತ್ತು ಕವಣೆಕಲ್ಲು ನವಶಿಲಾಯುಗ ಸಂಸ್ಕøತಿ ಕಾಲಕ್ಕೆ ಸೇರಿದ ಆಯುಧೋಪಕರಣಗಳಾಗಿದ್ದವು. ಇವುಗಳನ್ನು ಕಪ್ಪು ಟ್ರ್ಯಾಪ್ ಮತ್ತು ಬಸಾಲ್ಟ್ ಶಿಲೆಯಲ್ಲಿ ಮಾಡಲ್ಪಟ್ಟಿದೆ. ಇವು ಮಟ್ಟಿಯ ತಪ್ಪಲಿನ ಹೊಲಗಳಲ್ಲಿ ಉಳುಮೆಯ ಸಂದರ್ಭದಲ್ಲಿ ರೈತರಿಗೆ ದೊರೆತಿವೆ. ಇವುಗಳ ನಯಗಾರಿಕೆ ಮತ್ತು ಆಕಾರಕ್ಕೆ ಮನಸೋತ ರೈತರು ಲಿಂಗದ ಮುಂದಿಟ್ಟು ಪೂಜಿಸುತ್ತಿದ್ದಾರೆ. ಇದಲ್ಲದೆ ಸೂಕ್ಷ್ಮರಚನೆಯ ಶಿಲಾಕುಡಿಕೆಯೊಂದು ದೊರೆತಿದ್ದು, ಅದರ ಮುಖಭಾಗದಲ್ಲಿ ನಿಂತಿರುವ ಮೂವರು ಸ್ತ್ರೀಯರ ಸೂಕ್ಷ್ಮ ರಚನೆಗಳನ್ನು ಬಿಡಿಸಲಾಗಿದೆ. ಇದು ಸಹ ತಪ್ಪಲಿನ ಹೊಲದಲ್ಲಿ ದೊರೆತಿದೆ. ಇದನ್ನು ಖಾತರಿಪಡಿಸಿಕೊಳ್ಳಲು ಮರುದಿನ ಗುಡ್ಡದ ಸುತ್ತ ಅನ್ವೇಷಣೆ ನಡೆಸಲಾಯಿತು. ಆದರೆ ಫಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕವಣೆಕಲ್ಲುಗಳು ಹಾಗೂ ಭಗ್ನಗೊಂಡ ಶಿಲಾಕೊಡಲಿಗಳು ದೊರೆತವು. ಈ ಶಿಲಾಯುಧೋಪಕರಣಗಳನ್ನು ಹೆಬ್ಬಳ್ಳಿ ಮುದುಕಪ್ಪ ಶಾಲಿ ಮತ್ತು ಗಂಗಪ್ಪ ದೇಸಾಯಿ ಅವರ ಹೊಲಗಳಿಂದ ಸಂಗ್ರಹಿಸಲಾಗಿದೆ. ಈ ಹೊಲಗಳು ಮಟ್ಟಿಯ ಸುತ್ತಲೂ ಇದ್ದು, ಇಳಿಜಾರಾಗಿವೆ. ಟ್ರಾಕ್ಟರ್‍ನಿಂದ ಉಳುಮೆ ಮಾಡುವಾಗ ಆಯುಧೋಪಕರಣಗಳು ಮೇಲೆ ಬರುತ್ತವೆಂದು ಅದಕ್ಕೆ ಸಿಲುಕಿದ ಆಯುಧಗಳು ಒಡೆದಿವೆ ಎಂದು ರೈತ ಗಂಗಪ್ಪ ದೇಸಾಯಿಯವರು ತಿಳಿಸುತ್ತಾರೆ. ಇವರು ಲಿಂಗದ ಮುಂದಿಟ್ಟಿರುವ ಆಯುಧಗಳನ್ನು ಸಂಗ್ರಹಿಸಿದ್ದಾರೆ. ಬೆನಕನಮಟ್ಟಿಯು ಜಾಲಿಮರಗಳಿಂದ ಕೂಡಿದೆ. ಮಟ್ಟಿಯ ಮೇಲೆ ನಿಂತು ನೋಡಿದರೆ ಸುತ್ತಲೂ ವಿಶಾಲವಾದ ಬಯಲು ಕಾಣುವುದು. ನವಶಿಲಾಯುಗ ಕಾಲದ ಮಾನವನಿಗೆ ರಕ್ಷಣೆಯ ದೃಷ್ಟಿಯಿಂದ ಮಹತ್ವದ ಸ್ಥಳವಿದು. ಬಳ್ಳಾರಿ, ರಾಯಚೂರು ಪ್ರದೇಶಗಳಂತೆ ಇಲ್ಲಿ ಗ್ರಾನೈಟ್ ಬೆಟ್ಟಗುಡ್ಡಗಳಿಲ್ಲ. ಈ ಪ್ರದೇಶದಲ್ಲಿ ಇಂತಹ ಎತ್ತರವಾದ ಮಟ್ಟಿ ಅಥವಾ ಗುಡ್ಡಗಳೇ ನವಶಿಲಾಯುಗ ಕಾಲದ ಜನರಿಗೆ ಆಸರೆಯಾಗಿರುವುದು ಗಮನಾರ್ಹ. ಬೆನಕನಮಟ್ಟಿಯಲ್ಲಿ, ಗುಡ್ಡದ ನೆತ್ತಿಯ ಇಳಿಜಾರಿನ ಪೂರ್ವಭಾಗದಲ್ಲಿ ತಗ್ಗಾದ ಸ್ಥಳವಿದೆ. ಈ ತಗ್ಗುಸ್ಥಳವು ಹೊರಗಿನಿಂದ ಬರುವವರಿಗೆ ಕಾಣಿಸುವುದಿಲ್ಲ. ಗುಡ್ಡವನ್ನು ಏರಿದ ನಂತರ ಗೋಚರಿಸುತ್ತದೆ. ಹಾಗಾಗಿ ಇದು ಪ್ರಾಕೃತಿಕವಾಗಿ ರಕ್ಷಣಾತಾಣವಾಗಿದ್ದು, ಕಲ್ಲಾಸರೆಯಿಂದ ಕೂಡಿದೆ. ಸ್ಥಳೀಯರು ಈ ಕಲ್ಲಾಸರೆಯನ್ನು ಗವಿ ಎನ್ನುತ್ತಾರೆ. ಅಂದರೆ ಇನ್ನೂ ಒಳಗೆ ಸುರಂಗದಂತಿದ್ದ ಗವಿಯ ದ್ವಾರವನ್ನು ಸ್ಥಳೀಯ ದನಗಾಹಿಗಳು ಕಲ್ಲು ತುಂಬಿ ಮುಚ್ಚಿದ್ದಾರೆಂದು ಅಕ್ಕಪಕ್ಕದ ಹೊಲದ ರೈತರು ತಿಳಿಸುತ್ತಾರೆ. ಸದ್ಯ ಹೊರಕಾಣುವ ಕಲ್ಲಾಸರೆಯಲ್ಲಿ ನಾಲ್ಕೈದು ಜನರು ಮಳೆ, ಗಾಳಿ ಮತ್ತು ಬಿಸಿಲುಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಆದರೆ ಇಲ್ಲಿ ಯಾವುದೇ ಬಗೆಯ ವ್ಮಡಿಕೆ ಚೂರುಗಳು ಕಂಡುಬರುವುದಿಲ್ಲ. ಈ ಕುರಿತು ಹೆಚ್ಚಿನ ಶೋಧನೆ ನಡೆಯಬೇಕಾಗಿದೆ. ಮೇಲೆ ತಿಳಿಸಿದಂತೆ ಸುರಂಗದ ದ್ವಾರಕ್ಕೆ ಮುಚ್ಚಿರುವ ಕಲ್ಲುಗಳನ್ನು ತೆಗೆದಲ್ಲಿ ಇನ್ನು ಹೆಚ್ಚಿನ ಮಾಹಿತಿಗಳು ದೊರೆಯುವ ಸಾಧ್ಯತೆಯುಂಟು. ಗುಡ್ಡದಿಂದ 2 ಪರ್ಲಾಂಗ್‍ಗಳ ಅಂತರದಲ್ಲಿ ಹಳ್ಳಗಳು ಹರಿಯುತ್ತವೆ. ಗುಡ್ಡದ ಈಶಾನ್ಯಕ್ಕೆ ಒಂದು ಪರ್ಲಾಂಗ್ ದೂರದಲ್ಲಿ ಸಣ್ಣ ಕೆರೆಯೊಂದಿದೆ. ಇದರ ಪ್ರಾಚೀನತೆಯನ್ನು ತಿಳಿಯುವುದು ಅವಶ್ಯವಿದೆ. ದೊರೆತಿರುವ ನಚಿiÀು ಮಾಡಿದ ಶಿಲಾಕೊಡಲಿಗಳು, ಕವಣೆಕಲ್ಲುಗಳು, ಕಲ್ಲಾಸರೆ, ನೀರಿನ ಮೂಲಗಳು ನವಶಿಲಾಯುಗ ಕಾಲದ ಮಾನವನ ವಸತಿ ನೆಲೆಯಾಗಿತ್ತೆಂದು ಸ್ಪಷ್ಟವಾಗುತ್ತದೆ.
ಗುಡಿಯಲ್ಲಿ ಲಿಂಗದ ಮುಂದಿರುವ ಶಿಲಾಕೊಡಲಿಗಳು ಮೂರರಿಂದ ಏಳು ಅಂಗುಲ ಉದ್ದವನ್ನು ಹೊಂದಿವೆ. ಮೂರು ಅಂಗುಲದ್ದು ಕಪ್ಪು ಟ್ರ್ಯಾಪ್‍ಕಲ್ಲಿನದು ಹಾಗೂ ಹೆಚ್ಚು ಹೊಳಪುಳ್ಳದ್ದು. ಉಳಿದ ಕೊಡಲಿಗಳು ಬಸಾಲ್ಟ್ ಶಿಲೆಯವು. ಕೊಡಲಿಗಳು ರಚನೆಯಲ್ಲಿ ಪ್ರಮಾಣಬದ್ದವಾಗಿದ್ದು, ಉನ್ನತ ತಂತ್ರಜ್ಞಾನವನ್ನು ಪ್ರಕಟಮಾಡುತ್ತವೆ. ಎರಡು ಬದಿಗಳಲ್ಲಿ ಏಕರೂಪದ ನಯಗಾರಿಕೆಯನ್ನು ಕಾಣಬಹುದು. ಈ ಆಯುದೋಪಕರಣಗಳು ರಾಯಚೂರು, ಬಳ್ಳಾರಿ ಪ್ರದೇಶದಲ್ಲಿ ದೊರೆಯುವ ಆಯುಧೋಪಕರಣಗಳಿಗಿಂತ ಹೆಚ್ಚು ಹೊಳಪಿನವು ಹಾಗೂ ಉತ್ಕøಷ್ಟವೂ ಆಗಿವೆ. ನವಶಿಲಾಯುಗ ಸಂಸ್ಕøತಿಯ ಹೆಚ್ಚಿನ ನೆಲೆಗಳು ಬಳ್ಳಾರಿ, ರಾಯಚೂರು ಪ್ರದೇಶದಲ್ಲಿವೆ. ಕೃಷ್ಣ ಮತ್ತು ತುಂಗಭದ್ರಾ ನದಿಗಳ ಪರಿಸರದಲ್ಲಿ ಅನೇಕ ನೆಲೆಗಳನ್ನು ಗುರುತಿಸಿ ಉತ್ಖನನ ಮಾಡಲಾಗಿದೆ. ಇದೀಗ ಧಾರವಾಡ ತಾಲೂಕಿನ ಬೆನಕನಮಟ್ಟಿಯಲ್ಲಿ ನವಶಿಲಾಯುಗ ಕಾಲದ ಆಯುಧೋಪಕರಣಗಳು ದೊರೆತ ಪರಿಣಾಮವಾಗಿ ಆ ಕ್ಷೇತ್ರದ ಅಧ್ಯಯವನ್ನು ವಿಸ್ತರಿಸಿದಂತಾಗಿದೆ. ಈ ಭಾಗದಲ್ಲಿ ಈಗಲೂ ಜಿಂಕೆ, ಕರಡಿ, ಚಿರತೆ, ನರಿ ಮತ್ತಿತರ ಕಾಡು ಪ್ರಾಣಿಗಳನ್ನು ಕಾಣಬಹುದು. ಒಂದು ಕಾಲಕ್ಕೆ ಈ ಪ್ರದೇಶ ಅಪಾರವಾದ ಪ್ರಾಣಿಸಂಪತ್ತನ್ನು ಹೊಂದಿತ್ತೆಂದು ಗ್ರಹಿಸಬಹುದಾಗಿದೆ.
ಬೆನಕನಮಟ್ಟಿಯ ತಪ್ಪಲಿನಲ್ಲಿ ಆದಿ ಇತಿಹಾಸ ಕಾಲದ ಮಡಿಕೆ ಚೂರುಗಳು ದೊರೆಯುತ್ತವೆ. ಇವು ಚಿತ್ರಿತ ಕೆಂಪುವರ್ಣದವು. ಅಂದರೆ ಶಾತವಾಹನರ ಕಾಲಕ್ಕೆ ಸೇರುತ್ತವೆ. ಈ ಮೊದಲೇ ತಿಳಿಸಿದ ಲಿಂಗದ ಮುಂದಿರುವ ಸೂಕ್ಷ್ಮ ರಚನೆಯ ಕುಡಿಕೆಯ ಮೇಲೆ ಮೂವರು ಸ್ತ್ರೀಯರ ಸೂಕ್ಷ್ಮಶಿಲ್ಪಗಳಿದ್ದು, ಇದು ಸಹ ಆದಿ ಇತಿಹಾಸ ಕಾಲದ ರಚನೆ ಎನ್ನಬಹುದು. ವಾಸ್ತವವಾಗಿ ಇಲ್ಲಿ ಹಳೆ ಊರಿದ್ದು, ಸಾಂಕ್ರಾಮಿಕ ರೋಗಗಳಿಂದಾಗಿ ಹಾಳು ಬಿದ್ದಿತೆಂದು, ಅಲ್ಲಿನ ಜನರು ಸಮೀಪದ ಚಂದನಮಟ್ಟಿ ಗ್ರಾಮದಲ್ಲಿ ನೆಲೆಸಿದರೆಂದು ಸ್ಥಳೀಯರು ತಿಳಿಸುತ್ತಾರೆ. ಹೀಗೆ ಬೆನಕನಮಟ್ಟಿ ನೆಲೆಯಲ್ಲಿ ನವಶಿಲಾಯುಗ ಕಾಲದಿಂದಲೂ ಮಾನವನ ಅಸ್ತಿತ್ವವನ್ನು ಗುರುತಿಸಬಹುದು. ಅಲ್ಲಿ ದೊರೆತಿರುವ ನವಶಿಲಾಯುಗ ಮತ್ತು ಆದಿ ಇತಿಹಾಸ ಕಾಲದ ವಸ್ತು ಅವಶೇಷಗಳು ಧಾರವಾಡ ಪ್ರದೇಶದ ಪ್ರಾಗಿತಿಹಾಸದ ಅಧ್ಯಯನ ವ್ಯಾಪ್ತಿಯನ್ನು ವಿಸ್ತರಿಸಿವೆ ಹಾಗೂ ಮುಂದಿನ ಶೋಧನೆಗಳಿಗೆ ಅನುವು ಮಾಡಿಕೊಟ್ಟಿವೆ.
[ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಹಕರಿಸಿದ ಚಂದನಮಟ್ಟಿಯ ಗ್ರಾಮಸ್ಥರಾದ ಸೋಮಲಿಂಗಪ್ಪ ತಲವಾಯಿ, ಗಂಗಪ್ಪ ದೇಸಾಯಿ, ಯಲ್ಲಪ್ಪ ಎಡಳ್ಳಿ ಮತ್ತು ಚಂದ್ರು ಭಂಡಾರಗಟ್ಟಿ ಇವರುಗಳನ್ನು ಪ್ರೀತಿಯಿಂದ ನೆನೆಯುತ್ತೇನೆ.]

