Thursday, May 30, 2013

ಪಂಚಿಕೇಶ್ವರ ಒಂದು ಅರ್ಥಗ್ರಹಿಕೆ

ಪಂಚಿಕೇಶ್ವರ ಒಂದು ಅರ್ಥಗ್ರಹಿಕೆ : ಮರು ಚಿಂತನೆ
ಆರ್. ವೆಂಕಟೇಶಮೂರ್ತಿ
೨೭೧‘ನವಸುಮ೨೩ನೇ ಮುಖ್ಯರಸ್ತೆ
ಮುನೇಶ್ವರ ಬ್ಲಾಕ್ಗಿರಿನಗರ‘ಟಿ ಬ್ಲಾಕ್,
ಬೆಂಗಳೂರು-೫೬೦೦೮೫.

ಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶಾಸನಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಿದ ಸಂದರ್ಭದಲ್ಲಿ ಇದೇ ತಾಲ್ಲೂಕಿಗೆ ಸೇರಿದ ಬೆಳ್ಳೂರಿನ ಕ್ರಿ.ಶ.೧೨೭೧ರ ಶಾಸನದಲ್ಲಿ ‘ಪಂಚಿಕೇಶ್ವರ ಎಂಬ ಶಬ್ದ ಗಮನ ಸೆಳೆದು ಇನ್ನಿತರ ಶಾಸನಗಳನ್ನು ಪರಿಶೀಲಿಸಿದಾಗ ಈ ಪಂಚಿಕೇಶ್ವರವು ವಿವಿಧ ಅರ್ಥಗಳಲ್ಲಿ ಪ್ರಯೋಗವಾಗಿರುವಂತೆ ಕಂಡು ಆಲೋಚನೆ ಮಾಡುವಂತಾಯಿತು.
ಶಿಕಾರಿಪುರ ತಾಲ್ಲೂಕಿನ ಸಾಲೂರು ಗ್ರಾಮದ ಶಾಸನವು ಈಗಾಗಲೇ ನೀಡಿರುವ ಕೊಡುಗೆಯ ಜೊತೆಗೆ ಒಂದು ಮತ್ತರಿನ / ಭಾಗವನ್ನು ನೀಡಿ ‘ಮತ್ತಂ ಅಲ್ಲಿ ಪಡಿಯ ಪೊನ್ನಂ ನೆರಪಿ ತಮ್ಮ ಮನೆಯಿಂ ಪಂಚಾಕೇಶ್ವರಮಂ ಪೊರಮಡಿಸಿ, ಓದಿಸಿ, ಆ ಅರ್ಥಮಂ ಪೂಜಿಸುವರು ಎಂದು ದಾಖಲಿಸಿದೆ.
ಬೇಲೂರು ಶಾಸನವು ‘ಹೊಯ್ಸಣೇಶ್ವರ ದೇವರ ಪಂಚಕೇಶ್ವರದ ಮೋದಿದ ಬ್ರಾಹ್ಮಣರ ಪೂಜೆಗೋಸುಗ ಆ ಮಹಾಜನಂಗಳ ಕೈಯಲು ಧರ್ಮವಡಿಯಲು ಬೀಜವೊನ್ನಾಗಿ ಕೊಟ್ಟ ಗದ್ಯಾಣ ಮೂವತ್ತು ಎಂದು ದಾಖಲಿಸಿದೆ. ಮತ್ತೊಂದು ಶಾಸನವು ಹೇಮಳಂಬಿ ಸಂವತ್ಸರದ ಭಾದ್ರಪದ ಸು. ೧೪ ಆ| ಶಾಂತಿಗ್ರಾಮದ ಸಿಂಗಮಾರವನು ‘ಪಂಚಿಕೇಶ್ವರ ದೇವರ ಧರ್ಮಕ್ಕೆ ಕೊಟ್ಟ ಬೀಜವೊಂನ್ನುಗ ಎಂದು ತಿಳಿಸುತ್ತದೆ.
‘ಪಂಚಿಕೇಶ್ವರ ದೇವರ ಧರ್ಮಖ ಧವಿಸೆಯ ಪೂಜೆಗೆ ಹೊಂಗೆ ವರಿಷಕ್ಕೆ ಹಣವೆರಡು ಮತ್ತು ‘ಶ್ರೀ ಪಂಚಿಕೇಶ್ವರ ದೇವರದ ದವಿಸೆಯ ಪೂಜೆಗೆ ಹೊಂಗೆ ವರಿಷಕ್ಕೆ ಹಣವೆರಡರ ಬಡ್ಡಿಯಲು ಬಿಟ್ಟ ಗದ್ಯಾಣ ಹತ್ತು ಎಂದೂ ದಾಖಲಿಸಿದೆ.
ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಶಾಸನವು ಮೂರನೇ ಹೊಯ್ಸಳ ನರಸಿಂಹನ ಕಾಲದಲ್ಲಿ ಮಹಾಪ್ರಧಾನಿಯಾಗಿದ್ದ ಪೆರುಮಾಳೆದೇವ ದಣ್ನಾಯಕನು ಶ್ರೀಮತ್ಸರ್ವ್ವ ನಮಸ್ಯದಗ್ರಹಾರ ಸ್ವಯಂಕೃತವಹ ವುದ್ಭವ ನರಸಿಂಹಪುರವಾದ ಬೆಳ್ಳೂರ ಶ್ರೀಮದಗ್ರಹಾರದಲಿ ತಾವು ಮಾಡಿಸುವ ‘ಶ್ರೀ ಪಂಚಿಕೇಶ್ವರದಲಿಯಿಂದ್ರ ಪರ್ವದ ಧರ್ಮಕೆಯುಂ, ಆರಣ ಪೂಜೆಗೆಯುಂ ಗದ್ದೆ ಸಲಗೆ ಮೂವತ್ತಾಱನೂ ದಾನ ನೀಡಿದ್ದಾನೆ.
ಚನ್ನರಾಯಪಟ್ಟಣ ತಾಲ್ಲೂಕಿನ ಶಾಸನವು ‘ಆ ಗದ್ದೆ ಸ ೫ ಯೂ ಕ್ಷೇತ್ರವನು ಆ ಬಾಳುಗಚ್ಚಿನ ಆಯಿಂದ್ರ ಪರ್ವದ ಪಂಚಿಕೇಶ್ವರ ದೇವರ ಧರ್ಮಕ್ಕೆವೂ ಎಂದು ದಾಖಲಿಸಿದೆ.
