Thursday, January 30, 2014

ಐತಿಹಾಸಿಕ ಜಾನಪದ ಕ್ರೀಡೆ ಜಲ್ಲಿಕಟ್ಟು

ಜಲ್ಲಿ ಕಟ್ಟು ( ಹೋರಿ ಹಿಡಿ)
ಎಚ್‌.ಶೇಷಗಿರಿರಾವ್‌








ಸಾವಿರಾರು ಜನರ ಕಣ್ಣೆಲ್ಲಾ ಮೈದಾನದ ಮೇಲೆ, ಕಣದಲ್ಲಿ ನೂರಾರು ಮಂದಿ ಸಮವಸ್ತ್ರ ಧಾರಿ  ವೀರರು.ಚಿಕ್ಕ ಬಾಗಿಲಿನಿಂದ ಹೊರ ಚಿಮ್ಮುವ ಹೋರಿ... ಹೋ ಎನ್ನುವ ಜನರ ಅಬ್ಬರ... ಅದನ್ನು ಹಿಡಿಯಲು ಮುಗಿಬೀಳುವ ವೀರರು... ಆದರೂ ಕಡೆಗೆ ಹೋರಿಯನ್ನು ಮಣಿಸ ಬೇಕಾದದ್ದು ಒಬ್ಬನೇ...ಮುಗಿಬೀಳುವವರ ತೆಕ್ಕೆಗೆ ದಕ್ಕದೆ ಹೋರಿ ಓಡಿದರೆ  ಗೆಲವು ಮಾಲೀಕನಿಗೆ.. ಅದನ್ನು ಹಿಡಿದರೆ ವೀರನಿಗೆ ಬಹುಮಾನ.. ಇದು ತಮಿಳು ನಾಡಿನ ಶುದ್ಧ ದೇಸಿ ಕ್ರೀಡೆ ಜಲ್ಲಿ ಕಟ್ಟುವಿನ ಝಲಕ್‌. ಜಲ್ಲಿಕಟ್ಟುವಿನ ಹುಚ್ಚಿಗೆ ಬಿದ್ದವರೆಷ್ಟೋ ಇದನ್ನು ನೋಡಲೆಂದೇ ಈ ಸೀಜನ್‌ನಲ್ಲಿ ತಮಿಳುನಾಡಿಗೆ ವಿಶ್ವದ ಮೂಲೆಮೂಲೆಗಳಿಂದ ಪ್ರವಾಸಿಗರು ಇಲ್ಲಿಗೆ ಧಾವಿಸುತ್ತಾರೆ.
ಜಲ್ಲಿ ಕಟ್ಟು ವೀರಗಲ್ಲು

ಜಲ್ಲಿ ಕಟ್ಟು  ದಕ್ಷಿಣ ತಮಿಳುನಾಡಿನಲ್ಲಿ ಬಹು ಜನಪ್ರಿಯ ಸಾಹಸ ಕ್ರೀಡೆ. ಈ ದೇಶೀಯ ಜಾನಪದ ಕ್ರೀಡೆಗೆ ಅದರದೇ ಆದ ಇತಿಹಾಸವಿದೆ. ನೂರಾರು ವರ್ಷದಿಂದ ನಡೆದು ಬಂದಿರುವದಕ್ಕೆ ವೀರಗಲ್ಲು ಮತ್ತು ಪೇಂಟಿಂಗ್‌ಗಳು ಸಾಕ್ಷಿ.. ಸಂಗಮಸಾಹಿತ್ಯದಲ್ಲೂ ಇದರ ಉಲ್ಲೇಖವಿದೆ. ಜಲ್ಲಿ ಎಂದರೆ  ಬೆಳ್ಳಿ ಅಥವ ಬಂಗಾರದ   ನಾಣ್ಯ,  ಹೋರಿಯ ಕೊಂಬಿಗೆ   ಕಟ್ಟಿ ಅವುಗಳನ್ನು ಪಡೆಯುವುದೆ ಈ ಕ್ರೀಡೆಯ ಗುರಿ ಎಂದರ್ಥ., ಹೋರಿಯನ್ನು ಅದರ ಬೆನ್ನಮೇಲಿನ ಎದ್ದುಕಾಣುವ ಡುಬ್ಬ ಅಥವ ಹಿಣಿಲು ಹಿಡಿದು ನಿಲ್ಲಿಸಿದರೆ ಗೆದ್ದಂತೆ. ಕೊಂಬು ಹಿಡಿದು ತಡೆದವನಂತು ಪರಮವೀರ. ಕ್ರೀಡಾಪಟುಗಳನ್ನು  ವೀರರು ಎಂದೇ ಕರೆಯುವರು. ಅವರಿಗೆ ಸಮಾಜದಲ್ಲಿ ದೊಡ್ಡ  ಗೌರವ. ಮದುವೆ ಮಾರುಕಟ್ಟೆ ಯಲ್ಲಿ ಅವರಿಗೆ ಎಲ್ಲಿಲ್ಲದ ಬೇಡಿಕೆ.
ಜಲ್ಲಿಕಟ್ಟು ವರ್ಣ ಚಿತ್ರ.

ಮಾಟ್ಟು ಪೊಂಗಲ್‌ದಿನಪ್ರಾರಂಭವಾಗುವ ಹೋರಿ ಹಿಡಿ ಅಥವ ಹೋರಿ ಪಳಗಿಸುವ ಗ್ರಾಮೀಣ ಕ್ರೀಡೆ. ಇದು ಜನವರಿ  ೧೫ ರಿಂದ  ಜೂನ್‌ವರೆಗೆ ತಮಿಳುನಾಡಿನ ಹಲವೆಡೆ ನಡೆಯುವುದು. ಮೊದಲ ಕ್ರೀಡೆ ಪಾಲಮೇಡುವಿನಲ್ಲಿ ನಂತರದ ಅತಿಪ್ರಖ್ಯಾತ ಅಲಂಗನಲ್ಲೂರಿನಲ್ಲಿ  ನಂತರ  ಜಲ್ಲಿಕಟ್ಟಿನ ವಿಭಿನ್ನ ಪ್ರಕಾರಗಳು ಪಾಲಮೆಡು, ಅಳಂಗನಲ್ಲೂರು, ತಿರುಚಿ, ಪುದುಚರಿ,ತೇಣೀ, ತಂಜಾವೂರು, ಸೇಲಂಗಳಲ್ಲಿ ಪ್ರಚಲಿತವಾಗಿವೆ.
.ಮಾಡು, ಪಲಿಂಗು,ಉಂಬಚೆರಿ, ನಾಟುಮಾಡು, ಮಲೈಮಾಡು ಮೊದಲಾದ ಸುಮಾರು ೧೯ ತಳಿಯ ಹೋರಿಗಳು ಭಾಗವಹಿಸುತ್ತವೆ ಅದರಲ್ಲಿ ಪುಲಿಕುಲಂ ಹೋರಿಗಳು  ಬಹು ಪ್ರಖ್ಯಾತ.




ಜಲ್ಲಿಕಟ್ಟುವಿನ ಇನ್ನೊಂದು ರೂಪ ವೇಲಿವಿರಟ್ಟುವಿನಲ್ಲಿ ಹೋರಿಗಳನ್ನು  ಯಾವುದೇ ನಿರ್ಬಂಧವಿಲ್ಲದೆ ಮುಕ್ತವಾಗಿ ಬಯಲಿನಲ್ಲಿ ಬಿಡುವರು. ಅವು ಯಾವುದೇ ದಿಕ್ಕಿನಲ್ಲಾದರೂ ಓಡಬಹುದು. ಕೆಲವು ತಪ್ಪಿಸಿಕೊಳ್ಳದೆ ಮೈದಾನದಲ್ಲೇ ನಿಲ್ಲುವವು.ಅವುಗಳನ್ನು ಮಣಿಸಲು ವೀರರು ಪ್ರಯತ್ನಿಸುವರು. ಈ ಪ್ರಯತ್ನ ಹಲವು ನಿಮಿಷದಿಂದ ಗಂಟೆಗಳವರೆಗೆ ಸಾಗಬಹುದು.

ಮೂರನೆಯ ರಿತಿಯ ಜಲ್ಲಿಕಟ್ಟು ವಟಂ ಮಂಜುವಿರಟ್ಟು. ಇದರಲ್ಲಿ ಹೋರಿಗೆ ೫೦ ಅಡಿಯ ಹಗ್ಗ ಕಟ್ಟಿರುವರು. ೪-೫ ಜನರ ತಂಡ . ಅದನ್ನು ೩೦ ನಿಮಿಷದಲ್ಲಿ ಕಟ್ಟಿಹಾಕ ಬೇಕು. ಇದು ಜಲ್ಲಿಕಟ್ಟುವಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ



ಜಲ್ಲಿಕಟ್ಟು ಕ್ರೀಡೆಯನ್ನು ಸ್ಪೇನಿನ ಮೆಟಡಾರ್‌ (ಗೂಳಿ ಕಾಳಗ, ) ಪ್ರಾಚೀನ ಗ್ರೀಸ್‌ನ ಗ್ಲಾಡಿಯೇಟರ್‌ಗಳಿಗೆ ಹೋಲಿಸಿ ಇದು ಒಂದು ಹಿಂಸಾತ್ಮಕ ಕ್ರೀಡೆ, ಇದನ್ನು  ನಿರ್ಬಂಧಿಸ ಬೇಕು ಎಂದು ಪ್ರಾಣಿದಯಾ ಸಂಘಟನೆಯವರು ಹುಯಿಲೆಬ್ಬಿಸಿ ೨೦೦೪ ರಲ್ಲಿ  ಸುಪ್ರೀಂಕೋರ್ಟವರೆಗೆ ದೂರು ನೀಡಿದ್ದರು. ಈ ಕ್ರೀಡೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಒಬ್ಬಿಬ್ಬ ಕ್ರೀಡಾಪಟುಗಳು ಮೃತರಾಗಿರುವುದೂ ಉಂಟು.ಹೊರಿಗಳನ್ನು ಉತ್ತೇಜಿಸಲು ಅವುಗಳಿಗೆ ಮಧ್ಯ ಪಾನ ಮಾಡಿಸುವುದು ಹಾಗೂ ಅವುಗಳ ಕಣ್ಣಿಗೆ ಖಾರದ ಪುಡಿ ತುಂಬುವುದು ಮತ್ತು ಬಿಡುವು ಮುನ್ನ ಅವುಗಳ ಮರ್ಮಾಂಗಗಳಿಗೆ ಚೂಪಾದ ಆಯುಧಗಳಿಂದ ಚುಚ್ಚಿ ಕೆರಳಿಸುವರು ಎಂಬ ಆರೋಪ ಇದ್ದವು. .ಸುಪ್ರೀಮ್‌ ಕೋರ್ಟ ನ್ಯಾಯಪೀಠಕ್ಕೆ  ಮಧುರೈನ ತಮಿಳು ’ವೀರವಿಳಯತ್ತು ಪೆರವೈ”ಮತ್ತು ತಮಿಳುನಾಡು ಸರ್ಕಾರವು ಜಲ್ಲಿ ಕಟ್ಟುವಿನಲ್ಲಿ ಪ್ರಾಣಿಗಳಿಗೆ ಯಾವುದೇ ರೀತಿಯ ಹಿಂಸೆ ಆಗುತ್ತಿಲ್ಲ .ಇದೊಂದು  ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆ ಸುಮಾರು ನಾಲ್ಕುಶತಮಾನದ ಹಿನ್ನೆಲೆಯಿರುವ ಜಾನಪದ  ಮತ್ತು ಪರಂಪರಾಗತ ಆಚರಣೆ ಎಂದು ಮನವಿ ಮಾಡಿಕೊಂಡರು. ಈ ಎಲ್ಲ ಅಂಶಗಳನ್ನು ಪರಿಶಿಲಿಸಿ ಸುಪ್ರೀಮ್‌ ಕೋರ್ಟ ೨೦೧೦ ರಲ್ಲಿ ಕೆಲವು ನಿಬಂಧನೆಗಳೊಡನೆ ಜಲ್ಲಿಕಟ್ಟನ್ನು ಜನವರಿಯಿಂದ ಮೇ ವರೆಗೆ ಐದು ತಿಂಗಳ ಕಾಲ ನಡೆಸಲು ಅನುಮತಿಸಿತು
ಅದರಂತೆ ಸ್ಥಳೀಯ ಸಮಿತಿಯು ಜಿಲ್ಲಾಕಲೆಕ್ಟರ್‌ಅನುಮತಿ ಮತ್ತು ಉಪಸ್ಥಿತಿಯೊಂದಿಗೆ ನಿಗದಿತ ಸಮಯದ ವರೆಗೆ ಅಂದರೆ ಮಧ್ಯಾಹ್ನ ೨ ಗಂಟೆಯವರೆಗೆ ಮಾತ್ರ ಜಲ್ಲಿಕಟ್ಟು ನಡೆಸುವವು. ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಮೇಲ್ವಿಚಾರಣೆ ನಡೆಸುವುದು, ಪಶುವೈದ್ಯರ ತಂಡ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿ ಪರವಾನಿಗೆ ನೀಡಿದರೆ ಮಾತ್ರ ಹೋರಿಗಳು ಭಾಗವಹಿಸಬಹುದು. ಕ್ರೀಡಾಳುಗಳಿಗೂ ವೈದ್ಯ ಪರೀಕ್ಷೆ ಇದೆ.  ೧೮ರಿಂದ ೪೦ ವರ್ಷದೊಳಗಿನ ಆರೋಗ್ಯವಂತರು ಮಾತ್ರ ಭಾಗವಹಿಸಬಹುದು.ಗಾಯಾಳುಗಳಿಗೆತಕ್ಷಣದ ಚಿಕಿತ್ಸೆಯವ್ಯವಸ್ಥೆ ಇದೆ. ಅವರಿಗಾಗಿಯೇ ಪರಿಹಾರ ನೀಡಲು ಒಂದರಿಂದ ಎರಡುಲಕ್ಷ ಠೇವಣಿಯನ್ನು ಸಂಘಟಕರು ಇಡುವರು