ಆಧಾರಸೂಚಿ ಮತ್ತು ಟಿಪ್ಪಣಿಗಳು
1. ಧಾರವಾಡ ಜಿಲ್ಲಾ ಗ್ಯಾಸೆಟಿಯರ್: ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು.
2. ಶಿವತಾರಕ್ ಕೆ.ಬಿ: ಕರ್ನಾಟಕದ ಪುರಾತತ್ವ ನೆಲೆಗಳು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
3. ಅ. ಸುಂದರ: ಕರ್ನಾಟಕ ಚರಿತ್ರೆ ಸಂಪುಟ 1, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
4. ಸಂಕಾಲಿಯಾ ಎಚ್.ಡಿ: ಪ್ರಿ ಅಂಡ್ ಪ್ರೋಟೊ ಹಿಸ್ಟಿರಿ ಆಫ್ ಇಂಡಿಯಾ ಅಂಡ್ ಪಾಕಿಸ್ತಾನ್.

 ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ 583 276

Sunday, December 21, 2014

ಬೇಲೂರು ತಾಲೂಕಿನ ಸಂಸ್ಕೃತಿಯ ನೆಲೆಗಳು


AiÀÄ®ºÀAPÀ ¥Àj¸ÀgÀzÀ ²¯ÁAiÀÄÄUÀ ¸ÀA¸ÀÌøwAiÀÄ £É¯ÉUÀ¼ÀÄ
qÁ. ¹.F. ¯ÉÆÃPÉñï
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಯಲಹಂಕ ಗ್ರಾಮವು ಬೇಲೂರಿನಿಂದ ಪೂರ್ವಕ್ಕೆ ಸರಿಸುಮಾರು 15 ಕಿ.ಮೀ. ದೂರದಲ್ಲಿದೆ. ಈ ಊರಿನ ಸುತ್ತಮುತ್ತಲಿನ ಪರಿಸರದಲ್ಲಿ ಬೃಹತ್‍ಶಿಲಾಯುಗ ಸಂಸ್ಕøತಿಗೆ ಸೇರಿದ ಅನೇಕ ಶಿಲಾವೃತ್ತಾಕಾರದ ಸಮಾಧಿ ನೆಲೆಗಳು ಇವೆ. ಈ ಶಿಲಾಸಮಾಧಿಗಳು ಅಲ್ಲಲ್ಲಿ ಚದುರಿಹೋಗಿವೆ. ಹಾಗೂ ಆ ಪರಿಸರ ವ್ಯವಸಾಯಯೋಗ್ಯ ಭೂಮಿಯಾದ್ದರಿಂದ ಇಂತಹ ಅಪರೂಪದ ಅನೇಕ ಸಮಾಧಿಗಳು ನಾಶವಾಗಿವೆ. ಅಳಿದುಳಿದ ಕೆಲವು ಮಾತ್ರ ಉಳಿದುಬಂದಿವೆ.
ಅವುಗಳ ಸಮಗ್ರ ಚಿತ್ರಣ ಈ ಕೆಳಕಂಡಂತೆ ಇವೆ.
ಸಮಾಧಿ 1: ಇದು ಕೆರೆಯ ಪಕ್ಕದಲ್ಲಿಯೇ ಇರುವ ಜಮೀನಿನಲ್ಲಿ ಇರುವ ಸಮಾಧಿ ನೆಲೆಯಾಗಿದ್ದು, ಆ ಜಾಗವನ್ನು ವ್ಯವಸಾಯಕ್ಕೆ ಬಳಸಲಾಗಿದೆ. ಕೇವಲ ಒಂದು ಮೂಲೆಯಲ್ಲಿ ಈ ಸಮಾಧಿಯ ಕುರುಹುಗಳಿದ್ದು ಸರಿಸುಮಾರು 25 ದೊಡ್ಡ ದೊಡ್ಡದಾದ ಕಲ್ಲುಗಳನ್ನು ವೃತ್ತಾಕಾರದಲ್ಲಿ ಜೋಡಿಸಲಾಗಿದೆ. ಇದರ ಕೇಂದ್ರಬಿಂದುವಿನಿಂದ ಇದರ ಸುತ್ತಳತೆ ಸುಮಾರು 10 ಅಡಿಗಳಷ್ಟು ವೃತ್ತಾಕಾರವಾಗಿ ನಿರ್ಮಿಸಿರುತ್ತಾರೆ. ಮಧ್ಯದಲ್ಲಿಯು ಕಲ್ಲುಗಳು ಗೋಚರಿಸುತ್ತಿವೆ. ಜೊತೆಗೆ ಈ ಸಮಾಧಿಯ ಪಕ್ಕದಲ್ಲಿ ಒಂದು ದೊಡ್ಡದಾದ ಅಗಲವಾದ ಕಲ್ಲು ಬಿದ್ದಿದ್ದು ಅದರ ಮಧ್ಯದಲ್ಲಿ ಒಂದು ರಂಧ್ರವನ್ನು ಕೂಡ ಮಾಡಲಾಗಿದೆ. ಮೊದಲನೆ ಸಮಾಧಿಯಿಂದ ಸರಿಸುಮಾರು 20 ಅಡಿಗಳ ದೂರದಲ್ಲಿದ್ದ ಮತ್ತೊಂದು ಸಮಾಧಿ ಸಂಪೂರ್ಣವಾಗಿ ನಾಶವಾಗಿದ್ದು, ವೃತ್ತಾಕಾರದ ಕಲ್ಲುಗಳನ್ನು ಸಾಲಾಗಿ ಜೋಡಿಸಲಾಗಿದೆ. ಈ ಎಲ್ಲಾ ಕಲ್ಲುಗಳು ಸ್ಥಳಾಂತರಗೊಂಡಿವೆ.
ಸಮಾಧಿ 2: ಇದು ಕೂಡ ವ್ಯವಸ್ಥಿತ ರೂಪದಲ್ಲಿಯೇ ಇದ್ದು ಸುಮಾರು 23 ಕಲ್ಲುಗಳಿಂದ ನಿರ್ಮಾಣವಾಗಿದ್ದು ದೊಡ್ಡ ದೊಡ್ಡದಾದ ಕಲ್ಲುಗಳನ್ನು ವೃತ್ತಾಕಾರದಲ್ಲಿ ಜೋಡಿಸಲಾಗಿದೆ. ಇದು ಕೂಡ ಸಮಾಧಿಯ ಕೇಂದ್ರಬಿಂದುವಿನಿಂದ 9 ಅಡಿಗಳ ಸಮಾನಾಂತರ ತ್ರಿಜ್ಯದಿಂದ ವೃತ್ತಾಕಾರವಾಗಿ ನಿರ್ಮಿಸಲಾಗಿದ್ದು ಮಧ್ಯಭಾಗದಲ್ಲಿ ಸುತ್ತಲಿನ ಹೊಲಗಳ ತ್ಯಾಜ್ಯವನ್ನು ಹಾಕಿರುವುದರಿಂದ ಸಮಾಧಿಯ ಮಧ್ಯಭಾಗದ ಮಾಹಿತಿಗಳು ಅಸ್ಪಷ್ಟವಾಗಿವೆ.
ಸಮಾಧಿ 3: ಈ ಸಮಾಧಿಯು ಇಂದಿಗೂ ವ್ಯವಸ್ಥಿತವಾಗಿ ಗೋಚರಿಸುವ ಶಿಲಾವೃತ್ತವಾಗಿದ್ದು ಜಮೀನಿನ ಮಧ್ಯಭಾಗದಲ್ಲಿದ್ದರೂ ಯಾವುದೇ ಹಾನಿಯು ಉಂಟಾಗಿಲ್ಲ. ಈ ಸಮಾಧಿಯು 25 ದೊಡ್ಡ ಗಾತ್ರ ಕಲ್ಲುಗಳನ್ನು ಮಧ್ಯಭಾಗದಿಂದ ಸುಮಾರು 9 ಅಡಿ ತ್ರಿಜ್ಯದಲ್ಲಿ ಸುತ್ತಲು ವೃತ್ತಾಕಾರದಲ್ಲಿ ಜೋಡಿಸಲಾಗಿದೆ. ಮಧ್ಯಭಾಗದಲ್ಲಿ ಕಲ್ಲಿನ ಅನೇಕ ಕುರುಹುಗಳು ಕಂಡುಬಂದರೂ ಹುತ್ತ ಬೆಳೆದಿದ್ದು ಅಲ್ಲಿ ನಾಗದೇವತೆ ಇದೆ ಎಂಬ ಪ್ರತೀತಿ ಇದೆ. ಹಾಗಾಗಿಯೇ ಈ ಸಮಾಧಿ ಹೊಲದ ಮಧ್ಯದಲ್ಲಿದ್ದರೂ ಯಾವುದೇ ಹಾನಿಯಾಗದೆ ಉಳಿದುಕೊಂಡಿದೆ.
ಸಮಾಧಿ 4: ನಾಲ್ಕನೆಯ ಸಮಾಧಿಯು ಗಿಡ, ಪೊದೆಗಳ ಮಧ್ಯದಲ್ಲಿದ್ದು ಸುತ್ತಲೂ ಕೃಷಿಭೂಮಿ ಇರುವುದರಿಂದ ಒತ್ತುವರಿಯಾಗಿದ್ದು ವೃತ್ತಾಕಾರದ ಕಲ್ಲುಗಳು ಅಲ್ಲಲ್ಲಿ ಸ್ಥಾನಪಲ್ಲಟಗೊಂಡಿದ್ದು, ನೆಲೆಯು ಭಾಗಶಃ ಸುಸ್ಥಿತಿಯಲ್ಲಿದೆ.
ಸಮಾಧಿ 5: ಐದನೆಯ ಸಮಾಧಿಯು ಕೂಡ ನಾಲ್ಕು ಕಡೆಯಿಂದಲೂ ಕೃಷಿಭೂಮಿಯಿಂದ ಸುತ್ತುವರಿಯಲ್ಪಟ್ಟಿದ್ದು, ವೃತ್ತಾಕಾರದಲ್ಲಿ ಜೋಡಿಸಿರುವ ಸುಮಾರು ಐದು ಕಲ್ಲುಗಳು ಸ್ಥಾನಪಲ್ಲಟಗೊಂಡಿವೆ ಮತ್ತು ಅಲ್ಲಿಯೇ ಸುತ್ತಮುತ್ತ ಬಿದ್ದಿವೆ. ಈ ಸಮಾಧಿಯು ಕೂಡ 25 ದೊಡ್ಡಗಾತ್ರದ ಕಲ್ಲುಗಳಿಂದ ಕೂಡಿವೆ. ಮಧ್ಯಭಾಗದಲ್ಲಿ ಒಂದು ಮರ ಬೆಳೆದಿದೆ.
ಹೀಗೆ ಕೇವಲ ಐದು ಸಮಾಧಿಗಳು ಪ್ರಸ್ತುತ ಲಭ್ಯವಿದ್ದು ಇವುಗಳನ್ನು ಪಾಂಡವರ ಮನೆ ಎಂಬ ಭಾವನೆಯಿಂದ ಮಾತ್ರ ಉಳಿಸಿಕೊಂಡಿದ್ದಾರೆಂದು ತಿಳಿದುಬರುತ್ತವೆ. ಆದರೆ ಸುತ್ತಮುತ್ತಲ್ಲಿನ ಕ್ಷೇತ್ರಧ್ಯಾಯನದಿಂದ ತಿಳಿದುಬಂದ ಮಾಹಿತಿ ಎಂದರೆ ಅನೇಕ ಬೃಹತ್ ಶಿಲಾಸಮಾಧಿಯ ಕುರುಹುಗಳು ಅಲ್ಲಲ್ಲಿ ಚದುರಿರುವುದನ್ನು ನೋಡಿದರೆ ಆ ಪರಿಸರದಲ್ಲಿ ಇನ್ನೂ ಸಾಕಷ್ಟು ಸಮಾಧಿಗಳಿದ್ದವೆಂದು ತಿಳಿಯುತ್ತದೆ. ಆದರೆ ಮನುಷ್ಯನ ಕಾರ್ಯಚಟುವಟಿಕೆಗಳಿಂದಾಗಿ ಇಂತಹ ಅತ್ಯಮೂಲ್ಯ ಸಂಸ್ಕøತಿಯ ಕುರುಹುಗಳು ನಾಶವಾಗಿವೆ. ಇರುವ ಕೆಲವೇ ಕೆಲವು ಅಮೂಲ್ಯ ಸಮಾಧಿಗಳ ಸಂಶೋಧನೆ ಹಾಗೂ ಆಳವಾದ ಅಧ್ಯಯನದ ಅಗತ್ಯತೆ ಇದೆ.ಇನ್ನೂ ಸಾಕಷ್ಟು ಸಮಾಧಿಗಳಿದ್ದವೆಂದು ತಿಳಿಯುತ್ತದೆ. ಆದರೆ ಮನುಷ್ಯನ ಕಾರ್ಯಚಟುವಟಿಕೆಗಳಿಂದಾಗಿ ಇಂತಹ ಅತ್ಯಮೂಲ್ಯ ಸಂಸ್ಕøತಿಯ ಕುರುಹುಗಳು ನಾಶವಾಗಿವೆ. ಇರುವ ಕೆಲವೇ ಕೆಲವು ಅಮೂಲ್ಯ ಸಮಾಧಿಗಳ ಸಂಶೋಧನೆ ಹಾಗೂ ಆಳವಾದ ಅಧ್ಯಯನದ ಅಗತ್ಯತೆ ಇದೆ.
[ನನ್ನ ಕ್ಷೇತ್ರಾಧ್ಯಯನಕ್ಕೆ ಸಲಹೆ ಸೂಚನೆಗಳನ್ನು ನೀಡಿದ ಖ್ಯಾತ ವಿದ್ವಾಂಸರಾದ ಡಾ. ಅ. ಸುಂದರರವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.]

ಆಧಾರಸೂಚಿ
[ನನ್ನ ಕ್ಷೇತ್ರಾಧ್ಯಯನಕ್ಕೆ ಸಲಹೆ ಸೂಚನೆಗಳನ್ನು ನೀಡಿದ ಖ್ಯಾತ ವಿದ್ವಾಂಸರಾದ ಡಾ. ಅ. ಸುಂದರರವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.]

ಆಧಾರಸೂಚಿ
¸ÀªÀiÁ¢ü 5: LzÀ£ÉAiÀÄ ¸ÀªÀiÁ¢üAiÀÄÄ PÀÆqÀ £Á®ÄÌ PÀqɬÄAzÀ®Æ PÀȶ¨sÀƫĬÄAzÀ ¸ÀÄvÀÄÛªÀjAiÀÄ®ànÖzÀÄÝ, ªÀÈvÁÛPÁgÀzÀ°è eÉÆÃr¹gÀĪÀ ¸ÀĪÀiÁgÀÄ LzÀÄ PÀ®ÄèUÀ¼ÀÄ ¸ÁÜ£À¥À®èlUÉÆArªÉ ªÀÄvÀÄÛ C°èAiÉÄà ¸ÀÄvÀÛªÀÄÄvÀÛ ©¢ÝªÉ. F ¸ÀªÀiÁ¢üAiÀÄÄ PÀÆqÀ 25 zÉÆqÀØUÁvÀæzÀ PÀ®ÄèUÀ½AzÀ PÀÆrªÉ. ªÀÄzsÀå¨sÁUÀzÀ°è MAzÀÄ ªÀÄgÀ ¨É¼É¢zÉ.
»ÃUÉ PÉêÀ® LzÀÄ ¸ÀªÀiÁ¢üUÀ¼ÀÄ ¥Àæ¸ÀÄÛvÀ ®¨sÀå«zÀÄÝ EªÀÅUÀ¼À£ÀÄß ¥ÁAqÀªÀgÀ ªÀÄ£É JA§ ¨sÁªÀ£É¬ÄAzÀ ªÀiÁvÀæ G½¹PÉÆArzÁÝgÉAzÀÄ w½zÀħgÀÄvÀÛªÉ. DzÀgÉ ¸ÀÄvÀÛªÀÄÄvÀÛ°è£À PÉëÃvÀæzsÁåAiÀÄ£À¢AzÀ w½zÀħAzÀ ªÀiÁ»w JAzÀgÉ C£ÉÃPÀ §ÈºÀvï ²¯Á¸ÀªÀiÁ¢üAiÀÄ PÀÄgÀĺÀÄUÀ¼ÀÄ C®è°è ZÀzÀÄjgÀĪÀÅzÀ£ÀÄß £ÉÆÃrzÀgÉ D ¥Àj¸ÀgÀzÀ°è 
1.   £ÀgÀ¹AºÀªÀÄÆwð. J.«, 1979, PÀ£ÁðlPÀ ¥ÀÄgÁvÀvÀé ±ÉÆÃzsÀ£É.
2.   ²ªÀvÁgÀPï PÉ.©, 2005, PÀ£ÁðlPÀ ¥ÀÄgÁvÀvÀé £É¯ÉUÀ¼ÀÄ.
3.  ಸುಂದರ ಅ, 1970 ಇತಿಹಾಸ ಪೂರ್ವ ಕರ್ನಾಟಕ, ಕನ್ನಡ ವಿ.ವಿ. ¸ «.«. EArAiÀiÁ §ÄPï ºË¸ï.
4.   Grururaja Rao, 1971, Megalithic Culture in South India, UOM, Mysore.

¸ÀºÁAiÀÄPÀ ¥ÁæzsÁå¥ÀPÀgÀÄ, ¥ÁæaãÀ EwºÁ¸À ªÀÄvÀÄÛ ¥ÀÅgÁvÀvÀé «¨sÁUÀ, ªÀĺÁgÁd PÁ¯ÉÃdÄ, ªÉÄʸÀÆgÀÄ-570005.