ಮೊದಲ ಹಂತದಲ್ಲಿ ಹೊಯ್ಸಣೇಶ್ವರ ದೇವರ ಪಂಚಿಕೇಶ್ವರದ ವೋದಿದ ಬ್ರಾಹ್ಮಣರ ಪೂಜೆಗೋಸುಗ; ಮತ್ತಂ ಅಲ್ಲಿ ಪಡಿಯ ಪೊನ್ನಂ ನೆರಪಿ ತಮ್ಮ ಮನೆಯಿಂ ಪಂಚಾಕೇಶ್ವರಮಮ್ ಪೊರಮಡಿಸಿ, ವೋದಿಸಿ ಆ ಅರ್ಥಮಂ ಪೂಜಿಸುವರು; ಮತ್ತು ದೇವರ ವೇದ ಪಾರಾಯಣ | ಪಂಚಕೇಶ್ವರ | ಶ್ರೀ ಪಂಚರಾತ್ರ | ಶಾಸ್ತ್ರ, ಮಂತ್ರ ಸಿದ್ಧಾಂತ ಮಾರ್ಗ ಸಕಲ ಭೋಗ ನಿತ್ಯಾರ್ಚನ ಎಂಬ ದಾಖಲೆಗಳಲ್ಲಿ ‘ಮೋದಿದ, ಓದಿಸಿ ಎಂಬ ಪದಗಳೊಂದಿಗೆ ವೋದಿದ ಬ್ರಾಹ್ಮಣರ ಪೂಜೆಗೋಸುಗ; ವೇದ, ಆಗಮಶಾಸ್ತ್ರ ಮಂತ್ರಗಳ ಸಾಲಿನಲ್ಲಿ ದಾಖಲಾಗಿರುವ ಪಂಚಕೇಶ್ವರ; ಮತ್ತು ಅರ್ಥಮಂ ಪೂಜಿಸುವರ; ಎಂಬುದನ್ನು ಗಮನಿಸಿದಾಗ “ಪಂಚಕೇಶ್ವರ ಎಂಬುದು ಪೂಜಾ ವಿಧಿ, ವಿಧಾನಗಳ ವಿವರಣೆಯನ್ನೋ ಅಥವಾ ಮಂತ್ರಗಳನ್ನೋ ಒಳಗೊಂಡ ಗ್ರಂಥ ಅಥವಾ ತಾಡವೋಲೆ ಆಗಿರಬೇಕೆಂದು, ಮಂತ್ರಗಳನ್ನು ಹೇಳಿದ ಅಥವಾ ಗ್ರಂಥವನ್ನು ವೋದಿದ ಬ್ರಾಹ್ಮಣರಿಗೆ ದಾನ ನೀಡುವ ಧಾರ್ಮಿಕ ಸಂಪ್ರದಾಯದ ಆಚರಣೆಯಾಗಿತ್ತೆಂದು ಊಹಿಸಲಾಗಿತ್ತು.
ಎರಡನೇ ಹಂತದಲ್ಲಿ, ಡಬ್ಲ್ಯೂ, ರೀವ್ ಅವರ ಕನ್ನಡ-ಇಂಗ್ಲಿಷ್ ನಿಘಂಟುವಿನಲ್ಲಿ ‘ಪಂಚ ಎಂದರೆ ‘ರೈತ ಎಂಬ ಅರ್ಥವಿದ್ದು, ಶಾಸನಗಳಲ್ಲಿ ದಾಖಲಾಗಿರುವ (೧) ಶ್ರೀ ಪಂಚಿಕೇಶ್ವರ ಧರ್ಮಕೆ ಕೊಟ್ಟ ಬೀಜವೊಂನ್ನು, (೨) ಪಂಚಕೇಶ್ವರ ಧರ್ಮಖ ದವಿಸೆಯ ಪೂಜೆಗೆ ಬಿಟ್ಟ ಗದ್ಯಾಣ ನಾಲ್ಕು; ಮತ್ತು (೩) ಪಂಚಕೇಶ್ವರ ದೇವರದ ಧವಿಸೆಯ ಪೂಜೆಗೆ ಹೊಂಗೆ ವರಿಷಕ್ಕೆ ಹಣವೆರಡರ ಬಡ್ಡಿಯಲು; ಎಂಬುದನ್ನು ಗಮನಿಸಿದಾಗ, ಬೀಜವೊಂನು ಮತ್ತು ಧವಿಸೆಯ ಪೂಜೆಗೆ ಎಂಬ ಪದಗಳು ‘ಪಂಚಕೇಶ್ವರಕ್ಕೆ ಹೊಂದಿಕೊಂಡಂತೆ ಬಳಕೆಯಾಗಿರುವುದರಿಂದ ಈ ಪಂಚಿಕೇಶ್ವರ ಪೂಜೆಯು ವ್ಯವಸಾಯಕ್ಕೆ ಸಂಬಂಧಿಸಿರಬಹುದೆ? ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗಿತ್ತು.
ಪ್ರಸ್ತುತ ದೊರಕಿರುವ ಮಾಹಿತಿಗಳೆಂದರೆ :
೧)       ಶ್ರೀಯುತ ಷ. ಶೆಟ್ಟರ್‌ರವರು ತಮ್ಮ ‘ಸೋಮನಾಥಪುರ ಕೃತಿಯಲ್ಲಿ ಪಂಚಿಕೇಶ್ವರ ದೇವಾಲಯವನ್ನು ಗುರುತಿಸಿ, ಇದು ಸೋಮನಾಥಪುರದ ಕೇಶವ ದೇವಾಲಯದ ಈಶಾನ್ಯ ದಿಕ್ಕಿನಲ್ಲಿತ್ತು ಎಂದು ಗುರುತಿಸಿದ್ದಾರೆ.
೨)       ಸೋಮನಾಥಪುರ ಶಾಸನಗಳಲ್ಲಿ ಪಂಚಲಿಂಗದೇವರು ಎಂದು ಕರೆದಿರುವುದನ್ನು ಗಮನಿಸಿದರೆ, ಬಹುಶಃ ಕಾಲ ಕಳೆದಂತೆ ಪಂಚಿಕೇಶ್ವರವು ಪಂಚಲಿಂಗದೇವರು ಎಂದು ಕರೆದಿರಬಹುದಾಗಿದೆ.
೩)       ಈಶಾನ್ಯದಲ್ಲಿರುವ ಪಂಚಲಿಂಗ ದೇವಾಲಯಕ್ಕೆ ಆಗ್ನೇಯದಲ್ಲಿ ಇರುವ ಶಾಸನದಂತೆ ಇಲ್ಲಿ ಬಿಜ್ಜಳೇಶ್ವರ ದೇವರು, ಹೆಮ್ಮೇಶ್ವರದೇವರು, ರೇವಲೇಶ್ವರ ದೇವರು, ಸೋಮನಾಥದೇವರು, ಭೈರವೇಶ್ವರದೇವರು ಇದ್ದು ಪೂಜೆಗೊಳ್ಳುತ್ತಿತ್ತು ಎಂದು ಗುರುತಿಸಬಹುದಾಗಿದೆ.