ಆನೇಕ ಕಾರಣಗಳಿಂದ ಪತ್ರಿಕೆಗಳಲ್ಲಿ ಅತಿಪ್ರಚಾರ ಪಡೆದಿರುವ ಜಲ್ಲಿಕಟ್ಟು ನೋಡಲು  ಈಸಲ ಸಂಕ್ರಾಂತಿಗೆ ಮಧುರೈಗೆ ಹೊರಟೆವು. ಮಕರ ಸಂಕ್ರಾಂತಿಯ ದಿನ ಮೊದಲ ಜಲ್ಲಿಕಟ್ಟು ನಡೆಯುವುದು ಪಾಲಮೆಡು ಎಂಬ ಮಧುರೈಗೆ ೩೫ ಕಿ.ಮೀ. ಗ್ರಾಮದಲ್ಲಿ. ಮಾರನೆಯ ದಿನ ಅತಿ ಪ್ರಸಿದ್ಧ ಜಲ್ಲಿಕಟ್ಟು ಅಂಗನಲ್ಲೂರಿನಲ್ಲಿ. ಅಂದು ಪ್ರಾಂಭವಾದಕ್ರೀಡೆ ಮೇತಿಂಗಳಕೊನೆ ವರೆಗ ಐದು ತಿಂಗಳು ದಕ್ಷಿಣ ತಮಿಳುನಾಡಿನ ಹಲವೆಡೆ ನಡೆಯುವುದು .ಕೃಷಿಆಧಾರಿತ ಸಮಾಜದಲ್ಲಿ ಸಂಕ್ರಮಣಕ್ಕೆ ಒಂದು ವಿಶೇಷ ಸ್ಥಾನವಿದೆ..ಆ ದಿನ ರೈತನ ಕೃಷಿಗೆ ಸಹಾಯಕರಾದ ದನಕರುಗಳಿಗೆ ವಿಶೇಷ ಅಲಂಕಾರ. ಮತ್ತು ಗೌರವ. ನಮ್ಮಲ್ಲಿ ಕಿಚ್ಚು ಹಾಯಿಸುವುದು, ಕರಿಹರಿಸುವುದುಮತ್ತು ಬಂಡಿ ಓಟದ ಸ್ಪರ್ದೆ ನಡೆಯುವುದು. ಹೀಗೆ ಗ್ರಾಮೀಣ ಪ್ರದೇಶದಲ್ಲಿ ಜನ-ದನಗಳ ಸಂಭ್ರಮ. ಆದರೆ ತಮಿಳುನಾಡಿನ ಜಲ್ಲಿಕಟ್ಟು ಇತ್ತೀಚೆಗೆ ದೊಡ್ಡ  ಪ್ರವಾಸಿ ಆಕರ್ಷಣೆಯಾಗಿದೆ.ದೇಶವಿದೇಶಗಳಿಂದ ಕೈನಲ್ಲಿ ಕ್ಯಾಮರಾ ಹಿಡಿದ ಪ್ರವಾಸಿಗರನ್ನು ಕಾಣ ಸಿಗುವರು.
ಜಲ್ಲಿಕಟ್ಟು ಸಾಮಾನ್ಯವಾಗಿ ಊರ ಮಧ್ಯದ ಬಯಲಲ್ಲಿ ವಿಶೇಷವಾಗಿ ನಿರ್ಮಿಸಿ ತಾಣದಲ್ಲಿ ನಡೆಯುವುದು. ಅಗಲವಾದ ಕ್ರೀಡಾಂಗಣದಿಂದ ಪ್ರಾರಂಭವಾಗಿ  ಮೈಲುಗಟ್ಟಲೆ ಉದ್ದದ ಭದ್ರವಾದ ತಡೆಗೋಡೆಯನ್ನು ಹೊಂದಿರುವುದು.ನೋಡುಗರಿಗೆ ಯಾವುದೇ ತೊಂದರೆ ಆಗದಂತಿರಲು ಈ  ವ್ಯವಸ್ಥೆ..ಒಂದು ಹೋರಿ ಮಾತ್ರ ನುಸುಳ ಬಹುದಾದ ಕಿರುಬಾಗಿಲು ಅದರ ಮೇಲೆ ವೇದಿಕೆ, ಸುತ್ತಲೂ ಭದ್ರವಾದ ಎರಡು ಆವರಣದ ತಡೆಗೋಡೆ. ಅದರ ಹಿಂದ ಗ್ಯಾಲರಿ. ಸಾವಿರಾರು ಪ್ರೇಕ್ಷಕರು ಅಲ್ಲಿ ಕುಳಿತು ನೋಡಬಹುದು ಬಾಗಿಲ ಮುಂದಿನ ಆವರಣದಲ್ಲಿ  ತೆಂಗಿನ ನಾರನ್ನು ಹರಡಿ ಬಿದ್ದರೂ ಪೆಟ್ಟುಆಗದಂತೆ ವ್ಯವಸ್ಥೆ.ಅಲ್ಲಿಯೇ ಜಮಾಯಿಸಿದ ನೂರಾರು ಸಮವಸ್ತ್ರ ಧಾರಿ .ಬಾಗಿಲ ಮುಂದೆ ವೀರರ ಪಡೆ. ಒಂದೊಂದು ಊರಿನಲ್ಲಿ ಅವರದೇ ನಿಗದಿತ ಸಮವಸ್ತ್ರ ಇರುವುದು.ಕ್ರೀಡಾಳುಗಳು ಅವರೆಲ್ಲರೂ ವೈದ್ಯಕೀಯ ಪ್ರಮಾಣಪತ್ರ ಪಡೆದಿರುತ್ತಾರೆ ಹಾಗೂ ಮಾದಕ ಪಾನಿಯ ಸೇವನೆ ಮಾಡಿರಬಾರದು. ಜೊತೆಗೆ ನಿಗದಿತ ನಿಯಮವಾಳಿಗಳನ್ನು ಪಾಲಿಒಸ ಬೇಕು..ಅಂದರೆ ಮಾತ್ರಅವಕಾಶ. ಹೋರಿ ಹೊರ ಬರುವುದನ್ನೇಕಾಯುತ್ತಿರುವರು. ಅದು ಬಂದೊಡನೆ ಅದರ ಬೆನ್ನಿನ ಮೇಲಿರುವ ಮಾಂಸಲ ಡುಬ್ಬ ಅಥವ ಹಿಣಿಲು ತಬ್ಬಿ ಹಿಡಿಯುವರು. ಬೆದರಿದ ಹೋರಿಯಾದರೂ ಮೈಕೊಡವಿ ತನ್ನನ್ನು ಯಾರೂ ಮುಟ್ಟಲು ಬಿಡದೆ ಅಲ್ಲಿಂದ ಓಡಲುಯತ್ನಿಸುವುದು. ಆ ಹೋರಿಯನ್ನು ಹಿಡಿದು ನಿಲ್ಲಿಸಿದವೆನೇ ವಿಜಯಿ. ಕನಿಷ್ಟಪಕ್ಷ ಬಾಗಿಲಿನಿಂದ ಐವತ್ತು ಮೀಟರ್‌ ದೂರದಲ್ಲಿ ಒಂದು ತೋರಣ ಕಟ್ಟಿರುವರು. ಅಲ್ಲಿಯ ತನಕ ಬಿಡದೆ ಹಿಡಿದಿದ್ದರೆ ಪ್ರಶಸ್ತಿ ಖಂಡಿತ. ಇನ್ನು ಕೋಡು ಹಿಡಿದು ನಿಲ್ಲಿಸಿದರೆ ಅವನು ಪರಮ ವೀರ.ಇದು ಒಂದು ರೀತಿಯಲ್ಲಿ ಪ್ರಾಣಿ ಮತ್ತು ಮಾನವಶಕ್ತಿಯ ಸಂಘರ್ಷ. ಒಂದಂತೂ ನಿಜ ಬಹುತೇಕ ಗೆಲ್ಲುವುದು ಪ್ರಾಣಿಯೇ.

ಕ್ರೀಡೆಯಲ್ಲಿ ಭಾಗವಹಿಸಿದವರಿಗೆ. ಬಹುಮಾನಗಳ ಸುರಿಮಳೆ.ಕಿಟ್‌ಬ್ಯಾಗು, ವೇಷ್ಠಿ, ತಾಮ್ರ ಹಿತ್ತಾಳೆ ಪಾತ್ರೆಗಳು ವಾಚ್‌ ಇಸ್ತ್ರಿ  ಪೆಟ್ಟಿಗೆ, ಸೈಕಲ್ಲು, ಮೋಟರ್‌ಸೈಕಲ್‌,ನಗದು ಹಣ, ಬೆಳ್ಳಿ ಮತ್ತು ಚಿನ್ನದ ಪದಕ ಹೀಗೆ ಹೋರಾಟದ ಗಂಭೀರತೆಗೆ ಅನುಗುಣವಾಗಿ ಬಹುಮಾನ.ಬಹುಮಾನ ನೀಡಲು ಪ್ರಾಯೋಜಕರು ತುದಿಗಾಲ್ಲಿ ನಿಂತಿರುವರು. ಅದರಿಂದಾಗಿ ಸಾವಿರಾರುರೈತರು ಜಲ್ಲಿಕಟ್ಟುವಿನಲ್ಲಿ ಭಾಗವಹಿಸಲೆಂದೇ ವಿಶೇಷ ತಳಿಯಹೋರಿಗಳನ್ನು ಸಾಕುವರು. ಕೆಲವು ಹೋರಿಗಳ ಬೆಲೆ ಲಕ್ಷಾಂತರ ರುಪಾಯಿ. ಅವನ್ನು ಮನೆಯ ಮಗನಂತೆ ಆರೈಕೆ ಮಾಡುವರು.ಅನೇಕರಿಗೆ ಗೆಲ್ಲುವ ಹೋರಿ ಸಾಕುವುದು ಪ್ರತಿಷ್ಠೆಯ ಸಂಕೇತ. ಅವುಗಳ ಸಾಕಣೆ ವೆಚ್ಚವೇ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ.ವಿವಿಧ ಸ್ಪರ್ಧೆಗಳಿಗೆ ಅವನ್ನು ಟೆಂಪೋಗಳಲ್ಲಿ ತರುವರು. ಒಂದೆರಡು ಹವಾನಿಯಂತ್ರಿತ ದನಸಾಗಣೆ ವಾ
ಹನಗಳೂ ಕಂಡುಬಂದವು. ಬಹುಶಃ ರೇಸ್‌ ಕುದರೆಗಳನ್ನು ಸಾಗಿಸುವ ವಾಹನಗಳಿಗೆ ಹವಾನಿಯಂತ್ರಣ ಅಳವಡಿಸಿರಬಹುದು. ಕಾರಣ ಇಲ್ಲಿನ ಬಿರು ಬಿಸಿಲಿಗೆ ಹೋರಿ ಬಸವಳಿಯಬಾರದು ಎಂಬ ಎಚ್ಚರಿಕೆ. ..ಇಷ್ಟೆಲ್ಲ ಕಾಳಜಿಗೆ ಕಾರಣ ಅದರಿಂದ ದೊರಕುವ ಗೌರವ. ಜೊತೆಗೆ ಆ ಹೋರಿಯನ್ನು ಯಾರೂ ಹಿಡಿಯಲಾಗದಿದ್ದರೆ ಬಹುಮಾನವೆಲ್ಲ ಮಾಲಿಕನ ಪಾಲು.

ಜಲ್ಲಿಕಟ್ಟು ಒಂದು ಜಾತ್ರೆಯ ಸ್ವರೂಪ ಪಡೆದಿದೆ. ಜನ ಸೇರಿದಾಗ ಏನೇನು ಅಗತ್ಯವೋ ಅವೆಲ್ಲವಕ್ಕೂ ಭಾರಿ ಬೇಡಿಕೆ.ಆಹಾರ, ಪಾನೀಯ, ಆಟಿಕೆ,ಒಂದೇ ಎರಡೇ. ವಿಶೇಷವಾಗಿ ಗಮನಸೆಳೆದುದು. ನೀರಾ ಮಾರಾಟ.  ತಾಳೆರಸದ ಮಾರಾಟದ ವೈಖರಿ. ಅದನ್ನುತಾಳೇಗರಿಯ ಕುಡಿಕೆಯಲ್ಲೇ ಕೊಡುವುದು ವಿಶೇಷ.ನಮಗೆ ಅದು ಹೆಂಡವೇನೋ ಎಂಬ ಶಂಕೆ ಬಂದಿತು ಆದರೆ ನಂತರ ಗೊತ್ತಾಯಿತು ಅದು ತಂಪು ಪಾನೀಯ. ಅದು ಸ್ಯಾಕರಿನ್‌ಹಾಕಿದ ಸಿಹಿ ಪಾನೀಯ ಅಂದು ಇನ್ನು ಊರ ಜನಕ್ಕು  ಅದೇನೋ ಒಂದು ರೀತಿಯ ಸಂಭ್ರಮ. ಅಲ್ಲಿನ ಅನೇಕರು ಜನರು ಬಂದವರಿಗೆಲ್ಲಾ ನೀರ ಮಜ್ಜಿಗೆ ಹಂಚುವರು, ಶಿವಗಾಮಿ ಎಂಬ ಮಹಿಳೆಯನ್ನು ವಿಚಾರಿಸಿದಾಗ ಊರಿನಲ್ಲಿ ಸೋಂಕು ರೋಗಗಳಿಂದ ಮಕ್ಕಳು ತೀರಿ ಹೋಗುತ್ತಿದ್ದಾಗ ಕಾಳಿಯಮ್ಮನ ಮಾತಿನಂತೆ ಜಲ್ಲಿಕಟ್ಟು ನಡೆಸಿಕೊಂಡು ಬಂದಿರುವ. ಧಾರ್ಮಿಕ ಸಂಪ್ರದಾಯ..
ಸ್ಥಳೀಯ ಜನರ ಎಲ್ಲವರ್ಗದ ಪ್ರತಿನಿಧಿಗಳ ಸಮಿತಿಯೊಂದುಜಿಲ್ಲಾಆಧಿಕಾರಿಯ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಸುವುದು. ಅದಕ್ಕೆ ಲಕ್ಷಾಂತರ ಹಣ ಸಂಗ್ರಹವಾಗುವುದು.ಸುಮಾರು ೧೫೦೦ ಪೋಲೀಸ್‌ ಸಿಬ್ಬಂದಿ ರಕ್ಷಣಾವ್ಯವಸ್ಥೆ ನೋಡಿ ಕೊಳ್ಳುವುದು ವೈದ್ಯರು, ಪಶುವೃದ್ಯರ ತಂಡ, ಆಂಬ್ಯುಲೆನ್ಸ್ ಜೊತೆಗೆ ಗಾಯಾಳುಗಳ ಸುರಕ್ಷತೆಗೆ ಕಾದುನಿಂತಿರುವರು. ಒಂದಂತೂ ನಿಜ ಪ್ರಾಣಿಗಳಿಗೆ ಯಾವುದೇ ರೀತಿಯ ಹಿಂಸೆ ಇಲ್ಲ ಆದ್ದರಿಂದ ಸ್ಪೇನಿನ ಗೂಳಿ ಕಾಳಗಕ್ಕೆ ಹೋಲಿಕೆ ಸಮಂಜಸ. ಅಪಾಯ ಏನಿದ್ದರೂ ಕ್ರೀಡಾಳುಗಳಿಗೆ. ಅದೂಎಲ್ಲ ಕ್ರೀಡೆಡಗಳಲ್ಲೂ ಇರುವಂತೆ ಆದರೆ ಇಲ್ಲಿ ತುಸು ಅಧಿಕಪ್ರಮಾಣದಲ್ಲಿರುವುದು. ಅದನ್ನು ತಡೆಯಲು ನೂರಾರು ಸ್ವಯಂಸೇವಕರು ಶ್ರಮಿಸುವರು. ಇದೊಂದು ಕೃಷಿಕ ಸಮಾಜದ ಹೆಮ್ಮೆಯ ಕ್ಷಣ .ಗ್ರಾಮೀಣ ಸಂಸ್ಕೃತಿಯ ಅನಾವರಣ. ಪರಂಪರೆಯ ಪ್ರದರ್ಶನ. ಆದ್ದರಿಂದಲೇ ನ್ಯಾಯಾಲಯವು ಇದನ್ನು ನಿಷೇಧಿಸಲು ನಿರಾಕರಿಸಿ ನಿಯಂತ್ರಣದೊಂದಿಗೆ ನಡೆಸಲು ಒಪ್ಪಿರುವುದು ಅರ್ಥಪೂರ್ಣ ಎನಿಸಿತು. ಸಹಸ್ರಾರು ಜನರನ್ನು ಒಟ್ಟಿಗೆ ತರುವ ಸಾರ್ಥಕ ಸಮುದಾಯ ಕ್ರೀಡೆ ಜಲ್ಲಿ ಕಟ್ಟು ಎನ್ನುವುದಂತೂ ನಿಜ..




ಇತಿಹಾಸ ಪರಂಪರೆ


ಕರ್ನಾಟಕ ಇತಿಹಾಸ ಅಕಾದಮಿಯ ಅಧ್ಯಕ್ಷ .ಡಾ. ದೇವರ.ಕೊಂಡಾರೆಡ್ಡಿಯವರ ಕಾರ್ಯಕ್ರಮದ ವರದಿ



Friday, January 24, 2014

ಹಳಗನ್ನಡದ ಹೊಸ ರೂಪದ ಪುಸ್ತಕಗಳು





ಡಾ. ಪಿ.ವಿ.ಎನ್‌ರ ನಾಲ್ಕು ಪುಸ್ತಕ  ಕುರಿತ ಮೂರು ಮಾತು.

-ಎಚ್‌.ಶೇಷಗಿರಿರಾವ್‌

ಕನ್ನಡವು ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಪಡೆದ ಹಿನ್ನೆಲೆಯಲ್ಲಿ ನಮ್ಮ ಭಾಷೆಗೆ ೧೫೦೦ ವರ್ಷದ ಇತಿಹಾಸವಿದೆ ಎಂದು  ಕನ್ನಡಿಗರೆಲ್ಲ  ಹೆಮ್ಮೆ ಪಡುವುದು ಸಹಜ. ಆದರೆ ಪ್ರಾಚೀನಕೃತಿ ಓದಿರುವರು ಎಷ್ಟು ಎಂದಾಗ ಮೌನಕ್ಕೆ ಶರಣಾಗುವವರೇ ಬಹಳ. ಕಾರಣ ಬಹು ಸರಳ  ಹತ್ತು ಹನ್ನೆರಡನೆಯ ಶತಮಾನದ ಕೃತಿಗಳ ಹೆಸರು ಬಲ್ಲೆವೇ ಹೊರತು ಮೂಲದಲ್ಲಿ ಓದಿರುವವರು ಬೆರಳ ಎಣಿಕೆಯಷ್ಟು. ಕಾರಣ ಕಬ್ಬಿಣದ ಕಡಲೆಯಾಗಿರುವ ಹಳೆಗನ್ನಡ ಭಾಷೆ ಮತ್ತು ಗದ್ಯ ಪದ್ಯ ಮಿಶ್ರಿತ ಸಂಸ್ಕೃತ ಮಯವಾಗಿರುವ ಚಂಪೂ ಶೈಲಿ.. ನಾರಿಕೇಳ ಪಾಕದಂತಿರುವ  ಸಾಹಿತ್ಯ ಕೃತಿಗಳನ್ನು ದ್ರಾಕ್ಷಾಪಾಕಮಾಡಿ ಜನಸಾಮಾನ್ಯರೂ ಓದಬಹುದಾದ ಹೊಸ ಗನ್ನಡದ ಗಧ್ಯ ಶೈಲಿಯಲ್ಲಿ ಸಾದರ ಪಡಿಸುವ  ಪ್ರಯತ್ನದ ಫಲವೇ  ಡಾ.ಕೆ.ವಿ. ನಾರಾಯಣರ  ಈ ನಾಲ್ಕು ಕೃತಿಗಳು . ಆದಿ ಕವಿ ಪಂಪನ  ಯುಗಳ ಕೃತಿಗಳ ಸರಳ ನಿರೂಪಣೆಯ ಪಂಪಕಾವ್ಯ ಸಾರ,ಅಭಿನವಪಂಪ ನಾಗಚಂದ್ರನ  ಪಂಪ ರಾಮಾಯಣ  , ನಯ ಸೇನನ ಧರ್ಮಾಮೃತ  ಮತ್ತು ಪಂಪನ ನುಡಿಗಣಿ  ಎಂಬ ಶಬ್ದ ಕೋಶ     ಇವು ಬಹುಕಾಲದ ಕೊರತೆಯನ್ನು ನೀಗುವ ಸಾಹಿತ್ಯ ರಸಿಕರಿಗೆ ರಸಪಾಕವಾಗಬಲ್ಲ ಕೃತಿಗಳು.