Wednesday, December 17, 2014

ಶಾಸನ ಸಾಹಿತ್ಯ ಪ್ರಶಸ್ತಿ


ಕನ್ನಡ ಸಾಹಿತಿಗಳಿಗೆ ಕಳೆದ ಎರಡು ದಶಕಗಳಿಂದ ಪ್ರಶಸ್ತಿಗಳಿಗೆ ಬರವೇಇಲ್ಲ. ಬಡಾವಣೆಯ  ಬಸವನ ಗುಡಿ ರತ್ನ ದಿಂದ ಹಿಡಿದು ರಾಜ್ಯ ಮಟ್ಟದ  ಕರ್ನಾಟಕ ರತ್ನ ದವರೆಗೆ ಪ್ರಶಸ್ತಿಗಳಿವೆ. ಜ್ಞಾನ ಪೀಠಕ್ಕೂ ಹೆಚ್ಚಿನ ನಗದು ನೀಡುವ  ಪ್ರಶಸ್ತಿಗಳಿವೆ.  ಹಲವರಿಗಂತೂ ಪ್ರಶಸ್ತಿಗಳ ಸರಮಾಲೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ. ಕಾದಂಬರಿ, ಕವನ. ವಿಮರ್ಶೆ ಮಹಿಳೆ, ಯುವ ಬರಹಗಾರ, ವಿಜ್ಞಾನ, ಸಂಶೋಧನೆ,  ಅನುವಾದ ಹೀಗೆ ಎಲ್ಲ ರಂಗಗಳ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಆಗುತ್ತ ಲಿದೆ
ಶಾಸನಗಳ ನೆಲವೀಡಾದ  ಚಂದ್ರಗಿರಿ
. ಈವರೆಗೆ , ಇತಿಹಾಸ ಮತ್ತು ಸಾಹಿತ್ಯಗಳ ತಾಯಿ ಬೇರಾದ ಶಾಸನ ಸಂಶೋಧಕರು ಮಾತ್ರ ಎಲೆಯ ಮರೆಯ ಕಾಯಿಯಂತೆ ನೆಲದೊಳಗಣ ನಿದಾನದಂತೆ  ಅಜ್ಞಾತವಾಗಿ ಬೆಟ್ಟ ಗುಡ್ಡಗಳಲ್ಲಿ, ಹಾಳು ಗುಡಿಗಳಲ್ಲಿ, ಕಾಡು ಮೇಡುಗಳಲ್ಲಿ ಅಡಗಿರುವ ಶಾಸನಗಳ ಪತ್ತೆ ಮತ್ತು ಅವುಗಳ ಅರ್ಥೈಸುವಿಕೆ, ಅವುಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿ ಮಹತ್ವವನ್ನು ಸಂಶೋಧಿಸಿ ಹೊಸ ಬೆಳಕು ಚೆಲ್ಲಲು ಮಾಡುವ ಕಾರ್ಯದ ಮಹತ್ವ ಬರೀ ವಿಚಾರ ಸಂಕೀರಣ ಮತ್ತು ಸ್ಮರಣ ಸಂಚಿಕೆಗಳ ಲೇಖನಕ್ಕೆ ಮಾತ್ರ ಮೀಸಲಾಗಿತ್ತು.  ಈ ದಿಶೆಯಲ್ಲಿ ದುಡಿವ ಇತಿಹಾಸ ತಜ್ಞರು, ಪುರಾತ್ತತ್ವ ಪರಿಣಿತರುಮತ್ತು  ಲಿಪಿತಜ್ಞರನ್ನು ಗುರುತಿಸುವ, ಸಾರ್ವಜನಿಕವಾಗಿ ಸಮ್ಮೇಳನದಲ್ಲಿ ಸನ್ಮಾನಿಸುವ ನಗದು ಪ್ರಶಸ್ತಿ ನೀಡುವ ಪ್ರಥಮ ಪ್ರಯತ್ನದ ಕರ್ನಾಟದಲ್ಲಿ ನಡೆಯಿತು.
 ಶ್ರವ ಬೆಳಗೊಳ ಜೈನ ಕಾಶಿ ಎಂದೇ ಪ್ರಖ್ಯಾತ. ಅಲ್ಲಿನ ವಿಂದ್ಯಾಗಿರಿಯಲ್ಲಿರುವ  ಏಕಶಿಲಾ ಗೊಮ್ಮಟೇಶ್ವರ  ವಿಗ್ರಹ ವಿಶ್ವದ ವಿಸ್ಮಯಗಳಲ್ಲಿ ಒಂದು.  ಅದಕ್ಕೆ ಲಕ್ಷಾಂತರ ಜನ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಹನ್ನೆರಡು ವರ್ಷಕ್ಕೆ ಒಮ್ಮೆ ನಡೆವ ಮಹಾಮಸ್ತಕಾಭಿಷೇಕವಂತೂ ಜಗತ್‌ಪ್ರಸಿದ್ಧ. 

ಈ ಎಲ್ಲ ಖ್ಯಾತಿಗೂ ಕಾರಣರು ಅಲ್ಲಿರುವ ಜೈನ ಮಠದ  ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮಿಗಳು. ಅವರ ದೂರದೃಷ್ಟಿಯ ಫಲಿತವೇ ಚಂದ್ರಗಿರಿ ಅತವ ಚಿಕ್ಕ ಬೆಟ್ಟದ ಉತ್ಸವ.ದೊಡ್ಡ ಬೆಟ್ಟವು ಔನತ್ಯಕ್ಕೆ ಹೆಸರಾದರೆ ಚಿಕ್ಕಬೆಟ್ಟವು ಧಾರ್ಮಿಕ ಮತ್ತು ಐತಿಹಾಸಿಕವಾಗಿ ಅತಿ ಮಹತ್ವ ಹೊಂದಿದೆ.ಚಂದ್ರಗಿರಿಯು  ಶಿಲಾಶಾಸನಗಳ ಸಾಗರ. ಬಹುಶಃ ಭಾರತದಲ್ಲೇ ಒಂದೇ ಕಡೆ ಸುಮಾರು ೫೩೬ ಶಿಲಾಶಾನಗಳನ್ನು ಹೊಂದಿರುವ ಹಿರಿಮೆ  ಇದರದು. ಹತ್ತು ಶತಮಾನಗಳಿಗೂ ಅಧಿಕ ಪುರಾತನವಾದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಬಸದಿಗಳು ಮತ್ತು ಶಾಸನಗಳ ನೆಲೆಬೀಡು. ವಿಶೇಷವಾಗಿ ಮರಣದ ಮಹಿಮೆಯನ್ನು ಸಾರುವ ಏಕ ಮೇವ ಸ್ಥಾನ. ಇಬ್ಬರು ಚಕ್ರವರ್ತಿಗಳು ನೂರಾರು ಜೈನ ಮುನಿಗಳು ಸಲ್ಲೇಖನ ವ್ರತದ ಮೂಲಕ ಪ್ರಾಣತ್ಯಾಗ ಮಾಡಿ ಪುಣ್ಯಭೂಮಿ ಇದು. ಸಾವೂ ಒಂದು ಸಂಭ್ರಮ ಎಂಬ ಜೈನ ಮತದ ತತ್ವವನ್ನು ಸಾರಿದ್ದ ತಾಣ ಇದಾಗಿದೆ..


ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ
 ಇದರ ಮಹತ್ವನ್ನು ಸಾರಲು ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು
  ಬಾಹುಬಲಿಯ ಮಹಾಮಸ್ತಕಾಭಿಷೇಕದಂತೆ ಹನ್ನೆರಡುವರ್ಷಗಳ ನಡುವೆ ಚಂದ್ರಗಿರಿ ಮಹೋತ್ಸವವನ್ನೂ ಹನ್ನೆರಡು ವರ್ಷಗಳಿಗೊಂದು ಸಾರಿ ಆಚರಿಸಿ ಈ ಬೆಟ್ಟದ ಧಾರ್ಮಿಕ ಮತ್ತು  ಐತಿಹಾಸಿಕ ಮಹತ್ವನ್ನೂ ಸಾರಲು ೨೦೦೧ ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದರು. ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ  ನಡೆಸುವರು. ಮಹೋತ್ಸವದ ಎರಡನೆಯ  ಆವೃತ್ತಿ  ಈ ವರ್ಷ ನಡೆದಿದೆ..ಈ ಸಲದ  ವಿಶೇಷವೆಂದರೆ  ಮೊದಲ ಬಾರಿಗೆ ಅದರ ಐತಿಹಾಸಿಕ ಮಹತ್ವಕ್ಕೆ ಕಾರಣವಾದ ಶಿಲಾಶಾನಗಳ ಅಧ್ಯಯನಮಾಡಿ ಹೊಸ ಬೆಳಕು ಚೆಲ್ಲುತ್ತಿರುವ ಶಾಸನ ನ ತಜ್ಞರಿಗೆ’ ಶಾಸನ ಸಾಹಿತ್ಯ “ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದರು. ಎರಡನೆಯ ಚಂದ್ರಗಿರಿ ಉತ್ಸವವು  ಆದೃಷ್ಟಿಯಿಂದ  ಅವಿಸ್ಮರಣೀಯ . ಮೊದಲಬಾರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಮೂತ್ತೈದು ಸಾವಿರ ರೂಪಾಯಿಗಳ  ಶಾಸನ ಕ್ಷೇತ್ರದಲ್ಲಿನ ಹನ್ನೊಂದು ಜನ ಹಿರಿಯ ಸಾಧಕರಿಗೆ ನೀಡಿ ಗೌರವಿಸಲಾಗಿದೆ.
ಶಾಸನಸ್ಥಾಪನಾ ರೂಪಕ
ಈ ಕಾರ್ಯಕ್ರಮವೇ ಒಂದು ರೀತಿಯಲ್ಲಿ ವಿಶಿಷ್ಟವಾಗಿತ್ತು. ಕಾರ್ಯಕ್ರಮ ಪ್ರಾಂಭವಾದ್ದು ಶಾಸನ ನಮನ  ದಿಂದ.. ಅದೂ ಸಂಗೀತ ಮತ್ತು ನೃತ್ಯದ ಮೂಲಕ. ಹಾಸನದ  ನೃತ್ಯ ಪಟುವಿನ ನೃತ್ಯಾಂಜಲಿ ಆಕರ್ಷಕ ನಾಂದಿಯಾಯಿತು. ನಂತರದ   ಕಾರ್ಯಕ್ರಮವಾದ ಶಿಲಾಶಾಸನ ಸ್ಥಾಪನೆ ಎಂಬ ರೂಪಕವು ನೋಡುಗರನ್ನು ಒಂದು ಸಹಸ್ರಮಾನದ ಹಿಂದಿನ ಐತಿಹಾಸಿಕ ಲೋಕಕ್ಕೆ ಕರೆದೊಯ್ದಿತು. ಶಿಲಾಶಾಸನವನ್ನು ನಡೆಸಿ ತಾವು ಮಾಡಿದ ದಾನವನ್ನು ಸ್ಥಿರಗೊಳಿಸಿ ಪ್ರಜೆಗಳಲ್ಲಿ ಅದರ ಪ್ರಾಮುಖ್ಯತೆಯ  ಅರಿವು  ಮೂಡಿಸುವ ಪ್ರಯತ್ನ ಅದಾಗಿತ್ತು.  ಶಾಸನ ಕಂಡರಿಸುವ ಶಿಲ್ಪಿ , ರಚಿಸುವ ಕವಿ, ನಿರ್ಮಿಸುವ ದಂಡನಾಯಕ. ಅದನ್ನು ಸಮರ್ಪಿಸುವ  ಅರಸ ವಿಷ್ಣುವರ್ಧನ, ಅವನ ಅರಸು ಪರಿವಾರ  ಸಕಲ ಗೌರವ ಗಳೊಂದಿಗೆ ನೆರೆದ  ಸಭಾಸದರು  ನಮ್ಮೆಲ್ಲರನ್ನೂ ಹೊಯ್ಸಳರ ಕಾಲಕ್ಕೆ ಕರೆದೊಯ್ದಿತು.ಈ ರೂಪಕವು ಸ್ವಾಮೀಜಿಯವರ ಕನಸಿನ ಕೂಸು ಎಂಬುದ ಗಮನಾರ್ಹ.. . ವೈಭವೋಪೇತ ಉಡುಗೆ ತೊಡುಗೆಗಳು, ೨೫ ಕ್ಕೂ ಅಧಿಕ ನಟರ ಹೊಂದಾಣಿಕೆ  ಸುಸಂಬದ್ಧ ,ಸಂಭಾಷಣೆ ಮತ್ತು ಅದ್ದೂರಿಯ ರಂಗಸಜ್ಜಿಕೆ  ನೋಡುಗರ ಮನಸೂರೆ ಗೊಂಡವು.ಶಾಸನ ಸಾಹಿತ್ಯ ಪ್ರಶಸ್ತಿ ಪ್ರದಾನಕ್ಕೆ ಸೂಕ್ತ ಹಿನ್ನೆಲೆ ಒದಗಿಸಿತು
ಪ್ರಶಸ್ತಿ  ಪಡೆದ  ಡಾ. ದೇವರ ಕೊಂಡಾ ರೆಡ್ಡಿ