೪)       ಈ ದೇವಾಲಯದ ಅಂಗರಕ್ಷಕ ವಾರ್ಷಿಕ ೧೦ ಗದ್ಯಾಣವನ್ನು, ಸೇನಬೋವ ಭಂಡಾರಿಗ ಮತ್ತು ಮುದ್ರಾಕಾರ ಕೂಡ ೧೨ ಗದ್ಯಾಣವನ್ನು ಪಡೆಯುತ್ತಿದ್ದರು.
೫)       ಮೂರು ರಂಗವಾಲೆಗಳು, ಆರು ಪರಿಚಾರಕರು, ಒಂಬತ್ತು ಆಳುಗಳು, ಹನ್ನೆರಡು ದವಸಿಗರು ಈ ಸಮುಚ್ಛಯದಲ್ಲಿದ್ದರು.
೬)       ಆರು ಜನ ಸಿಂಗಾರದವರು ತಲಾ ೬ ಗದ್ಯಾಣಗಳನ್ನು ವಾರ್ಷಿಕವಾಗಿ ಪಡೆದುಕೊಳ್ಳುತ್ತಿದ್ದರು.
೭)       ದೀಪಾವಳಿ ಉತ್ಸವದಲ್ಲಿ ೨ ಸಲಗೆ ಎಣ್ಣೆಯನ್ನು ಈ ದೇವಾಲಯದಲ್ಲಿ ಬಳಸಲಾಗತ್ತಿತ್ತು.
೮)       ತಾಂಬೂಲ ಸೇವೆಗೆ ಪ್ರತಿನಿತ್ಯ ೨೦೦ ಅಡಿಕೆ ಮತ್ತು ೬೦೦ ವೀಳ್ಯೆದೆಲೆ ಬೇಕಾಗುತ್ತಿತ್ತು.
೯)       ಶಿವಲಿಂಗಗಳಿಗೆ ‘ಶೃಂಗಾರದ ವಸ್ತ್ರ ಎಂಬ ನೂಲಿನ ಬಟ್ಟೆ ಮತ್ತು ‘ಪುಲೆಯಪಟ್ಟಿ ಎಂಬ ರೇಶ್ಮೆ ಶಲ್ಯಗಳನ್ನು ವರ್ಷಕ್ಕೆ ನಾಲ್ಕು ಬಾರಿ ಅಥವಾ ಮೂರು ತಿಂಗಳಿಗೊಮ್ಮೆ ಬದಲಿಸಲಾಗುತ್ತಿತ್ತು. ಇದಕ್ಕಾಗಿ ಈ ದೇವಾಲಯಕ್ಕೆ ೨೮ ಶೃಂಗಾರದ ವಸ್ತ್ರಗಳನ್ನು ೧೪ ಪುಲಿಯ ಪಟ್ಟಿಗಳನ್ನು ಒದಗಿಸಲಾಗುತ್ತಿತ್ತು.
          ಈ ಎಲ್ಲಾ ಮಾಹಿತಿಗಳ ಹಿನ್ನೆಲೆಯಲ್ಲಿ ಪಂಚಕೇಶ್ವರ, ಪಂಚಿಕೇಶ್ವರ, ಪಂಚಾಕೇಶ್ವರ ಎಂಬುದು ಆರಂಭ ಕಾಲದಲ್ಲಿ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಪೂಜಾ ವಿಧಿ-ವಿಧಾನಗಳ ವಿವರಣೆಯನ್ನೋ ಅಥವಾ ಮಂತ್ರಗಳನ್ನೋ ಒಳಗೊಂಡ ಗ್ರಂಥ ಅಥವಾ ತಾಡವೋಲೆ ಆಗಿರಬಹುದಾಗಿದೆ. ಆದರೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಶಾಸನಗಳಲ್ಲಿ ದಾಖಲಾಗಿರುವ ‘ಬೆಳ್ಳೂರ ಶ್ರೀಮದಗ್ರಹಾರದಲಿ ತಾವು ಮಾಡಿಸುವ ಶ್ರೀ ಪಂಚಿಕೇಶ್ವರದಲಿ ಯಿಂದ್ರಪರ್ವದ ಧರ್ಮ್ಮಕೆಯುಂ ಆರಣ ಪೂಜೆಗೆಯುಂ ಹಾಗೂ ದಾನ ನೀಡಿದ ಮೇರೆಗಳನ್ನು ಗುರುತಿಸುವಲ್ಲಿ ‘ಅಲ್ಲಾಳ ಸಮುದ್ರದ ಕೆಳಗೆ ‘ಪಂಚೀಕೇಶ್ವದಿಂ ಪಡುವಲು ಎಂಬುದನ್ನು ಗಮನಿಸಿದರೆ, ಬೆಳ್ಳೂರಿನಲ್ಲಿ ಐದು ಲಿಂಗಗಳನ್ನು ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳನ್ನು ನಡೆಸುವಂತೆ ಮಾಡಲಾಗಿತ್ತು ಎಂಬುದಾಗಿ ಹೇಳಬಹುದಾಗಿದೆ.


ಆಧಾರಸೂಚಿ
೧.         ಪಂಚಿಕೇಶ್ವರ ಒಂದು ಅರ್ಥ ಗ್ರಹಿಕೆ, ಇತಿಹಾಸ ದರ್ಶನ, ಸಂ. ೧೨, ೧೯೯೭, ಪುಟ ೧೫೦-೧೫೩.
೨.         ಎ.ಕ. ಗಿ, (ಪರಿಷ್ಕೃತ ಆವೃತ್ತಿ), ತಿ. ನರಸೀಪುರ ತಾಲ್ಲೂಕು, ಸೋಮನಾಥಪುರದ ಶಾಸನಗಳು.
೩.         ಷ. ಶೆಟ್ಟರ್, ಸೋಮನಾಥಪುರ, ಅಭಿನವ ಪ್ರಕಾಶನ, ಬೆಂಗಳೂರು, ೨೦೦೮.
೪.         ಎ.ಕ. ಗಿII, (ಪರಿಷ್ಕೃತ ಆವೃತ್ತಿ), ನಾಗಮಂಗಲ ತಾಲ್ಲೂಕು, ಬೆಳ್ಳೂರು ಶಾಸನಗಳು.




