Tuesday, April 29, 2014

ಒಂದು ಅಪ್ರಕಟಿತ ತಾಮ್ರ ಶಾಸನ




ಯಲಹಂಕ ನಾಡಪ್ರಭುಗಳ ಕಾಲದ ಒಂದು ಅಪ್ರಕಟಿತ ತಾಮ್ರ ಶಾಸನ
ಡಾ. ಬಿ.ಎಸ್. ಪುಟ್ಟಸ್ವಾಮಿ
ಯಲಹಂಕ ನಾಡಪ್ರಭುಗಳ ಕಾಲಕ್ಕೆ ಸಂಬಂಧಿಸಿದಂತೆ ಕ್ಷೇತ್ರಕಾರ್ಯ ಮಾಡುವ ಸಂದರ್ಭದಲ್ಲಿ ಮಾಗಡಿ ಪ್ರದೇಶದಲ್ಲಿ ಒಂದು ಅಪ್ರಕಟಿತ ತಾಮ್ರಶಾಸನವಿರುವುದು ನನ್ನ ಗಮನಕ್ಕೆ ಬಂದಿತು. ಅದನ್ನು ಸಂರಕ್ಷಿಸಿಕೊಂಡು ಬಂದಿರುವ ಮಾಗಡಿಯ ಡಾ. ಎಂ.ಆರ್. ಗುರುದೇವ್ ಎಂಬುವವರ ಬಳಿ ಹೋಗಿ ಪಡೆದು ಅದರ ಪೂರ್ಣಪಾಠವನ್ನು ಸಿದ್ದಪಡಿಸಿದ್ದೇನೆ. ಶಾಸನವನ್ನು ತಾಮ್ರದ ತಗಡಿನಲ್ಲಿ ಎರಡೂ ಕಡೆಯಲ್ಲೂ ಬರೆಯಲಾಗಿದೆ. ತಾಮ್ರಪತ್ರವು 14 ಅಂಗುಲ ಉದ್ದ, 8 ಅಂಗುಲ ಅಗಲವಿದ್ದು ಮೇಲುಭಾಗದಲ್ಲಿ ಸೂರ್ಯ, ಚಂದ್ರ ಮಧ್ಯದಲ್ಲಿ ಶಿವಲಿಂಗವಿದೆ. ಮುಮ್ಮಖದಲ್ಲಿ 32 ಸಾಲುಗಳು, ಹಿಮ್ಮುಖದಲ್ಲಿ 10 ಸಾಲುಗಳಿವೆ. ಲಿಪಿ ಹದಿನೆಂಟನೇ ಶತಮಾನದ ಕನ್ನಡ ಬರವಣಿಗೆಯಾಗಿದ್ದು ಸುಲಭವಾಗಿ ಓದಬಹುದಾಗಿದೆ. ಬರವಣಿಗೆಯಲ್ಲಿ ಅಲ್ಲಲ್ಲಿ ಸ್ಖಾಲಿತ್ಯ ಕಂಡುಬಂದರೂ ಶಾಸನದ ಪಾಠವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಶಾಸನವು ಬರೆಯಲ್ಪಟ್ಟ ತಾರೀಖನ್ನುಡಾ. ಬಿ.ಎಸ್. ಪುಟ್ಟಸ್ವಾಮಿ
, ಆಗ ಆಳುತ್ತಿದ್ದ ದೊರೆಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಶಾಸನ ಬರೆದದ್ದು ಶಾಲಿವಾಹನ ಶಕ 1634, ವಿಜಯ ಸಂವತ್ಸರ ವೈಶಾಖ ಶುದ್ಧ ಹತ್ತರಂದು, ಅಂದರೆ ಕ್ರಿ.ಶ. 1712ರ ಸೆಪ್ಟಂಬರ್ ತಿಂಗಳೆಂದು ತಿಳಿದುಬರುತ್ತದೆ. ಯಲಹಂಕನಾಡ ಕೊನೆಯ ಪ್ರಭುಗಳಾದ ಸದಾಶಿವಗೋತ್ರದ ಮುಮ್ಮಡಿ ಕೆಂಪೇಗೌಡರ ಪುತ್ರರಾದ, ಮುಮ್ಮಡಿ ದೊಡ್ಡವೀರಪ್ಪಗೌಡರ ಪುತ್ರರಾದ, ಕೆಂಪವೀರಪ್ಪಗೌಡರು ಬರೆಸಿಕೊಟ್ಟ ತಾಮ್ರಶಾಸನ ಎಂದಿದೆ. ಇದರಲ್ಲಿ ಮಾಗಡಿ ಸೀಮೆಗೆ ಸಲ್ಲುವ ಉದ್ದಂಡನಹಳ್ಳಿ ಗ್ರಾಮವನ್ನು ದಾನ ನೀಡಿದ ವಿವರಗಳು ಇವೆ. ಶಾಸನದ ಕೊನೆಯಲ್ಲಿ ಶಾಪಾಶಯ ಭಾಗವಿದೆ.
ಈ ಶಾಸನವು ಯಲಹಂಕ ನಾಡಪ್ರಭುಗಳ ಕಾಲ, ರಾಜ್ಯದ ಸರಹದ್ದುಗಳನ್ನು ತಿಳಿಸುವುದಲ್ಲದೆ ಅವರ ಧಾರ್ಮಿಕ, ಸಾಮಾಜಿಕ ಜೀವನದ ಮೇಲೆ ಬೆಳಕನ್ನು ಚೆಲ್ಲುತ್ತದೆ. ಶಾಸನದ ಪೂರ್ಣ ವಿವರಣೆ ಅದರ ರಾಜಕೀಯ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ವಿವರಿಸುತ್ತದೆ.
ಶಾಸನದ ಪಾಠ
ಶುಭಮಸ್ತು ಶಾಸನಮಸ್ತು ಶ್ರೀಮದ್ಗವಿಗಂಗಾಧರಾಯ ನಮಃ
ನಮಸ್ತುಂಗ ಶಿರಸ್ಛುಂಭಿ ಚಂದ್ರಚಾಮರ ಚಾರವೆ ತ್ರೈಲೋಕ್ಯನಗ
ರಾರಂಭ ಮೂಲಸ್ತಂಭಾಯ ಶಂಭವೆ|| ಸ್ವಸ್ತಿಶ್ರೀ ವಿಜಯಾಭ್ಯು
ದಯ ಶಾಲಿವಾಹನ ಶಕ ವರ್ಷಂಗಳು 1634ನೇ ವಿಜಯಸಂವ
ತ್ಸರ ವೈಶಾಖ ಶುದ್ಧ 10ರಲ್ಲೂ ಶ್ರೀಮತು ದೇವೋತ್ತಮ ದೇವತಾಸಾ
ರ್ವಭೌಮರಾದ ಗವಿಗಂಗಾಧರಸ್ವಾಮಿಯವರ ದಿವ್ಯ ಚ
ರಣಾರವಿಂಧಗಳ ಸೇವೆಗೈಯುತ್ತಾ ಶ್ರೀಮದ್ರಾಜಧಿರಾಜ ರಾಜ ಪರಮೆ
ಶ್ವರ ಶ್ರೀವೀರಪ್ರತಾಪ ಶ್ರಿರಂಗದೇವಮಹಾರಾಯ ರೈಯ್ಯನವರು
ಘನಗರಿಯಲ್ಲು ರತ್ನಾಸಿಂಹಾಸನಾರೂಢರಾನ್ನಿಪ್ಪ ಪೃಥ್ವೀಸ್ಥಿರ ಸಾಂಬ್ರ
ಜ್ಯಂ ಗೈಯುತ್ತಿರಲು ನಿಮ್ಮ ಪ್ರಿಯ ಭಕ್ತರಾದ ಸದಾಶಿವಗೋತ್ರದ ಯ
ಲಹಂಕನಾಡ ಪ್ರಭುಗಳಾದ ಮುಮ್ಮಡಿ ಕೆಂಪ್ಪಗಉಡರÀ ಪಾತ್ರರಾದ ಮುಂ
ಮ್ಮಡಿ ದೊಡ್ಡವೀರಪ್ಪಗಉಡರ ಪುತ್ರರಾದ ಮುಂಮ್ಮಡಿ ಕೆಂಪ್ಪವೀರಪ್ಪ
ಗಉಡರು ಬಿಂನಹಂಮಾಡಿ ಬರೆಶಿ ಕೊಟ್ಟ ತಾಂಬ್ರ್ರಶಾಸನದ ಕ್ರಮ
ವೆಂತೆಂದರ್ರೆ ಮಾಗಡಿ ಶೀಮೆಗೆ ಸಲುವ ಉದ್ದಂಡನಹಳ್ಳಿ ಗ್ರಾಮವಂನು
ಸಮರ್ಪಿಸ್ತಿನಾದ ಕಾರಣ ಯಿ ಗ್ರಾಮಕ್ಕೆ ಸಲುವ ಚತುಶೀಮೆ
ಯೋಳಗೆ ನಿಧಿನಿಕ್ಷೇಪ ಜಲಪಾಷಾಣ ಅಕ್ಷೀಣಿ ಆಗಾಮಿ ಸಿದ್ಧಸಾ
ಧ್ಯಂಗಳೆಂಬ ಅಷ್ಠಭೋಗಕೆ ಬಸಾಮ್ಯಗಳಂನು ದಾನಾದಿ
ಕ್ರಿಯ ವಿನಿಮಯ ಭೋಗ್ಯಂಗಳಿಗೆ ಯೋಗ್ಯವಾಗಿ ನಿತ್ಯ ಶ್ರೀನಿತ್ಯ
ಮಂಗಳವಾಗಿ ಆಚಂದ್ರಾರ್ಕವಾಗಿ ದೇವರ ಸೇವಾರ್ಥವಾಗಿ ನಿತ್ಯ
ಕಟಳೆ ಪಡಿತರ ದೀಪಾರಾಧನೆ ಮಹಾರಥೋತ್ಸವ ಪುತ್ರೋತ್ಸವ
ಪರ್ವತಿಥಿಸಕಲ ಉತ್ಸವಗಳಂನು ನಂನ್ನಾನಲ್ಲಿ ಪೂರ್ವ
ಕಟಾಕ್ಷವಿಟ್ಟು ಅಂಗೀಕರ್ರಿಶಿ ನನಗೆ ಯಿಷ್ಟಾಭಿಷ್ಟಗಳು ಕೊಟ್ಟು
ರಕ್ಷಿಸ ಬೇಕೆಂದು ಬಿಂನಹಂ ಮಾಡಿ ಬರೆಶಿಕೊಟ ತಾಂಬ್ರಶಾ
ಸನ\\ ಸ್ವದತ್ತಾದ್ವಿಗುಣಂ ಪುಂಣ್ಯಂಪರದತ್ತಾನು ಪಾಲನಂ
ಪರದತ್ತಾಪಹಾರೇಣ ಸ್ವದತ್ತಂ ನಿಷ್ಪಲಂಭವೇತು ನವಿಷಂಮಿ
ಹತ್ಯಾ ಹುಂ\\ ದೇವಸ್ವಂವಿಷಮುಚ್ಛತ್ತೇ ವಿಷಮೇ ಕಾಕಿನಂಹಂ
ದೇವಸ್ವಂಪುತ್ರ ಪೌತ್ರಕಂ ಸ್ವದತ್ತಾಂಪರದತ್ತಾವ್ವಾಯೋ
ಹರೆತ ವಸುಂಧರಾ ಷಷ್ಠಿವರ್ಷಸಹಸ್ರಾಣಿ ವಿಷ್ಠಾಂಯಾಂಜಾ
ಯತೇ ಕ್ರಿಮಿಃ\\ ಯಿ ಧರ್ಮಕ್ಕೆ ದೊರೆಗಳೇ ಆಗಲಿ ಉದ್ಯೋಗ
ಸ್ಥರೇ ಆಗಲಿ ದ್ರೋಹಬುದ್ದಿಯೆಣಿಶಿದರೆÀ ಆದಕೆ ಅವರು ತ್ರಿ
ಮೂರ್ತಿಗಳಿಗೂ ಹೊರಗೂ ಯಿಹಪರಕ್ಕೆ ಸಲ್ಲದವರ್ರು
ಯೀ ತಾಂಬ್ರಶಾಸನವಂನು ನಿಯೊಗಿ ಅಂಣಪೈನ ಮುಂದಿರಿಸಿ
ಹಿಂಬದಿ
ಕೊಟ್ಟು ರಾಯಸ್ತ ವೆಂಕಟಪತಿಕೈಲ್ಲಿ ಸರ್ವ ಮಾನ್ಯ ಬರೆಶಿ
ಕೊಟ್ಟ ಶಾಸನಾ\\ ಸ್ವಾಮಿ ಅರ್ಚನೆ ಆಗ ವೆಂಕೊಮಾರೈಗೆ
ಶಿರ್ವಾಪಿತವಾಗಿ ಕೊಟ್ಟೆಉ ಪಂಚಂಗದ ಉಂಮ್ಮಣಗೆ ಆಗಮ
ಶಿರ್ವಾಪಿತವಾಗಿ ಕೊಟ್ಟೆಉ\\ ಆಗಮ ಉಭಯತ್ರಾ
ಮಾಡಿಕೊಂಡುಯಿರುವವರು
ಸ್ವಸ್ತಿ ಶ್ರೀಯಲವಂಕವಂಶ ತಿಲಕ ಶ್ರೀಕೆಂಪಭೂಪಾತ್ಮಜ ಶ್ರೀವೀರಕ್ಷಿತಿ
ಪಾಲ ಸೂನುರಖಿಲಕ್ಷಾಮಂಡಲಾಧೀಶ್ವರ ಶ್ರೀಮನ್ಮುಮ್ಮುಡಿ ಕೆಂಪ್ಪ
ವೀರ ನೃಪತೆ ಸೋಮೇಶ್ವರ ಸ್ಥಾಪಕೋ ಜೀಯಾತ್ಸಜನÀಪಾಲನಾ
ಯಾ ರಚಿತಃ ಕ್ಷೇಮ ಗ್ರಹಾರಶಿರಂ\\ ಕೆಂಪವೀರಪ್ಪ
ಗಡಿಸ್ತಳದ ಪಂಚಂಗ ಉಮ್ಮಂಣಗೆ  ಶಿವಾರ್ಪಿತವಾಗಿ ಕೊಟ್ಟೆಉ
ಉರಿಗÀಸಾಗರ ಅಗ್ರಹರ ಗಣಶಂಕೆ 14 ಕೆಂಪವೀರಪ್ಪ\\
ಎಂಬ ವಿಷಯ ತಾಮ್ರಪಟ ಶಾಸನದಿಂದ ತಿಳಿದುಬರುತ್ತದೆ. ಇದು ಯಲಹಂಕ ನಾಡಪ್ರಭುಗಳ ಸಂತತಿಯ ಕೊನೆಯ ದೊರೆ ಮುಮ್ಮಡಿ ಕೆಂಪವೀರಪ್ಪಗೌಡರ ಕಾಲದಲ್ಲಿ ನೀಡಿದ ದಾನ ಶಾಸನವಾಗಿರುತ್ತದೆ. ಮಾಗಡಿಶೀಮೆಯ ಉದ್ದಂಡನಹಳ್ಳಿಯನ್ನು ನಿಯೋಗಿ(ಸರ್ಕಾರಿ ಅಧಿಕಾರಿ) ಅಂಣಪೈಯ್ಯನು, ಶಿವಗಂಗೆಯ ಗವಿಗಂಗಾಧರೇಶ್ವರಸ್ವಾಮಿಯ ಧಾರ್ಮಿಕ ಆಚರಣೆ ಇತ್ಯಾದಿಗಳಿಗೆ ರಾಯಸ್ತ ವೆಂಕಟಪತಿಯ ಕೈಯಿಂದ ಬರೆಸಿ ವೆಂಕೊಮಾರೈಯ್ಯ ಹಾಗು ಉಂಮ್ಮಣಗೆ ಕೊಟ್ಟಂತಹ ಗಣಶಂಕೆ 14, ಉರಿಗಸಾಗರ ಎಂಬ ಅಗ್ರಹಾರವನ್ನು ನೀಡಿದ ದಾನ ಶಾಸನವಾಗಿರುತ್ತದೆ.
ಯಲಹಂಕ ನಾಡಪ್ರಭುಗಳ ಕಾಲದಲ್ಲಿ ರಾಜಕೀಯ ಶಕ್ತಿಯ ಪ್ರಭಾವದಿಂದಲೋ ಅಥವಾ ಶೈವ ಮಠದ ಗುರುಗಳ ಪ್ರಭಾವದಿಂದಲೋ ವೀರಶೈವ ಧರ್ಮದ ಧಾರ್ಮಿಕ ಆಚರಣೆ, ಸಂಪ್ರದಾಯಗಳು ವ್ಯಾಪಕತೆಯನ್ನು ಕಂಡುಕೊಂಡವು. ಇವರ ಆಳ್ವಿಕೆಯಲ್ಲಿ ಮಾಗಡಿ ಶೀಮೆಯಲ್ಲಿ ಸುಮಾರು 400 ಶೈವಮಠÀಗಳಿದ್ದವೆಂದು ತಿಳಿದು ಬರುತ್ತದೆ. ಶೈವಮಠಗಳಿಗೆ ಉದಾರ ದಾನದತ್ತಿಗಳನ್ನು ನೀಡುತ್ತಿದ್ದು, ಈ ಬಗ್ಗೆ ನಾಡಿನಲ್ಲಿ ಪಕ್ಷಪಾತ ಮಾಡಿದ್ದಾರೆಂದು ವೈಷ್ಣವರು ಆರೋಪಿಸಿ, ಆಳುವ ವರ್ಗಕ್ಕೂ ವೈಷ್ಣವರಿಗೂ ದ್ವೇಷಾಸೂಯೆಗಳುಂಟಾಗಿ, ಮುಮ್ಮಡಿ ಕೆಂಪವೀರಪ್ಪಗೌಡರ ವಿರುದ್ಧ ಪಿತೂರಿ ನಡೆಸಿದರು. ಧಾರ್ಮಿಕ ಸಂಚನ್ನು ರೂಪಿಸಿದ ವೈಷ್ಣವರು ಮೈಸೂರಿನ ದೊಡ್ಡ ಕೃಷ್ಣರಾಜ ಒಡೆಯನಿಗೆ ಚಾಡಿ ಹೇಳಿ ಸಹಾಯ ಯಾಚಿಸಿದರು. ಆನಂತರ ದಳವಾಯಿ ನಂಜರಾಜಯ್ಯ ಮಾಗಡಿ ಮೇಲೆ ಆಕ್ರಮಣ ಮಾಡಿ ಮುಮ್ಮಡಿ ಕೆಂಪ ವೀರಪ್ಪಗೌಡನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಹಾಕುವುದರೊಂದಿಗೆ ಯಲಹಂಕ ನಾಡಪ್ರಭುಗಳ ಆಳ್ವಿಕೆ (1728) ಅಂತ್ಯವಾಗುತ್ತದೆ.
[ಮಾಗಡಿಯ ಹೋಮಿಯೋಪತಿ ವೈದ್ಯರೂ, ಮಾಜಿ ಶಾಸಕರೂ ಆದ ಡಾ. ಸಿ.ಆರ್. ರಂಗೇಗೌಡರಿಗೆ ಸ್ಥಳೀಯ ಚರಿತ್ರೆ ಬಗ್ಗೆ ಆಸಕ್ತಿ ಇದ್ದು ಆ ಮೂಲಕ ಕೆಲವು ಆಕರಗಳ ಸಂಗ್ರಹಣೆಯಲ್ಲಿ ತೊಡಗಿದ್ದರು. ಇತಿಹಾಸಕ್ಕೆ ಸಂಬಂಧಪಟ್ಟಂತೆ ದೇವಾಲಯಗಳ ಪರಿಕರಗಳು, ತಾಳೆಗರಿಗಳು, ತಾಮ್ರಪಟ ಶಾಸನಗಳು ಇನ್ನೂ ಮುಂತಾದವನ್ನು ಸಂಗ್ರಹಿಸಿದ್ದು ಕೆಲವನ್ನು ತಮ್ಮ ಸ್ನೇಹಿತರಾದ ಹೆಚ್.ಎಲ್. ನಾಗೇಗೌಡರ ಜಾನಪದ ಲೋಕಕ್ಕೆ ನೀಡಿದ್ದು, ಪ್ರಸ್ತುತ ತಾಮ್ರಶಾಸನವನ್ನು ಸಂರಕ್ಷಿಸಿಟ್ಟುಕೊಂಡಿರುವ ಅವರಿಗೆ ಕೃತಜ್ಞತೆಗಳು.]