ಡಾ. ಪಿ.ವಿ.ನಾರಾಯಣ ಅವರು ಹಳೆಯ ಸೃಷ್ಟಿಯನ್ನು ಹೊಸ ದೃಷ್ಟಿ ಯಲ್ಲಿ ನೋಡ ಬಲ್ಲ ವಿರಳ ವಿದ್ವಾಂಸರಲ್ಲಿ ಒಬ್ಬರು. ಹಳೆಯದೆಲ್ಲ ಹೊನ್ನು ಎಂಬ ಅಂಧಾಭಿಮಾನವಿಲ್ಲ.ಸಂಸ್ಕೃತ ಭೂಯಿಷ್ಠ ಭಾಷೆ, ಅಸಂಬದ್ಧ ಅಷ್ಟಾದಶ ವರ್ಣನೆಗಳಿವೆ   ಎಂಬ ತಾತ್ಸಾರವೂ ಇಲ್ಲ.ಮಾರ್ಗದಲ್ಲಿ ದೇಶಿಯನ್ನು ಕಾಣುವ , ಅಂದಿನ ಮಿತಿಯಲ್ಲಿ ಶ್ರೇಷ್ಟತೆ ಸಾಧಿಸುವ ಯತ್ನವನ್ನು ಗುರುತಿಸುವ ಸಹೃದಯತೆ ಇದೆ.ಹಾಗೆಂದು ದೋಷವನ್ನು ಗುಣ ಎನ್ನದೆ ಎತ್ತಿತೋರುವ ಎದೆಗಾರಿಕೆ ಇದೆ. ಈ ಕಾರಣಗಳಿಂದ  ಪ್ರಾಚೀನ ಕೃತಿಗಳೂ ಇಂದಿನ ಸಮಕಾಲೀನ ಸಮಾಜಕ್ಕೆ ಆಪ್ತ ವಾಗುವವು.’.ಹಾದರದ ಕಥೆ, ಸೋದರರ ವಧೆ’ಎಂದು ಹೀಗಳೆಯುವವರೂ ಓದಿ ಅವುಗಳಲ್ಲಿರುವ ಉದಾತ್ತತೆ ,,ಸಾರ್ವತ್ರಿಕ ಸತ್ಯ ,ಜನ ಜೀವನ ಮತ್ತು ಭಾಷಾಬಳಕೆಯ ಸೌಂದರ್ಯದ ಕಿರು ನೋಟ ಪಡೆಯಲು  ಸಹಾಯಕವಾಗಿವೆ, ಹೊಸ ರೂಪದಲ್ಲಿ ಬಂದ ಈ ಕೃತಿಗಳು.
ಪಂಪ ಕಾವ್ಯ ಸಾರ – ಹೆಸರೇ ಸೂಚಿಸುವಂತೆ ಆದಿಕವಿ ಪಂಪನ ಮತ್ತು ಆದಿಪುರಾಣಗಳ ಮತ್ತು ವಿಕ್ರಮಾರ್ಜುನ ವಿಜಯ ಸಂಕ್ಷಿಪ್ತ ಆವೃತ್ತಿ.  ಆಯ್ದ ಸಾರವತ್ತಾದ ಭಾಗಗಳನ್ನು ಮಾತ್ರ ಒಳಗೊಂಡಿದೆ..ಸಮಯದೊಂದಿಗೆ ಸ್ಪರ್ಧಿಸುತ್ತಿರುವ ಈ ಆಧುನಿಕ ಕಾಲದಲ್ಲಿ ಶ್ರೇಷ್ಟ ಕಾವ್ಯ ಪರಿಚಯಮಾಡಿಕೊಳ್ಳಲು ಅನುವಾಗುವುದು.  
  .ಪಂಪ ಕನ್ನಡದ ಆದಿಕವಿ. ಬರಿಕಾಲದ ದೃಷ್ಟಿಯಿಂದ ಮಾತ್ರವಲ್ಲ. ಕಾವ್ಯಗುಣಮಟ್ಟದ  ದೃಷ್ಟಿಯಿಂದಲೂ ಮೂಲಪುರುಷ.’.ಆದಿಪುರಾ”  ಕನ್ನಡದ ಲ್ಲಿ ಜೈನ ಪರಂಪರೆಯ ಮೊದಲಕಾವ್ಯ.. ಪ್ರಥಮ ತೀರ್ಥಂಕರ   ಆದಿನಾಥನ ಅನುಭವದ ಪುನರ್‌ಸೃಷ್ಷ್ಟಿ.  ಜೀವನವನ್ನು ಪಾವನವಾಗಿ ಮಾಡಿಕೊಂಡ ಬಗೆ ಎಲ್ಲರಿಗೂ ಆದರ್ಶ. ಲೌಕಿಕ ಕಾವ್ಯ ಎಂದು ಅವನೇ ಹೇಳಿಕೊಳ್ಳುವ ವಿಕ್ರಮಾರ್ಜುನ ವಿಜಯದ  ಕಥಾಭಾಗ ಯಥಾರೀತಿ ವ್ಯಾಸನಿಂದ ಪಡೆದಿದ್ದರೂ ಅದರ ಅಭಿವ್ಯಕ್ತಿ ಮತ್ತು ತನ್ನ ಆಶ್ರಯದಾತ ಅರಿಕೇಸರಿಗೆ ಅರ್ಜುನನ್ನು ಸಮೀಕರಿಸಿ ಮಾಡಿಕೊಂಡ ಬದಲಾವಣೆ,,ಸಮಕಾಲೀನ ಪರಿಸ್ಥಿತಿಯ ಚಿತ್ರಣ,ವಿಶೇಷವಾಗಿ ಬಳಸಿದ ಮಾರ್ಗದಲ್ಲಿ ಜಾನಪದವನ್ನು ಸಮ್ಮಿಳನಗೊಳಿಸಿದ ರೀತಿಯಿಂದ ಸಾವಿರ ವರ್ಷಕಳೆದರೂ ಇನ್ನು ಜೀವಂತವಾಗಿದ್ದು ಸ್ಪೂರ್ತಿಯ ಸೆಲೆಯಾಗಿದೆ
ಪಂಪ ರಾಮಾಯಣ-  ಹನ್ನೊಂದು ಹನ್ನೆರಡನೆ ಶತಮಾನದ ಸಂಧಿಕಾಲದಲ್ಲಿ ಇದ್ದ ನಾಗಚಂದ್ರ ಜೈನ ಕವಿಗಳಲ್ಲಿ ಗಣ್ಯ. ಪಂಪನ ಉತ್ಕಟ  ಅಭಿಮಾನಿ.
 ಅಭಿನವ ಪಂಪನೆಂದು ಕರೆದು ಕೊಂಡು ಹೆಮ್ಮೆ ಪಟ್ಟುಕೊಂಡವ. ಅವನಂತೆಯೇ ಒಂದು ಧಾರ್ಮಿಕ ಕಾವ್ಯ ಮತ್ತು ಒಂದು ಲೌಕಿಕ ಕಾವ್ಯ ರಚಿಸಿದ. ಕುಮಾರವ್ಯಾಸನ ಕಾಲಕ್ಕೆ ’ತಿಣುಕಿದನು ಫಣಿರಾಯ ರಾಮಾಯಣ ಕವಿಗಳ  ಭಾರದಲ್ಲಿ’  ಎಂದರೂ ನಮಗೆ ದೊರೆತಿರುವ ರಾಮಾಯಣಗಳ ಸಂಖ್ಯೆ ಅಧಿಕವಾಗಿಲ್ಲ. ಆದರೆ ನಾಗಚಂದ್ರನ ’ ರಾಮಚಂದ್ರ ಚರಿತೆ’ ಒಂದು ವಿಶಿಷ್ಟವಾದ ಕೃತಿ. ವಾಲ್ಮೀಕಿಯ ಕಥೆಯನ್ನು ಜೈನಸಂಪ್ರದಾಯಕ್ಕೆ ಅಳವಿಡಿಸಿರುವುದರಿಂದ ಸಾಮಾನ್ಯ ಓದುಗರಿಗೆ ವಿಚಿತ್ರವೆನಿಸುವ ಬದಲಾವಣೆಗಳಿವೆ. ರಾಮ ನಾಯಕನಾದರೂ ರಾವಣನ್ನು ಕೊಲ್ಲುವುದು ಲಕ್ಷ್ಮಣ.., ಹನುಮಂತ ,ಸುಗ್ರೀವ  ಮೊದಲಾದವರು ವಾನರನಲ್ಲ. ಅವರೆಲ್ಲ ಕಪಿಧ್ವಜರು. ರಾಮನು  ವನವಾಸಕ್ಕೆ ಹೋಗುವುದಿಲ್ಲ. ದೇಶ ಸಂಚಾರಕ್ಕೆ ಹೊರಡುವನು.ರಾವಣ ಪ್ರತಿ ನಾಯಕನಾದರೂ ’ ದುಷ್ಟನಲ್ಲ ಪರಾಂಗನಾವಿರತಿ ’ ವ್ರತನಿಷ್ಠ.  ಮೊದಲ ಬಾರಿಗೆ ಕನ್ನಡ ಕಾವ್ಯ ಕ್ಷೇತ್ರದಲ್ಲಿ ದರಂತ ನಾಯಕನಾಗಿ ಅವನ  ಚಿತ್ರಣ ಭವ್ಯವಾಗಿ ಮೂಡಿಬಂದಿದೆ. ಭಾರತದಲ್ಲಿ ಕಾವ್ಯಗಳು ಬಹುತೇಕ ನಾಯಕ ಪ್ರಧಾನ. ಆದರೆ ಇಲ್ಲಿ ರಾವಣ ತನ್ನ ಎಲ್ಲ ಸಾಧನೆಯ ಗುಣಗಳ ಹೊರತಾಗಿಯೂ ವಿಧಿಯ  ಕೈಗೊಂಬೆಯಾಗಿ ದುರಂತ ನಾಯಕನಾಗುವನು. ಓದುಗರ ಕರುಣೆಗೆ ಪಾತ್ರನಾಗುವನು.ಈ ರೀತಿಯ ಪಾತ್ರ ಚಿತ್ರಣ ಗ್ರೀಕ್‌  ದುರಂತ ನಾಟಕಗಳಲ್ಲಿ ಸಾಮಾನ್ಯವಾದರೂ ಕನ್ನಡದಲ್ಲಿ ಅತಿವಿರಳ . ಇದರ ಪ್ರಭಾವ ಆಧುನಿಕ ಕವಿಗಳ ಮೇಲೆ ಮೂಡಿರುವದನ್ನು ಗುರುತಿಸಬಹುದು. ಚಂಪೂವಿನಲ್ಲಿರುವ ಈ ಕಾವ್ಯವನ್ನು ಗಧ್ಯ ರೂಪದಲ್ಲಿ ತಂದಿರುವುದರಿಂದ  ಸರಳವಾಗಿ ಓದಿಸಿಕೊಂಡು ಹೋಗುವುದು.ಇದರಿಂದ ಪ್ರಾಚೀನ ಕಾವ್ಯದ ಪರಿಚಯ ಸುಲಭ ವಾಗುವುದು..
ಧರ್ಮಾಮೃತ- ಹನ್ನೆರಡನೆಯ ಶತಮಾನದ ಕವಿ ನಯಸೇನ.. ಹೆಸರೇ ಸೂಚಿಸುವಂತೆ ಜೈನ ಧರ್ಮದ ಹಿರಿಮೆಯನ್ನು ಸಾರುವುದು ಅವನ ಗುರಿ. ಆದರೆ ಅದಕ್ಕೆ ಅವನು ಆರಿಸಿಕೊಂಡ ವಿಧಾನ ಜೈನ ತತ್ವಗಳನ್ನು ಬೇರೆ ಬೇರೆ. ಹದಿನಾಲ್ಕು ಕಥಗಳ ಮೂಲಕ ವಿಶದ ಪಡಿಸುವುದು..ಅದೂ ಪಂಚತಂತ್ರದ ಮಾದರಿಯಲ್ಲಿ.
ಶೈಲಿ  ಗದ್ಯಪದ್ಯ ಮಿಶ್ರಿತ ಚಂಪೂ ಆದರೂ ಸಂಸ್ಕೃತ ಅತಿಯಾಗಿಲ್ಲ. ಗದ್ಯಕ್ಕೆ ಆದ್ಯತೆ, ಕನ್ನಡಕ್ಕೆ ಪ್ರಥಮ ಸ್ಥಾನ. ಆಡುನುಡಿಯ ಸೊಬಗನ್ನು ಮೈ ಗುಡಿಸಿಕೊಂಡಿದೆ. ಕವಿ ಉಪಮಾಲೋಲ.  ಹೀಗಾಗಿ ತಿಳಿಯಾದ ಶೈಲಿಯಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವಷ್ಟು ಸರಳ ಭಾಷೆ.
ಸಂಸ್ಕೃತ ಬೆರಸುವುದರ ಕಡುವಿರೋಧಿ. ಕನ್ನಡಕ್ಕೆ ಆದ್ಯತೆ ಇರಬೇಕೆಂಬುದು ಅವನ ಸ್ಪಷ್ಟ ನಿಲುವು.. ಈ ಎಲ್ಲ ಕಾರಣಗಳಿಂದ ನಯಸೇನನ ಕೃತಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದೆ. ಅದನ್ನು ಪೂರ್ಣವಾಗಿ ಗದ್ಯದಲ್ಲಿ ರೂಪಾಂತರಿಸಿರುವುದರಿಂದ ಇಂದಿನ ಓದುಗರಿಗೆ ಅನುಕೂಲ.ಹಳೆಗನ್ನಡದ ಮೂರು ಕೃತಿಗಳು ಹೊಸಗನ್ನಡದ ಓದುಗರಿಗೆ  ಅಭಿರುಚಿ ಮಾಡುವಂತೆ ರೂಪಾಂತಿಸಿರುವ  ಲೇಖಕರ ಪ್ರಯತ್ನ ಅಬಿನಂದನೀಯ. 


  ” ಪಂಪನ ನುಡಿ ಗಣಿ’  ಒಂದು ಅಪೂರ್ವ . ಶಬ್ದಕೋಶ.  ಪಂಪನ  ಎರಡೂ ಕಾವ್ಯಗಳಲ್ಲಿ  ಪ್ರಯೋಗವಾಗಿರುವ ಪದಗಳ ಸಂಗ್ರಹ.  ಪಂಪನ ಕಾವ್ಯದ ಲ್ಲಿ ಹಾಸು ಹೊಕ್ಕಾಗಿರುವ  ದೇಶಿ ಮತ್ತು ಮಾರ್ಗ ಪದಗಳ ಅರ್ಥವನ್ನು ಪ್ರಯೋಗದ ಮೂಲಕ ಪರಿಚಯಿಸುವ ಪರಿ ಅನನ್ಯ.  ಅಲ್ಲಿಯೇ ಪದದ ವ್ಯಾಕರಣ ಸ್ವರೂಪವನ್ನೂನೀಡಲಾಗಿದೆ.ಅಕಾರಾದಿಯಾಗಿ ಹ ಕಾರದ ವರೆಗ ಇರುವ ಪದಗಳ ವಿವಧ ರೂಪಗಳನ್ನು ಸುಮಾರು ೬೦೦ ಪುಟಗಳಲ್ಲಿಅಳವಡಿಸಿಲಾಗಿದೆ.ಇದು ವಾಣಿಜ್ಯ ಉದ್ದೇಶದಿಂದ ಮಾಡಿದ ಪ್ರಕಟನೆಯಲ್ಲ. ಸಾಹಿತ್ಯ ಪ್ರೀತಿಯ ಫಲ. ಈ ಧೈರ್ಯ ಮಾಡಿರುವವರು ಸದಭಿರುಚಿಯ ಕೃತಿಗಳ ಹೊರತರುವಲ್ಲಿ ಹೆಸರಾಗಿರುವ ಕಾಮಧೇನು ಪುಸ್ತಕ ಪ್ರಕಾಶನದವರು.ಲಘು  ಸಾಹಿತ್ಯಕ್ಕೇ ಒಗ್ಗಿಕೊಂಡಿರುವವರನ್ನು ಆಕರ್ಷಿಸವಂತಿವೆ. ಪ್ರಾಚೀನ ಕೃತಿಗಳ ಸಾರ ಸೆರೆ ಹಿಡಿದಿರುವ ಮೂರು ಪುಸ್ತಕಗಳು ಸಂಗ್ರಹ ಯೋಗ್ಯ. ಮತ್ತು ಪರಾಮರ್ಶನಕ್ಕೆ ಕೈಗನ್ನಡಿಯಾಗಿದೆ ಶಬ್ದ ಕೋಶ .
ಪುಸ್ತಕ ಪ್ರಪಂಚಕ್ಕೆ ಒಂದು ಉತ್ತಮ ಕೊಡುಗೆ.. ಈ ಪುಸ್ತಕಗಳ ಇನ್ನೊಂದು ಹೆಗ್ಗಳಿಕೆ ಎಂದರೆ  ಉತ್ತಮ ಮುದ್ರಣ ಮತ್ತು ವಿನ್ಯಾಸ.   ಆಕರ್ಷಕ ಮುಖಪುಟ,    ಗಂಜೀಫಾ ರಘುಪತಿ ಭಟ್ಟರ ಚಿತ್ರಗಳು  ಕಣ್ಣುಸೆಳೆಯುವಂತಿವೆ. ನೋಡಿದವರು ಕೈಗೆತ್ತಿಕೊಳ್ಳುವಷ್ಟು ಸುಂದರವಾಗಿ ಮೂಡಿ ಬಂದಿವೆ.