ಇನ್ನು ವೇದಿಕೆಯಲ್ಲಿ ಸನ್ಮಾನಿತರಿಗೆ ಮಾಡಿದ ಆಸನ ವ್ಯವಸ್ಥೆ ಅವರ ಸಾಧನೆಯ ಮಹತ್ವ ಸಾರುವಂತಿತ್ತು ಸಿಂಹಾಸನವನ್ನು ಹೋಲುವ ವೇದಿಕೆಯ ಮಧ್ಯದಲ್ಲಿದ್ದು  ಸ್ವಾಮೀಜಿಯವರಿಗೂ ಆಸನಕ್ಕಿಂತಲೂ ವೈಭವೋಪೇತವಾಗಿದ್ದುದು ಶಾಸನ ಸಾಹಿತ್ಯಕ್ಕೆ ಸಲ್ಲಿಸಿದ ಅತಿ ದೊಡ್ಡ ಗೌರವವವೇ ಸರಿ.  ಬಹುತೇಕ ಸನ್ಮಾನ ಸಮಾರಂಭಗಳಲ್ಲಿ ರಾಜಕಾರಣಿಗಳ, ವ್ಯವಸ್ಥಾಪಕರ ಮತ್ತು ದಾನಿಗಳದೇ ದರ್ಬಾರು ಎದ್ದು ಕಾಣುವುದು ಸನ್ಮಾನಿತರು ಬಡ ಬಂಧುಗಳಂತೆ.ಆದರೆ ಇಲ್ಲಿ  ಶಾಸನ ಮತ್ತು ಶಾಸನ ಪರಿಣಿತರೇ   ಸಮಾರಂಭದ ಕೇಂದ್ರ ಬಿಂದುವಾಗಿದ್ದು ಸದಭಿರುಚಿಯ ಸಂಕೇತ.. ಪ್ರತಿಯೊಬ್ಬರ ಸಾದನೆ ಸಾರುವ ಮಾನ ಪತ್ರ  ಪಠಣೆ, ಶಾಲುಹೊಚ್ಚಿ ಸ್ಮರಣಿಕೆ ನೀಡಿ,ನಗದು ಬಹುಮಾನದೊಂದಿಗೆ ಗೌರವಿಸಲಾಯಿತು
ಚಾರು ಕೀರ್ತಿ ಭಟ್ಟಾರಕರೊಂದಿಗೆ ಪ್ರಶಸ್ತಿ ವಿಜೇತರು
 ಸನ್ಮಾನಿತರ ಪರವಾಗಿ . .ಷ.ಶೆಟ್ಟರ್ ಶ್ರವಣ ಬೆಳಗೊಳದ ಶಾಸನಗಳ ಮಹತ್ವ ಆಗಿರುವ ಮತ್ತು ಆಗ ಬೇಕಾದ ಕಾರ್ಯಗಳ ಮಹತ್ವವನ್ನು ತಿಳಿಸಿದರು. ಪ್ರೊ. ಹಂ.ಪಾ. ನಾಗರಾಜಯ್ಯನವರು ಜೈನ ಸಾಹಿತ್ಯದ ಮೇರು ಸಾದಕ.ಅವರು ಸನ್ಮಾನಿತರಾದರೂ ಎಲ್ಲ ಕಾರ್ಯದಲ್ಲೂ  ಅವರುನಿರ್ದೇಶನ ನೀಡಿ ನಿರ್ವಹಿಸುತ್ತಿರುವುದು ಕಾಣುತಿತ್ತು,ಸ್ವಾಮೀಜಿಯವರು ಮಾತಿಗಿಂತ ಕೃತಿಯಲ್ಲಿ ತಮ್ಮ ಇರವನ್ನು ಪ್ರಚುರ ಪಡಿಸಿದರು, ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಶಾಸನ ಕ್ಷೇತ್ರದ ಹಿರಿಯರು ಭಾಗವಹಿಸಿದ್ದರು. ಕರ್ನಾಟಕ ಜೈನ ಭವನವು ಜನರಿಂದ ತುಂಬಿ ತುಳುಕುತಿತ್ತು. ಜೈನ ಸಮಾಜವು  ಬೆಳಗಿನ
 ಉಪಹಾರದಿಂದ ಹಿಡಿದು ಮಧ್ಯಾಹ್ನದ ಊಟದ ವರೆಗೆ ಅಚ್ಚುಕಟ್ಟಾಗಿ  ಕೆಲಸ ಮಾಡಿದರು.ಪರಂಪರೆ ಮತ್ತು ಇತಿಹಾಸವನ್ನು ಗೌರವಿಸುವಲ್ಲಿ ಈ ಸಮಾರಂಭ ಯಶಸ್ವಿಯಾಯಿತು ಎನ್ನಬಹುದು.
 ಈ ಸಲದ ಪ್ರಶಸ್ತಿ  ವಿಜೇತರಲ್ಲಿ ಸಿಂಹಪಾಲು ಕರ್ನಾಟಕ ಇತಿಹಾಸ ಅಕಾದಮಿಯವರಗಿರುವುದು ಗಮನಾರ್ಹ ಸಂಗತಿ. ಪ್ರದಾನ ಮಾಡಿ ಹನ್ನೊಂದು ಪ್ರಶಸ್ತಿಗಳಲ್ಲಿ ಅಕಾದಮಿಯ ಅಧ್ಯಕ್ಷರಾದ ಡಾ. ದೇವರ ಕೊಂಡಾರೆಡ್ಡಿಯವರೂ ಸೇರಿದಂತೆ ಒಂಬತ್ತು ಸದಸ್ಯರಿಗೆ ಪ್ರಶಸ್ತಿಗಳು ದೊರೆತಿರುವುದ ಅಕಾದಮಿಯ ಕ್ರಿಯಾಶೀಲತೆಗೆ ಸಾಕ್ಷಿ.