ಆಧಾರಸೂಚಿ
1.    ರೈಸ್, ಬಿ.ಎಲ್., (ಸಂ), ಎ.ಕ. Iಘಿ. ಬೆಂಗಳೂರು.
2.    ಸೂರ್ಯನಾಥ ಕಾಮತ್., (ಸಂ), ಬೆಂಗಳೂರು ಗ್ರಾಮಾಂತರ ಜಿಲ್ಲಾ ಗ್ಯಾಸೆಟಿಯರ್.
3.    ಕರ್ಲಮಂಗಲ ಶ್ರೀಕಂಠಯ್ಯ., ಗೌಡಕುಲ ವಿಭೂಷಣ ಕೆಂಪೇಗೌಡನ ಜಯಪ್ರಶಸ್ತಿ.
4.    ಮಂಜುನಾಥ್ ಎಂ.ಜಿ. (ಸಂ)., ಯಲಹಂಕ ನಾಡಪ್ರಭುಗಳ ಶಾಸನ ಸಂಪುಟ, 2006.
5.    ಪುಟ್ಟಸ್ವಾಮಿ ಬಿ.ಎಸ್. , ಯಲಹಂಕ ನಾಡಪ್ರಭು ಕೆಂಪೇಗೌಡ ಮತ್ತು ಆತನ ವಂಶಸ್ಥರು, 2011.