Monday, May 27, 2013

ಪ್ರಾಚೀನ ವೀರ ಪಡೆ ಡಾ. ಎನ್‌ಆರ್‌ಲಲಿತಾಂಬ

PÉÆòUÀgï J¿à vÀÛgï - ¥ÁæaãÀ «ÃgÀ ¥ÀqÉ
qÁ. J£ï.Dgï. ®°vÁA§
Qæ.±À.8£ÉAiÀÄ ±ÀvÀªÀiÁ£ÀPÉÌ ¸ÉÃjzÀ vÀ®PÁqÀÄ UÀAUÀgÀ ªÉÆzÀ®£ÉAiÀÄ ²ªÀªÀiÁgÀ (Qæ.±À. 679-725) ºÁUÀÆ UÀAUÀ ²æÃ¥ÀÅgÀĵÀ£À (Qæ.±À.726-788) PÁ®zÀ vÀUÀgÉ£ÁqÀ vÉƼÀî UÁæªÀÄPÉÌ ¸ÉÃjzÀ ±Á¸À£ÀUÀ¼À°è1 PÉÆòUÀgï J¿àvÀÛgï JA§ «ÃgÀgÀ G¯ÉèÃR PÀAqÀħA¢zÉ. EªÀgÀÄ vÉƼÀîzÀ ZÉÊvÁå®AiÀÄPÉÌ ©lÖ zÁ£ÀzÀ dªÁ¨ÁÝgÀgÉAzÀÆ ¸ÁQëUÀ¼ÉAzÀÆ ºÉýªÉ. F ªÀÄÆgÀÆ ±Á¸À£ÀUÀ¼À°è F «ÃgÀgÀ£ÀÄß vÉƼÀîgï, vÉƼÀ® PÁ²PÀgï, vÉƼÀgÉÆqÉMgï, vÉƼÀîgÁ PÉÆòPÀgï JAzÀÄ PÀgÉAiÀįÁVzÉ. EªÀgÀ£ÀÄß ¸ÀÄSÁqÀågÉAzÀÆ, J¿àvÀÛgÀÄ ¥ÀæzsÁ£ÀgÉAzÀÆ PÀgÉ¢gÀĪÀÅzÀ®èzÉ EªÀgÀ£ÀÄß £ÀgÀ±Á¸À£ÀgÉAzÀÄ ¥Àæ¹zÀÞgÁzÀªÀgÉAzÀÄ ºÉýgÀĪÀÅzÀÄ PÀÄvÀƺÀ®PÀgÀªÁVzÉ.
F PÉÆòUÀgÀÄ AiÀiÁgÀÄ? J¿àvÀÛgï JA§ÄzÀÄ K£À£ÀÄß ¸ÀÆa¸ÀÄvÀÛzÉ? £ÀgÀ±Á¸À£ÀgÉAzÀÄ ¥Àæ¹zÀÞgÁUÀ®Ä PÁgÀtªÉãÀÄ? vÉƼÀî, vÉÆ¿® JA§ G¥À£ÁªÀÄ EªÀgÀ ºÉ¸Àj£ÉÆA¢UÉ ¸ÉÃgÀ®Ä PÁgÀtªÉãÀÄ? JA§ ¥Àæ±ÉßUÀ¼ÀÄ ªÉÆzÀ® ºÀAvÀzÀ°è K¼ÀÄvÀÛªÉ.
JgÀqÀ£ÉAiÀÄ ºÀAvÀzÀ°è vÀ«Ä¼ÀÄ ¸ÀAWÀA ¸Á»vÀåzÀ°è ªÀÄvÉÛ ªÀÄvÉÛ G¯ÉèÃRUÉÆArgÀĪÀ ¸ÀvÀå¸ÀAzsÀgÀÆ «ÃgÀgÀÆ JAzÀÄ ¥Àæ¹zÀÞgÁVzÀÝ vÀļÀÄ£ÁqÀ PÉÆñÀgÀjUÀÆ F PÉÆòUÀjUÀÆ ¸ÀA§AzsÀ«zÉAiÉÄà JA§ C£ÀĪÀiÁ£ÀªÉüÀÄvÀÛzÉ. C®èzÉ, ªÀÄÄAzÉ PÀ£ÁðlPÀzÀ PÁëvÀæAiÀÄÄUÀzÀ°è vÀĽ®¸ÀAzÀPÀÄ®zÀªÀgÉAzÀÄ ¥Àæ¹zÀÞgÁzÀ «ÃgÀgÀÆ vÉÆ¿¼À PÉÆòUÀgï MAzÉà ªÀÄÆ®zÀªÀgÉà JA§ C£ÀĪÀiÁ£ÀUÀ¼ÀÄ K¼ÀÄvÀÛªÉ.
F J¯Áè ¥Àæ±ÉßUÀ½UÀÆ GvÀÛgÀªÀ£ÀÄß PÀAqÀÄPÉƼÀÄîªÀ ¥ÀæAiÀÄvÀß ªÀiÁqÀÄvÀÛ F PÉÆòUÀgï J¿àvÀÛgï CvÀåAvÀ ¥ÁæaãÀ «ÃgÀ¥ÀqÉAiÀiÁVzÀÄÝ, PÀ£ÁðlPÀzÀ «ÃgÀ ¥ÀgÀA¥ÀgÉUÉ ªÀÄvÉÆÛAzÀÄ ºÉªÉÄäAiÀÄ UÀj JA§ÄzÀ£ÀÄß w½¸À®Ä ¸ÀAvÉÆõÀªÁUÀÄvÀÛzÉ.
PÉÆòUÀgÀÄ-PÉÆÃZÁgÀ : MAzÀÄ d£ÁAUÀ
F PÉÆòUÀgÀÄ AiÀiÁgÀÄ? JA§ ¥Àæ±ÉßAiÀÄ£ÀÄß ªÉÆzÀ®Ä ¥Àj²Ã°¸À§ºÀÄzÀÄ. ¸ÀAUÀA ¸Á»vÀåzÀ PÁ®zÀ°è  G¯ÉèÃRUÉÆArgÀĪÀ C£ÉÃPÀ d£ÁAUÀUÀ¼À°è PÉÆñÀgÀgÉA§ d£ÁAUÀªÀÇ MAzÀÄ.2 Qæ.±À.955, DUÀ¸ïÖ 12 ¸ÉÆêÀĪÁgÀPÉÌ ¸ÀjºÉÆAzÀĪÀ gÁµÀÖçPÀÆlgÀ 3£ÉAiÀÄ PÀȵÀÚ£À D½éPÉAiÀÄ £ÀgÉÃUÀ®è ±Á¸À£ÀªÉÇAzÀgÀ°è vÉÆìĪÀÄä£ÉA§ «ÃgÀ£À vÀAzÉAiÀÄ ºÉ¸ÀgÀÄ PÉÆÃZÁgÀgÀ PÉÆÃmÉAiÀĪÀÄä JAzÀÄ G¯ÉèÃRUÉÆArzÉ.3 F G¯ÉèÃRUÀ¼À°èAiÀÄ PÉÆÃZÀgï, PÉÆÃZÁgÀ JA§ÄzÀÄ d£ÁAUÀªÁaAiÀiÁVzÀÄÝ, PÉÆñÀgï JA§ÄzÀgÀ §zÀ¯ÁzÀ gÀÆ¥À J£Àß®Ä CrجĮè. (ªÉAPÀl±Á«Ä>AiÀÄAPÀlZÁ«Ä, ±ÁåªÀÄAiÀÄå>ZÁªÀÄAiÀÄå, AiÉÆÃZÀ£É>AiÉÆñÉß EAvÀºÀ ±À>ZÀ DVgÀĪÀ GzÁºÀgÀuÉUÀ¼À£ÀÄß UÀªÀĤ¸À§ºÀÄzÀÄ). zÉêÀ¥Á®£À vÁªÀÄæ±Á¸À£ÀªÀÅ*4 PÁ±À, ºÀÆt, PÀÄ°PÀ, PÀ£Áðl EvÁå¢ d£ÁAUÀUÀ¼À£ÀÄß G¯ÉèÃT¹zÉ. vÀ«Ä¼ÀÄ£Ár£À ¸ÀAWÀA ¸Á»vÀåzÀ PÉ®ªÀÅ ¥ÀzÀåUÀ¼ÀÄ PÉÆñÀgÀgÀ §UÉUÉ, CªÀgÀ UÀÄt®PÀëtUÀ¼ÀÄ, §ºÀĨsÁµÁeÁÕ£À, DAiÀÄÄzsÀ ¸ÀA§A¢ü ªÀÈwÛAiÀÄ£ÀÄß, ±ËgÀå, ¥ÀgÁPÀæªÀÄPÉÌ, ¸ÀvÀå¸ÀAzsÀvÉUÉ ºÉ¸ÀgÁVzÀÝgÉA§ÄzÀ£ÀÄß ¸ÀÆa¸ÀÄvÀÛªÉ.