Sunday, December 14, 2014

ನಲಿಗಾನಹಳ್ಳಿಯಲ್ಲಿ ದೊರೆತ ಬೃಹತ್ ಶಿಲಾಯುಗದ ನೆಲೆ


ಪಾವಗಡ ತಾಲ್ಲೂಕಿನ ನಲಿಗಾನಹಳ್ಳಿಯಲ್ಲಿ ದೊರೆತ ಬೃಹತ್ ಶಿಲಾಯುಗದ ನೆಲೆ
ಧನುಂಜಯ ಸಿ.
ನವಶಿಲಾಯುಗದ ಜನರು ಬೃಹದಾಕಾರದ ಕಲ್ಲುಚಪ್ಪಡಿ ಗಳನ್ನು ಬಳಸಿ ಸಮಾಧಿಗಳನ್ನು ನಿರ್ಮಿಸುತ್ತಿದ್ದರಿಂದ ಈ ಯುಗವನ್ನು ಬೃಹತ್ ಶಿಲಾಯುಗ ಎಂದು ಕರೆಯುತ್ತಾರೆ. ಕರ್ನಾಟಕದಾದ್ಯಂತ ಬೃಹತ್ ಶಿಲಾಯುಗದ ಅನೇಕ ನೆಲೆಗಳು ಪತ್ತೆಯಾಗಿವೆ. ಹಾಗೆಯೇ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಬೃಹತ್ ಶಿಲಾಯುಗಕ್ಕೆ ಸಂಬಂಧಪಟ್ಟಿರುವ ಹಲವಾರು ನೆಲೆಗಳು ಸಂಶೋಧಕರಿಂದ ಬೆಳಕಿಗೆ ಬಂದಿವೆ. ಅವುಗಳಲ್ಲಿ ಬಸವನಬೆಟ್ಟ, ಕನಿಕಲಬಂಡೆ, ತಪ್ಪಗಾನದೊಡ್ಡಿ, ಪಳವಳ್ಳಿ, ವೈ.ಎನ್.ಹೊಸಕೋಟೆ, ಯಲ್ಲಪ್ಪನಾಯಕನಹಳ್ಳಿ, ಬೂದಿಬೆಟ್ಟ, ಮರಿದಾಸನಹÀಳ್ಳಿ, ರಾಚಮಾರನಹಳ್ಳಿ,1 ಮುಂತಾದವು ಪ್ರಮುಖವಾಗಿವೆ.
ಶೃಂಗೇರಿಯಲ್ಲಿ ಸಮಾವೇಶಗೊಂಡಿದ್ದ ಕರ್ನಾಟಕ ಇತಿಹಾಸ ಅಕಾಡೆಮಿಯ 26ನೇ ವಾರ್ಷಿಕ ಸಮ್ಮೇಳನದಲ್ಲಿ ನನ್ನ ಕ್ಷೇತ್ರಕಾರ್ಯಕ್ಕೆ ಸಹಕರಿಸಿದ ಗೆಳೆಯನಾದ ರವೀಶ್ ಜಿ.ಎನ್. ಅವರು ಪಾವಗಡ ತಾಲೂಕಿನಲ್ಲಿ ಇತ್ತೀಚೆಗೆ ದೊರೆತ ಕೆಲವು ಪ್ರಾಗೈತಿಹಾಸಿಕ ನೆಲೆಗಳು ಎಂಬ ಲೇಖನವನ್ನು ಮಂಡಿಸಿದ್ದಾರೆ. ಇದರಲ್ಲಿ ನಲಿಗಾನಹಳ್ಳಿಯ ಪೂರ್ವ ದಿಕ್ಕಿನಲ್ಲಿರುವ ಕೆಲವು ಬೃಹತ್ ಶಿಲಾಯುಗ ನೆಲೆಗಳ ಜೊತೆಗೆ ನಲಿಗಾನಹಳ್ಳಿಯ ಈಶಾನ್ಯ ದಿಕ್ಕಿನಲ್ಲಿರುವ ಬೃಹತ್ ಶಿಲಾಯುಗದ ಸಮಾಧಿಗಳನ್ನು ಸೇರಿಸಿಕೊಂಡಿದ್ದು, ಅವರು ಕೇವಲ ಇಲ್ಲಿ ದೊರೆತಿರುವ ಪ್ರಾಚ್ಯಾವಶೇಷಗಳನ್ನು ಮಾತ್ರ ತಿಳಿಸಿರುತ್ತಾರೆ. ಆದರೆ ನಾನು ಈ ಲೇಖನದಲ್ಲಿ ನಲಿಗಾನಹಳ್ಳಿ ಗ್ರಾಮದ ಈಶಾನ್ಯ ಭಾಗದಲ್ಲಿರುವ 24 ಬೃಹತ್ ಶಿಲಾಸಮಾಧಿಗಳ ಕುರಿತು ಸಂಪೂರ್ಣವಾಗಿ ತಿಳಿಸುವ ಪ್ರಯತ್ನ ಈ ಲೇಖನದ್ದಾಗಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕಸಬಾ ಹೋಬಳಿಯ ನಲಿಗಾನಹಳ್ಳಿ ಗ್ರಾಮದ ಈಶಾನ್ಯ ಭಾಗಕ್ಕೆ 1 ಕಿ.ಮೀ. ದೂರದಲ್ಲಿ ಬೃಹತ್ ಹೆಬ್ಬಂಡೆಯ ಗುಡ್ಡದ ಮುಂಭಾಗದಲ್ಲಿ ಬೃಹತ್ ಶಿಲಾಯುಗದ 24 ಸಮಾಧಿಗಳನ್ನು ಪತ್ತೆ ಹಚ್ಚಲಾಗಿದೆ. ಈ 24 ಸಮಾಧಿಗಳಲ್ಲಿ ಒಂದು ಕಿಂಡಿ ಕೋಣೆ ಸಮಾಧಿ, 3 ಸ್ವಸ್ತಿಕ್ ಮಾದರಿಯವು, 7 ಚಪ್ಪಟೆಯಾಕಾರದ ಬಂಡೆ ಸಮಾಧಿಗಳು, 3 ಚಿಕ್ಕ ನಿಲುಸುಗಲ್ಲು ಮಾದರಿಯವು. ಇನ್ನುಳಿದ ಎಲ್ಲಾ ಸಮಾಧಿಗಳು ವೃತ್ತಾಕಾರದ ಉಂಡೆಗಲ್ಲು ಸಮಾಧಿಗಳಾಗಿವೆ.
ಕಿಂಡಿಕೋಣೆ ಸಮಾಧಿಯು ಆಯತಾಕಾರವಾಗಿದ್ದು, ಸಮಾಧಿಯ ಪೂರ್ವದಿಕ್ಕಿಗೆ ಕಿಂಡಿಯಿರುವುದು ಕಂಡುಬರುತ್ತದೆ. ಇದು ಪೂರ್ವ ಪಶ್ಚಿಮವಾಗಿ 7 ಅಡಿ ಉದ್ದವಿದ್ದು, ಉತ್ತರ ದಕ್ಷಿಣವಾಗಿ 4 ಅಡಿ ಅಗಲವಾಗಿದೆ. ಈ ಸಮಾಧಿಯು ನಿಧಿಗಳ್ಳರ ಕೃತ್ಯಕ್ಕೆ ಒಳಗಾಗಿ ನಾಶವಾಗಿದೆ. ಹಾಗೆಯೇ ಈ ಸ್ವಸ್ತಿಕ್ ಆಕಾರದ ಸಮಾಧಿಗಳು ಆಯತಾಕಾರವಾಗಿದ್ದು, ನಾಲ್ಕು ಬಂಡೆಗಳನ್ನು ಒಂದಕ್ಕೊಂದು ಒರಗಿಸಿ ಇಟ್ಟಂತೆ ನಿರ್ಮಿಸಲಾಗಿದ್ದು, ಈ ಮೂರು ಸಮಾಧಿಗಳು ಸುಸ್ಥಿತಿಯಲ್ಲಿವೆ. ಇವುಗಳಲ್ಲಿ ಒಂದು ಪೂರ್ವ ಪಶ್ಚಿಮವಾಗಿ 9 ಅಡಿ ಉದ್ದ, ಉತ್ತರ ದಕ್ಷಿಣವಾಗಿ 6.5 ಅಡಿ ಅಗಲವಾಗಿದೆ. ಇನ್ನುಳಿದ 2 ಸಮಾಧಿಗಳು ಸುಮಾರು 6 ಅಡಿ ಉದ್ದ, 4 ಅಡಿ ಅಗಲವಾಗಿವೆ. ಇವುಗಳನ್ನು ಭೂಮಿಯಲ್ಲಿ 3 ರಿಂದ 4 ಅಡಿ ಆಳಕ್ಕೆ ಅಗೆದು ನಿರ್ಮಿಸಿರುವುದು ಕಂಡುಬರುತ್ತದೆ. ಹಾಗೆಯೇ ಚಪ್ಪಟೆಯಾಕಾರದ ಬಂಡೆ ಸಮಾಧಿಗಳನ್ನು ಭೂಮಿಯಲ್ಲಿ ಸುಮಾರು 3 ರಿಂದ 4 ಅಡಿ ಆಳಕ್ಕೆ ಅಗೆದು ಅದರÀ ಮೇಲೆ ಬೃಹತ್ ಆದ ಚಪ್ಪಟೆಯಾಕಾರದ ಹಾಸುಗಲ್ಲನ್ನು ಹಾಕಿ ಮುಚ್ಚಿರುವಂತೆ ನಿರ್ಮಾಣ ಮಾಡಲಾಗಿದೆ. ಈ ಹಾಸುಗಲ್ಲು ಸುಮಾರು 7 ಅಡಿ ಉದ್ದ 6 ಅಡಿ ಅಗಲವಾಗಿದ್ದು. 1.5 ಅಡಿ ದಪ್ಪವಾಗಿದೆ. ಇವುಗಳಲ್ಲಿಯೂ ಕೆಲವು ಸುಸ್ಥಿತಿಯಲ್ಲಿದ್ದು ಮತ್ತೆ ಕೆಲವು ಹಾಳಾಗಿವೆ. ಅದೇ ರೀತಿ 3 ನಿಲುಸುಗಲ್ಲು ಮಾದರಿಯ ಸಮಾಧಿಗಳಿದ್ದು, ಶವಗಳನ್ನು ಭೂಮಿಯಲ್ಲಿ ಹೂತಿಟ್ಟು ಅದರ ಮೇಲೆ ಹಾಸುಗಲ್ಲನ್ನು ಹಾಸಿ, ಅದರ ಮೇಲೆ ಸುಮಾರು 2ರಿಂದ 3 ಅಡಿ ಎತ್ತರದ ಚಿಕ್ಕ ನಿಲುಸುಗಲ್ಲನ್ನು ಇಟ್ಟು ನಿರ್ಮಿಸಿರುವುದು ಕಂಡುಬರುತ್ತದೆ. ಇವು ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುವುದರಿಂದ ಬಹುಶಃ ಇವು ಚಿಕ್ಕಮಕ್ಕಳ ಸಮಾಧಿಗಳಾಗಿರÀಬಹುದು. ಹಾಗೆಯೇ ವೃತ್ತಾಕಾರದ ಉಂಡೆಗಲ್ಲು ಸಮಾಧಿಗಳು ಬಹಳಷ್ಟಿದ್ದು, ಇವುಗಳು ವಿಸ್ತೀರ್ಣದಲ್ಲಿ ದೊಡ್ಡದಾಗಿವೆ. ಇಲ್ಲಿ ಉಂಡೆಗಲ್ಲುಗಳನ್ನು ವೃತ್ತಾಕಾರವಾಗಿಟ್ಟು, ಮಧ್ಯಭಾಗದಲ್ಲಿ ಶವವನ್ನು ಮುಚ್ಚಿ ಅದರ ಮೇಲೆ ಬೃಹತ್ ಗಾತ್ರದ ಹಾಸುಗಲ್ಲನ್ನು ಹಾಸಿ ನಿರ್ಮಿಸಿರುವುದು ಕಂಡುಬರುತ್ತದೆ. ಇವುಗಳಲ್ಲಿಯೂ ಸಹ ಕೆಲವು ಹಾಳಾಗಿದ್ದು, ಇನ್ನೂ ಕೆಲವು ಸುಸ್ಥಿತಿಯಲ್ಲಿವೆ.