Sunday, January 19, 2014

ಶುಭಾಶಯ





ಹಸ್ತ ಪ್ರತಿ ಸಾಹಿತ್ಯ ಮತ್ತು ಇತಿಹಾಸದ ಮೂಲ ಆಕರ 
ಅವನ್ನ್ನು ಉಳಿಸಿ - ಜ್ಞಾನ ಬಳಸಿ


ಶೃಂಗೇರಿ ಶಾಸನಯುಕ್ತ ದೇವಾಲಯಗಳು

±ÀÈAUÉÃj «zÁågÀtå¥ÀÅgÀ ±Á¸À£ÀUÀ¼À°è zÁR°¹zÀ zÉêÁ®AiÀÄUÀ¼À PÀÄjvÀÄ CzsÀåAiÀÄ£À
f.J¸ï. gÁªÀÄZÀAzÀæ
±ÀÈAUÉÃj ªÀÄoÀzÀ zÁR¯ÉUÀ½UÉ C£ÀĸÁgÀªÁV F ¥Àj¸ÀgÀzÀ°è 150PÀÆÌ ºÉZÀÄÑ zÉêÁ®AiÀÄUÀ¼À£ÀÄß PÁt§ºÀÄzÀÄ. DzÀgÉ EªÉ®èªÀ£ÀÆß ±Á¸À£ÀUÀ¼À°è zÁR°¹zÀ ºÁUÉ PÁtĪÀÅ¢®è.
ZÁjwæPÀªÁV F ¥Àj¸ÀgÀzÀ ±Á¸À£ÀUÀ¼À°è zÁR°¹zÀ zÉêÁ®AiÀÄUÀ¼À£ÀÄß ¸ÀÆÜ®ªÁV PɼÀPÀAqÀAvÉ «ªÀj¸À§ºÀÄzÀÄ.
1.    Qæ¸ÀÛ±ÀPÀ 6-7£Éà ±ÀvÀªÀiÁ£ÀzÀ »A¢£À zÉêÁ®AiÀÄUÀ¼ÀÄ.
2.    9-10£Éà ±ÀvÀªÀiÁ£ÀPÉÌ ¸ÉÃjzÀ zÉêÁ®AiÀÄUÀ¼ÀÄ.
3.    Qæ.±À. 11-12£Éà ±ÀvÀªÀiÁ£ÀPÉÌ ¸ÉÃjzÀ zÉêÁ®AiÀÄUÀ¼ÀÄ.
4.    Qæ.±À. 14-15£Éà ±ÀvÀªÀiÁ£ÀPÉÌ ¸ÉÃjzÀ zÉêÁ®AiÀÄUÀ¼ÀÄ
CAzÀgÉ F ¥ÀæzÉñÀzÀ°è Qæ.±À. 6-7£Éà ±ÀvÀªÀiÁ£À¢AzÀ ¥ÁægÀA¨sÀªÁV 16-17£Éà ±ÀvÀªÀiÁ£ÀzÀ ªÀgÉUÉ zÉêÁ®AiÀÄUÀ¼ÀÄ ¤ªÀiÁðtUÉÆAqÀªÀÅ. ¸ÀĪÀiÁgÀÄ 1200 ªÀµÀðUÀ¼À ¤ªÀiÁðt ¥ÀgÀA¥ÀgÉAiÀÄ£ÀÄß ¸ÀȶֹzÀªÀÅ.
EzÀĪÀgÉUÉ ±Á¸À£ÀUÀ¼À°è zÁR°¹zÀ zÉêÁ®AiÀÄUÀ¼À£ÀÄß JgÀqÀÄ jÃwAiÀÄ°è ªÀVÃðPÀj¸À§ºÀÄzÀÄ. »AzÀÆ ªÀÄvÀÄÛ eÉÊ£À. 6-7£Éà ±ÀvÀªÀiÁ£ÀPÉÌ ¸ÀjºÉÆAzÀĪÀ `QUÀÎzÀ `IĵÀå±ÀÈAUÀ zÉêÁ®AiÀÄ CvÀåAvÀ ¥ÀÅgÁvÀ£ÀªÁzÀzÀÄÝ. QUÀÎzÀ ¥ÁæaãÀvÉAiÀÄ£ÀÄß C°è zÉÆgÉvÀ ±Á¸À£ÀUÀ¼ÀÄ zÀÈrüPÀj¸ÀÄvÀÛªÉ. F zÉêÀgÀ£ÀÄß `Q¯ÁΣÀ zÉêÀ CxÀªÁ `Q¯ÁΣÉñÀégÀ JAzÀÄ ±Á¸À£ÀUÀ¼À°è ¸ÀA¨sÉÆâü¸ÀÄvÁÛgÉ. EzÀÄ °AUÀgÀÆ¥ÀzÀ°è PÁtÄvÀÛzÉ. F zÉêÀgÀ vÀ¯ÉAiÀÄ JqÀ¨sÁUÀzÀ°ègÀĪÀ PÉÆA§Ä ±ÁAvÀ¼À£ÀÄß CAzÀgÉ IĵÀå±ÀÈAUÀ£À ºÉAqÀwAiÀÄ£ÀÄß ¥Àæw¤¢ü¸ÀÄvÀÛzÉ JA§ÄzÀÄ LwºÀå. F zÉêÁ®AiÀÄzÀ £ÀªÀgÀAUÀ ZÁ®ÄPÀå ±ÉÊ°AiÀÄ£ÀÄß ºÉÆîÄvÀÛzÉ. E°ègÀĪÀ PÀA§ªÉÇAzÀgÀ ªÉÄÃ¯É IĵÀå±ÀÈAUÀ£À£ÀÄß gÉÆêÀÄ¥ÁzÀ£À D¸ÁÜ£ÀPÉÌ PÀgÉzÉÆAiÀÄÄåªÀ zÀȱÀåªÉÇA¢zÉ. C¼ÀÆ¥ÀgÁd avÀæªÀªÀÄð (UÀÄt±ÉÃRgÀ£À ªÀÄUÀ)£ÀÄ ºÀÄAZÀ¢AzÀ D¼ÀÄwÛzÀÝ ºÁUÉ PÁtÄvÀÛzÉ. ªÀÄÄAzÉ `¥ÀÈyéªÀ®è¨sÀ£ÉA§ E£ÉÆߧâ (1050 Jr) ºÀÄAZÀ¢AzÀ D¼ÀÄvÁÛ F ¨sÁUÀPÉÌ gÁd£ÁV E¢ÝgÀ¨ÉÃPÉA§ HºÉ ªÀiÁqÀÄvÁÛgÉ. FUÀ®Æ IĵÀå±ÀÈAUÀ zÉêÀgÀ£ÀÄß ±ÀæzÁÞ¨sÀQÛ¬ÄAzÀ ¥ÀÇf¸ÀĪÀÅzÀ£ÀÄß £ÁªÀÅ £ÉÆÃqÀÄvÉÛêÉ. EzÉÆAzÀÄ DUÀªÀÄ ¹zÁÞAvÀ zÉêÁ®AiÀÄ.
d£ÁzÀð£À zÉêÁ®AiÀÄ : F zÉêÁ®AiÀĪÀÅ ²æà ªÀÄoÀzÀ DªÀgÀtzÀ°èzÉ. ºÁUÀÆ ZÁ®ÄPÀå ±ÉÊ°AiÀÄ°è PÀlÖ®ànÖzÉ. F zÉêÁ®AiÀĪÀÅ Qæ.±À. 9-10£Éà ±ÀvÀªÀiÁ£ÀPÉÌ ¸ÉÃj¢ÝgÀ¨ÉÃPÀÄ. ¸ÀA¸ÁÜ£ÀzÀ ºÀvÀÛ£Éà AiÀÄwUÀ¼ÁzÀ dUÀ£ÁßxÁZÁAiÀÄðgÀÄ PÀnÖ¹zÀgÉA§ SÁåw EzÉ.
Qæ.±À. 1386gÀ vÁªÀÄæ±Á¸À£ÀªÀÅ «dAiÀÄ£ÀUÀgÀzÀ JgÀqÀ£Éà ºÀjºÀgÀ ªÀĺÁgÁdgÀÄ F zÉêÁ®AiÀÄPÉÌ GA§½AiÀÄ£ÀÄß PÉÆnÖgÀĪÀ §UÉÎ zÁR¯ÉUÀ½ªÉ. ¥ÁæAiÀıÀB F ¥Àj¸ÀgÀzÀ°ègÀĪÀ KPÉÊPÀ d£ÁzÀð£À zÉêÁ®AiÀÄ EzÁVzÉ.
ºÀ¼Éà ±ÀÈAUÉÃj zÉêÁ®AiÀÄ: E°è «zÁå±ÀAPÀgÀ zÉêÁ®AiÀĪÉÇA¢zÉ. EzÀ£ÀÄß ZÀvÀĪÀÄÄðR «zÉå±ÀégÀ JAzÀÄ PÀgÉAiÀÄÄvÁÛgÉ. EzÀPÉÌ 4 ªÀÄÄRUÀ½ªÉ. EzÉÆAzÀÄ KPÀ²¯ÁªÀÄÆwð. F zÉêÁ®AiÀÄPÉÌ ±Á¸À£ÀUÀ¼À°è G¯ÉèÃR«zÉ. F zÉêÁ®AiÀĪÀÅ JvÀÛgÀzÀ°ègÀĪÀ PÁgÀt §ºÀ¼À zÀÆgÀ¢AzÀ®Æ PÁtÄvÀÛzÉ. ¸ÀĪÀiÁgÀÄ Qæ.±À.1338gÀ°è ¸ÁÜ¥À£ÉAiÀiÁVgÀ¨ÉÃPÀÄ. F zÉêÁ®AiÀÄzÀ UÀ¨sÀðUÀÄrUÉ ªÀÄÆgÀÄ PÀqɬÄAzÀ QlQUÀ½ªÉ. EzÀgÀ ªÀÄÆ®PÀ §æºÀä, «µÀÄÚ, ªÀĺÉñÀégÀgÀ zÀ±Àð£ÀªÁUÀÄvÀÛzÉ.
¥À²ÑªÀĪÁ»¤AiÀÄ UÉÆæ£ÁxÀ zÉêÁ®AiÀÄ: F zÉêÁ®AiÀĪÀÅ Qæ.±À. 1386PÀÆÌ ªÀÄÄAZÉ E¢ÝgÀ§ºÀÄzÉAzÀÄ H»¸À¯ÁVzÉ. F zÉêÁ®AiÀÄzÀ°è zÉÆgÉvÀ ±Á¸À£ÀUÀ¼ÉgÀqÀÄ «zÁågÀtågÀ PÀÄjvÀÄ ªÀiÁ»w ¤ÃqÀÄvÀÛªÉ. EwÛÃZÉUÀµÉÖ F zÉêÁ®AiÀĪÀÅ fÃuÉÆÃðzÁÞgÀªÁVzÉ.
eÉÊ£À zÉêÁ®AiÀÄUÀ¼ÀÄ: ±ÀÈAUÉÃj ¥ÀlÖtzÀ ªÀÄzsÀåzÀ°ègÀĪÀ eÉÊ£À zÉêÁ®AiÀÄUÀ¼ÀÄ ¸ÁPÀµÀÄÖ ¥Àæ¹¢ÞAiÀÄ£ÀÄß ¥ÀqÉ¢ªÉ. E°è£À ±Á¸À£ÀªÀÅ Qæ.±À.1151PÉÌ ¸ÀjºÉÆAzÀÄvÀÛzÉ. E°è ªÀÄÆgÀÄ eÉÊ£À «UÀæºÀUÀ½ªÉ. EzÀgÀ°è CvÀåAvÀ ¥ÁæaãÀªÁzÀzÀÄÝ ¥Á±Àéð£ÁxÀ £ÀAvÀgÀ C£ÀAvÀ£ÁxÀ ªÀÄvÀÄÛ ZÀAzÀæ£ÁxÀ ¥Á±Àéð£ÁxÀ£À «UÀæºÀªÀ£ÀÄß ªÀiÁj±ÉnÖ ªÀÄvÀÄÛ ºÉªÀiÁäj±ÉnÖ JA§ ªÀåQÛUÀ¼ÀÄ ¸Áܦ¹zÀgÀÄ. ºÁUÉ C£ÀAvÀ£ÁxÀ ªÀÄvÀÄÛ ZÀAzÀæ£ÁxÀ£À «UÀæºÀUÀ¼À£ÀÄß zÉêÀtÚ±ÉnÖ ªÀÄvÀÄÛ ¨ÉƪÀiÁägÀ±ÉnÖ JA§ÄªÀgÀÄ Qæ.±À.1583gÀ°è ¸Áܦ¹zÀgÉAzÀÄ ±Á¸À£ÀªÉÇAzÀÄ w½¸ÀÄvÀÛzÉ. F §¸À¢AiÀÄÄ ºÀ®ªÁgÀÄ ¨Áj fÃuÉÆÃðzÁÞgÀPÉÌ M¼ÀUÁVgÀ§ºÀÄzÉAzÀÄ ºÉüÀ¯ÁVzÉ.
±ÀÈAUÉÃj «zÁå±ÀAPÀgÀ zÉêÁ®AiÀÄ: ºÉÆAiÀÄì¼À «dAiÀÄ£ÀUÀgÀ ±ÉÊ°AiÀÄ F zÉêÁ®AiÀĪÀÅ ±ÀÈAUÉÃjAiÀÄ MAzÀÄ C¥ÀǪÀð PÀ¯Á¸ÀA¥ÀvÀÄÛ. ¥ÁæAiÀıÀB 1338gÀ°è ¥ÁægÀA©ü¹ Qæ.±À.1356-57 ªÀÄÄPÁÛAiÀÄUÉƽ¹zÀgÀÄ.
ªÀÄ®ºÁ¤PÉñÀégÀ zÉêÁ®AiÀÄ: EzÀÄ ±ÀÈAUÉÃj ¥ÉÃmÉAiÀÄ ªÀÄzsÀåzÀ°èzÉ. ºÀ®ªÁgÀÄ ±Á¸À£ÀUÀ¼ÀÄ F zÉêÁ®AiÀÄzÀ PÀÄjvÀÄ G¯ÉèÃT¸ÀÄvÀÛªÉ. E°ègÀĪÀ °AUÀgÀƦ ªÀÄ°èPÁdÄð£À zÉêÀgÀ£ÀÄß `«¨sÁAqÀPÀ °AUÀªÉAzÀÄ ¸ÀA¨ÉÆâü¸ÀÄvÁÛgÉ. ªÁ¸ÀÄÛ²®àªÀ£ÀÄß UÀªÀĤ¹zÁUÀ EzÀÄ «dAiÀÄ£ÀUÀgÀ¥ÀǪÀð PÁ®zÉÝAzÀÄ w½AiÀÄÄvÀÛzÉ. ªÀÄ®ºÁ¤PÉñÀégÀ JAzÀgÉ PÀ®ä±ÀªÀ£ÀÄß ºÉÆÃUÀ¯Ár¸ÀĪÀªÀ£ÀÄ JA§ CxÀð«zÉ. F zÉêÁ®AiÀĪÀÅ 1685gÀ°è PɼÀ¢AiÀÄ gÉêÀtÚ£ÁAiÀÄPÀ£À ªÀÄUÀ¼ÁzÀ ¹ÃvÀªÀiÁäfAiÀÄÄ fÃuÉÆÃðzÁÞgÀ ªÀiÁrzÀ PÀÄjvÀÄ zÁR¯ÉUÀ½ªÉ.
±ÁgÀzÁ zÉêÁ®AiÀÄ: ±ÁgÀzÁ zÉêÁ®AiÀĪÀÅ ±ÀAPÀgÁZÁAiÀÄðjAzÀ ¸Áܦ¸À®àlÄÖ «zÁågÀtågÀ PÁ®PÉÌ ¥Àæ¹¢Þ ¥ÀqɬÄvÀÄ. FVgÀĪÀ zÉêÁ®AiÀĪÀÅ zÁæ«qÀ±ÉÊ°AiÀÄ°èzÀÄÝ ±Á¸À£ÀUÀ¼ÀÄ F zÉêÁ®AiÀĪÀ£ÀÄß PÀÄjvÀÄ G¯ÉèÃT¸ÀÄvÀÛªÉ.
ºÉÆ£Éß zÉêÀ¸ÁÜ£À: ªÀÄ°èPÁdÄð£À zÉêÁ®AiÀÄzÀ ¥ÀǪÀðPÉÌ F zÉêÁ®AiÀÄ«zÉ. Qæ.±À.1612gÀ°è ºÉÆ£ÀßtÚ ±ÉnÖ JA§ ªÀåQÛ F zÉêÁ®AiÀĪÀ£ÀÄß ¸Áܦ¹zÀ£ÉAzÀÄ ±Á¸À£ÀªÉÇAzÀÄ w½¸ÀÄvÀÛzÉ. E°ègÀĪÀÅzÉà «±ÉéñÀégÀ°AUÀ, ¨sÉÊgÀªÀ ªÀÄvÀÄÛ «ÃgÀ¨sÀzÀæ G¥ÀzÉêÀvÉUÀ¼ÁV E°è ¥ÀÇf¸À®àqÀÄvÀÛªÉ.
¤Ã®PÀAoÀ zÉêÀ¸ÁÜ£À: CzÉà gÀ¸ÉÛAiÀÄ°è ªÀÄÄAzÀĪÀjzÀgÉ ¹UÀĪÀÅzÉà ¤Ã®PÀAoÀ zÉêÁ®AiÀÄ. F zÉêÁ®AiÀĪÀ£ÀÄß CªÀzsÁ¤ gÁdUÉÆÃ¥Á®¨sÀlÖgÀÄ 1695gÀ°è PÀnÖ¹zÀ£ÉAzÀÄ ±Á¸À£ÀªÉÇAzÀÄ w½¸ÀÄvÀÛzÉ.
«zÁågÀtå¥ÀÅgÀzÀ «£ÁAiÀÄPÀ zÉêÀ¸ÁÜ£À: 1547gÀ ±Á¸À£ÀªÉÇAzÀÄ «zÁågÀtå¥ÀÅgÀzÀ°è £ÀgÀ¹AºÀ¨sÀlÖ£ÉA§ ªÀåQÛAiÉƧâ F zÉêÁ®AiÀĪÀ£ÀÄß ¸Áܦ¹zÀgÀ PÀÄjvÀÄ w½¸ÀÄvÀÛzÉ.
ºÀgÁªÀj ªÀÄ°èPÁdÄð£À: F zÉêÁ®AiÀĪÀÅ zÀÄUÁð zÉêÀ¸ÁÜ£ÀzÀ°èzÉ. ±Á¸À£ÀUÀ¼ÀÄ F zÉêÁ®AiÀÄzÀ PÀÄjvÀÄ w½¸ÀÄvÀÛzÉ.
D£ÉUÀÄAzÀ UÉÆÃ¥Á®PÀȵÀÚ zÉêÁ®AiÀÄ: 1659gÀ ±Á¸À£ÀªÉÇAzÀÄ ¸ÀaÑzÁ£ÀAzÀ ¨sÁgÀw ¸Áé«ÄUÀ¼ÀÄ 50 ²ªÀ½î ¨ÁæºÀätgÀ CUÀæºÁgÀªÀ£ÀÄß ¸Áܦ¹ UÉÆÃ¥Á®PÀȵÀÚ zÉêÁ®AiÀĪÀ£ÀÄß ¸Áܦ¹zÀgÀ PÀÄjvÀÄ ªÀiÁ»w ¤ÃqÀÄvÀÛzÉ.
vÀmÉÆÖÃr ªÀÄ°èPÁdÄð£À zÉêÁ®AiÀÄ: ±ÀÈAUÉÃj ¥ÉÃmɬÄAzÀ ¸ÀĪÀiÁgÀÄ 2 Q.«ÄÃ. zÀÆgÀ«gÀĪÀ (ªÀĹâ ºÀwÛgÀ) vÀmÉÆÖÃr ªÀÄ°èPÁdÄð£À zÉêÁ®AiÀÄ PÀÄjvÀÄ 1458-59gÀ ±Á¸À£ÀªÉÇAzÀÄ w½¸ÀÄvÀÛzÉ.
azïgÉÆ½î ¸ÉÆêÉÄñÀégÀ zÉêÁ®AiÀÄ: Qæ.±À. 1418PÉÌ ¸ÉÃgÀĪÀ ±Á¸À£ÀªÉÇAzÀÄ F zÉêÁ®AiÀÄzÀ PÀÄjvÀÄ G¯ÉèÃT¸ÀÄvÀÛzÉ.
£ÀgÀ¹AºÀ¥ÀÅgÀzÀ £ÀgÀ¹AºÀ zÉêÁ®AiÀÄ: «zÁågÀtå¥ÀÅgÀzÀ MAzÀÄ ¨sÁUÀªÉà F £ÀgÀ¹AºÀ¥ÀÅgÀ. ±ÀÈAUÉÃj ¦ÃoÁ¢ü¥ÀwUÀ¼ÁzÀ C©ü£ÀªÀ £ÀgÀ¹AºÀ¨sÁgÀw ¸Áé«ÄUÀ¼ÀÄ F zÉêÁ®AiÀĪÀ£ÀÄß ¸Áܦ¹zÀgÉAzÀÄ 1603gÀ vÁªÀÄæ±Á¸À£ÀªÉÇAzÀÄ w½¸ÀÄvÀÛzÉ.
gÀÄzÀæ¥ÁzÀzÀ gÁªÀÄ°AUÉñÀégÀ zÉêÀ¸ÁÜ£À: «zÁågÀtå¥ÀÅgÀPÉÌ ºÉÆA¢PÉÆAqÀAvÉ EgÀĪÀ F zÉêÁ®AiÀĪÀÅ ¦ÃoÀzÀ AiÀÄwUÀ¼ÁzÀ C©ü£ÀªÀ £ÀgÀ¹AºÀ¨sÁgÀw ¸Áé«ÄUÀ¼ÀÄ ¸Áܦ¹zÀ PÀÄjvÀÄ E°ègÀĪÀ §AqÉUÀ®Äè ±Á¸À£À w½¸ÀÄvÀÛzÉ. (1603)
«zÁågÀtå¥ÀÅgÀzÀ ¸ÀzÁ²ªÀ zÉêÁ®AiÀÄ: 1652gÀ vÁªÀÄæ±Á¸À£ÀªÉÇAzÀÄ PɼÀ¢AiÀÄ ²ªÀ¥Àà£ÁAiÀÄPÀ vÀ£Àß CdÓ ¸ÀzÁ²ªÀ£ÁAiÀÄPÀ£À ºÉ¸Àj£À°è PÀnÖ¹zÀ£ÉAzÀÄ w½¸ÀÄvÀÛzÉ. EzÀÄ ¸ÀA¥ÀÇtðªÁV ²¯É¬ÄAzÀ ¤«ÄðvÀªÁzÀÝjAzÀ EzÀ£ÀÄß PÀ®Äè zÉêÀ¸ÁÜ£ÀªÉAzÀÄ PÀgÉAiÀÄÄvÁÛgÉ.
vÀ¤PÉÆÃr£À ±ÀAPÀgÀ£ÁgÁAiÀÄt zÉêÁ®AiÀÄ: 1652gÀ ±Á¸À£ÀªÉÇAzÀÄ «zÁågÀtå¥ÀÅgÀ¢AzÀ ¸ÀĪÀiÁgÀÄ 1.5 Q.«ÄÃ. zÀÆgÀzÀ°ègÀĪÀ vÀ¤PÉÆÃr£À°è ²ªÀ¥Àà £ÁAiÀÄPÀ£À DzÉñÀzÀ ªÉÄÃgÉUÉ F zÉêÀ¸ÁÜ£À PÀlÖ®ànÖvÉAzÀÄ w½¸ÀÄvÀÛzÉ.
  ªÀÄÄRå #172, J-1, `CªÀÄÈvÀªÀ¶ðtÂ, 7£Éà PÁæ, «.JA. £ÀUÀgÀ, zÉÆqÀØtÚUÀÄqÉØ, GqÀĦ-576102.