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ವಿ.ವಿ. ಪುರಂ ಕಾಲೇಜು, ಬೆಂಗಳೂರು-560004.

Thursday, April 24, 2014

ಇಂಡೊಗ್ರೀಕ್‌ನಾಣ್ಯಗಳು

ಹವ್ಯಾಸಿ ನಾಣ್ಯ ಸಂಗ್ರಹಕಾರರಲ್ಲಿ ದೊರೆತ ಇಂಡೋ-ಗ್ರೀಕ್, (ಬ್ಯಾಕ್ಟ್ರಿಯನ್ ದೊರೆ) ಮತ್ತು ಟೀಪು ಸುಲ್ತಾನ್ ಕಾಲದ ತಾಮ್ರದ ನಾಣ್ಯಗಳು
ಬಿ.ಎಸ್. ಗುರುಪ್ರಸಾದ್ 
ತ್ತೀಚೆಗೆ ನಾನು ಒಬ್ಬ ಹವ್ಯಾಸಿ ನಾಣ್ಯ ಸಂಗ್ರಹಕಾರರಾದ ಶ್ರೀ ಬಿ.ಎಸ್. ನಟರಾಜ್, ಬೆಂಗಳೂರು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅವರು ಕೆಲವು ಅಪರೂಪದ ನಾಣ್ಯಗಳು ತಮ್ಮ ಬಳಿ ಇವೆಯೆಂದೂ ಮತ್ತು ಅವುಗಳ ಬಗ್ಗೆ ತಮಗೆ ಯಾವ ಮಾಹಿತಿಯಾಗಲೀ/ವಿವರಗಳಾಗಲೀ ದೊರೆಯುತ್ತಿಲ್ಲವೆಂದು ತಿಳಿಸಿದರು. ಅವರು ಈಗಷ್ಟೆ ನಾಣ್ಯ ಸಂಗ್ರಹದ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಸಂಗ್ರಹದಲ್ಲಿರುವ ನಾಣ್ಯಗಳೆಲ್ಲಾ, ಅವರ ಪೂರ್ವಿಕರು ಸಂಗ್ರಹಿಸಿರುವ ನಾಣ್ಯಗಳಾಗಿವೆ. ಈಸ್ಟ್ ಇಂಡಿಯಾ ಕಂಪೆನಿಯ ನಾಣ್ಯಗಳು ಬಹು ಸಂಖ್ಯೆಯಲ್ಲಿವೆ. ಅವರ ಬಳಿ ಆಲ್ಬಂ ಇಲ್ಲದ ಕಾರಣ, ಒಂದು ಆಲ್ಬಂನ್ನು ಖರೀದಿಸಿ, ನಾಣ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಪ್ರದರ್ಶನ ಮಾಡುವ ವಿಧಾನವನ್ನು ಅವರಿಗೆ ತಿಳಿಸಲಾಯಿತು. ಆ ಕಾರ್ಯದಲ್ಲಿ ಅವರು ಈಗ ನಿರತರಾಗಿದ್ದಾರೆ. ನನ್ನ ಗಮನ ಸೆಳೆದ, ಅವರ ಬಳಿಯಿರುವ ಅಪರೂಪದ ನಾಣ್ಯಗಳು’’ ಯಾವುದೆಂದು ಪರಿಶೀಲಿಸಲಾಗಿ, ಅವುಗಳು ಈ ಕೆಳಕಂಡಂತೆ ಇವೆ. ಅವುಗಳನ್ನು ಈ ಸಂಪ್ರಬಂಧದ ಮೂಲಕ ಇತಿಹಾಸಕ್ತರ ಗಮನಕ್ಕೆ ತರುತ್ತಿದ್ದೇನೆ.
೧. ಇಂಡೋ-ಗ್ರೀಕ್ ನಾಣ್ಯ
ಈ ನಾಣ್ಯ ದ್ವಿಮುಖ ಮುದ್ರಾ ವಿಧಾನದ ತಾಂತ್ರಿಕತೆ ಯಲ್ಲಿ ತಯಾರಿಸಿದ ನಾಣ್ಯ (ie Sಣಡಿuಛಿಞ ಅoiಟಿ)
ಲೋಹ : ತಾಮ್ರ ತೂಕ : ೧೦.೪ gms ಅಗಲ : ೨.೫ ಛಿms
ವ್ಯಾಸ : ೮ ಛಿms ಆಕಾರ : ವೃತ್ತಾಕಾರ
ಮುಮ್ಮುಖ
ಶಿರಸ್ತ್ರಾಣ ಧರಿಸಿ (iಚಿಜem)- ಬಲಕ್ಕೆ ತಿರುಗಿರುವ ಹಿಪ್ಪೊ ಸ್ಟ್ರಾಟಸ್’’ನ ಮುಖ ನಾಣ್ಯದ ಮಧ್ಯದಲ್ಲಿದೆ.
ಹಿಮ್ಮುಖ
ಹಿಂಗಾಲಿನಿಂದ ಚಿಮ್ಮುತ್ತಿರುವ ಭಂಗಿಯ ಕುದುರೆಯ ಮೇಲೆ ಕುಳಿತಿರುವ ಸವಾರ. ಕುದುರೆ ಬಲಕ್ಕೆ ಚಲಿಸುತ್ತಿದೆ.
ಮುಮ್ಮುಖದಲ್ಲಿರುವ ಬರಹ : ನಾಣ್ಯದ ಸುತ್ತಲೂ ವೃತ್ತಾಕಾರದಲ್ಲಿ ಗ್ರೀಕ್ ಭಾಷೆಯಲ್ಲಿ ಗ್ರೀಕ್ ಲಿಪಿಯಲ್ಲಿ ಬ್ಯಾಸಿಲಿಯೋಸ್ ಸೊಟೆರೋಸ್ ಇಪ್ಪೊಸ್ಟ್ರಾಟಸ್’’ ಎಂದು ಅಚ್ಚಾಗಿದೆ.
ಹಿಮ್ಮುಖದಲ್ಲಿರುವ ಬರಹ
ನಾಣ್ಯದ ಸುತ್ತಲೂ ಪ್ರಾಕೃತ ಭಾಷೆ ಮತ್ತು ಖರೋಷ್ಠಿ ಲಿಪಿಯಲ್ಲಿ ಮಹಾರಾಜಸ ತ್ರಾತಾರಸ ಜಯತಸ ಹಿಪ್ಪೋಸ್ಟ್ರಾಟಸ’’ ಎಂದಿದೆ.
ಈ ನಾಣ್ಯದ ಮೇಲೆ ಯಾವ ಬದಿಯಲ್ಲಾಗಲೀ ಕಾಲವನ್ನು ನಮೂದಿಸಿಲ್ಲ.
ಹಿಪ್ಪೋಸ್ಟ್ರಾಟಸ್
ಪಶ್ಚಿಮ ಗಾಂಧಾರದ ಅಧಿಪತಿಯಾಗಿದ್ದ (ರಾಜನಾಗಿದ್ದ) ನಿಕಿಯಾಸ್ ಕ್ರಿ.ಪೂ. ಒಂದನೇ ಶತಮಾನದಲ್ಲಿ ರಾಜ್ಯವಾಳುತ್ತಿದ್ದ. ಇವನ ಮಗನೇ ಹಿಪ್ಪೋಸ್ಟ್ರಾಟಸ್ ಹಾಗೂ ಕೊನೆಯ ಇಂಡೋ-ಗ್ರೀಕ್ ರಾಜ. ಇವನು ತನ್ನ ರಾಜ್ಯವನ್ನು ಪಶ್ಚಿಮ ಪಂಜಾಬ್, ತಕ್ಷಶಿಲಾ ಮತ್ತು ಪುಷ್ಕಲಾವತಿಯವರೆಗೂ ವಿಸ್ತರಿಸಿದ್ದನು. ಇವನ ಆಳ್ವಿಕೆಯಲ್ಲಿ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಭಾರತೀಯ ಪದ್ದತಿಯಂತೆ ಚಲಾವಣೆಗೆ ತಂದಿದ್ದನು. ಆ ನಾಣ್ಯಗಳೆಲ್ಲವೂ ಮುದ್ರಾಂಕಿತ ನಾಣ್ಯಗಳಾಗಿದ್ದವು.
ಇಂಡೋ-ಗ್ರೀಕ್ ಅರಸರ ನಾಣ್ಯಗಳ ವೈಶಿಷ್ಟ್ಯತೆ
ಭಾರತದಲ್ಲಿ ಮೊಟ್ಟ ಮೊದಲಿಗೆ ನಾಣ್ಯಗಳ ಎರಡೂ ಕಡೆಯಲ್ಲಿ ಅಂಕಣದ (egeಟಿಜs) ಬಳಕೆಯನ್ನು ತಂದವರಲ್ಲಿ ಇಂಡೋ-ಗ್ರೀಕ್ ಅರಸರೇ ಮೊದಲಿಗರು. ದ್ವಿಭಾಷೆ ಮತ್ತು ಬರಹಗಳನ್ನು ಇಂಡೋ-ಗ್ರೀಕ್ ರಾಜರ ಕಾಲದಲ್ಲಿ ಕಾಣಬಹುದು. ಗ್ರೀಕ್ ಅರಸರ ನಾಣ್ಯಗಳಲ್ಲಿಯ ಅಂಕಣಗಳು ಮುಂಬದಿಯಲ್ಲಿ ಗ್ರೀಕ್ ಭಾಷೆ ಮತ್ತು ಗ್ರೀಕ್ ಬರಹದಲ್ಲೂ ಸಾಮಾನ್ಯವಾಗಿ ಕಂಡುಬರುತ್ತದೆ. ಹಿಂಗಡೆಯಲ್ಲಿ ಪ್ರಾಕೃತ ಭಾಷೆಯಲ್ಲೂ, ಮತ್ತು ಖರೋಷ್ಠಿ ಬರಹದಲ್ಲೂ ಕಂಡುಬರುತ್ತದೆ. ಎರಡೂ ಕಡೆಯ ಅಂಕಣಗಳು ಷಷ್ಠಿ ವಿಭಕ್ತಿ ಏಕವನಚದಲ್ಲಿವೆ. ಉಚಿsieos ಎಂಬ ಶಬ್ಧ, ಃಚಿsieus ಎಂಬ ಗ್ರೀಕ್ ಶಬ್ದದ ಷಷ್ಟಿ ವಿಭಕ್ತಿಯ ಏಕವಚನ. ಅಂದರೆ ರಾಜರ ರಾಜ ಮಹಾರಾಜ ಎಂದು ಭಾಷಾಂತರಿಸಿದೆ. Soeಡಿos ಎಂಬುದು, Soeಡಿ ತ್ರಾತಾರ (ರಕ್ಷಕ) ಎಂಬ ಪ್ರಾಕೃತ ಭಾಷೆಯ ಷಷ್ಠಿ ವಿಭಕ್ತಿಯ ಏಕವಚನ.