ಈ ಸಮಾಧಿಗಳನ್ನು ಅಗೆದಿರುವ ಮಣ್ಣಿನಲ್ಲಿ ಕಪ್ಪು ಮತ್ತು ಕೆಂಪು ಮಿಶ್ರಿತ ಬಣ್ಣದ ಮಡಿಕೆಯ ಚೂರುಗಳು, ಬೂದುಬಣ್ಣದ ಮೃತ್ಪಾತ್ರೆಗಳು, ಹೆರೆಚಕ್ಕೆಗಳು, ಕಬ್ಬಿಣದ ಕಿಟ್ಟಗಳು ದೊರೆತಿವೆ. ಸಾಮಾನ್ಯವಾಗಿ ಬೃಹತ್ ಶಿಲಾಯುಗದ ಜನರ ವಾಸದ ನೆಲೆಗಳ ಹತ್ತಿರದ ಬೆಟ್ಟಗುಡ್ಡಗಲ್ಲಿ, ಗವಿಗಳಲ್ಲಿ, ಕಲ್ಲಾಸರೆಗಳಲ್ಲಿ, ಕೆಲವೂಮ್ಮೆ ರೇಖಾಚಿತ್ರಗಳು ಕಂಡುಬರುತ್ತವೆ. ಇಂತಹ ರೇಖಾಚಿತ್ರವು ಈ ನೆಲೆಯ ಪಕ್ಕದಲ್ಲೇ ಪಶ್ಚಿಮ ದಿಕ್ಕಿನಲ್ಲಿರುವ ಬೃಹತ್ ಬಂಡೆಯ ಗುಡ್ಡದ ಮೇಲಿನ ತುದಿಯಲ್ಲಿ ಚಪ್ಪಡಿಕಲ್ಲುಗಳನ್ನು ಇಟ್ಟು ಅದರ ಮೇಲೆ ಪೂರ್ವ ಪಶ್ಚಿಮವಾಗಿ 18 ಅಡಿ, ಉತ್ತರ ದಕ್ಷಿಣವಾಗಿ 19 ಅಡಿ. ಮತ್ತು 1 ಅಡಿ ದಪ್ಪದ ವಿಶಾಲವಾದ ಹಾಸುಗಲ್ಲನ್ನು ಹಾಸಿ ನಿರ್ಮಿಸಿದ್ದು, ಈ ಹಾಸುಗಲ್ಲಿನ ಕೆಳಭಾಗದಲ್ಲಿ ಬಿಳಿ ಬಣ್ಣದ ರೇಖಾಚಿತ್ರವಿದೆ. ಅದು ಸ್ವಲ್ಪ ಹಾಳಾಗಿದ್ದು ವ್ಯಕ್ತಿಯ ರೇಖಾಚಿತ್ರದಂತೆ ಭಾಸವಾಗುತ್ತದೆ. ಈ ಬಂಡೆಯ ಪೂರ್ವದಿಕ್ಕಿಗೆ ಸ್ವಲ್ಪ ಕಿಂಡಿಯನ್ನು ಬಿಟ್ಟು ಸುತ್ತಲೂ ಚಿಕ್ಕ ಚಿಕ್ಕ ಕಲ್ಲುಗಳಿಂದ ಮುಚ್ಚಲಾಗಿದೆ. ಈ ಕೋಣೆಯ ಒಳಗಡೆ ಸುಮಾರು 6 ರಿಂದ 8 ಜನರ ವರೆಗೆ ಕುಳಿತುಕೊಳ್ಳುವಷ್ಟು ವಿಶಾಲವಾಗಿದೆ. ಈ ಹೆಬ್ಬಂಡೆಯ ಗುಡ್ಡವನ್ನು ಅಲ್ಲಿನ ಸ್ಥಳೀಯರು ಬತ್ತದ ಬಂಡೆ (ಓಡ್ಲಬಂಡ) ಎಂದು ಕರೆಯುತ್ತಾರೆ. ಹಾಗೆಯೇ ಇಂತಹ ಸಮಾಧಿಗಳನ್ನು ಪಾಂಡವರ ಗುಡಿಗಳೆಂದು ಕರೆಯುತ್ತಾರೆ. ಈ ಬತ್ತದ ಬಂಡೆಯ ಪಶ್ಚಿಮಕ್ಕೆ ಒಂದು ಕಿ.ಮೀ ದೂರದಲ್ಲಿ ಮತ್ತೊಂದು ಚಪ್ಪಟೆಯಾಕಾರದ ಬಂಡೆ ಸಮಾಧಿಯಿದ್ದು, ನಿಧಿಗಳ್ಳರಿಂದ ಅಗೆತಕ್ಕೆ ಒಳಗಾಗಿ ನಾಶವಾಗಿದ್ದು. ಇಲ್ಲಿಯೂ ಸಹ ಕಪ್ಪು ಮತ್ತು ಕೆಂಪು ಮಿಶ್ರಿತ ಮಡಿಕೆ ಚೂರುಗಳು ದೊರೆತಿವೆ. ಈ ಸಮಾಧಿಯಿಂದ ಸ್ವಲ್ಪ ದೂರದ ಜಮೀನಿನಲ್ಲಿ ನಯ ಮಾಡಿರುವ ಎರಡು ಕಲ್ಲಿನ ಕೈಕೊಡಲಿಗಳು ದೊರೆತಿದ್ದು, ಇವು ನವಶಿಲಾಯುಗದ್ದಾಗಿವೆ. ಇವು 15 ಸೆಂ.ಮೀ ಉದ್ದ 8 ಸೆಂ.ಮೀ. ಅಗಲವಾಗಿವೆ.
ಹಾಗೆಯೇ ಈ ನೆಲೆಯ ಕಾಲಮಾನವನ್ನು ತಿಳಿಯುವುದಾದರೆ, ಇತಿಹಾಸ ದರ್ಶನ ಸಂಪುಟ 17ರಲ್ಲಿ ಡಾ. ಕೆ.ಬಿ. ಶಿವತಾರಕ್ ಅವರ ತುಮಕೂರು ಜಿಲ್ಲಾ ಪ್ರದೇಶದ ಬೃಹತ್ ಶಿಲಾಯುಗ ಸಂಸ್ಕøತಿ ಎಂಬ ಲೇಖನದಲ್ಲಿ ಪಾವಗಡ ತಾಲೂಕಿನ ಇತರೆ ಬೃಹತ್ ಶಿಲಾಯುಗ ಸಂಸ್ಕøತಿಯ ಕಾಲಮಾನವನ್ನು ಕ್ರಿ.ಪೂ. 1200ರಿಂದ ಕ್ರಿ.ಪೂ.250 ಎಂದು ಹೇಳಿರುತ್ತಾರೆ.2 ಹಾಗಾಗಿ ಇಲ್ಲಿ ದೊರೆತಿರುವ ಪ್ರಾಚ್ಯಾವಶೇಷಗಳ ಆಧಾರದ ಮೇಲೆ ಈ ನೆಲೆಯ ಕಾಲಮಾನವನ್ನು ಕ್ರಿ.ಪೂ. 800ರಿಂದ ಕ್ರಿ.ಪೂ 100ರ ಆಸುಪಾಸು ಇರಬಹುದೆಂದು ಅಂದಾಜಿಸಬಹುದು. ಇಂತಹ ಸಮಾಧಿಗಳು ಪಾವಗಡ ತಾಲೂಕಿನ ಹಲವು ಕಡೆ ಕಂಡುಬಂದಿದ್ದು. ನಮ್ಮ ದುರಾದೃಷ್ಟಕ್ಕೆ ಇಲ್ಲಿಯ ಹಳ್ಳಿಯ ಜನರು ಈ ಜಾಗವನ್ನು ಆಕ್ರಮಿಸಿಕೊಂಡು ಸಮಾಧಿಗಳನ್ನು ಕೆಡವಿ ಬೇಸಾಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಜನರಿಗೆ ಇವುಗಳ ಮಹತ್ವವನ್ನು ತಿಳಿಸಿದರೂ ಏನು ಪ್ರಯೋಜನವಾಗುತ್ತಿಲ್ಲ. ಜೊತೆಗೆ ನಿಧಿ ಆಸೆಗಾಗಿ ಕೆಲವು ಗೋರಿಗಳು ನಿಧಿಗಳ್ಳರಿಂದ ನಾಶವಾಗಿರುವುದನ್ನು ಸಹ ನಾವು ಕಾಣಬಹುದು. ಹಾಗಾಗಿ ಇವುಗಳಿಗೆ ರಕ್ಷಣೆ ಒದಗಿಸಬೇಕಾಗಿದೆ.
[ಈ ಲೇಖನ ಸಿದ್ದಪಡಿಸಲು ನನಗೆ ಸಲಹೆ ಸೂಚನೆಗಳನ್ನು ನೀಡಿದ ನನ್ನ ಮಾರ್ಗದರ್ಶಕರು ಹಾಗೂ ಗುರುಗಳಾದ ಡಾ. ಸಿ.ಎಸ್. ವಾಸುದೇವನ್ ಅವರಿಗೆ ಹಾಗೆಯೇ ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಗೆಳೆಯರಾದ ರವೀಶ್ ಜಿ.ಎನ್. ಮತ್ತು ರಾಮಾಂಜಿಯವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.]