Saturday, January 11, 2014

ಶೃಂಗೇರಿ ಶಾರಾದಾ ಪೀಠದ- ಒಂದು ಅಧ್ಯಯನ

ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನ ಒಂದು ಅಧ್ಯಯನ
 *ಕೆ.ಜಿ. ಪ್ರಶಾಂತ್   &  **, ಡಾ. ಮಹಾದೇವಿ
೨೦೦ ವರ್ಷಗಳಷ್ಟು ಪುರಾತನವಾದ ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳವಾದ ಶೃಂಗೇರಿ ಶಾರದಾ ಪೀಠವು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಪಡೆದಿದೆ.
ಕ್ರಿ.ಶ.೧೩೩೬ರಲ್ಲಿ ವಿಜಯನಗರವೆಂಬ ಮಹಾ ಸಾಮ್ರಾಜ್ಯದ ಉದಯವು ಶೃಂಗೇರಿ ಶಾರದಾ ಪೀಠ ಮತ್ತು ಕರ್ನಾಟಕದ ಇತಿಹಾಸದಲ್ಲಿ ಮಹತ್ವಪೂರ್ಣವಾದ ಸುವರ್ಣಾಧ್ಯಾಯವನ್ನು ತೆರೆಯಿತು. ಶೃಂಗೇರಿ ಜಗದ್ಗುರು ಪರಂಪರೆಯ ೧೦ನೇ ಗುರುಗಳಾಗಿದ್ದ ಶ್ರೀ ವಿದ್ಯಾತೀರ್ಥರು ಅವರ ಶಿಷ್ಯರಾದ ಶ್ರೀ ಭಾರತೀ ತೀರ್ಥರು ಮತ್ತು ವಿದ್ಯಾರಣ್ಯರು ವಿಜಯನಗರದ ಸಂಸ್ಥಾಪಕ ದೊರೆಗಳಾದ ಹರಿಹರ ಬುಕ್ಕರಾಯರಿಗೆ ನೀಡಿದ ಮಾರ್ಗದರ್ಶನ ಮತ್ತು ಅಂತಃಸ್ಫೂರ್ತಿಯ ಶೃಂಗೇರಿ ಶಾರದಾಪೀಠಕ್ಕೆ ರಾಜಾಶ್ರಯ ದೊರಕುವಂತೆ ಮಾಡಿತು.
ವಿಜಯನಗರದ ಅರಸರ ನಂತರ ಕೆಳದಿ ಸಂಸ್ಥಾನದ ಅರಸರಲ್ಲಿ ಸದಾಶಿವನಾಯಕನಿಂದ ಹಿಡಿದು ಮುಮ್ಮಡಿ ಸೋಮಶೇಖರನ ಆಳ್ವಿಕೆಯವರೆಗೂ ಶೃಂಗೇರಿ ಶಾರದಾ ಪೀಠಕ್ಕೆ ರಾಜಾಶ್ರಯವನ್ನು ಕೊಟ್ಟು, ಮಠಕ್ಕೆ ಹೇರಳವಾಗಿ ಭೂಮಿ, ವಸ್ತು, ಒಡವೆಗಳನ್ನು ದಾನ ಮಾಡಿ ಜಗದ್ಗುರುಗಳೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡಿದ್ದರೆಂದು ‘ಗುರುವಂಶಕಾವ್ಯ, ‘ಕೆಳದಿ ನೃಪವಿಜಯಂ, ‘ಶಿವತತ್ತ್ವ ರತ್ನಾಕರ ಮುಂತಾದ ಗ್ರಂಥಗಳಿಂದ ತಿಳಿಯಬಹುದಾಗಿದೆ.
೧೮ ಮತ್ತು ೧೯ನೇ ಶತಮಾನದಲ್ಲಿ ಪೇಶ್ವೆ, ಘೋರ್ಪಡೆ, ಶಿಂಧೆ, ಭೋಸಲೆ ಮುಂತಾದ ಮರಾಠರು ಶೃಂಗೇರಿ ಜಗದ್ಗುರುಗಳೊಂದಿಗೆ ಇಟ್ಟುಕೊಂಡಿದ್ದ ನಿಕಟ ಸಂಬಂಧವನ್ನು ‘ಜಗದ್ಗುರು ಶೃಂಗೇರಿ ಶ್ರೀಮಠೀಯ ಪ್ರಾಕ್ತನ ಲೇಖನಮಾಲಾ ಸಂಗ್ರಹವು ದಾಖಲಿಸಿದೆ.
ಹೀಗೆ ವಿಜಯನಗರದ ದೊರೆಗಳು, ಕೆಳದಿ ಸಂಸ್ಥಾನದ ನಾಯಕರು, ಮರಾಠರು ಶೃಂಗೇರಿ ಶಾರದಾಪೀಠದ ಅಭ್ಯುದಯಕ್ಕೆ ಕಾರಣರಾದರೋ ಅದೇ ರೀತಿ ಮುಸ್ಲಿಂ ದೊರೆಗಳಾದ ಹೈದರಾಬಾದಿನ ನಿಜಾಮರು, ವಿಜಾಪುರದ ಆದಿಲ್‌ಶಾಹಿಗಳು, ಮೊಘಲ್ ಅಧಿಕಾರಿಗಳು ಹೈದರ್‌ಆಲಿ, ಟಿಪ್ಪುಸುಲ್ತಾನ್ ಮುಂತಾದವರು ಶೃಂಗೇರಿ ಮಠದ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಸಮಕಾಲೀನ ಜಗದ್ಗುರುಗಳನ್ನು ಗೌರವಿಸಿದ ವಿಷಯಕ್ಕೆ ಶ್ರೀಮಠದಲ್ಲಿನ ಪರ್ಷಿಯನ್, ಸಂಸ್ಕೃತ ಮತ್ತು ಕನ್ನಡ ಭಾಷೆಯ ಅನೇಕ ದಾಖಲೆಗಳು, ಪತ್ರಗಳು, ಕೆ.ಆರ್. ವೆಂಕಟರಾಮನ್‌ರವರ ‘ಶೃಂಗೇರಿ ಗುರುರಾಜ್ ಅಂಡ್ ಮುಸ್ಲಿಂ ರೂಲರ‍್ಸ್ ಮುಂತಾದ ಆಕರಗಳು ಬೆಳಕು ಚೆಲ್ಲುತ್ತದೆ.
ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನ: ವಿಜಯನಗರದ ಪತನಾನಂತರ ವಿಜಯನಗರದ ಪರಂಪರೆಯನ್ನು ಉತ್ತರಾಧಿಕಾರದ ರೂಪದಲ್ಲಿ ಮುನ್ನಡೆಸಿಕೊಂಡು ಬಂದ ಮೈಸೂರು ಒಡೆಯರು ಶೃಂಗೇರಿ ಮಠದೊಂದಿಗೆ ಬಹುಶಃ ಇನ್ನಾವ ರಾಜಮನೆತನಗಳೂ ಇರಿಸಿಕೊಂಡಿರದಷ್ಟು ಅನ್ಯೋನ್ಯವಾಗಿ ಇಟ್ಟುಕೊಂಡಿದ ಬಾಂಧವ್ಯಕ್ಕೆ ರಾಜ ಮಹಾರಾಜರ ಪತ್ರಗಳು, ಪಲ್ಲಕ್ಕಿ, ಸಿಂಹಾಸನ, ಆಭರಣಗಳು, ಪೂಜಾ ಸಾಮಗ್ರಿಗಳು, ಶೃಂಗೇರಿ ಶಾರದಾ ಪೀಠದಲ್ಲಿ ಮತ್ತು ಮೈಸೂರು ಅರಮನೆಯಲ್ಲಿ ಇಂದಿಗೂ ಆಚರಿಸಲ್ಪಡುತ್ತಿರುವ ಹಲವಾರು ಸಂಪ್ರದಾಯಗಳು ಪ್ರತ್ಯಕ್ಷ ಪ್ರಮಾಣಗಳಾಗಿದೆ.
ಕರ್ನಾಟಕ ರಾಜ್ಯ ಪತ್ರಾಗಾರ, ಮೈಸೂರು ಅರಮನೆ ಪತ್ರಾಗಾರ, ಮದ್ರಾಸ್ ಓರಿಯಂಟಲ್ ಲೈಬ್ರರಿ, ಶೃಂಗೇರಿ ಮಠದ ಪತ್ರಾಗಾರಗಳ ದಾಖಲೆಗಳು, ಕಡತಗಳು, ‘ಜಗದ್ಗುರು ಶೃಂಗೇರಿ ಶ್ರೀ ಮಠೀಯ ಪ್ರಾಕ್ತನ ಲೇಖನ ಮಾಲಾ ಸಂಗ್ರಹ, ‘ಆನ್ಯುವಲ್ ರಿಪೋರ್ಟ್ ಆಫ್ ದಿ ಮೈಸೂರು ಆರ್ಕಿಯಾಲಾಜಿಕಲ್ ಡಿಪಾರ್ಟ್‌ಮೆಂಟ್, ಕೆ.ಆರ್. ವೆಂಕಟರಾಮನ್‌ರವರ ‘The throne of transcedental wisdom’, ಪ್ರೊ. ಎ.ಕೆ. ಶಾಸ್ತ್ರಿಗಳವರ ‘ಶೃಂಗೇರಿ ಧರ್ಮ ಸಂಸ್ಥಾನ ಸಂಶೋಧನಾ ಪ್ರಬಂಧ ಮುಂತಾದ ಆಕರಗಳು ಶೃಂಗೇರಿ-ಮೈಸೂರು ಸಂಬಂಧಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ.
ಎಪಿಗ್ರಾಫಿಯಾ ಕರ್ನಾಟಿಕಾ (ಮೈಸೂರು ವಿಶ್ವವಿದ್ಯಾಲಯದ ೧೯೯೮ರ ಪ್ರಕಟಣೆ) ೧೧ನೇ ಸಂಪುಟದಲ್ಲಿ ಮೈಸೂರು ಮಹಾರಾಜರುಗಳು ಶೃಂಗೇರಿ ಮಠಕ್ಕೆ ದಾನ ಮಾಡಿದ ಪೂಜಾ ಸಾಮಗ್ರಿಗಳು, ಸಿಂಹಾಸನ, ಪಲ್ಲಕ್ಕಿ, ದೇವರ ವಿಗ್ರಹ ಮುಂತಾದ ಕೊಡುಗೆಗಳನ್ನು ಮತ್ತು ಅಲ್ಲಿನ ಶಾಸನಗಳನ್ನು ದಾಖಲಿಸಲಾಗಿದ್ದು, ಮೈಸೂರು ಮಹಾರಾಜರುಗಳು ಶೃಂಗೇರಿ ಮಠದ, ಅಲ್ಲಿನ ಗುರುಗಳ ವಿಚಾರದಲ್ಲಿ ಎಷ್ಟೊಂದು ಆಸಕ್ತಿ ವಹಿಸಿದ್ದರೆಂದು ತಿಳಿಯಲು ಸಹಕಾರಿಯಾಗಿದೆ.
ಮೈಸೂರಿನ ರಾಜ ವಂಶಸ್ಥರು ವಿಜಯನಗರದ ಶೈಲಿಯಲ್ಲಿ ರಾಜ ದರ್ಬಾರನ್ನು ಪರಂಪರಾನುಗತವಾಗಿ ಇಂದಿನವರೆಗೂ ಆಚರಿಸಿಕೊಂಡು ಬಂದಿರುತ್ತಾರೆ. ಮೈಸೂರಿನ ದರ್ಬಾರಿನ ಶೈಲಿಯಲ್ಲೇ ಶೃಂಗೇರಿಯ ಶರನ್ನವರಾತ್ರಿ ಉತ್ಸವದಲ್ಲಿ ಶೃಂಗೇರಿ ಜಗದ್ಗುರುಗಳವರು ಇಂದಿಗೂ ದರ್ಬಾರನ್ನು ಆಚರಿಸುತ್ತಾರೆ. ಹೀಗೆ ಶೃಂಗೇರಿ ಮತ್ತು ಮೈಸೂರು ಸಂಸ್ಥಾನದ ದರ್ಬಾರ್ ಆಚರಣೆಯು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಸಾರುತ್ತ ಶೃಂಗೇರಿ-ಮೈಸೂರಿನ ಚಾರಿತ್ರಿಕ ಸಂಬಂಧವನ್ನು ಬೆಸೆಯುತ್ತಿದೆ.
ಇಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಶಾರದಾಪೀಠ: ಮೈಸೂರು ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರು (೧೭೩೪-೬೬) ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದಭಾರತೀ (೧೭೦೫-೧೭೪೧) ಸ್ವಾಮಿಗಳು ಸಮಕಾಲೀನರಾಗಿದ್ದು ಇವರ ಕಾಲವು ಶೃಂಗೇರಿ ಮಠ ಮತ್ತು ಮೈಸೂರು ಸಂಸ್ಥಾನದ ನಿಕಟ ಸಂಬಂಧದ ಪ್ರಾರಂಭವಾಗಿ ಸುವರ್ಣಾಧ್ಯಾಯವನ್ನು ತೆರೆಯಿತು.
ಕ್ರಿ.ಶ.೧೭೬೦ರಲ್ಲಿ ಶ್ರೀ ಸಚ್ಚಿದಾನಂದಭಾರತೀ ಸ್ವಾಮಿಗಳ ಪಾದಾರ್ಪಣೆಯಿಂದ ರಾಜ್ಯಕ್ಕೆ ಅಗತ್ಯವಾದ ಮಳೆ ಬಂದು ಸರ್ವ ಸಮೃದ್ಧಿ ಹೊಂದುವುದೆಂದು ಮಹಾರಾಜ (೧೭೬೦ರ ತಾಮ್ರಶಾಸನ ಶೃಂಗೇರಿ)ರು ಗುರುಗಳನ್ನು ಮೈಸೂರಿಗೆ ಆಮಂತ್ರಿಸಿ ವೈಭವದ ಸ್ವಾಗತ ನೀಡಿ ಗುರುಕಾಣಿಕೆ ಸಮರ್ಪಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ. ಮಹಾರಾಜರು ಆ ಸಂದರ್ಭದಲ್ಲಿ ೧೨೦೦ ವರಹಗಳ ಬೆಳವಾಡಿ ಮತ್ತು ಅದಕ್ಕೆ ಸಂಬಂಧಿಸಿದ ಕೊಪ್ಪಲುಗಳನ್ನು ಗುರುಗಳಿಗೆ ದಾನವಾಗಿ ಕೊಟ್ಟರು. (ಎ.ಆರ್.ಎಂ.ಡಿ.-೧೯೨೩, ‘ಶೃಂಗೇರಿ ಧರ್ಮಸಂಸ್ಥಾನ)
ಇಮ್ಮಡಿ ಕೃಷ್ಣರಾಜ ಒಡೆಯರು ಶೃಂಗೇರಿ ಮಠಕ್ಕೆ ಆನೆಯೊಂದನ್ನು ದಾನ ಮಾಡಿದರು. ಗುರುಗಳಿಗೆ ಬೆಳ್ಳಿ ಕುಸುರಿಗಳಿಂದ ಅಲಂಕೃತವಾದ ವಸ್ತ್ರವನ್ನು ದಾನ ಮಾಡಿದುದಲ್ಲದೇ ಜಗದ್ಗುರುಗಳನ್ನು ‘ಅಲಂಕೃತ ಶೃಂಗಪುರದ ಸಿಂಹಾಸನದಲ್ಲಿ ಆಸೀನರಾದ ಯೋಗ ಸಾಮ್ರಾಜ್ಯದ ಅಧಿಪತಿ (ಖueಡಿ oಜಿ ಥಿogಚಿ ಇmಠಿiಡಿe) ಎಂದು ವರ್ಣಿಸಿದ್ದಾರೆ.
ಶೃಂಗೇರಿ ಮಠದಲ್ಲಿನ ಕ್ರಿ.ಶ.೧೭೩೭ರ ಕಾಲದ ತಾಮ್ರಶಾಸನವು ಮೈಸೂರಿನ ಇಮ್ಮಡಿ ಕೃಷ್ಣರಾಜ ಒಡೆಯರು ಮಠದಲ್ಲಿ ಜರುಗುವ ವ್ಯಾಸಪೂಜೆಗಾಗಿ ಮಾಡಿದ ಭೂದಾನವನ್ನು ತಿಳಿಸುತ್ತದೆ. ಶ್ರೀ ಸಚ್ಚಿದಾನಂದಭಾರತೀ ಸ್ವಾಮಿಗಳನ್ನು ಕುರಿತಾಗಿ ಬರೆಸಿದ ಈ ತಾಮ್ರಶಾಸನದಲ್ಲಿ ‘ಶ್ರೀ ಮದ್ರಾಜಾಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪ ಅಪ್ರತಿಮ ವೀರನರಪತಿ ಮಹಿಶೂರ ಇಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್‌ರವರ್ರು ಉಭಯ ಕಾವೇರಿ ಮಧ್ಯ ಶ್ರೀರಂಗ ಪಟ್ಟದಲ್ಲೂ ರತ್ನಸಿಂಹಾಸನಾರೂಢರಾಗಿ ಪೃಥ್ವಿ ಸಂಬ್ರಾಜ್ಯಂಗ್ವೆ ಉರತಿರಲಾಗಿ ಎಂದು ಉಲ್ಲೇಖಿಸಲ್ಪಟ್ಟಿದೆ.
ಶೃಂಗೇರಿ ಶಾರದಾಪೀಠ ಮತ್ತು ದಿವಾನ್ ಪೂರ್ಣಯ್ಯ: (ಕ್ರಿ.ಶ. ೧೭೯೯-೧೮೧೧ ಈ ಅವಧಿಯಲ್ಲಿ) ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ರಾಪ್ತರಾದುದರಿಂದ ಪೂರ್ಣಯ್ಯನವರು ರಾಜಪ್ರತಿನಿಧಿಯಾಗಿ ರಾಜ್ಯದ ಚುಕ್ಕಾಣಿಯನ್ನು ಹಿಡಿದರು. ಪೂರ್ಣಯ್ಯನವರು ದ್ವೈತ ಮತಾವಲಂಬಿಯಾದರೂ ಶೃಂಗೇರಿಯ ೩೦ನೇ ಜಗದ್ಗುರುಗಳಾದ ತೃತೀಯ ಸಚ್ಚಿದಾನಂದಭಾರತೀ ಸ್ವಾಮಿಗಳು ತಪೋಮಹಿಮೆ ಮತ್ತು ವಿದ್ವತ್ತನ್ನು ಕಣ್ಣಾರೆ ಕಂಡು ಶೃಂಗೇರಿಯ ಅದ್ವೈತ ಮಠಕ್ಕೆ ಗೌರವದಿಂದ ನಡೆದುಕೊಂಡರು.
‘ಮದುವೆ, ಮುಂಜಿ, ಶುಭ-ಶೋಭನಗಳಲ್ಲಿ ಅಗ್ರ ತಾಂಬೂಲವನ್ನು ಮುಂಚಿತವಾಗಿ ಶೃಂಗೇರಿ ಮಠಕ್ಕೂ ತರುವಾಯ ಶಿವಗಂಗೆ ಮಠಕ್ಕೂ ಕೊಡುವಂತೆ ಪೂರ್ಣಯ್ಯನವರು ಆಜ್ಞಾಪಿಸಿದ್ದನ್ನು ಅವರು ಬೆಂಗಳೂರು ಸುಬೇದಾರ ಮದ್ವರಾಯರಿಗೆ ಬರೆದ ಪತ್ರದಲ್ಲಿ (ಕ್ರಿ.ಶ.೧೮೦೭-೦೮) ಉಲ್ಲೇಖಿತವಾಗಿದೆ.
ಶೃಂಗೇರಿ ಮಠದಲ್ಲಿ ಸಂರಕ್ಷಿಸಲ್ಪಟ್ಟಿರುವ ದಿವಾನ್ ಪೂರ್ಣಯ್ಯನವರು ಗುರುಗಳಿಗೆ ಬರೆದ ಸುಮಾರು ೩೮ ಐತಿಹಾಸಿಕ ಪತ್ರಗಳು ಇವರೀರ‍್ವರ ಸಂಬಂಧಗಳ ಅಧ್ಯಯನಕ್ಕೆ ಉಪಕಾರಿಯಾಗಿದೆ Epigraphia Carnatica-11 volume. This record on a golden crown states that thsi jewelled crown was the gift of krishnaraja vodeya of mysore to the matha at sringeri)
 ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಶಾರದಾ ಪೀಠ: ಪೂರ್ಣಯ್ಯನವರ ರಾಜಪ್ರತಿನಿಧಿತ್ವ ಕೊನೆಗೊಂಡ ಮೇಲೆ ಕ್ರಿ.ಶ.೧೮೧೧ರಲ್ಲಿ ಮುಮ್ಮಡಿಕೃಷ್ಣ ರಾಜ ಒಡೆಯರು ರಾಜ್ಯದ ಅಧಿಕಾರ ವಹಿಸಿಕೊಂಡರು. ಅಧಿಕಾರದ ಚುಕ್ಕಾಣಿ ಹಿಡಿದ ಕೂಡಲೇ ತೃತೀಯ ಸಚ್ಚಿದಾನಂದಭಾರತೀ ಸ್ವಾಮಿಗಳನ್ನು ಅರಮನೆಗೆ ಆಮಂತ್ರಿಸಿ ಭವ್ಯಸ್ವಾಗತ ನೀಡಿದರು.
ಶೃಂಗೇರಿ ಜಗದ್ಗುರುಗಳಾದ ತೃತೀಯ ಸಚ್ಚಿದಾನಂದ ಭಾರತೀ, ದ್ವಿತೀಯ ಅಭಿನವ ಸಚ್ಚಿದಾನಂದ ಭಾರತೀ ಮತ್ತು ಅಷ್ಟಮ ನೃಸಿಂಹಭಾರತೀ ಸ್ವಾಮಿಗಳು ಮುಮ್ಮಡಿ ಕೃಷ್ಣರಾಜ ಒಡೆಯರ ಸಮಕಾಲೀನರಾಗಿದ್ದರು.
ದ್ವಿತೀಯ ಅಭಿನವ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪಟ್ಟಾಭಿಷೇಕಕ್ಕೆ ಗುರುಗಳಿಗೆ ಒಂದು ಸಾವಿರ ವರಹಗಳು, ಬೆಳ್ಳಿಯ ಪೀಠ ಮತ್ತು ಪಾದುಕೆಗಳನ್ನು ಸಮರ್ಪಿಸುವಂತೆ ಆಜ್ಞಾಪಿಸಿದ್ದು ಮಹಾರಾಜರು ನಗರ ಫೌಜುದಾರ ಸರ್ವೋತ್ತಮ ರಾಯನಿಗೆ ಬರೆದ ನಿರೂಪದಿಂದ ತಿಳಿದು ಬರುತ್ತದೆ.
ನೃಸಿಂಹಭಾರತೀ ಸ್ವಾಮಿಗಳು ೧೮೨೮ರಲ್ಲಿ ಮೈಸೂರಿಗೆ ಆಗಮಿಸಿದ್ದಾಗ ಶಾರದಾಂಬಾ ಮತ್ತು ಚಂದ್ರಮೌಳೇಶ್ವರ ಪೂಜೆ ಮತ್ತು ದೀಪೋತ್ಸವಗಳಿಗಾಗಿ ಮುಮ್ಮಡಿ ಕೃಷ್ಣರಾಜರು ಬೆಳವಾಡಿ, ಲಿಂಗವಳ್ಳಿ ಮತ್ತು ಶಿರಕರಡಿ ಗ್ರಾಮಗಳನ್ನು ಮಠಕ್ಕೆ ದಾನ ಮಾಡಿದ ವಿಷಯವು ಮಠದ ಕಡತದಲ್ಲಿ ದಾಖಲಾಗಿರುವುದನ್ನು ಒಂಖ-೧೯೧೬ ನೇ ಸಂಪುಟದಲ್ಲಿ ಕಾಣಬಹುದು.
ಮುಮ್ಮಡಿ ಕೃಷ್ಣರಾಜ ಒಡೆಯರು ಬೇರೆ ಬೇರೆ ಮಠಗಳು ಶೃಂಗೇರಿ ಪೀಠಕ್ಕೆ ಅಧೀನವಾಗಿರುವಂತೆ ಆಜ್ಞೆ ಮಾಡಿ ಪ್ರಾಚೀನವಾದ ಶೃಂಗೇರಿ ಮಠದ ಸರ್ವಶ್ರೇಷ್ಠತೆಯನ್ನು ಮಾನ್ಯ ಮಾಡಿದರು. ಶ್ರೀಮ್ಮಹಾರಾಜ ಮುಮ್ಮಡಿ ಕೃಷ್ಣರಾಜರು ಶೃಂಗೇರಿಯ ಅಷ್ಟಮ ನರಸಿಂಹಭಾರತೀ ಗುರುಗಳಿಗೆ ಬಹದಾಕಾರದ, ಸುಂದರವಾದ ಬಂಗಾರದ ಪಲ್ಲಕ್ಕಿ (ಸುವರ್ಣಾಂದೋಳಿಕ)ಯನ್ನು ಗುರುಗಳು ಉತ್ಸವದಲ್ಲಿ ಉಪಯೋಗಿಸಲೆಂದು ಗುರುಕಾಣಿಕೆಯಾಗಿ ಸಮರ್ಪಿಸಿದುದು ೧೮೫೪-ಜುಲೈ ೨೬ರಂದು ಪಲ್ಲಕ್ಕಿಯ ಒಳಭಾಗದಲ್ಲಿ ಬರೆಸಲ್ಪಟ್ಟ ಶಾಸನದಿಂದ ವೇದ್ಯವಾಗುತ್ತದೆ. (ಎಪಿಗ್ರಾಫಿಯಾ ಕರ್ನಾಟಿಕಾ-೧೧ನೇ ಸಂಪುಟ) ಈ ಪಲ್ಲಕ್ಕಿಯನ್ನು ಇಂದಿಗೂ ಶಾರದಾ ಶರನ್ನವರಾತ್ರಿ ಉತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ಶೃಂಗೇರಿ ಜಗದ್ಗುರುಗಳು ಅಲಂಕರಿಸುತ್ತಾರೆ.
ಸ್ವತಃ ಕವಿಗಳೂ, ಘನ ವಿದ್ವಾಂಸರು ಆಗಿದ್ದ ಮುಮ್ಮಡಿ ಕೃಷ್ಣರಾಜ ಪ್ರಭುಗಳು ತಾವು ರಚಿಸಿದ ಶ್ರೀ ನರಸಿಂಹಭಾರತೀ ಅಷ್ಟೋತ್ತರ ಶತನಾಮಾವಳಿಯಲ್ಲಿ ‘ಪ್ರತಿಜ್ಞಾರ್ಥ ಸಾಧಕಃ ಎಂಬ ಅನ್ವರ್ಥ ವಿಶೇಷಣವನ್ನು ಅಲಂಕಾರ ಪ್ರಾಯವಾಗಿ ಹೇಳಿರುವರು.
ಶೃಂಗೇರಿಯ ಇನ್ನೊಂದು ತಾಮ್ರಶಾಸನವು ‘ವಿದ್ಯಾ ನಗರ ಮಹಾರಾಜಧಾನಿ, ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂಬ ಶೃಂಗೇರಿ ಜಗದ್ಗುರುಗಳ ಬಿರುದಾವಳಿಗಳಿಂದ ಪ್ರಾರಂಭವಾಗಿದ್ದು ಅಭಿನವ ಸಚ್ಚಿದಾನಂದಭಾರತೀ ಗುರುಗಳಿಗೆ ಮುಮ್ಮಡಿ ಕೃಷ್ಣರಾಜ ಒಡೆಯರು ಬರೆಸಿದ ದಾನಶಾಸನವಾಗಿದೆ. ಇದರಲ್ಲಿ ‘ಮಹಿಶೂರ ಕಂಠೀರವ ನರಸಿಂಹರಾಜ ಒಡೆಯರೈಯ್ಯನವರ ಪೌತ್ರರಾದ, ಕೃಷ್ಣರಾಜ ಒಡೆಯರೈಯ್ಯನವರ ಪುತ್ರರಾದ ಕೃಷ್ಣರಾಜ ಒಡೆಯರೈಯ್ಯನವರು ಬರಿಶಿಕೊಟ್ಟ ಭೂದಾನದ ತಾಮ್ರಶಾಸನ ಎಂಬುದಾಗಿ ಬರೆಯಲಾಗಿದ್ದು, ಮುಮ್ಮಡಿ ಕೃಷ್ಣರಾಜದ ಸಹಿಯಿಂದ ಕೊನೆಗೊಳ್ಳುತ್ತದೆ.
ಇದೇ ರೀತಿ ಶೃಂಗೇರಿ ಮಠಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ ಮಹಾರಾಣಿ ಚಂದ್ರವಿಲಾಸ ಸನ್ನಿಧಾನರವರು ಚಿನ್ನದ ಪಾನ್‌ದಾನ್‌ನ್ನು ಅರ್ಪಿಸಿರುತ್ತಾರೆ.
ಮಹಾರಾಣಿ ಸುಮುಖ ತೊಟ್ಟಿ ಸನ್ನಿಧಾನವು ಬೆಲೆ ಬಾಳುವ ಕೆಂಪುಗಳನ್ನೊಳಗೊಂಡ ಬಂಗಾರದ ಬಟ್ಟಲನ್ನೂ, ಮದನವಿಲಾಸ ಸನ್ನಿಧಾನವು ವಜ್ರದ ಹರಳುಗಳಿಂದ ಅಲಂಕೃತವಾದ ಬಂಗಾರದ ಬಟ್ಟಲನ್ನು ಕೃಷ್ಣವಿಲಾಸ ಸನ್ನಿಧಾನವು ಬೆಳ್ಳಿಯ ಬಟ್ಟಲನ್ನೂ ಜಗದ್ಗುರುಗಳವರಿಗೆ ಅರ್ಪಿಸಿರುತ್ತಾರೆಂದು ಎಫಿಗ್ರಾಪಿಯಾ ಕರ್ನಾಟಿಕಾ ೧೧ನೇ ಸಂಪುಟದಲ್ಲಿ ದಾಖಲಾಗಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಶೃಂಗೇರಿಗೆ ಗುರು ಕಾಣಿಕೆಯಾಗಿ ಅರ್ಪಿಸಲ್ಪಟ್ಟ Epigraphia Carnatica-11 volume. This record on a golden crown states that thsi jewelled crown was the gift of krishnaraja vodeya of mysore to the matha at sringeri)
 ಮೈಸೂರು ಸಂಸ್ಥಾನದ ರಾಜಲಾಂಛನ ಗಂಡಭೇರುಂಡ ಮತ್ತು ಶೃಂಗೇರಿ ಮಠದ ಲಾಂಛನವೂ ಜ್ಞಾನದ ಪ್ರತೀಕವೂ ಆದ ಹಂಸಪಕ್ಷಿಯ ಚಿನ್ಹೆಯನ್ನೊಳಗೊಂಡಿರುವ ಸುಂದರವಾದ ವಜ್ರಖಚಿತ ಸ್ವರ್ಣಕಿರೀಟವು ಶೃಂಗೇರಿಯ ದಸರಾ ದರ್ಬಾರ್ ಸಮಯದಲ್ಲಿ ಅಂದಿನಿಂದ ಇಂದಿನವರೆಗೂ ಇಲ್ಲಿನ ಗುರುಗಳಿಂದ ಧರಿಸಲ್ಪಡುತ್ತಿದ್ದು ಇತಿಹಾಸವನ್ನು ಸಾರುತ್ತಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸ ಕುಣಿಗಲ್ ರಾಮಾಶಾಸ್ತ್ರಿಗಳ ಪುತ್ರ ಶಿವಸ್ವಾಮಿ ಶೃಂಗೇರಿಯ ೩೩ನೇ ಜಗದ್ಗುರುಗಳಾದ ಘಟನೆ ಶೃಂಗೇರಿ ಮಠ ಮತ್ತು ಮೈಸೂರು ಸಂಸ್ಥಾನದ ನಿಕಟಪೂರ್ವ ಬಾಂಧವ್ಯ, ಅನ್ಯೋನ್ಯತೆಗೆ ಸಾಕ್ಷೀಭೂತವಾಗಿ ಪರಿಣಮಿಸಿತು. (ಲ.ನ. ಶಾಸ್ತ್ರಿ-‘ಅಭಿನವ ಶಂಕರಾಲಯ)
ಕುಣಿಗಲ್ ರಾಮಾಶಾಸ್ತ್ರಿಗಳು ತಮ್ಮ ವಿದ್ವತ್ಪೂರ್ಣ ಪಾಂಡಿತ್ಯದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ ರಾಜಸಭೆಯಲ್ಲಿ ಅಗ್ರಗಣ್ಯರೆನಿಸಿದ್ದರು. ರಾಮಾಶಾಸ್ತ್ರಿಗಳ ಪುತ್ರ ಶಿವಸ್ವಾಮಿಯ ಸನ್ಯಾಸ ಸ್ವೀಕಾರದ ಹಿಂದಿನ ದಿನ ಮಹಾರಾಜರು ಶೃಂಗೇರಿ ಪೀಠವನ್ನುಲಂಕರಿಸಲಿರುವ ಈ ಪುಟ್ಟ ಬಾಲಕನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ‘ಇಂದು ಈ ಬಾಲಕ ನಮ್ಮ ತೊಡೆಯ ಮೇಲೆ ಪವಡಿಸಿದ್ದಾನೆ. ನಾವೆಲ್ಲರೂ ಅವರಿಗೆ ನಮಸ್ಕರಿಸಬೇಕಾಗುತ್ತದೆ ಎಂದು ಉದ್ಗರಿಸಿದ್ದರು. ೧೮೬೬ರಲ್ಲಿ ಮುಮ್ಮಡಿ ಕೃಷ್ಣರಾಜರ ಉಪಸ್ಥಿತಿಯಲ್ಲಿ ಮೈಸೂರು ಅರಮನೆಯ ಲಕ್ಷ್ಮೀರಮಣಸ್ವಾಮಿ ದೇವಾಲಯದಲ್ಲಿ ವೈಭವೋಪೀತವಾಗಿ ಗುರುಗಳು ಸನ್ಯಾಸಾಶ್ರಮ ಸ್ವೀಕಾರ ನೆರವೇರಿತು.
ಮುಮ್ಮಡಿಕೃಷ್ಣ ರಾಜ ಒಡೆಯರು ಅಷ್ಟಮ ನರಸಿಂಹಭಾರತೀ ಗುರುಗಳವರಿಗೆ ನೀಡಿದ ಭಿನ್ನವತ್ತಳೆಯಲ್ಲಿ ತಮ್ಮನ್ನು ಗುರುಗಳ ‘ಚರಣ ಸೇವಕ ಎಂದು ಹೇಳಿಕೊಂಡಿರುವುದು ಗುರು-ಶಿಷ್ಯ ಅನ್ಯೋನ್ಯತೆಗೆ ಹಿಡಿದ ಕನ್ನಡಿಯಾಗಿದೆ.
ಪ್ರಸ್ತುತ ಮೈಸೂರು ಅರಮನೆಯಲ್ಲಿರುವ ಮೈಸೂರು ಶೈಲಿಯ ಕಲಾಕೃತಿಯು ಉಗ್ರನರಸಿಂಹಭಾರತೀ ಸ್ವಾಮಿಗಳಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಶಿವಗೀತೆಯ ರಹಸ್ಯವನ್ನು ಬೋಧಿಸಲ್ಪಡುತ್ತಿರುವ ಘಟನೆಯನ್ನು ತಿಳಿಸುತ್ತದೆ.
eಜಿ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರು ನವದೆಹಲಿಯ ಶಂಕರ ಮಠದ ಶಂಕುಸ್ಥಾಪನಾ ಸಮಾರಂಭದಲ್ಲಿ (೧೯೬೬) ಮಾಡಿದ ಭಾಷಣ ಶೃಂಗೇರಿ ಮಠದ ಸವನೀರ್- There has been from a long time close and cordial relationship between the royal dynasty of Mysore and swamins of Sringeri. Successive kings of Mysore were privileged to be the disciples of the Sringeri Seat of religion and learning. Nearly a century ago his highness Sri Mummadi Krishnaraja Wadiyar Bahaddur accorded a grand receiption to Sri Narasimha Bharati Swamiji of Sringeri matha and presented to him a valuable crown. He also dedicated a precious ornament. ‘Naga bharana’ to God Chandramoulishwara of Sringeri. He had the good fortune of learning ‘Shivageetha’ at the hands of the swami who, on account of his spiritual powers was known as ‘Ugraswami’
ಚಾಮರಾಜ ಒಡೆಯರು ಮತ್ತು ಶೃಂಗೇರಿ ಮಠ: ೧೮೮೫ನೇ ಪಾರ್ಥಿವ ಸಂವತ್ಸರದಲ್ಲಿ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ರವರು ತಮ್ಮ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್, ಬ್ರಿಟಿಷ್ ರೆಸಿಡೆಂಟ್ ಮಿಸ್ಟರ್ ಗರ್ಲಿಸ್ಟನ್ ಸಾಹೇಬರು ಮೊದಲಾದ ಪರಿವಾರದೊಡನೆ ಶೃಂಗೇರಿಗೆ ದಯಮಾಡಿಸಿದರು. ಆಗ ಶೃಂಗೇರಿ ಪೀಠದಲ್ಲಿ ರಾರಾಜಿಸುತ್ತಿದ್ದ (೩೩ನೇ ಗುರುಗಳು) ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮಿಗಳು ಶೃಂಗೇರಿ ವಿದ್ಯಾರಣ್ಯಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ ಪವಿತ್ರವಾದ ಕರ್ನಾಟಕ ಸಿಂಹಾಸನಾಧಿಪತ್ಯವನ್ನು ಅನುಭವಿಸುತ್ತಲಿರುವ ಮೈಸೂರು ಮಹಾರಾಜರಿಗೆ ‘ರತ್ನಕಿರೀಟಾಧಿಪತ್ಯವನ್ನೂ ಅನುಭವಿಸುವಂತೆ ಅನುಗ್ರಹಿಸುವುದು ಉಚಿತವೆಂದು ಭಾವಿಸಿ ಶಾರದಾಂಬಾ ಸನ್ನಿಧಿಯಲ್ಲಿ ಬೊಕ್ಕಸದಲ್ಲಿದ್ದ ಅಪೂರ್ವ ಕಿರೀಟವನ್ನು ತರಿಸಿ ಅಮೃತಮಯವಾದ ತಮ್ಮ ಹಸ್ತಗಳಿಂದ ಮಹಾರಾಜರ ಶಿರಸ್ಸಿನಲ್ಲಿ ಧಾರಣ ಮಾಡಿಸಿ, ಪ್ರಸ್ತುತ ಮೈಸೂರು ಅರಮನೆಯಲ್ಲಿರುವ ಹಿಂದೆ ವಿದ್ಯಾರಣ್ಯರಿಂದ ವಿಜಯನಗರದಲ್ಲಿ ಸ್ಥಾಪಿಸಲ್ಪಟ್ಟಿದ್ದ ಪುರಾತನ ಸಿಂಹಾಸನವನ್ನು ಪ್ರಭುಗಳು ಆರೋಹಣ ಮಾಡತಕ್ಕ ಕಾಲದಲ್ಲಿ ಶ್ರೀರಾಮಚಂದ್ರನಂತೆ ಈ ಕಿರೀಟ ಧರಿಸಿ ಅಲಂಕೃತವಾಗಿ ಸಿಂಹಾಸನಾರೂಢರಾಗುವುದು ಅವಶ್ಯಕವೆಂದು, ದಯಮಾಡಿಸಿದ್ದ ಮಹಾರಾಜರಿಗೆ ತಿಳಿಸಿ ಅನುಗ್ರಹಿಸಿದರು. (ಲ.ನ. ಶಾಸ್ತ್ರಿಗಳವರ ಶೃಂಗೇರಿ ಇತಿಹಾಸ ಕುರಿತ ಗ್ರಂಥ.)