ಗ್ರೀಕ್ ಅರಸರ ಆಳ್ವಿಕೆ ಮುಗಿದ ನಂತರವೂ. ಅವರ ತರುವಾಯ ಆಳಿದ ಗ್ರೀಕೇತರ ಅರಸರೂ, ಬ್ಯಾಕ್ಟ್ರಿಯನ್ ಅರಸರೂ, ವಿಮಕತ್ಫೀಷರು ಮತ್ತು ಕುಶಾನರ ಅರಸನಾದ ಕಾನಿಷ್ಕನೂ, ರಾಜರ ರಾಜ-ಮಹಾರಾಜ-ರಾಜಾಧಿರಾಜ, ಅಪರಜಿತಸ (ಸೋಲಿಸಲ್ಪಡದವನು) ಎಂದು ದೆಮೆತ್ರಿಯಸ್, ದಿಯೋದೋತಿ, ಜಯಧರಸ, ಅಂತಿಮುಖಸ, ಮುಂತಾದವರು ಇದೇ ರೀತಿಯಲ್ಲಿ ನಾಣ್ಯಗಳನ್ನು ಅಚ್ಚು ಹಾಕಿಸಿರುವುದು ಕಂಡುಬರುತ್ತದೆ.
ತಲೆದಿರಿಸು (iಚಿಜem):
ಛಾಯಾಚಿತ್ರವನ್ನು ಗಮನಿಸಿದರೆ, ರಾಜನು ತಲೆಗೆ ಕಿರೀಟವನ್ನು ಧರಿಸಿಲ್ಲ. ಕೇವಲ ರಾಜಲಾಂಛನವಿರುವ ತಲೆದಿರಿಸು ಅಥವಾ ಪಟ್ಟಿಯನ್ನು ತಲೆಯ ಕೆಳಗೆ, ಸುತ್ತಲೂ ಧರಿಸಿ, ತಲೆಯ ಹಿಂಭಾಗದಲ್ಲಿ ಕಟ್ಟಿದೆ. ದಿರಿಸಿನ/ಪಟ್ಟಿಯ ಎರಡೂ ತುದಿಗಳು ಹಿಂದೆ ಎದ್ದು ಕಾಣುತ್ತದೆ. ಬಹುತೇಕ ಇಂಡೋ-ಗ್ರೀಕ್ ನಾಣ್ಯಗಳಲ್ಲಿ ಇದೇ ರೀತಿಯ  ತಲೆದಿರಿಸನ್ನು ನಾವು ಗಮನಿಸಬಹುದು. ಸಾಮ್ರಾಟ್ ಅಲೆಗ್ಸಾಂಡರನು ಇದೇ ರೀತಿಯ ತಲೆದಿರಿಸನ್ನು ಧರಿಸಿರುವ ಚಿತ್ರಗಳನ್ನು ನಾವು ಇತಿಹಾಸದ ಗ್ರಂಥಗಳಲ್ಲಿ ಕಾಣುತ್ತೇವೆ. ಬಹುಶಃ ಪರ್ಷಿಯನ್ ದೊರೆಗಳ ಶೈಲಿಯನ್ನು ಇವರೆಲ್ಲರೂ ಅನುಕರಿಸಿರಬಹುದೆಂದು ವಿದ್ವಾಂಸರ ಅಭಿಪ್ರಾಯ.
ನಾಣ್ಯದ ಬೆಲೆ
ಈ ನಾಣ್ಯದ ಬೆಲೆ/ಕಿಮ್ಮತ್ತು ಎಲ್ಲಿಯೂ ನಮೂದಿಸಿಲ್ಲ.
೨. ಇವರ ನಾಣ್ಯಸಂಗ್ರಹದಲ್ಲಿನ ಇನ್ನೊಂದು ನಾಣ್ಯವೆಂದರೆ, ಟೀಪುಸುಲ್ತಾನನ ತಾಮ್ರದ ನಾಣ್ಯ.
ಟೀಪುಸುಲ್ತಾನನ ನಾಣ್ಯ
ಈ ನಾಣ್ಯವೂ ಸಹ ದ್ವಿಮುಖ ಮುದ್ರಾ ವಿಧಾನ ತಾಂತ್ರಿಕತೆಯಲ್ಲಿ ತಯಾರಿಸಿದ ನಾಣ್ಯ. (ie-sಣಡಿuಛಿಞ ಛಿoiಟಿ)
ಲೋಹ : ತಾಮ್ರ ತೂಕ : ೧೧.೧೧ gms ಅಗಲ : ೨.೨ ಛಿms
ವ್ಯಾಸ : ೭.೪ ಛಿms ಆಕಾರ : ವೃತ್ತಾಕಾರ
ಮುಮ್ಮುಖ
ಒಂದು ಸಾಲಂಕೃತವಾದ ಆನೆ ಬಲದಿಂದ ಎಡಕ್ಕೆ ಚಲಿಸುತ್ತಿರುವಂತೆ ಚಿತ್ರಿಸಲಾಗಿದೆ. ಬಾಲವು ಮೇಲೆತ್ತಿಕೊಂಡು ಬೆನ್ನಿಗೆ ಸಮಾನಾಂತರವಾಗಿದೆ. ಸೊಂಡಿಲನ್ನು ಕೆಳಗೆ ಬಿಟ್ಟಿದೆ. ಬೆನ್ನ ಮೇಲೆ ಅಲಂಕಾರಿಕ/ಕಸೂತಿಯುಕ್ತ ಬಟ್ಟೆ ಹೊದಿಸಲಾಗಿದೆ. ಆನೆಯ ಬೆನ್ನಿನ ಮೇಲ್ಭಾಗದಲ್ಲಿ ಹಿಜಿರಾ ಶಕೆಯಲ್ಲಿ ೧೨೨೦ ಎಂದು ಮುದ್ರಿಸಿದೆ.
ಹಿಮ್ಮುಖ
ನಾಣ್ಯದ ಹಿಂಬದಿಯಲ್ಲಿ ಪರ್ಶಿಯನ್ ಭಾಷೆಯಲ್ಲಿ ಜರ್ಬ-ಇ-ಪಟನ್’’ ಎಂದು ಮುದ್ರಿಸಲಾಗಿದೆ. ನಾಣ್ಯದ ಸುತ್ತಲೂ ಎರಡು ವೃತ್ತಗಳಿವೆ. ಒಂದು ಗೆರೆಯಿಂದ ಮಾಡಿದ ವೃತ್ತ, ಅದರ ಆಚೆಗೆ ಚುಕ್ಕೆಯಿಂದ ಕೂಡಿದ ವೃತ್ತ. ಮಧ್ಯದಲ್ಲಿ ಅಲಂಕಾರಿಕ ಚುಕ್ಕೆಗಳಿವೆ.
ಮೌಲ್ಯ
ನಾಣ್ಯದ ಮೌಲ್ಯವನ್ನು ಎಲ್ಲೂ ನಮೂದಿಸಿಲ್ಲ. ಇದರ ಬೆಲೆ ಅರ್ಧ ಪೈಸೆ ಮತ್ತು ಈ ನಾಣ್ಯವನ್ನು ಬಹ್ರಂ’’ ಎಂದು ಕರೆಯಲ್ಪಡುತ್ತಿತ್ತು. ಅದರ ಮಾಹಿತಿ ಈ ರೀತಿ ಇದೆ. ಟೀಪು ಸುಲ್ತಾನನು ಐದು ನಮೂನೆಯ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದನು.
೧) ೨ ಪೈಸೆಯ ಓತ್ಮನಿ/ಮುಷ್ಕರಿ
೨) ೧ ಪೈಸೆಯ ಜೋಹ್ರಾ
೩) ೧/೨ ಪೈಸೆಯ ಬಹ್ರಾಂ-ಒಂದು ಬಹ್ರಾಂಗೆ ೨ ಅಖ್ತರ್‌ಗಳು. ಬಹ್ರಾಂ ಎಂದರೆ ಪರ್ಶಿಯನ್ ಭಾಷೆಯಲ್ಲಿ ಮಂಗಳ’’ ಗ್ರಹ ಎಂದರ್ಥ.
೪) ೧/೪ ಪೈಸೆಯ ಅಖ್ತರ್
೫) ೧/೮ ಪೈಸೆಯ ಕುತ್ಬ್
ಅರ್ಧ ಪೈಸೆಯ ನಾಣ್ಯಗಳು ಟೀಪು ಸುಲ್ತಾನನು ಸ್ಥಾಪಿಸಿದ ೧೭ ಟಂಕಸಾಲೆಗಳಿಂದಲೂ ಮುದ್ರಿತವಾಗುತ್ತಿದ್ದವು. (ಕೇರಳದ ಕ್ಯಾಲಿಕಟ್ ಟಂಕಸಾಲೆಯನ್ನು ಹೊರತುಪಡಿಸಿ) ಅವನ ಪ್ರತಿಯೊಂದು ಟಂಕಸಾಲೆಗೂ ಒಂದು ಕಲ್ಪಾನಮಯ ಹೆಸರನ್ನು ಕೊಟ್ಟಿದ್ದನು.
ನಾಣ್ಯದ ಕಾಲಗಣನೆ
ಟೀಪುವಿನ ಮೊದಲ ನಾಲ್ಕು ವರ್ಷದ ರಾಜ್ಯಭಾರದಲ್ಲಿ, ಅವನು ಹಿಜಿರಾ ಶಕೆ ಗಣನೆ ಪ್ರಾರಂಭಿಸಿ (೧೧೯೭ರಿಂದ ೧೨೦೦ ರವರೆಗೆ), ೧೨೦೧ ರಿಂದ ಮೌಲೂದಿ ಶಕೆಯನ್ನು ಆರಂಭಿಸಿದನು.
ಇಂಡೋ ಗ್ರೀಕ್, ಬ್ಯಾಕ್ಟ್ರಿಯನ್, ಕುಶಾನರು ಮೊದಲಾದ ರಾಜಮನೆತನಗಳ ಇತಿಹಾಸ ತಿಳಿಯಲು ನಾಣ್ಯಗಳು ಆಕರ ಸಾಮಗ್ರಿಗಳಾಗುತ್ತವೆ. ಆ ಕಾಲದ ನಾಣ್ಯಗಳ ಅಧ್ಯಯನಕ್ಕೆ ನಾವು ವಸ್ತು ಸಂಗ್ರಹಾಲಯದಲ್ಲೂ ಮತ್ತು ಖಾಸಗಿ ನಾಣ್ಯ ಸಂಗ್ರಹಕಾರರಲ್ಲೂ ಸಹಾಯ ಪಡೆಯ ಬಹುದು. ಅನೇಕ ರಾಜಮನೆತನಗಳ ನಾಣ್ಯಗಳು ಬೆಳಕಿಗೆ ಬಾರದೇ, ನಾಣ್ಯ ಇತಿಹಾಸದಲ್ಲಿ ಕೊರತೆಯಾಗಿದೆ. ವಸ್ತುಸಂಗ್ರಹಾಲಯಗಳು ನಾಣ್ಯಗಳ ಸಂರಕ್ಷಣೆಗೆ ತೊಡಗಿರುವುದು ಮಾತ್ರವಲ್ಲದೆ, ಖಾಸಗಿಯಾಗಿಯೂ ಸಾಕಷ್ಟು ಸಂಗ್ರಹಕಾರರಿದ್ದಾರೆ.

[ಬ್ಯಾಕ್ಟ್ರಿಯನ್ ನಾಣ್ಯದ ಬಗ್ಗೆ ನನಗೆ ಅಗತ್ಯವಾದ ಸಲಹೆ ಮತ್ತು ಸೂಚನೆ ಕೊಟ್ಟು, ಅದರ ಮೂಲವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ ಡಾ. ದೇವರಕೊಂಡಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು, ಇವರಿಗೆ ನನ್ನ ಧನ್ಯವಾದಗಳು.]

ಆಧಾರಸೂಚಿ
೧.         ಕರ್ನಾಟಕ ನಾಣ್ಯ ಪರಂಪರೆ, ಎ.ವಿ. ನರಸಿಂಹಮೂರ್ತಿ, ಅಧ್ಯಾಯ ೮ರಿಂದ ಆಯ್ದ ಕೆಲವು ಮಾಹಿತಿಗಳು.

The coins of Haider Ali and Tippu Sultan, 1987, edition by J.R. Henderson.
3.     Art Motifs on Ancient Indian Coins by Prashanth Srivatsava-Edition 2001.
4.     Numismatic Art of India-An Album of the Master pieces of Indian Coins (Chapter: Coins of Indo-Greeks) - by B.N. Mukharjee.
5.     Coins - by Parameshwari Lal Gupta.



೨.        





Saturday, April 19, 2014

ವಚನ ಚಳವಳಿ- - ಪರ್ಯಾಯದ ಹುಡುಕಾಟ

ಬೆಂಗಳೂರಿನಲ್ಲಿ ನಡೆದ ಎರಡು ದಿನದ ವಚನ ಸಾಹಿತ್ಯ ವಿಚಾರ ಸಂಕಿರಣದಲ್ಲಿ ಡಾ. ಪಿ.ವಿ. ನಾರಾಯಣ ಅವರು ಮಂಡಿಸಿದ ಪ್ರಬಂಧವನ್ನು ಓದುಗರ ಅವಗಾಹನೆಗೆ ತಂದಿರುವೆ.ತಂತ್ರಜ್ಞಾನದ ಅಭಿವೃದ್ಧಿಯಿಂದ ನಾನು ಸಾವಿರಾರು ಮೈಲು ದೂರದಲ್ಲಿದ್ದರೂ ಸಂವಹನ ಸಾಧ್ಯವಿದೆ.ಚಿತ್ರಗಳಿಗೆ ನಾನು  ಋಣಿ.


ವಚನ ಚಳವಳಿ - ಪರ್ಯಾಯದ ಹುಡುಕಾಟ



ವಿಚಾರ ಸಂಕಿರಣದ ಉದ್ಘಾಟನೆ
           
            ವಚನ ಚಳವಳಿ ಆರಂಭಗೊಳ್ಳುವುದಕ್ಕೆ ಮುಂಚೆ ಇದ್ದ ಕನ್ನಡ ಬದುಕಿನ ಸ್ವರೂಪವನ್ನು ತಿಳಿದಾಗ ಮಾತ್ರ ವಚನ ಚಳವಳಿ ಸಂಭವಿಸಿದ ಅನಿವಾರ್ಯತೆ ಮತ್ತು ಮಹತ್ವ ಅರ್ಥವಾಗಲು ಸಾಧ್ಯಮಧ್ಯಕಾಲದ ಕನ್ನಡ ಬದುಕಿನ ಒಡಲಾಳದಲ್ಲಿ ನಿಗಿನಿಗಿ ಕುದಿಯುತ್ತಿದ್ದ ಎರಡು ಲಾವಾಪ್ರವಾಹಗಳೆಂದರೆ ಜಾತಿ ದುರಂತ ಮತ್ತು ರಾಜತ್ವ ದೈವೀಕರಣದ ಪರಿಣಾಮವಾದ ಯುದ್ಧ ಮತ್ತು ಅದರಿಂದಾಗುವ ಸಾವುವೇಳೆವಾಳಿತನಬಿಟ್ಟಿಅಧಿಕ ತೆರಿಗೆಗಳ ದುರಂತಇವೆರಡೂ ವೈದಿಕದ ಕೊಡುಗೆಗಳೇ ಆಗಿವೆವೈದಿಕಕ್ಕೆ ಬಹು ಹಿಂದೆಯೇ ಉತ್ತರದಲ್ಲಿ ಜೈನ ಬೌದ್ಧಗಳೆಂಬ ಎರಡು ರೂಪದಲ್ಲಿ ಪರ್ಯಾಯದ ಹುಡುಕಾಟದಲ್ಲಿ ತೊಡಗಿದರೂವೈದಿಕದ ಕಬಂಧಬಾಹುವಿಗೆ ಸಿಕ್ಕಿಕೊಂಡುಅದರೊಡನೆ ರಾಜಿಯಾಗಲು ಸಿದ್ಧವಿಲ್ಲದಿದ್ದ ಬೌದ್ಧವು ಬಹುತೇಕ ಕಣ್ಮರೆಯಾದರೆಬದುಕುಳಿಯಲು ಜೈನವು ನಾನಾ ನೆಲೆಗಳಲ್ಲಿ ವೈದಿಕದೊಡನೆ ರಾಜಿಮಾಡಿಕೊಂಡದ್ದಲ್ಲದೆಅದರ ದಟ್ಟ ನೆರಳಿನಡಿ ಉಸಿರಾಡಿತುವೈದಿಕ ಪುರಾಣಗಳುಪೂಜೆಪುನಸ್ಕಾರಗಳುಇವುಗಳಲ್ಲದೆ ಸಾಮಾಜಿಕವಾಗಿ ಜಾತಿವ್ಯವಸ್ಥೆಯನ್ನೂ ಅಳವಡಿಸಿಕೊಂಡಿತುಪಂಪನ ‘ಆದಿಪುರಾಣದಲ್ಲಿಯೇ ಮೊದಲ ತೀರ್ಥಂಕರನೇ  ಮುಂಚೆ ವಿಂಗಡಣೆಯಿರದ ಮನುಷ್ಯರ ಗುಂಪನ್ನು “ಕ್ಷತ್ರಿಯ ವಣಿಕ್ಶೂದ್ರರೆಂಬ ಮೂಱು ವರ್ಣಂಗಳೊಳಗೆ ಕ್ಷತ್ರತ್ರಾಣಾದಿ ಗುಣೋಪೇತಮಪ್ಪ ಅಖಿಳ ಕ್ಷತ್ರಿಯ ಸಮೂಹಕ್ಕೆ ಶಸ್ತ್ರಕರ್ಮಮುಮಂವಣಿಗ್ವಂಶಕ್ಕೆ ಪಾಶುಪಾಲ್ಯ ಕೃಷಿ ಪಣ್ಯಕರ್ಮಂಗಳುಮಂಮತ್ತಂ ಸ್ಪøಶ್ಯಾಸ್ಪøಶ್ಯಕಾರುಗಳುಮೆಂದಿರ್ತೆಱದ ಶೂದ್ರಸಂತತಿಗೆ ಶುಶ್ರೂಷಾನಿಯೋಗಂಗಳುಮಂ ಯಥಾಯೋಗ್ಯಂ ಉಪದೇಶಂಗೆಯ್ದುವರ್ಣಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗಳೊಳ್ ನಣ್ಪುಮಂ ಕೊಳ್ಕೊಡೆಯುಮಂ ನಿಯೋಜಿಸಿದ”; ಹಾಗೂ ಅವನ ಮಗ ಭರತನು ಮುಂದೆ ಸೂಕ್ಷ್ಮಮತಿಗಳಾಗಿ ಕಂಡ ಕೆಲವರನ್ನು ಬ್ರಹ್ಮಸೂತ್ರಾಭಿಧಾನ ಯಜ್ಞೋಪವೀತದಿಂ ಪವಿತ್ರಗಾತ್ರರ್ಮಾಡಿ” ಬ್ರಾಹ್ಮಣವರ್ಣವನ್ನು ಸೃಷ್ಟಿಸಿದ ಕತೆಗಳಿವೆ.