F PÉÆñÀgÀgÀ£ÀÄß PÀÄjvÀÄ vÀļÀÄ£ÁrUÀÆ CªÀjUÀÆ EgÀĪÀ ¸ÀA§AzsÀªÀ£ÀÄß PÀÄjvÀÄ C£ÉÃPÀ «zÁéA¸ÀgÀÄ ZÀað¹zÁÝgÉ. ²gÀÆgÀÄ ²ªÀgÁªÀıÉnÖAiÀĪÀgÀÄ §AlgÀÄ PÉÆñÀgÀgÀ ªÀÄÆ®zÀªÀgÉA§ÄzÀ£ÀÄß ºÉüÀÄvÁÛgÉ.5 PÉ.«. gÀªÉÄñï CªÀgÀÄ A warrior groups which assisted many Southern Rulers in battles as mercenary troops6 JAzÀÄ ºÉüÀÄvÁÛ vÀļÀÄ£Ár£ÉÆA¢UÉ EªÀgÀ ¸ÀA§AzsÀªÀ£ÀÄß M¦àzÁÝgÉ. µÀ. ±ÉlÖgï CªÀgÀÄ PÀ£ÁðlPÀzÀ PÁ¸ÀgÀUÉÆÃrUÀÆ PÉÆñÀgÀjUÀÆ ¸ÀA§AzsÀ«gÀ§ºÀÄzÉà JA§ C£ÀĪÀiÁ£À ªÀåPÀÛ¥Àr¸ÀÄvÁÛgÉ.  C®èzÉ, vÀĽ¯Á¼ÀμÀ AiÀÄÄzÀÞ PÀæªÀÄPÀÆÌ PÉÆñÀgÀgÀÄ ºÁQPÉÆlÖ PÀzÀ£À PÀæªÀÄPÀÆÌ ºÉÆðPÉAiÀÄ£ÀÄß UÀÄgÀÄw¸ÀÄvÁÛgÉ.7 
F «zÁéA¸ÀgÀ «ZÁgÀUÀ¼ÀÄ ¸ÀAWÀA ¸Á»vÀåzÀ PÀ«vÉUÀ¼À°è£À G¯ÉèÃRUÀ¼À£ÀÄß DzsÀj¹ §AzÀªÀÅ. DzÀgÉ EzÀĪÀgÉUÀÆ PÀ£ÁðlPÀzÀ AiÀiÁªÀÅzÉà ±Á¸À£ÀzÀ¯ÁèUÀ°Ã, PÁªÀåUÀ¼À¯ÁèUÀ°Ã PÉÆñÀgÀgÀ G¯ÉèÃRUÀ¼ÀÄ zÉÆgÀQgÀ°®è. F ¸ÀA§AzsÀzÀ°è vÀļÀÄ£Ár£À, PÉÆqÀV£À, ªÀįɣÁr£À ¥ÁæaãÀ ±Á¸À£ÀUÀ¼À°è PÉÆñÀgÀgÀ G¯ÉèÃRPÁÌV ºÀÄqÀÄPÁqÀÄwÛzÁÝUÀ PÀtÂÚUÉ ©zÀÝ F vÉƼÀî UÁæªÀÄzÀ eÉÊ£À§¸À¢AiÀÄ ±Á¸À£ÀUÀ¼ÀÄ8 CvÀåAvÀ ªÀĺÀvÀé¥ÀÆtðªÁzÀªÀÅ.