ಇಂದಿಗೂ ಮೈಸೂರು ಅರಮನೆಯಲ್ಲಿ ಈ ಕಿರೀಟವು ‘ಶೃಂಗೇರಿ ಕಿರೀಟ ಎಂಬ ಹೆಸರಿನಲ್ಲಿ ಪ್ರತಿ ವರ್ಷದ ದಸರಾ ದರ್ಬಾರ್ ಸಮಯದಲ್ಲಿ ಮೈಸೂರು ರಾಜವಂಶಸ್ಥರಿಂದ ಪೂಜಿಸಲ್ಪಡುತ್ತಿದೆ  (ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನ ಗ್ರಂಥ, ಪ್ರಶಾಂತ್ ಶೃಂಗೇರಿ)
೧೮೯೧ರಲ್ಲಿ ನೃಸಿಂಹಭಾರತಿ ಜಗದ್ಗುರುಗಳು ಚಾಮರಾಜ ಒಡೆಯರ ಅಪೇಕ್ಷೆಯಂತೆ ಮೈಸೂರು ಅರಮನೆ ಸಮೀಪದ ಶ್ರೀ ಚಾಮರಾಜೇಂದ್ರ ಸರಸ್ವತಿ ಪ್ರಸಾದ ಪಾಠಶಾಲೆಯ ಅಭಿವೃದ್ಧಿಗಾಗಿ ಒಂದು ಶುಭಲಗ್ನದಲ್ಲಿ ವೇದೋಕ್ತ ವಿಧಾನದಿಂದ ವಿದ್ಯಾಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಿ ಅನುಗ್ರಹಿಸಿದರೆಂದು ನರಸಿಂಹಭಾರತೀ ಜೀವನ ಚರಿತ್ರೆ (ಲೇಖಕರು: ನಂಜನಗೂಡು ಶ್ರೀಕಂಠಶಾಸ್ತ್ರಿ)ಯಿಂದ ತಿಳಿಯಬಹುದಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಶೃಂಗೇರಿಮಠ: ನಾಲ್ವಡಿ ಕೃಷ್ಣರಾಜ ಒಡೆಯರು ಶೃಂಗೇರಿಯ ೩೩ ಮತ್ತು ೩೪ನೇ ಜಗದ್ಗುರುಗಳ ಸಮಕಾಲೀನರಾಗಿದ್ದರು.
ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮಿಗಳು ಕೇರಳ ರಾಜ್ಯದ ಕಾಲಟಿಯ ಪೂರ್ಣಾನದಿ ತೀರದಲ್ಲಿ ಆದಿಶಂಕರಾಚಾರ್ಯರ ಹುಟ್ಟಿದ ಪುಣ್ಯಸ್ಥಳವನ್ನು ಪತ್ತೆ ಮಾಡಿ ಅಲ್ಲಿ ಶಾರದಾ ಶಂಕರರ ಭವ್ಯ ಮಂದಿರಗಳನ್ನು ನಿರ್ಮಿಸುವ ಕೈಂಕರ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಮತ್ತು ಮೈಸೂರು ಸಂಸ್ಥಾನದ ದಿವಾನರಾದ ವಿ.ಪಿ. ಮಾಧವರಾವ್ ಮತ್ತು ಶೇಷಾದ್ರಿ ಅಯ್ಯರ್‌ರವರ ಪಾತ್ರ ಮಹತ್ತರವಾದುದು.
೧೯೧೦ರಂದು ಕೇರಳದ ಕಾಲಟಿಯಲ್ಲಿ ಆದಿಶಂಕರ ಮತ್ತು ಶಾರದಾಂಬಾ ದೇವಾಲಯದ ಕುಂಬಾಭಿಷೇಕವು ಜರುಗಿತು. ಈ ಶುಭಸಂದರ್ಭದಲ್ಲಿ ನರಸಿಂಹಭಾರತೀ ಜಗದ್ಗುರುಗಳು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ‘ಧರ್ಮಮೂಲ ಎಂಬ ಬಿರುದನ್ನು ಅನುಗ್ರಹಿಸಿದರೆಂದು ಗುರುಗಳು ಜೀವನಚರಿತ್ರೆಯ ಗ್ರಂಥ (ಲೇಖಕ: ನಂಜನಗೂಡು ಶ್ರೀಕಂಠಶಾಸ್ತ್ರಿ)ದಿಂದ ತಿಳಿದುಬರುತ್ತದೆ.
೧೯೧೨ರಲ್ಲಿ ಚಂದ್ರಶೇಖರಭಾರತೀ ಸ್ವಾಮಿಗಳು ಶೃಂಗೇರಿ ಪೀಠದ ೩೪ನೇ ಗುರುಗಳಾಗಿ ಪಟ್ಟಾಭಿಷಕ್ತರಾದರು. ಈ ಗುರುವರ್ಯರು ೧೯೧೬ರಲ್ಲಿ ತಮ್ಮ ಗುರುಗಳಾದ ನರಸಿಂಹಭಾರತೀ ಗುರುಗಳ ಸಮಾಧಿ ಆಲಯದ ಕುಂಬಾಭಿಷೇಕವನ್ನು ಶೃಂಗೇರಿಯಲ್ಲಿ ನೆರವೇರಿಸಿದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜರು ಹಾಜರಿದ್ದರು.
ಮಹಾರಾಜರ ಮತ್ತು ಶಿಷ್ಯರ ವಿಶೇಷ ಆಮಂತ್ರಣವನ್ನು ಮನ್ನಿಸಿ ೧೯೨೪ರಲ್ಲಿ ಚಂದ್ರಶೇಖರಭಾರತೀ ಸ್ವಾಮಿಗಳು ಮೈಸೂರಿಗೆ ಭೇಟಿ ಕೊಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ ಸಹಾಯದಿಂದ ನರಸಿಂಹಭಾರತೀ ಗುರುಗಳ ಹುಟ್ಟಿದ ಸ್ಥಳವಾದ ಈಗಿನ ಅಭಿನವಶಂಕರಾಲಯದಲ್ಲಿ ಭವ್ಯವಾದ ಗುರುಗಳ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದರು. prof. A.V. Narasimhamurthy
)
ಜಯರಾಮರಾಜೇಂದ್ರ ಒಡೆಯರು ಮತ್ತು ಶೃಂಗೇರಿ ಮಠ:  “During the reign of Jagadguru Sri.Sri. Abhinava Vidyateertha Swamji, who was the 35th Acharya of the sringeri sharadapeetam and who shone as a great yogi and a great scholar, there were innumerable occasions when the Maharaja of Mysore Sri. Jayachamarajendra Wadiyar sought the blessings of His Holiness”-Article by Sri. Ramaswamy IAS published in Mysore Shankaramath ‘Guruvandana-2002’)
ಮೈಸೂರು ಸಂಸ್ಥಾನದ ಕಟ್ಟಕಡೆಯ ರಾಜರಾದ ಜಯಚಾಮರಾಜೇಂದ್ರ ಒಡೆಯರು ತಮ್ಮ ಪೂರ್ವಿಕರು ಹಾಕಿಕೊಟ್ಟ ಸತ್‌ಸಂಪ್ರದಾಯವನ್ನು ಅನುಸರಿಸಿ ಶೃಂಗೇರಿ ಮಠದ ಮೇಲೆ ಅಪಾರ ಗೌರವಾದರಗಳಿಂದ ನಡೆದು ಕೊಂಡರು. ಶೃಂಗೇರಿಯ ಸಮಕಾಲೀನ ಗುರುಗಳಾಗಿದ್ದ ಅಭಿನವ ವಿದ್ಯಾತೀರ್ಥ ಸ್ವಾಮಿಗಳ ಅಂತರಂಗದ ಶಿಷ್ಯರಾಗಿದ್ದು ಆಗಾಗ ಶ್ರೀಗಳನ್ನು ಮೈಸೂರಿನ ಅರಮನೆಗೆ ಆಮಂತ್ರಿಸಿ ಸತ್ಕರಿಸಿರುವುದು ದಾಖಲೆಗಳಿಂದ ತಿಳಿದುಬರುತ್ತದೆ.
೧೯೬೧ರಲ್ಲಿ ದಕ್ಷಿಣ ಭಾರತ ವಿಜಯಯಾತ್ರೆಯನ್ನು ಮುಗಿಸಿ ಬೆಂಗಳೂರಿಗೆ ಚಿತ್ತೈಸಿದ ಚಂದ್ರಶೇಖರ ಭಾರತೀ  ಗುರುಗಳನ್ನು ಮಹಾರಾಜರು ಭವ್ಯವಾಗಿ ಆಮಂತ್ರಿಸಿದರು. ೧೯೬೨ರಲ್ಲಿ ಮಹಾರಾಜರ ಆಮಂತ್ರಣದ ಮೇಲೆ ಶ್ರೀಗಳು ಮೈಸೂರಿಗೆ ಯಾತ್ರೆ ಕೈಗೊಂಡಾಗ ಬಂಗಾರದ ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ವೈಭವೋಪೇತವಾಗಿ ಪೂರ್ಣಕುಂಭ ಸ್ವಾಗತವನ್ನು ಮಹಾರಾಜರು ಗುರುಗಳಿಗೆ ನೀಡಿ ಅರಮನೆಯಲ್ಲಿ ಪಾದಪೂಜೆಯನ್ನು ನರೆವೇರಿಸಿ ಈ ಸಂದರ್ಭದಲ್ಲಿ ‘ಊರ್ಮಿಳಾ ಎಂಬ ಮರಿ ಆನೆಯೊಂದನ್ನು ಶೃಂಗೇರಿ ಮಠಕ್ಕೆ ದಾನ ಮಾಡಿದುದನ್ನು ಸ್ಮರಿಸಬಹುದಾಗಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರು: ಜಯಚಾಮರಾಜೇಂದ್ರ ಒಡೆಯರ ಸುಪುತ್ರರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಪ್ರಸ್ತುತ ಶೃಂಗೇರಿ ಪೀಠದಲ್ಲಿ ರಾರಾಜಿಸುತ್ತಿರುವ ಶ್ರೀ ಭಾರತೀತೀರ್ಥ ಸ್ವಾಮಿಗಳೊಂದಿಗೆ ಹೊಂದಿರುವ ಬಾಂಧವ್ಯವು ಸುಮಾರು ಎರಡು ಶತಮಾನಕ್ಕಿಂತಲೂ ಮಿಗಿಲಾದ ಶೃಂಗೇರಿ ಮತ್ತು ಮೈಸೂರಿನ ಚಾರಿತ್ರಿಕ ಸಂಬಂಧವನ್ನು ಬೆಸೆದು, ಪ್ರತ್ಯಕ್ಷ ಪ್ರಮಾಣಕ್ಕೆ ಸಾಕ್ಷೀಕರಿಸುತ್ತದೆ.
೨೦೦೨ ಮತ್ತು ೨೦೦೫ರಲ್ಲಿ ಶ್ರೀ ಭಾರತೀತೀರ್ಥ ಸ್ವಾಮಿಗಳವರು ಮೈಸೂರು ಮಹಾರಾಜರ ಆಮಂತ್ರಣದ ಮೇರೆಗೆ ಮೈಸೂರಿಗೆ ಭೇಟಿ ಇತ್ತಾಗ ಅನೂಚಾನವಾಗಿ ನಡೆದು ಬಂದ ಅರಮನೆಯ ಸಂಪ್ರದಾಯದಂತೆ ಮಹಾರಾಜರು ಮತ್ತು ರಾಜಪರಿವಾರವು ಗುರುಗಳನ್ನು ಒಂಟೆ, ಆನೆ, ಅಶ್ವಗಳಿಂದೊಡಗೂಡಿದ ಮೆರವಣಿಗೆಯಲ್ಲಿ, ರಾಜೋಚಿತ ಗೌರವದೊಂದಿಗೆ ಅತ್ಯಂತ ನಾಜೂಕಿನ ಕುಸುರಿ ನೈಪುಣ್ಯತೆಯಿಂದ ಅಲಂಕೃತವಾದ ರಜತ ರಥದಲ್ಲಿ ಸಕಲ ಮರ‍್ಯಾದೆಯಿಂದ ಕುಳ್ಳಿರಿಸಿ ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಂಡು, ಮಹಾರಾಣಿಯವರೊಡಗೂಡಿ ಗುರುಗಳಿಗೆ ಪಾದಪೂಜೆ ನೆರವೇರಿಸಿ ಹಲವಾರು ಕಾಣಿಕೆಗಳಿಂದ ಸತ್ಕರಿಸಿದರು. ಪ್ರತಿ ವರ್ಷ ಶೃಂಗೇರಿ ಗುರುಗಳ ವರ್ಧಂತಿ ಮತ್ತು ಶರನ್ನವರಾತ್ರಿಯ ಸಂದರ್ಭದಲ್ಲಿ ಇಂದಿಗೂ ಮೈಸೂರು ಸಂಸ್ಥಾನದಿಂದ ಗುರುಕಾಣಿಕೆ ಸಮರ್ಪಿಸಲ್ಪಡುತ್ತದೆ. ಮೈಸೂರಿನ ದಸರಾ ದರ್ಬಾರ್ ಸಂದರ್ಭದಲ್ಲಿ ಶೃಂಗೇರಿಯ ಮಠದ ಪ್ರಸಾದವನ್ನು ಇಂದಿಗೂ ಮಹಾರಾಜರಿಗೆ ಕೊಡಲಾಗುತ್ತದೆ.
ಶೃಂಗೇರಿ ಮಠದ ಪ್ರಸಾದವನ್ನು ದರ್ಬಾರಿನಲ್ಲಿ ಮಹಾರಾಜರಿಗೆ ಅರ್ಪಿಸುವ ಸಮಯದಲ್ಲಿ ‘ಚಿರಂ ಅಭಿವರ್ಧಿತಂ ಯದು ಸಂತಾನಶ್ರೀ ಎಂದು ಹೇಳಲಾಗುತ್ತದೆ.
ಹೀಗೆ ಸುಮಾರು ಎರಡು ಶತಮಾನಕ್ಕಿಂತಲೂ ಮಿಗಿಲಾಗಿ ಶೃಂಗೇರಿ ಶಾರದಾ ಪೀಠಕ್ಕೂ ಮೈಸೂರು ಸಂಸ್ಥಾನಕ್ಕೂ ಇರುವ ಚಾರಿತ್ರಿಕ ಸಂಬಂಧದ ಕೊಂಡಿಯಾಗಿ ಪ್ರಸ್ತುತ ಮೈಸೂರು ರಾಜ ವಂಶಸ್ಥರ ಮತ್ತು ಈಗಿನ ಶೃಂಗೇರಿ ಶ್ರೀಗಳು ಬಾಂದವ್ಯವು ಪರಿಣಮಿಸಿದೆ.
ಈ ಲೇಖನದೊಂದಿಗೆ ಲಗತ್ತಿಸಲಾದ ಹಲವಾರು ಛಾಯಾಚಿತ್ರಗಳು ಮೈಸೂರು ಸಂಸ್ಥಾನ ಮತ್ತು ಶೃಂಗೇರಿ ಮಠದ ಐತಿಹಾಸಿಕ ಮಧುರ ಬಾಂಧವ್ಯಕ್ಕೆ ಮಹತ್ತರವಾದ ಬೆಳಕನ್ನು ಚೆಲ್ಲುತ್ತದೆ.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಜೈನ್ ಕೊಠಡಿ, ain Knowldge Warehouse, John corte ‘Traditional Libraries in India American aritcal society, Jan-March 1995
೨.         ಜೋತ್ಸ್ನಾ ಕಾಮತ್, ಕರ್ನಾಟಕ ಶಿಕ್ಷಣ ಪರಂಪರೆ, (ಮುಂಬೈ ೧೯೮೮), ಪುಟ ೩೩.
೩.         ವಿದ್ಯಾರಣ್ಯರು ಶೃಂಗೇರಿ ಮಠವನ್ನು ಯಾವ ರೀತಿಯಲ್ಲಿ ಪ್ರಗತಿ ಪಥಕ್ಕೆ ತಂದರು ಎಂಬ ವಿಚಾರ ಡಾ. ಎ.ಕೆ. ಶಾಸ್ತ್ರಿಯವರು ವಿವರಿಸಿದ್ದಾರೆ. ನೋಡಿ ಇವರ ಗ್ರಂಥ ಶೃಂಗೇರಿ ಮಠದ ಇತಿಹಾಸ (ಶೃಂಗೇರಿ ೧೯೮೩), ಪುಟ ೩೧-೩೨.
೪.         ದಕ್ಷಿಣ ಭಾರತದ ಶಾಸನ ಸಂಪುಟ ಘಿಘಿಗಿII, ನಂ. ೮೨.
೫.    ಎ.ಕೆ. ಶಾಸ್ತ್ರಿ, The Records of Sringeri Drama Samsthana, (Sringeri Matha 2009
೬.         ಅದೇ., ಶೃಂಗೇರಿ ಧರ್ಮ ಸಂಸ್ಥಾನ, ಪುಟ ೨೧೧.
೭.    Mysore Archaelogical Department, 1916, ಪುಟ l 77..
೮.    ಇದು ಮಕ್ಕಳಿಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಅವುಗಳ ನಿವಾರಣೆ ಕುರಿತಾಗಿ ತಿಳಿಸುವ ಆರ್ಯವೈದ್ಯ ಗ್ರಂಥ ನೋಡಿ ಎನ್.ವಿ.ಕೆ. ವಾರಿಯರ್, The Royal Asiatic Society, History of wide (Kolkata 2005).
೯.         ಕಾಶ್ಯಪ ಸಂಹಿತೆ ಗ್ರಂಥ ಪ್ರಥಮವಾಗಿ ಸಿಕ್ಕಿದ್ದು ೧೯೦೧ರಲ್ಲಿ. ಇದನ್ನು ನೇಪಾಳ ರಾಜ್ಯದ ಗ್ರಂಥಾಲಯದಲ್ಲಿ ಮಹಾ ಮಹೋಪಾಧ್ಯಾಯ ಹರಿಪ್ರಸಾದ ಶಾಸ್ತ್ರಿ ಇದನ್ನು ಬೆಳಕಿಗೆ ತಂದರು. ಆದರೆ ಈ ಗ್ರಂಥ ಅಪೂರ್ಣ ಎಂದು ಹೊರ್ನಾಲಿ ಅಭಿಪ್ರಾಯಪಟ್ಟಿದ್ದಾರೆ. ನೋಡಿ The Royal Asiatic Society, Londan, 1909, ಪುಟ ೧೭೮-೯.