            ಹೀಗೆ ವೈದಿಕವಿರೋಧಿ ನೆಲೆಯಿಂದ ಹೊರಟ ಜೈನವೂ ವೈದಿಕದ ಕಪಿಮುಷ್ಟಿಯಲ್ಲಿ ಸಿಲುಕಿದ ಬಳಿಕ ಅದ್ವಿಜಸಮೂಹದ ಜನತೆಯ ಬವಣೆಗೆ ಕೊನೆಯೆಲ್ಲಿ ಬಂತುತಾನು ಪ್ರಚುರಪಡಿಸಿದ್ದ ನಂಬಿಕೆಧರ್ಮದೇವರು ಇವುಗಳ ಮೂಲಕವಾಗಿ ಜನಸಮೂಹದ ಮನದಾಳವನ್ನೇ ಹಿಡಿತದಲ್ಲಿಟ್ಟುಕೊಂಡು ವೈದಿಕವು ಪ್ರತಿರೋಧವಿಲ್ಲದೆ ಬೀಗುತ್ತಿತ್ತು.  ಜೈನವು ರಾಜಾಶ್ರಯದಲ್ಲಿ ಪಟ್ಟವೇರಿದರೂ ಅದು ವೈದಿಕದ ಪರಿಚಾರಕನಂತಾದ್ದರಿಂದ ಸಾಮಾನ್ಯರ ಸ್ಥಿತಿ ಸುಧಾರಿಸದಾಯಿತುವೈದಿಕದ  ಪರಿಯು ಯಾವುದನ್ನು ಕಳೆದ ಶತಮಾನದ ಮೊದಲಲ್ಲಿ ಆಂಟೋನಿಯೋ ಗ್ರಾಮ್ಶಿ ‘ಸಾಂಸ್ಕøತಿಕ ಯಜಮಾನಿಕೆ’ ಎಂದು ಕರೆದನೋ ಅದೇ ಆಗಿತ್ತುನಾನು ಆಗಲೇ ಗುರುತಿಸಿದ ಕನ್ನಡ ಬದುಕಿನ ಎರಡು ತೀವ್ರ ತಲ್ಲಣಗಳಾದ ಜಾತಿ ಮತ್ತು ಯುದ್ಧಗಳನ್ನು ಪಂಪನ ‘ವಿಕ್ರಮಾರ್ಜುನ ವಿಜಯವೇ ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ ಚಿತ್ರೀಕರಿಸುತ್ತದೆಇವೆರಡೇ ಮುಖ್ಯವಾಗಿ ಕೆಳವರ್ಗದ ಅತೃಪ್ತಿ ಆಕ್ರೋಶಗಳ ಕಾರಣವಾಗಿ ಹನ್ನೊಂದನೆಯ ಶತಮಾನದ ಕೊನೆಯ ವೇಳೆಗೆ ಕೊಂಡಗುಳಿ ಕೇಶಿರಾಜ ಮುಂತಾದವರಿಂದ ಆರಂಭಗೊಂಡ ತೀವ್ರ ವೈದಿಕವಿರೋಧವು ಹೊಗೆಯಾಡಲು ಆರಂಭಿಸಿ ಹನ್ನೆರಡನೇ ಶತಮಾನದ ನಡುವಿನ ವೇಳೆಗೆ ಸಿಡಿಯಲು ಕಾರಣವಾಯಿತುಇದರಲ್ಲಿ ಒಟ್ಟುಗೂಡಿದ್ದವರು ಗ್ರಾಮ್ಶಿ ಆಶಿಸಿದ ರೀತಿಯಲ್ಲಿ ಕೆಳವರ್ಗದ ಬುದ್ಧಿಜೀವಿಗಳುಹಾಗಾಗಿಯೇ ವಚನಕಾರರೆಲ್ಲ ಕೆಳವರ್ಗದವರುಕೆಳವರ್ಗದ ಕೆನೆ ಕೆನೆ ಒಂದುಗೂಡಿ ಒಡ್ಡಿದ ವೈದಿಕಪ್ರತಿರೋಧವೇ ವಚನ ಚಳವಳಿ ಒಗ್ಗೂಡುವಿಕೆಯು ವೈದಿಕವನ್ನು ತನ್ನೆಲ್ಲ
ರೂಪದಲ್ಲಿ ತಿರಸ್ಕರಿಸಿತುಅದರಲ್ಲಿ ಪ್ರಮುಖವಾದವು ಆಗಲೇ ಗುರುತಿಸಿದಂತೆ ಜಾತಿವಿನಾಶ ಮತ್ತು ರಾಜತ್ವ ದೈವೀಕರಣ ನಿರಾಕರಣೆ.
ವಚನ ಚಳವಳಿಯೊಂದು ಭಕ್ತಿ ಚಳವಳಿಯಲ್ಲಅದೊಂದು ಪ್ರತಿಭಟನೆಪರ್ಯಾಯದ ಹುಡುಕಾಟಅದರಲ್ಲಿ ಭಕ್ತಿ ಚಳವಳಿಯ ಪ್ರಮುಖ ಲಕ್ಷಣಗಳಾದ ವ್ಯವಸ್ಥೆಯ ಬಗೆಗಿನ ಮೆದು ನಿಲುವಾಗಲೀ ಶರಣಾಗತಿಯಾಗಲೀ ಇಲ್ಲಅದು ಉಗ್ರ ಸ್ವರೂಪದ್ದುತನ್ನ ಕಪಿಮುಷ್ಟಿಯಿಂದಾಗಿ ಸಾಮಾಜಿಕ-ರಾಜಕೀಯ ಕ್ಷೇತ್ರಗಳ ಮೇಲೂ ಹಿಡಿತವನ್ನು ಸಾಧಿಸಿದ್ದ ವ್ಯವಸ್ಥೆಯ ವಿರುದ್ಧದ ನಿಲವು ಅದರದ್ದುವರ್ಣ-ಜಾತಿಲಿಂಗ ತಾರತಮ್ಯ ಹಾಗೂ ಸಾಮಾಜಿಕ ಶ್ರೇಣೀಕರಣಗಳ ವಿರುದ್ಧ ಅದು ಸೆಟೆದು ನಿಂತಿತುವೈದಿಕಕ್ಕೆ ಹೊರತಾದ ಪರ್ಯಾಯವೊಂದರ ಸೃಷ್ಟಿ ಅದರ ಗುರಿವಚನಕಾರರಿಗೆ ಭಕ್ತಿ ಒಟ್ಟು ಬದುಕಿನ ಒಂದು ಅಂಶವಾಗಿದ್ದಿರಬಹುದೇ ಹೊರತುಅದೇನೂ  ಚಳವಳಿಯ ಉಸಿರಾಗಿರಲಿಲ್ಲಅದು ಮಾನ್ಯಮಾಡಿದ್ದು ವಿಶೇಷವಾಗಿ ಕಾಯಕ-ದಾಸೋಹಗಳನ್ನು.v
           