AiÀiÁPÉAzÀgÉ, F ±Á¸À£ÀUÀ¼ÀÄ ¥ÁæaãÀ ¥Àæ¹zÀÞ «ÃgÀ PÉÆñÀgÀgÀ §UÉV£À J®è «zÁéA¸ÀgÀ HºÉ, ¥Àæ±ÉßUÀ½UÉ DzsÁgÀ MzÀV¸ÀĪÀ CvÀåªÀÄÆ®åªÁzÀ, PÀ£ÁðlPÀzÀ°è zÉÆgÉwgÀĪÀ ªÉÆvÀÛ ªÉÆzÀ® ¥ÁæaãÀ G¯ÉèÃRUÀ¼ÀÄ EªÁVªÉ. F ±Á¸À£À UÀ¼À°è £ÀgÀ¹AºÀgÁd¥ÀÅgÀ vÁ®ÆèQ£À 5£ÉAiÀÄ ¸ÀASÉåAiÀÄ ±Á¸À£ÀzÀ ¸ÀA¸ÀÌøvÀ ¨sÁUÀzÀ°è UÀAUÀ ²æÃ¥ÀÅgÀĵÀ ªÀĺÁgÁd C£ÀÄPÀÆ®ªÀwðUÀ¼À°è CUÀæUÀtå£ÁzÀ UÀAUÀgÁd£ÉAzÀÄ C©ü¶PÀÛ£ÁzÀ ¥À¹ArUÀYÎÁ£ÀéAiÀÄzÀ £ÁUÀªÀªÀÄð £ÉA§ÄªÀªÀ£ÀÄ, PÀzÀA§ PÀÄ® ¨sÁ¸ÀÌgÀ£ÁzÀ ²æà vÀļÀÄCr £ÁªÀÄzsÉÃAiÀĪÀżÀî vÀ£Àß ªÉÄÊzÀÄ£À£ÉÆA¢UÉ vÉƼÀîUÁæªÀÄzÀ ZÉÊvÁå®AiÀÄPÉÌ ªÀÄƼÀªÀ½î ºÉ¸Àj£À UÁæªÀĪÀ£ÀÄß  zÁ£À ªÀiÁrzÀÄzÀ£ÀÄß ºÉýzÉ.*9
vÉƼÀ®PÉÆòUÀgÀÄ, vÀĽ®¸ÀAzÀPÀÄ®zÀªÀgÀÄ, PÉÆñÀgÀgÀÄ MAzÉà ªÀÄÆ®zÀªÀgÀÄ
F vÀļÀÄ Cr ªÀÄvÀÄÛ DvÀ£À ¨sÁªÀ ¥À¹A¤ØUÀAUÀ £ÁUÀªÀªÀÄð£ÉÆA¢UÉ ¸ÉÃj, ©lÖ F eÉÊ£À zÁ£ÀPÉÌ F PÉÆòUÀgï J¿àvÀÛgï, ¸ÁQë ªÀÄvÀÄÛ gÀPÀëPÀgÉA¢zÉ, ±Á¸À£ÀzÀ°è. CzÀPÉð vÉƼÀîgÁ PÉÆùUÀgï J¿àvÀÛgï ¸Á£ÁÝgÀÄA ¸ÁQëAiÀÄÄA £ÀgÀ¸Á¸À£ÀªÀiÁUÉ10 CzÀgÀPÉ ¸ÁQë vÉƼÀ® PÁ¹PÀgÉ¿àvÀgï11 JAzÀÄ ºÉýªÉ. C®èzÉ EªÀgÀ£ÀÄß ‘vÉƼÀîgÉÆqɪÉÇgï, ¸ÀÄSÁqÀågï, J¿àvÀÛgï¥ÀæzsÁ£Àgï, £ÀgÀ±Á¸À£ÀAUÀ¼ï JAzÀÄ ¥Àæ¹zÀÞgÁzÀªÀgÉAzÀÄ ºÉÆUÀ½ªÉ.12 F «ªÀgÀUÀ¼À£ÀÄß UÀªÀĤ¹zÁUÀ EªÀgÀÄ £ÉÊwPÀªÀiË®åUÀ¼À£ÀÄß, ¸ÁªÀiÁfPÀ ¤Ãw-¤AiÀĪÀÄ £ÀqÁªÀ½UÀ¼À£ÀÄß ¤AiÀÄAwæ¸À§®èªÀgÁVzÀÄÝ, D ªÀiË®åUÀ¼À£ÀÄß gÀPÀÛUÀvÀ ªÀiÁrPÉÆArzÀÝ UÁæªÀÄ ¥ÀæzsÁ£ÀgÁVzÀÝgÉAzÀÄ vÉÆÃgÀÄvÀÛzÉ. vÉƼÀî, vÉƼÀ®Ä JA§ UÁæªÀÄ£ÁªÀĪÀÅ F PÉÆòUÀgÀ G¥À£ÁªÀÄzÀ PÁgÀt¢AzÀ¯Éà §A¢zÉ. vÀƼÀÄ JA§ ¥ÀzÀPÉÌ zÁ½ ªÀiÁqÀÄ, ºÉÆÃgÁqÀÄ, DPÀæ«Ä¸ÀÄ KjºÉÆÃUÀÄ JA§ CxÀðUÀ½zÀÄÝ, EzÀÄ PÉÆòUÀgÀ ºÉÆÃgÁlzÀ §zÀÄPÀ£Éßà ¸ÀÆa¸ÀÄvÀÛzÉ. vÀļÀÄ¥ÀzÀzÀ ªÀÄÆ®ºÀÄqÀÄPÀÄvÀÛ ©.J. ¸Á®vÉÆgÉAiÀĪÀgÀÄ vÀÆ®Ä ¥ÀzÀ ¸ÀÆa¹zÁÝgÉ. ºÉÆÃgÁlUÀ½UÉ ¥ËgÀĵÀPÉÌ ¥Àæ¹zÀÞgÁVzÀÝ F PÉÆòUÀgÀÄ £É¯É¹zÀÝ PÁgÀt¢AzÀ¯Éà D UÁæªÀÄPÉÌ D ºÉ¸ÀgÀÄ §A¢zÉ JAzÀÄ ºÉüÀ§ºÀÄzÀÄ.
D£ÀAvÀgÀzÀ PÀ£ÁðlPÀzÀ PÁëvÀæAiÀÄÄUÀzÀ°è ªÀįɣÁr£À F ¥ÀæzÉñÀzÀ ±Á¸À£ÀUÀ¼À°è PÁt¹PÉÆArgÀĪÀ vÀĽ®¸ÀAzÀ PÀÄ®zÀªÀgÉAzÀÄ ¥Àæ¹zÀÞgÁzÀ «ÃgÀgÀÄ F vÉƼÀ®UÁæªÀÄzÀ F PÉÆòUÀgÀÄ MAzÉà ªÀÄÆ®zÀªÀgÉAzÀÄ ºÉüÀ§ºÀÄzÀÄ. (vÉƼÀîgÀ PÉÆùUÀgï ¸Á£ÁÝgÀÄA, vÉƼÀ® ¸ÀAzÀPÀÄ®, vÀĽ¯Á¼Àίï JA§ÄzÀ£ÀÄß ºÉÆð¹) vÉƿ¯ï vÀ«Ä¼ÀÄ ªÀįÉAiÀiÁ¼ÀzÀ°è EA¢UÀÆ §¼ÀPÉAiÀiÁUÀÄwÛzÉ. vÀĽ¯Á¼ÀμÀÄ PÀ°vÀ£ÀzÀ, C©üªÀiÁ£ÀzÀ zsÀªÀÄð, vÁåUÀ, ¸ÀvÀå, ±ËZÀ JA§ DgÀÄ UÀÄtUÀ¼À£ÀÄß gÀPÀÛUÀvÀ ªÀiÁrPÉÆAqÀÄ «ÃgÀ ¹zÁÞAwUÀ¼ÉAzÀÄ ¥Àæ¹zÀÞgÁVzÀÝgÀÄ. CAvÀºÀ «ÃgÀUÀÄtUÀ¼Éà ªÉÄʪÉvÀÛAwzÀÝ ©üõÀä£ÀÄ «ÃgÀ¹zÁÞAvÀzÀ ±Á¸À£ÀA §gÉzÀ ¥ÉÆwÛUÉAiÀÄAvÉ ±ÀgÀ±ÀAiÉÄåAiÀÄ ªÉÄÃ¯É PÁtÄwÛÛzÀÝ£ÉAzÀÄ ¥ÀA¥À ºÉýzÁÝ£É. EAvÀºÀ «ÃgÀgÀ §zÀÄPÉà ¸ÀªÀiÁdPÉÌ DzÀ±ÀðzÀ vÉÆÃgÀÄUÀA§UÀ¼ÁV PÀArzÀÄÝ CªÀgÀ£ÀÄß £ÀgÀ±Á¸À£À «ÃgÀ¹zÁÞAvÀzÀ ±Á¸À£ÀUÀ¼ÉAzÀÄ PÀgÉAiÀÄ®Ä PÁgÀt. AiÀiÁªÀÅzÉà «ZÁgÀªÀ£ÀÄß CzÀÄ ¸ÀvÀåªÉAzÀÄ w½¸ÀĪÁUÀ PÉÆñÀgÀgÀ ªÀiÁw£ÀAvÉ CzÀÄ ¸ÀvÀå MAzÉà ªÀiÁw£À PÉÆñÀgï (M£ÀÄæ ªÉÆÿ PÉÆñÀgï) JAzÀÄ d£À ºÉüÀÄwÛÛzÀÝgÀÄ. CzÀPÉÌ GzÁºÀgÀuÉAiÀiÁV PÀªÀ¬Äwæ CªÉéAiÀiÁgï ªÀÄUÀ¼À ¥ÉæêÀÄ PÀlĸÀvÀåªÉAzÀÄ UɼÀwUÉ ºÉüÀĪÁUÀ ±ÀARªÀ£ÀÆzÀÄvÀ ªÀÄzÀÝ¼É ¨Áj¸ÀÄvÀ ºÀ¼ÉAiÀÄ D®zÀ ªÀÄgÀzÀr £ÉgÉzÀ £Á®ÄÌ £É¯ÉUÀ¼À PÉÆñÀgÀgÀ £À®ÄßrUÀ¼ÀAvÉ CzÀÄ PÀlÄ ¸ÀvÀåªÉAzÀÄ ºÉýzÁݼÉ. PÉÆñÀgÀgÀÄ F ¸ÀvÀå¸ÀAzsÀvÉUÁV ¥Àæ¹zÀÞgÁVzÀÝgÀÄ. ¥Àæ¸ÀÄÛvÀ ±Á¸À£ÀzÀ PÉÆòUÀgÀ£ÀÄß F PÁgÀtPÁÌVAiÉÄà £ÀgÀ±Á¸À£ÀgÉAzÀÄ ¥Àæ¹zÀÞgÁzÀªÀgÀÄ JA¢gÀĪÀÅzÀÄ.  CªÀgÀ £À®Äßr, CAzÀgÉ ¸ÀvÀåªÁzÀ ªÀiÁvÉà ±Á¸À£À, CªÀgÀ §zÀÄPÉà ±Á¸À£À, ¨ÉÃgÉ ±Á¸À£À §gɹ, ¤AiÀĪÀÄ gÀƦ¸ÀĪÀ CUÀvÀå«gÀ°®è. ¸ÀvÀåªÀ£ÀÄß ¥Àj¥Á°¹ zÀÆgÀzÀÆgÀ zÉñÀzÀ°è SÁåw ¥ÀqÉzÀAvÀºÀªÀgÀÄ (ªÁAiÀiï ªÉÆ¿Â ¤¯É¬ÄAiÀÄ ±Éãï E¼ÀUÀÄ£À¯ï E¸ÉʪÀ¼ÀA PÉ¿ÄPÉÆñÀgï) ºÁUÁV CªÀjUÉ F ©gÀÄzÀÄ §A¢zÉ.
F ‘PÉÆòUÀgï J¿àvÀÛgï ¥ÀæzsÁ£ÀgÀÄ’ PÉêÀ® ¸ÀvÀå¸ÀAzsÀ £ÀgÀ±Á¸À£ÀUÀ¼ÀµÉÖà C®è ºÀÄmÁÖ ºÉÆÃgÁlUÁgÀgÀÄ, J¿àvÀÛgï (70) JA§ÄzÀÄ CªÀgÀ ¸ÀªÀÄÄzÁAiÀĪÀ£ÀÄß, «ÃgÀ¥ÀqÉAiÀÄ «ÃgÀgÀ ¸ÀASÉåAiÀÄ£ÀÄß ¸ÀÆa¸ÀĪÀAwzÉ. F jÃw «ÃgÀ¥ÀqÉUÀ¼À ºÉ¸Àj£ÉÆA¢UÉ CªÀgÀ ¸ÀASÉåAiÀÄ£ÀÄß ºÉüÀĪÀÅzÀÄ ¸ÁªÀiÁ£Àå13 
¸ÀAWÀA ¸Á»vÀåzÀ PÀ« PÀ®èuÁgï (¥Àľ£Á£ÀƾÄ. 283) MAzÀÄ ¥ÀzÀåzÀ°è ‘dAiÀÄgÁV dUÀdV¹ ¸ÀAzÀt¹zÀ PÉÆñÀgÀgÀ¥ÀAUÀqÀ gÀtgÀAUÀªÀ£ÀÄß ¸ÀÆgÉUÉƼÀÄîªÀgÀÄ JAzÀÄ G¯ÉèÃT¹zÁÝ£É. E°è PÀ« PÉÆñÀgÀgÀ£ÀÄß MAzÀÄ ºÉÆÃgÁlzÀ ¥ÀAUÀqÀªÁV UÀÄgÀÄw¹zÁÝ£É. ºÀ®ªÀÅ §UÉAiÀÄ ±ÀÆ®zÀ¼ÀUÀ¼À PÉÆñÀgÀgÀ£ÀÄß (CºÀ£Á£ÀÆ¾Ä 113-5) G¯ÉèÃT¸ÀÄvÀÛzÉ.  ªÀÄvÉÆÛ§â PÀ« PÁ«gÀ¥ÉàlÖtvÀÛgï (¥Àľ£Á£ÀƾÄ, 169) ±ÀÆ®«ÃgÀ AiÀÄĪÀPÉÆñÀgÀÄ ±ÀvÀÄæ ¸ÀAºÀj¸À®Ä vÀÆjAiÉĸÉAiÀÄĪÀgÀÄ, D C¸ÀÛçUÀ¼ÁWÁvÀ ¸ÉÊj¸ÀĪÀ ªÀÄÄgÀÄPÀÄÌ (ºÀ®¹£À) ªÀÄgÀzÀ ªÀÄ®èPÀA§zÀAvÉ §ºÀÄPÁ® ¨Á¼À° ¤£Àß QÃwð ¥ÀævÁ¥À ªÉÊjUÀ¼À ªÀÄÄAzÉAzÀÆ PÀÄAzÀzÀAvÉ..... JA§ ¥ÀzÀå¨sÁUÀzÀ°è PÉÆñÀgÀ AiÀÄĪÀPÀgÀÄ ªÀÄÄgÀÄPÀÄÌ ªÀÄgÀ¢AzÀ vÀAiÀiÁgÁzÀ UÀnÖAiÀiÁzÀ ªÀÄ®èUÀA§UÀ¼À£ÀÄß §¼À¹, CzÀPÉÌ UÀÄj¬ÄlÄÖ ±ÀÆ®UÀ¼À£É߸ÉzÀÄ C¨sÁå¸À ªÀiÁqÀÄwÛzÀÝgÀÄ JA§ÄzÀÄ w½zÀÄ §gÀÄvÀÛzÉ.