*   # ೬೭೪, ೨೭ನೇ ಮುಖ್ಯರಸ್ತೆ, ೨ನೇ ಹಂತ, ಜೆ.ಪಿ. ನಗರ, ಮೈಸೂರು-೫೭೦೦೦೮.
**  ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಕೆಎಸ್‌ಓಯು, ಮೈಸೂರು-೫೭೦೦೦೬.


 

ಶ್ರೀ ಜಯಚಾಮರಾಜ ಪ್ರಭುಗಳು ಶ್ರೀ ಸಚ್ಚಿದಾನಂದ ಭಾರತಿ ಗುರುಗಳಿಗೆ ಬರೆದ ಪತ್ರ.


ಶ್ರೀ ನರಸಿಂಹಭಾರತಿ ಸ್ವಾಮಿಗಳೊಂದಿಗೆ ಯುವ ಚಾಮರಾಜರು
 
ಮೈಸೂರು ಮಹಾರಾಣಿ ಮದನ ವಿಲಾಸ ಸನ್ನಿಧಾನವು ಶೃಂಗೇರಿಗೆ ಅರ್ಪಿಸಿದ ವಜ್ರದ ಪಂಚಪಾತ್ರೆ.

ಶ್ರೀ ನರಸಿಂಹಭಾರತಿ ಗುರುವರ್ಯರ ಪೂರ್ವಾಶ್ರಮದ ಸಹೋದರ ಶ್ರೀ ಲಕ್ಷ್ಮೀನರಸಿಂಹಶಾಸ್ತ್ರಿಗಳು.
 
ಅರಮನೆ ವಿದ್ವಾಂಸರೂ ಶ್ರೀ ನರಸಿಂಹಭಾರತಿ ಗುರುಗಳ ಪೂರ್ವಾಶ್ರಮದ ಪಿತೃವರ್ಯರು ಆಗಿದ್ದ ಕುಣಿಗಲ್ ರಾಮಾಶಾಸ್ತ್ರಿಗಳು