ವೈದಿಕವನ್ನು ತಿರಸ್ಕರಿಸಿದ ಕೆಳವರ್ಗದ  ಚಿಂತಕಸಮೂಹ ಬದುಕಿನ ಇಹದ ಹೊರತಿನ ಆಶೋತ್ತರಗಳ ತೃಪ್ತಿಗಾಗಿ ಧಾರ್ಮಿಕ ನೆಲೆಗಟ್ಟನ್ನೇ ಆಶ್ರಯಿಸಬೇಕಾಯಿತೆಂದು ಕಾಣುತ್ತದೆವೈದಿಕವನ್ನು  ಹಿಂದೆ ಎದುರಿಸಿದ್ದ ಜೈನ-ಬೌದ್ಧಗಳೆರಡೂ ನಿರೀಶ್ವರವಾದವನ್ನೇ ಒಪ್ಪಿಕೊಂಡರೂಇಲ್ಲಿ ಉಳಿದ ಜೈನವು ಬಸದಿಗಳನ್ನು ದೇವಾಲಯಗಳಾಗಿ ಪರಿವರ್ತಿಸುವ ಮೂಲಕ ಮೂರ್ತಿಪೂಜೆಯನ್ನು ಸ್ವೀಕರಿಸಿತುಸಾಮಾನ್ಯರು ದೇವರಿಲ್ಲದ ಸ್ಥಿತಿಯನ್ನು ಒಪ್ಪಿಕೊಳ್ಳಲಾರರೆಂದೋ ಏನೋಅಥವಾ ತಮಗೇ ಅದು ಸಾಧ್ಯವಿಲ್ಲದ್ದರಿಂದಲೋ ವಚನ ಚಳವಳಿಯೂ ಪ್ರಾಯಶಃ ದೇವರ ಅಸ್ತಿತ್ವವನ್ನು ಒಪ್ಪಿಕೊಂಡಿತುಆದರೆ ಇಲ್ಲಿನ ದೇವೋಪಾಸನೆಯ ರೀತಿ ವೈದಿಕಕ್ಕೆ ತೀರ ಭಿನ್ನವಾದುದು ಹೊತ್ತಿಗೆ ವ್ಯಾಪಕವಾಗಿ ಭ್ರಷ್ಟಾಚಾರದ ಭೂಮಿಕೆಯಾಗಿದ್ದ ದೇವಾಲಯಪದ್ಧತಿಯನ್ನೂ, “ತನ್ನಾಶ್ರಯದ ರತಿಸುಖವನುತಾನುಂಬ ಊಟವನುಬೇರೆ ಮತ್ತೊಬ್ಬರ ಕೈಲಿ ಮಾಡಿಸಬಹುದೇ” ಎಂಬ ಕಾರಣಕ್ಕಾಗಿ ಪೂಜಾರಿಯ ಮೂಲಕ ಪೂಜಿಸುವುದನ್ನೂ ನಿರಾಕರಿಸಿತಾನೇ ‘ನಿತ್ಯನೇಮವ’ ಮಾಡುವುದನ್ನು ಅವರು ಪ್ರತಿಪಾದಿಸಿದರುದೇವಾಲಯಪದ್ಧತಿಯಲ್ಲಾದರೆ ಗರ್ಭಗುಡಿಯಲ್ಲಿ ಪ್ರತಿಷ್ಠಿತವಾಗಿದ್ದ ದೇವರಿಗಿಂತ ಹೆಚ್ಚಾಗಿ ಅದನ್ನು ನಿರ್ಮಿಸಿದಪ್ರತಿಷ್ಠಾಪಿಸಿದ ವ್ಯಕ್ತಿಗೇ ಹೆಚ್ಚು ಪ್ರಾಧಾನ್ಯಕನ್ನಡ ನಾಡಿನಲ್ಲಿ ನಿರ್ಮಿತವಾದ ದೇವಸ್ಥಾನಗಳ ಗರ್ಭಗುಡಿಯಲ್ಲಿನ ದೇವರು ಕಟ್ಟಿಸಿದವನ ಹೆಸರನ್ನು ಹೊತ್ತಿರುವುದು ಸಾಮಾನ್ಯವಚನಕಾರರು ಆಕಾರವುಳ್ಳ ದೇವರನ್ನು ನಿರಾಕರಿಸಿದರೂಹಲವರು ತಮ್ಮ ಪ್ರೀತಿಯ ಸ್ಥಳಗಳ ಸ್ಥಾವರಲಿಂಗವನ್ನು ಆಪ್ತವಾಗಿ ತಮ್ಮ ವಚನಾಂಕಿತಗಳನ್ನಾಗಿ ಮಾಡಿಕೊಂಡದ್ದೊಂದು ವಿಪರ್ಯಾಸಬಹುತೇಕ ವಚನಕಾರರು ‘ಕಿರುಕುಳ’ ದೈವಗಳನ್ನು ಅಲ್ಲಗಳೆದರೂದೇವನೊಬ್ಬನನ್ನು ನಂಬಿದರುಸಾಮೂಹಿಕವಾಗಿ ಪೂಜೆಗೊಳ್ಳುವ ದೇವರ ಸ್ಥಾನದಲ್ಲಿ ಅವರು ಇಷ್ಟಲಿಂಗ’ ಪರಿಕಲ್ಪನೆಯನ್ನು ಪುರಸ್ಕರಿಸಿದರುವಚನಕಾರರು ಏಕದೇವೋಪಾಸನೆಯನ್ನು ಪುರಸ್ಕರಿಸಿದವರು ಎಂಬ ಭಾವನೆಯಿದ್ದರೂಶಿವ ‘ಒಬ್ಬ’ ದೇವನಲ್ಲಎಷ್ಟು ಮಂದಿ ಭಕ್ತರೋ ಅಷ್ಟು ಮಂದಿ ಶಿವರು, ‘ಇಷ್ಟಲಿಂಗ’ ಆಯಾ ಭಕ್ತನ ಕಲ್ಪನೆಯ ಶಿವನ ಕುರುಹುಒಂದು ನೆಲೆಯಲ್ಲಿ ವಚನಕಾರರು ತಿರಸ್ಕರಿಸಿದ ‘ಸ್ಥಾವರ’ ದೇವಸ್ಥಾನದ ದೇವರಾದರೂಇನ್ನೊಂದು ನೆಲೆಯಲ್ಲಿ ಕಟ್ಟಿಕೊಂಡ ಲಿಂಗವೂ ಸ್ಥಾವರವೇಸ್ಥಾವರ ಎಂದರೆ ವಸ್ತುರೂಪದ್ದುಎರಡೂ ತಿರಸ್ಕಾರಾರ್ಹವೇಅಥವಾ ಅನಿವಾರ್ಯವಲ್ಲ. ದೇವರು ಅಮೂರ್ತವಚನಕಾರರ ದೈವದ ಪರಿಕಲ್ಪನೆಯಲ್ಲಿ ಏಕರೂಪತೆಯಿಲ್ಲ. “ಖಂಡಿತವಿಲ್ಲದ ಅಖಂಡಿತ ನೀನೆನಿನ್ನ ಕಂಡವರುಂಟೆ ಹೇಳಯ್ಯ” ಎಂಬ ಜೇಡರ ದಾಸಿಮಯ್ಯನ ಅಜ್ಞೇಯತಾವಾದವೆನ್ನಿಸುವ ನಿಲವಿನಿಂದ ಹಿಡಿದುಮೊರದಲ್ಲಿ ಮಾರಿಯನ್ನಿರಿಸಿಕೊಂಡು ಡೊಳ್ಳು ಬಾರಿಸುತ್ತಿದ್ದ ಡಕ್ಕೆಯ ಬೊಮ್ಮಣ್ಣನವರೆಗೆ ವಚನಕಾರರ ದೇವರ ಕಲ್ಪನೆಯಿದೆ.
            ಭಕ್ತ ಎಂಬ ಪದ ಒಂದು ಪಾರಿಭಾಷಿಕ ಶಬ್ದವಾಗಿಯೇ ಹೆಚ್ಚು ಬಳಕೆಯಲ್ಲಿದೆವಚನಕಾರರ ನಿಲವಿಗೆ ಬದ್ಧರಾದವರೆಲ್ಲ ‘ಭಕ್ತರುಅಂದರೆ ಪ್ರತಿಭಟನೆಯ ನೆಲೆಯಲ್ಲಿ ಒಗ್ಗೂಡಿದ ಸಮಾನಮನಸ್ಕರ ಗುಂಪು ಅದುಅವರು ವಿವಿಧ ನೆಲೆಗಳಿಂದ ಬಂದಿದ್ದವರುವಿವಿಧ ಮನೋಭಾವದವರುಹೀಗಾಗಿಯೇ ಚಳವಳಿಯ ಕಾಲದ ಭಕ್ತರಲ್ಲಿ ಅನೇಕ ನೆಲೆಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವುಶರಣಸತಿ-ಲಿಂಗಪತಿಯಂತಹ ಬಹು ಮುಖ್ಯ ವಿಷಯಗಳಲ್ಲಿಯೂ ಇದನ್ನು ಕಾಣಬಹುದುಅಂಬಿಗರ ಚೌಡಯ್ಯನ “ಶರಣಸತಿ ಲಿಂಗಪತಿ ಎಂಬ ಮಾತು ಮೊದಲಿಗೆ ಮೋಸ” ಎಂಬ ಮಾತನ್ನು ನೆನೆಯಿರಿವಚನಕಾರರು ತಮ್ಮ ಅಭಿಪ್ರಾಯಗಳನ್ನು ವಚನಗಳ ಮೂಲಕ ವ್ಯಕ್ತಪಡಿಸುವುದರ ಮೂಲಕ ವಚನರಚನೆಯನ್ನು ಚರ್ಚಾವೇದಿಕೆಯನ್ನಾಗಿ ಮಾಡಿಕೊಂಡರುಅನುಭವಮಂಟಪದ ಭೌತಿಕ ಅಸ್ತಿತ್ವವನ್ನು ನಾನು ಒಪ್ಪುವುದಿಲ್ಲವಾದರೂ ಒಟ್ಟಾರೆ ವಚನಗಳ ಸಮೂಹವನ್ನು ಆನಂತರ ಪರಿಭಾವಿಸಿದವರಿಗೆ ಅದರಲ್ಲಿನ ಚರ್ಚೆಯ ಆಕಾರವು ಕಾಣಸಿಗುತ್ತದೆಎಂದರೆವಚನಕಾರರು ಎದುರುಬದುರು ನಿಂತು ಚರ್ಚಿಸಲಿಲ್ಲನಿಜಆದರೆ ತಮ್ಮ ಅಭಿಪ್ರಾಯವನ್ನು ವಚನಗಳಲ್ಲಿ ವ್ಯಕ್ತಪಡಿಸಿದ್ದರಿಂದಾಗಿ ಮುಂದಿನವರಿಗೆ ಅದು ಚರ್ಚೆಯ ರೂಪದಲ್ಲಿ ಕಾಣಿಸಿತುಇದನ್ನು ಗಮನಿಸಿದ ಶಿವಗಣ ಪ್ರಸಾದಿ ಮಹದೇವಯ್ಯನು  ಕಾರಣದಿಂದಲೇ ವಚನಗಳನ್ನು ಬಳಸಿಕೊಂಡು ಎದುರುಬದುರು ನಿಂತು ಮಾಡಿದ ಚರ್ಚೆಯನ್ನಾಗಿ ಮಾರ್ಪಡಿಸಿದ್ದು.
            ಮೊದಮೊದಲು ವಚನಕಾರರು ಏಕಾಭಿಪ್ರಾಯವನ್ನು ಎಲ್ಲ ವಿಧದಲ್ಲೂ ರೂಪಿಸಬೇಕೆಂಬ ಛಲವನ್ನು ಹೊತ್ತವರಲ್ಲಪ್ರಾಯಶಃ ಅದು ಸಾಧ್ಯವೂ ಇರಲಿಲ್ಲಯಾಕಂದರೆ ಅವರು ವಿವಿಧ ನೆಲೆಗಳಿಂದ ಬಂದಿದ್ದವರುವಿವಿಧ ಮನೋಭಾವದವರುಆದರೆ ಅವರು ಒಟ್ಟಾಗಿದ್ದು ಸಮಾನ ಶತ್ರುವನ್ನು ಬಗ್ಗುಬಡಿಯಲು ಅಂದರೆವಚನಗಳ ಕಾಲದಲ್ಲಿ ಅದಕ್ಕೊಂದು ಸಾಂಸ್ಥಿಕ ಸ್ವರೂಪ ಇನ್ನೂ ಬಂದಿರಲಿಲ್ಲಚೆನ್ನಬಸವಣ್ಣನಂತಹವರು ತಮ್ಮ ಮಾತುಗಳಿಗೊಂದು ಪರಿಭಾಷೆಯ ಸ್ವರೂಪವನ್ನೂನಡವಳಿಕೆಗೆ ಆಚರಣೆಗಳ ಸ್ವರೂಪವನ್ನೂ ಕೊಡಲು ಪ್ರಯತ್ನಿಸಿದ್ದೇನೋ ನಿಜಕೊಂಚಮಟ್ಟಿಗೆ ಇವೆಲ್ಲ ಕಸ್ಟಮೈಸ್ ಆಗಿದ್ದಿರಬಹುದಾದರೂ, ಚಳವಳಿಯ ನಿಲವು-ನಡಾವಳಿ ಪೂರ್ಣರೂಪದ ಸಾಂಸ್ಥಿಕತೆಯನ್ನು ಗಳಿಸಿಕೊಂಡಿರಲಿಲ್ಲಇದು ನಡೆದದ್ದು ವಿಶೇಷವಾಗಿ ‘ಶೂನ್ಯಸಂಪಾದನೆ ಬಳಿಕ ಕಾರಣದಿಂದಲೇ ಮುಂದಿನ ಪೀಳಿಗೆಗಳು ‘ಶೂನ್ಯಸಂಪಾದನೆಯನ್ನು ತಮ್ಮ ಧಾರ್ಮಿಕಪಠ್ಯವೆಂದು ಒಪ್ಪಿಕೊಂಡದ್ದುಇದೇ ಕಾರಣಕ್ಕಾಗಿಯೇ ಅದು ಅನೇಕ ಪರಿಷ್ಕರಣಗಳಿಗೂ ಒಳಗಾಯಿತುಕೊನೆಯ ಪರಿಷ್ಕರಣೆಯ ನಂತರ  ಗ್ರಂಥವು ಲಿಂಗಾಯತದ ನಿಲವೆಲ್ಲವನ್ನೂ ಸಮರ್ಪಕವಾಗಿ ಬಿಂಬಿಸುತ್ತದೆಂಬ ಭಾವನೆಯಿಂದಾಗಿ ಅದು ಅಂತಿಮಸ್ವರೂಪದಲ್ಲಿ ನೆಲೆಗೊಂಡಿತುಹೀಗೆ ಪರಿಷ್ಕರಣೆಗಳನ್ನು ಮಾಡಿದವರು ಮಠಾಧಿಪತಿಗಳೆಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಯಾವುದನ್ನು ನಾವು ಲಿಂಗಾಯತದ ಎರಡನೆಯ ಘಟ್ಟವೆಂದು ಗುರುತಿಸುತ್ತೇವೋ  ಕಾಲದಲ್ಲಿ ಇಂಥ ಸಂಪಾದನೆಗಳು ನಡೆದುದಲ್ಲದೆಬಸವಾದಿಗಳ ಬಗ್ಗೆ ಪುರಾಣಗಳೂ ರಚಿತವಾಗಿ ವಚನಕಾರರ ಆದರ್ಶಗಳಿಗೆ ಒಂದು ಚೌಕಟ್ಟು ಪ್ರಾಪ್ತವಾಗಿಮುಂದೆ ವೈದಿಕದ ನೆರಳಲ್ಲಿಯೇ ಸಾಗುತ್ತ ಅದು ಮತ್ತೊಂದು ಮತವಾಯಿತು ನೆರಳಿನ ಕಾರಣದಿಂದಲೇ ಎರಡು ನೆಲೆಗಳ  ಅಂದರೆ ವೈದಿಕ ಹಾಗೂ ಲಿಂಗಾಯತ - ಹಿಂಬಾಲಕರಲ್ಲಿ ಭಿನ್ನತೆಗಿಂತ ಸಾಮ್ಯವೇ ಬಹು ಹೆಚ್ಚಾದುದರಿಂದಈಗ ವಚನಕಾರರ ಅನುಯಾಯಿಗಳು ವೈದಿಕರೋ ಅರ್ಥಾತ್ ಹಿಂದುಗಳೋ ಅವರಿಗಿಂತ ಭಿನ್ನರೋ ಎಂಬ ಗೊಂದಲ ಸೃಷ್ಟಿಯಾಗಿದೆವೈದಿಕದ ನೆಲೆಯಲ್ಲಿ ಗುರುತಿಸಿಕೊಂಡರೆ ಲಿಂಗಾಯತ ಒಂದು ಜಾತಿಯಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಅಂದರೆ ಈಗಿನ ಬಸವಾನುಯಾಯಿಗಳೆನ್ನಿಸಿಕೊಂಡವರುಸಾಂಸ್ಥಿಕ ಧರ್ಮಪಾಲಕರೇ ಆಗಿದ್ದಾರೆಧರ್ಮವೆಂದರೆ ಎಂತಹ ಕಾರ್ಯಕ್ಕೂ ಒಂದು ಮಿತಿ ಬರುತ್ತದೆಚೌಕಟ್ಟು ಬೀಳುತ್ತದೆಅಮೂರ್ತವು ಮೂರ್ತವಾಗಿಬಿಡುತ್ತದೆಬಸವಣ್ಣನ ಸಾಮಾಜಿಕ ಕಾರ್ಯವನ್ನು ಈಗೇನೋ ಹಾಡಿಹೊಗಳುತ್ತೇವೆಆದರೆ ಬಸವಣ್ಣ ಈಗ ಬಸವೇಶ್ವರನಾಗಿಬಿಟ್ಟಿದ್ದಾನೆಜಗದ್ಗುರುವಾಗಿದ್ದಾನೆ. ‘ಉಳ್ಳವರು’ ಈಗಲೂ ಶಿವಾಲಯವನ್ನು ನಿರ್ಮಿಸುತ್ತಿರುವುದು ಮಾತ್ರವಲ್ಲಬಸವಣ್ಣನಿಗೇ ಆಲಯವನ್ನು ಕಟ್ಟುತ್ತಿದ್ದಾರೆಪೂಜಾರಿಪೂಜೆಯನ್ನು ವಿರೋಧಿಸಿದ ಅವನನ್ನೇ ಪೂಜಾರಿಗಳ ಮೂಲಕ ಪೂಜಿಸುವ ಪರಿಪಾಠ ಬಂದಿದೆವಚನಕಾರರ ನಿಲವುಗಳನ್ನು ಮೆಚ್ಚಿಕೊಳ್ಳುವ ನಾವು ವಚನಕಾರರನ್ನು ಧಾರ್ಮಿಕ ಪರಿವಲಯದಿಂದ ಪಾರುಮಾಡಿದರೆ ಮಾತ್ರ ಅವರ ಚಿಂತನೆಗೊಂದು ಮಾನ್ಯತೆ ದೊರೆಯುವುದು. ‘ಧಾರ್ಮಿಕತೆಯಿಂದಾಗಿ ಪ್ರಶ್ನಿಸುವ ಬುದ್ಧಿ ಹೋಗಿ ಒಪ್ಪಿಕೊಳ್ಳುವವಿವೇಚಿಸುವುದರ ಬದಲು ನಂಬುವ ಮನೋಭಾವ ಆಳವಾಗುತ್ತದೆಅಂದರೆ ಬಸವಾದಿಗಳಪ್ರತಿಭಟನಾತ್ಮಕ ಮನೋಭಾವ ಕಣ್ಮರೆಯಾಗಿಬಿಡುತ್ತದೆ ಮನೋಭಾವ ಉಳಿಯದಿದ್ದರೆ ವಿಚಾರವಂತಿಕೆ ಮೂಡಲಾರದು.


ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ವಚನಕಾರರು ಹೇಳಿದ್ದನ್ನೇ ನಾವು ಅನುಸರಿಸಬೇಕೇಅಥವಾ ಎಲ್ಲ ಬಗೆಯ ತಾರತಮ್ಯದ ವಿರುದ್ಧದ ಅವರ ನಿಲವನ್ನು ಮಾತ್ರ ಅಳವಡಿಸಿಕೊಳ್ಳಬೇಕೇ ಎಂಬುದುಹೀಗಾಗಿ ‘ಲಾಂಛನಕೆ ಶರಣೆಂಬೆ”, “ಭಕ್ತನೊಂದು ಕುಲಭವಿಯೊಂದು ಕುಲ”, “ಒಮ್ಮೆ ಶರಣೆನ್ನೆಲವೋ, .. .. ಹೊನ್ನಪರ್ವತಂಗಳೈದವು”, “ನಡೆಲಿಂಗ ಜಂಗಮ” -  ಮುಂತಾದ ಮಾತುಗಳನ್ನು ಕೈಬಿಡಬೇಕು.  ನಮ್ಮ ಮಾತು ಪರಿಭಾಷೆಯಿಂದ ಮುಕ್ತವಾಗಬೇಕುನಮ್ಮ ನಡೆಯಲ್ಲಿ ಸ್ವತಂತ್ರ ಮನೋಭಾವಕ್ಕೆ ಮಾನ್ಯತೆಯಿರಬೇಕುಭಿನ್ನಾಭಿಪ್ರಾಯಗಳ ನಡುವೆ ಸಾಮರಸ್ಯ ಮೂಡಬೇಕುಸಾರ್ವತ್ರಿಕ ದೇವರ ಅಗತ್ಯವಿಲ್ಲದೇವರು ವ್ಯಕ್ತಿಯ ಅಗತ್ಯವೇ ಹೊರತು ಸಮಾಜಕ್ಕೆ ಬೇಡಅಂದರೆ ಧರ್ಮ ಎಂಬುದು ವ್ಯಕ್ತಿಸೀಮಿತವಾಗಬೇಕುಒಬ್ಬನು ದೇವರನ್ನು ನಂಬುತ್ತಾನೋ ಬಿಡುತ್ತಾನೋಯಾವ ದೇವರ ಬಗ್ಗೆ ಅವನಿಗೆ ನಂಬಿಕೆಯಿದೆಯೋ ಬಿಟ್ಟಿದೆಯೋ ಅದು ಮುಖ್ಯವಲ್ಲಮಾನವೀಯತೆಯನ್ನು ಕೇಂದ್ರದಲ್ಲಿರಿಸಿಕೊಳ್ಳುವ ಯಾವುದೇ ಚಿಂತನೆ ಮಾನ್ಯವಾಗಬೇಕುಅಂದರೆ ನಾವೀಗ ಬಸವಾದಿಗಳ ಕುರುಡು ಅನುಸರಣೆಯಿಂದ ಹೊರಬಂದುಅವರ ಹೋರಾಟದ ಹಿಂದಿನ ಮನೋಭಾವವನ್ನು ಅಳವಡಿಸಿಕೊಂಡುಧರ್ಮವನ್ನು ಬೀದಿಗೆ ತರದೆ ಬದುಕುವ ದಾರಿ ನಮ್ಮದಾಗಬೇಕುಯಾಕೆಂದರೆ ಸಾಂಸ್ಥಿಕ ಧರ್ಮಗಳಿಂದಾಗಿ ಜಗತ್ತಿನಲ್ಲಿ ಆಗಿರುವಷ್ಟು ಮನೋಮಾಲಿನ್ಯ ಬೇರಾವುದಿರಿಂದಲೂ ಆಗಿಲ್ಲಧರ್ಮ ಮತ್ತದರ ಸಾಂಸ್ಥಕತೆಗಳಿಗೆ ಪ್ರಾಯಶಃ ಕಾರಣ ಸಾವಿನ ಭಯಸಾವನ್ನು ತಾನಾಗಿ ತಂದುಕೊಳ್ಳದಆದರೆ ಅದರ ಭಯದಿಂದ ಬದುಕನ್ನು ಹಾಳುಮಾಡಿಕೊಳ್ಳದ ಗಟ್ಟಿ ಮನೋಭಾವವನ್ನು ಮೂಡಿಸಿಕೊಂಡರೆ ಪ್ರಾಯಶಃ ಸಾಮುದಾಯಿಕ  ದೇವರು-ಧರ್ಮಗಳ ಹಂಗು ತಾನಾಗಿ ಹರಿಯುವುದೆಂದು ಭಾವಿಸಬಹುದುಅಂತಹುದೊಂದು ಮನೋಭಾವವನ್ನು ಸೃಷ್ಟಿಸುವ ಸಮಾನಮನಸ್ಕರ ವೇದಿಕೆಯಾಗಿ  ಸಮಾವೇಶ ಮಾರ್ಪಡಲಿ ಎಂದು ಆಶಿಸುತ್ತೇನೆ.
*****