ಆಧಾರಸೂಚಿ
1. ಇತಿಹಾಸ ದರ್ಶನ ಸಂಪುಟ 7, 1992.
2. ಇತಿಹಾಸ ದರ್ಶನ ಸಂಪುಟ 17, 2002.

Friday, December 5, 2014

ಶಾಸನ ಸಾಹಿತ್ಯ ಪ್ರಶಸ್ತಿ


                    ಶಾಸನ ಸಾಹಿತ್ಯ ಪ್ರಶಸ್ತಿಗಳ ಸುರಿ ಮಳೆ-ಇತಿಹಾಸ ಅಕಾದಮಿಗೆ
 ಶಾನಗಳು ಇತಿಹಾಸದ ಅಡಿಗಲ್ಲುಗಳು. ಕರ್ನಾಟಕದಲ್ಲಿ  ಏಕೆ ? ಭಾರತದಲ್ಲಿಯೇ ಒಂದೇ ಕಡೆ ಶಾಸನಗಳು ಇಷ್ಟು ಅಧಿಕ ಸಂಖ್ಯೆಯಲ್ಲಿರುವುದು. ಶ್ರವಣ ಬೆಳಗೊಳದಲ್ಲಿ ಮಾತ್ರ. . ಅಲ್ಲಿನ ಚಂದ್ರಗಿರಿ ಅಥವ ಚಿಕ್ಕಬೆಟ್ಟದಲ್ಲಿ ಐದುನೂರಕ್ಕೂ ಮಿಕ್ಕಿ ಶಿಲಾಶಾಸನಗಳಿವೆ. ಶಾಸನ ಅಭ್ಯಾಸಿಗಳಿಗೆ ಚಂದ್ರಗಿರಿ ಜ್ಞಾನದ ಆಗರ . ಶ್ರವಣ ಬೆಳಗೊಳ  ಜೈನಕಾಶಿ ಎಂದು ಪ್ರಖ್ಯಾತ. ಜೊತೆಗ ಶಾಸನ ಕಾಶಿ ಎನ್ನಬಹುದು.  ಎರಡು ಸಹಸ್ರಮಾನಕ್ಕೂ ಪುರಾತನವಾದ ಈ ಕ್ಷೇತ್ರದಲ್ಲಿನ  ಬಾಹುಬಲಿಯ ಮಹಾಮಸ್ತಕಾಭಿಷೇಕ ದಂತೆಹನ್ನೆರಡುವರ್ಷಕೊಮ್ಮೆ  ಚಂದ್ರಗಿರಿ ಉತ್ಸವವನ್ನೂ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಶಾಸನ ಕ್ಷೇತ್ರದಲ್ಲಿ ಗಣನೀಯ ಸಾಧಕರಿಗೆ ಶಾಸನ ಸಾಹಿತ್ಯ ಪ್ರಶಸ್ತಿಯನ್ನು ನೀಡಲು ಪೂಜ್ಯ ಚಾರು ಕೀರ್ತಿ ಭಟ್ಟಾರಕಸ್ವಾಮೀಜಿಯವರು  ನಿರ್ಧರಿಸಿರುವುರು . ಈ ಬಾರಿಯ  ಶಾಸನ ಕ್ಷೇತ್ರದಲ್ಲಿನ  ಹನ್ನೊಂದು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ . ಕರ್ನಾಟಕ ಸಾಹಿತ್ಯ ಪರಿಷತ್ತಿನ ಅದ್ಯಕ್ಷರೂ ಸೇರಿದಂತೆ ೯ ಸದಸಸ್ಯರಿಗೆ  ಪ್ರಶಸ್ತಿಗಳ ಸುರಿಮಳೆಯಾಗಿದೆ. ಹನ್ನೊಂದರಲ್ಲಿ ಹತ್ತು ಪ್ರಶಸ್ತಿಗಳು ಅವರಿಗೇ ಸಂದಿವೆ.ಅವರು ಇತಿಹಾಸ ಅಕದಮಿಯ ಗೌರವ ಪತಾಕೆ ಎತ್ತಿ ಹಿಡಿದಿರುವರು. 


                                           


                     ಹಾರ್ಧಿಕ ಅಭಿನಂದನೆಗಳು
                                      
ಎಚ್‌.ಶೇಷಗಿರಿರಾವ್
 ನಿರ್ದೇಶಕರು ಹಸ್ತಪ್ರತಿ ಅಭಿಯಾನ
                                    
  





ಕಾರ್ಯಕ್ರಮದ ವಿವರ ಹೀಗಿದೆ






                      





Wednesday, December 3, 2014

ಹಸ್ತಪ್ರತಿ ಅಭಿಯಾನ



ಹಸ್ತಪ್ರತಿ ಸಂರಕ್ಷಣ ಕಾರ್ಯಾಗಾರ

ಹಸ್ತಪ್ರತಿ ನಮ್ಮ ಪ್ರಾಚೀನ ಜ್ಞಾನ ಸಂಪತ್ತಿನ ಭಂಡಾರ ಎಂಬ ಬಗ್ಗೆ ಎರಡು ಮಾತಿಲ್ಲ. ಅದಕ್ಕಾಗಿಯೇ ಹಲವು ಕಡೆ ಕನ್ನಡ ಸ್ನಾತಕೋತ್ತರ ಪಠ್ಯ ಕ್ರಮದಲ್ಲಿ ಆಕರ ಶಾಸ್ತ್ರ ಎಂಬ ಒಂದು ಪತ್ರಿಕೆಯನ್ನೂ ,ಎಂಫಿಲ್ ಪಠ್ಯ ಕ್ರಮದಲ್ಲೂ  ಹಸ್ತಪ್ರತಿಸಂರಕ್ಷಣೆ , ಡಿಜಲೀಕರಣ ಕುರಿತು ಅಧ್ಯಯನ ಮಾಡಬೇಕಿದೆ..ಗ್ರಂಥ ಸಂಪಾದನೆಯಲ್ಲೂ ಹಸ್ತಪ್ರತಿಗಳೇ ಮೂಲಆಕರ. ಇದೆಲ್ಲ ಗೊತ್ತಿದ್ದರೂ ಹಸ್ತಪ್ರತಿಗಳ ಕುರಿತು ಬಹಳ ಕಡೆ ದಿವ್ಯ ನಿರ್ಲಕ್ಷ್ಯ. ಹಸ್ತಪ್ರತಿಗಳ ಸಂರಕ್ಷಣೆ ಮಾಡುವದು ಹಾಗಿರಲಿ ತಾಳೆಯ ಗರಿಯ ವೀಕ್ಣೆಣೆಯನ್ನೂ ಮಾಡದೇಅಂಕಗಳಿಸುವ ಕಲೆ ಕರಗತವಾಗಿದೆ. ಬಹುತೇಕರಿಗೆ. ಇದಕ್ಕೆ ಕಾರಣಗಳು ಹಲವಾರು. ವ್ಯವಸ್ಥೆಯೇ ಹಾಗಿರುವಾಗ ವಿದ್ಯಾಥಿಗಳತ್ತ , ಬೊಟ್ಟು ಮಾಡುವುದು ಸೂಕ್ತವಲ್ಲ.  ಈ ದಿಶೆಯಲ್ಲಿ  ಬಿ. ಎಂ ಶ್ರೀ ಪ್ರತಿಷ್ಠಾನದ ಹಸ್ತಪ್ರತಿವಿಭಾಗವು ಬೆಕ್ಕಿಗೆ ಗಂಟೆ ಕಟ್ಟುವ ಮನ ಮಾಡಿದೆ.. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಸ್ತ ಪ್ರತಿಗಳ ಸಂರಕ್ಷಣೆಯಲ್ಲಿ ಕೈ ಮುಟ್ಟಿ ಕೆಲಸ ಮಾಡುವ ಅವಕಾಶ ಒದಗಿಸುವ ಕಾರ್ಯಾಗಾರ ಹಮ್ಮಿ ಕೊಂಡಿದೆ.
ಈಗಾಗ ಲೇ ಎಂ,.ಇ. ಎಸ್‌ ಮತ್ತು ಎಂ. ಎಲ್‌ ಎ ಕಾಲೇಜಿನ   ಎಂ.ಎ. ವಿದ್ಯಾರ್ಥಿಗಳಿಗೆ ಒಂದುವಾರದ ಪೂರ್ಣಾವಧಿಯ ತರಬೆತಿ ನೀಡಿದ ಹಿನ್ನೆಲೆಯಲ್ಲಿ ಈ ಸಲ ಬಸವನಗುಡಿಯ ನ್ಯಾಷನಲ್‌  ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲು ನಿರ್ಧರಿಸಲಾಯಿತು. ಗಣೇಶನ ಮದುವೆಗೆ ನೂರೆಂಟು ವಿಘ್ನ. ಮೊದಲನೆಯದಾಗಿ ಈಗ ಸೆಮಿಸ್ಟರ್‌ ಪದ್ದತಿಇರುವುದರಿಂದ ನಿಗದಿತ ಅವಧಿಯಲ್ಲಿ ಪಠ್ಯ ಕ್ರಮ ಪೂರೈಸುವ ತರಾತುರಿ. ಎರಡನೆಯದಾಗಿ ಮಿತವಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಜೊತೆಗೆ  ನೆಟ್‌ ಪರೀಕ್ಷೆ, ಕಿರು ಪರೀಕ್ಷೆ. .ಈ ಎಲ್ಲ ತೊಡಕುಗಳಿಗೆ ಪರಿಹಾರ ನೀಡಿದರೆ ಕಾರ್ಯಾಗಾರದ ಕೆಲಸ ಮೊದಲಾಗುವ ಸಾಧ್ಯತೆ ಇದ್ದಿತು.ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ. ಮೂಡಿಸಬೇಕಿತ್ತು.
ಈ ವಿಬಾಗದ ಮುಖ್ಯಸ್ಥರು ಮತ್ತು ಕಾಲೇಜಿನನಿವೃತ್ತ ಪ್ರಾಂಶುಪಾಲರು ಆಸಕ್ತಿ ತೋರಿದರೂ ಅಡೆ ತಡೆಗಳತ್ತ ಕೈ ತೋರಿದರು.
ಮೊಟ್ಟ ಮೊದಲನೆಯದಾಗಿ ವಿದ್ಯಾರ್ಥಿಗಳನ್ನು ಕೇಳಿದಾಗ ಅವರಿಗೆ ಆಸಕ್ತಿ ಇದೆ ಆದರೆ ಅವಕಾಶವಿಲ್ಲ.ನಿತ್ಯದ ಪಾಠಪ್ರವಚನಗಳ ಒತ್ತಡ. ಇದಕ್ಕೆ ಪರಿಹಾರ ಅವರಿಗೆ ಬಿಡುವಾಗಿದ್ದಾಗ ತರಬೇತಿ ನಡೆಸುವುದು.ಅಂದರೆ ಮದ್ಯಾಹ್ನ   ೨  ಗಂಟೆಯವರೆಗೆ ಅವರ ಕಾಲೇಜಿನ ಪಾಠ ಪ್ರವಚನಗಳು. ನಂತ ೨.೩೦ ಯಿಂದ ೫.೩೦ ವರೆಗೆ ಕಾರ್ಯಾಗಾರ. ಅದೃಷ್ಟಕ್ಕೆ ಕಾಲೇಜಿಗೂ ಮತ್ತು ತರಬೇತಿ ನೀಡುವ ಸ್ಥಳಕ್ಕೂ ಕೇವಲ ಹದಿನೈದು ನಿಮಿಷದ ಹಾದಿ ಆದ್ದರಿಂದ  ಮಧ್ಯಾಹ್ನ ೨.೩೦ ರಿಂದ  ತರಬೇತಿ ನಡೆಸಲು ನಿರ್ಧಾಆರ ಮಾಡಲಾಯಿತು
ಮೊದಲ ದಿನವೇ ಸಮಯ ತುಸು ಏರು ಪೇರಾಯಿತು. ಕಾಲಲೇಜಿನ ತರಗತಿಗಳು ಮುಗಿದ ನಂತರ ಊಟ ಮಾಡಿಕೊಂಡು ಬಿಸಿಲಲ್ಲಿ ಬರುವುದಕ್ಕೆ ಅರ್ದ ಗಂಟೆಗಿಂತ ಅಧಿಕ ಸಮಯದ ಅಗತ್ಯ..ಅದಕ್ಕಾಗಿ ಕಾಲೇಜಿನವರನ್ನು ತರಗತಿಯನ್ನು ೧೫ ನಿಮಿಷ ಮುಂಚಿತವಾಗಿ ಮುಗಿಸಲು ಕೇಳಿಕೊಳ್ಳಲಾಯಿತು  ಹಾಗೂ ಕಾರ್ಯಾಗಾರದ  ಪ್ರಾರಂಭವನ್ನು ೧೫ ನಿಮಷ ಮುಂದೂಡಲಾಯಿತು,
ನಂತರ  ತರಬೇತಿ ಶುಲ್ಕ ೨೫೦/-ರೂಪಾಯ ಕುರಿತು  ಗೊಣಗಾಟ ಕಂಡುಬಂದಿತು. ಅದಕ್ಕೆ ಪರಿಹಾರವಾಗಿ ಶುಲ್ಕವನ್ನು ತರಬೇತಿಯ ಅವಧಿಯಲ್ಲಿ ಯಾವಾಗ ಬೇಕಾದರೂ ಕೊಡಬಹದು ಮತ್ತು ಅದು ಹೊರೆ ಎನಿಸಿದರೆ ಸಂಸ್ಥೆಗ ನಿಗದಿ ಪಡಿಸಿದ ಶುಲ್ಕಕ್ಕೆ ರಸೀತಿ ಹಾಕಲಾಗುವುದು ಆದರೆ  ಮನವಿಯ ಮೇರೆಗೆ ಅನಾನುಕೂಲವಿದ್ದವರ ಶುಲ್ಕದ ಆಂಶಿಕ ಭಾಗವನ್ನು ನಿರ್ದೇಶಕರೇ ನೀಡುವುದಾಗಿ ತಿಳಿಸಿದರು. ಹಣದ ಕೊರತೆಯ ಕಾರಣದಿಂದ ಯಾವ ವಿದ್ಯಾಥಿಯೂ ವಂಚಿತನಾಗಬಾರದು ಎಂಬ ನಿಲವು ತೆಗೆದುಕೊಳ್ಳಲಾಯಿತು. ಮೊದಲ ದಿನ ೨೧ ಜನ ವಿದ್ಯಾರ್ಥಿಗಳು ಭಾಗವಹಿಸಿದರು.
ತರಬೇತಿ ಉದ್ಘಾಟನೆಗೆ ಸಂಸ್ಥೆಯ ಅಧ್ಯಕ್ಷರಾದ  ಡಾ. ಪಿ.ವಿ. ನಾರಾಯಣ , ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಪ್ರೊ. ಲೀಲಾವತಿ,ಗಣಿತ ವಿಭಾಗದ ಪ್ರಾಧ್ಯಾಪಕಿ ಮತ್ತು ಕನ್ನಡ ವಿಭಾಗದ ಪ್ರಧ್ಯಾಪಕಿಯರಾದ  ಭಾಗವಹಿಸಿದರು. ವಿಶೇಷವೆಂದರೆ ವಿಜಯಾಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ರಾಮಮೂರ್ತಿ ಹಸ್ತಪ್ರತಿ ಕುರಿತ ಆಸಕ್ತಿಯಿಂದ ತಾವೂ ಶಿಬಿರಾರ್ಥಿಯಾಗಿ ಸಂರಕ್ಷಣಾ ಕೆಲಸ ಕಲಿತು ಹಸ್ತಪ್ರತಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ,ಮುಂದೆ ಬಂದರು..
ತರಬೇತಿಯ ಭಾಗವಾಗಿ ಸಾಧ್ಯವಾದರೆ ಎರಡು ದಿನಕೊಮ್ಮೆ ಸಂಜೆ ಅರ್ಧಗಂಟೆ  ಹಸ್ತಪ್ರತಿ ತಜ್ಞರ ವಿಶೇಷ ಉಪನ್ಯಾಸ ನಡೆಸಲು ಯೋಜನೆ ಹಾಕಿಕೊಳ್ಳಲಾಯಿತು ಮುಖ್ಯವಾಗಿ ವಿದ್ಯಾರ್ಥಿನಿಯರು ದೂರದಿಂದ ಮತ್ತು ಹೊರ ಊರಿನಿಂದ ಬರುವುದರಿಂದ ಅವರ ಅನುಕೂಲ ಗಮನಿಸಿಲು ನಿರ್ಧಾರಿಸಲಾಯಿತು. ನಿರ್ದೇಶಕರಾದ ಎಚ್‌.ಶೇಷಗಿರಿರಾಯರು ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಅಧ್ಯಯನದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ ಆಧುನಿಕತಂತ್ರಜ್ಞಾನದ ಅಳವಡಿಕೆಯಿಂದ ಡಿಜಿಟಲ್‌ ರೂಪದಲ್ಲಿ ಹಸ್ತಪ್ರತಿಗಳ ಗರಿಗಳನ್ನು ಆಸಕ್ತರು ಇದ್ದಲ್ಲಿಗೆ ಕಳುಹಿಸುವ ಸಾಧ್ಯತೆಯಿಂದ ಈ ರಂಗದಲ್ಲಿ ಆಶಾದಾಯಕ ಬೆಳವಣಿಗೆ ಯಾಗುವುದೆಂದು ತಿಳಿಸಿದರು. ಮುಖ್ಯ ಅತಿಥಿಯಾದ ಪ್ರೊ. ಲೀಲಾವತಿಯವರು ವಿದ್ಯಾಥಿಗಳ ಜ್ಞಾನಪರಿಧಿ ವಿಸ್ತಾರಗೊಳಿಸುವ ಮುಂದೆ ಸಂಶೋಧನೆಗೆ ಪೂರಕವಾದ ಹಸ್ತಪ್ರತಿಗಳ ಪರಿಚಯವಾಗುವುದು ತುಂಬ ಉತ್ತಮ ಎಂದರು,  ಅಧ್ಯಕ್ಷ ಭಾಷಣದಲ್ಲಿ ಡಾ. ನಾರಾಯಣರು ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತು ಕುರಿತು ತಿಳಿಸುತ್ತಾ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಹಸ್ತಪ್ರತಿಗಳ ಅಧ್ಯಯನ ಅತಿ ಮಹತ್ವದ ಪಾತ್ರ ನಿರ್ವಹಿಸುವುದನ್ನು ವಿವರಿಸಿದರು ಹಸ್ತಪ್ರತಿ ವಿಭಾಗದ ಶ್ರೀ ಗುರುಪ್ರಸಾದ, ಶ್ರೀಮತಿ ವೀಣಾ ಮತ್ತು ಶ್ತಿಮತಿ ಮಧುರಾ ಅವರು ಅಚ್ಚುಕಟ್ಟಾಗಿ ಕಾರ್ಯಾಗಾರ ನಡೆಯಲು ಅಗತ್ಯವಾದ ವ್ಯವಸ್ಥೆ ಮಾಡಿದ್ದರು. ಮಕ್ಕಳೂ ಅಷ್ಟೇ ಆಸಕ್ತಿಯಿಂದ ಮೊದಲ ಹಂತವಾದ ಗರಿಗಳ ವಿಂಗಡಣೆ ಮತ್ತು ಶುಷ್ಕ ಶುದ್ಧೀಕರಣದ ಕೆಲಸಗಳನ್ನು ಖುಷಿಖುಷಿಯಿಂದ ಕೈಗೆತ್ತಿಕೊಂಡರು.
  



ಎಚ್.ಶೇಷಗಿರಿರಾವ್