PÀ« MqÀªÉÆÃvÀAQ¿õÁgï (¥Àľ£Á£ÀƾÄ, 290) vÀÄgÀÄPÁ¼ÀUÀzÀ°è ªÀÄrzÀ «ÃgÀ£ÉƧâ£À ¸Á«£À avÀæ ¤ÃqÀÄvÀÛ, ±ÀvÀÄæUÀ¼ÀÄ ¸ÀÄj¹zÀ ¸ÀgÀ®ÄªÀļÉAiÀÄ£ÀÄ zÁn ºÉÆÃgÁr UÉÆêÀÅUÀ¼À£ÀÄß ªÀÄgÀ½¹ PÀqÉUÉ bÀ®¢AzÀ ¤AvÀ VjUÀA§ªÉÇAzÀÄ vÉÆAiÀiÁÝr ºÉÆAiÀiÁÝr £É® PÀaÑzÀAvÉ ©¢ÝzÉ ºÉt ¸ÀgÀ®Ä¸ÉgÉAiÀÄ° J£ÀÄßvÁÛ£É. ¸ÀgÀ®Ä¸ÉgÉ JA§ ¸ÀÄAzÀgÀ gÀÆ¥ÀPÀ «ÃgÀgÀ avÀæªÀ£ÀÄß PÀtÂÚUÉ PÀnÖ¸ÀĪÀAwzÉ. E°è ºÀ®ªÁgÀÄ ¸ÀgÀ¼ÀÄUÀ¼ÀÄ ZÀÄaÑPÉÆArgÀĪÀ UÀÄjUÀA§zÀ avÀæt ±ÀÆ®«ÃgÀ PÉÆòUÀgÀ AiÀÄĪÀPÀgÀÄ C¨sÁå¸ÀPÉÌ §¼À¸ÀÄwÛzÀÝ ªÀÄÄgÀÄPÀÄÌ ªÀÄgÀzÀ  ªÀÄ®èPÀA§ªÀ£ÀÄß, ¸ÀgÀ®ªÀÄAZÀzÀ°è £É®ªÀÄÄlÖzÉ ªÀÄ®VzÀÝ ©üõÀä£À£ÀÄß £É£À¦¸ÀÄvÀÛzÉ.
PÀ¥ÀÅà PÀtÂÚ£À PÉÆñÀgÀgï ªÀÄÄRzÀ°è PÀ©âtzÀ DAiÀÄÄzsÀ ªÀÄÄ¶× Kn£À ªÀÄÄzÉæ JzÀÄÝPÁtÄwÛvÀÄÛ JA§ ªÀtð£É¬ÄzÉ. (E¦ügÀÄA©©qÀA ¥ÀqÀÄvï ªÀqÀÄGqÉÊ ªÀÄĺÀvÀÛgï PÀgÀÄAUÀ£ï PÉÆñÀgÀ-CºÀ£Á£ÀƾÄ-90)  ªÀÄ®èUÀA§ ªÀÄvÀÄÛ ¯ÉÆúÀzÀ ªÀdæ ªÀÄĶ×UÀ¼À£ÀÄß dnÖUÀ¼ÀÄ «±ÉõÀªÁV §¼À¸ÀĪÀÅzÀÄ £ÀªÀÄUÉ w½zÀħgÀÄvÀÛzÉ.  CAzÀgÉ F PÉÆñÀgÀgÀÄ dnÖPÁ¼ÀUÀzÀ®Æè ¥Àæ¹zÀÞgÁVzÀÝgÉ£ÀߧºÀÄzÀÄ.
¥Àæ¸ÀÄÛvÀ vÉƼÀîUÁæªÀÄzÀ ±Á¸À£ÀUÀ¼ÀÄ PÉÆñÀgÀjUÉ vÉƼÀîgÉÆqɪÀgï, ¸ÀÄSÁqÀågï, ¥ÀæzsÁ£Àgï JA§ «±ÉõÀtUÀ¼À£ÀÄß ºÉýzÉ. EªÀgÀÄ HgÉÆqÉAiÀÄgÀµÉÖà C®è ¸ÀÄSÁqÀågï CAzÀgÉ ¸ÀÄR¥ÀÄgÀĵÀgÀÄ ¹jªÀAvÀgÀÄ JA§ÄzÀÄ CªÀgÀ DyðPÀ ¹ÜwUÀwAiÀÄ ªÉÄÃ¯É ¨É¼ÀPÀÄ ZÉ®ÄèvÀÛzÉ. ¥ÁæaãÀ vÀļÀÄ£ÁqÀ PÉÆñÀgÀgÀÄ ¹jªÀAvÀgÀÄ ¸ÀÄR¥ÀÅgÀĵÀgÀÄ, C®APÁgÀ ¦æAiÀÄgÀÆ,  gÀ¹PÀgÀÆ  DVzÀÝ gÉA§ÄzÀÄ CªÀgÀ  G¯ÉèÃRUÀ½AzÀ  w½zÀÄ §gÀÄvÀÛzÉ. (¥Àľ£Á£ÀÆ¾Ä PÀÈwAiÀÄ 396, 7£Éà ¸Á®Ä, CUÀ£Á£Àƾ£À 216-11;15-2 ¥ÀzÀåUÀ¼À°è  PÉÆñÀgÀgÀÄ ¥ÀĵÀàgÀ¸À (eÉãÀÄ)¢AzÀ ªÀiÁrzÀ PÀ¼Àî£ÀÄß PÀÄrzÀÄ D£ÀA¢¸ÀÄwÛzÀÝgÀÄ. ªÀÄļÉÊ(ªÉƯÉè) ºÀƪÀiÁ¯ÉAiÀÄ£ÀÄß ªÀÄÄrzÀÄ QæÃr¸ÀÄwÛzÀÝgÀÄ, ¥ÉgÀÄA¥ÉÇ£ï CAzÀgÉ zÉÆqÀØ zÉÆqÀØ  ¸ÀĪÀuÁð¨sÀgÀtUÀ½AzÀ  C®APÀj¹PÉƼÀÄîªÀ PÉÆñÀgÀgÉAzÀÄ CªÀgÀ£ÀÄß UÀÄgÀÄw¹ªÉ. (¥ÉgÀÄA¥ÉÇuï ZɪÀÄäPÉÆÃð±Àgï......  vÀļÀÄ£ÁqÀÄ - ªÀiÁªÀÄÆ®uÁgï) EªÀgÀ£ÀÄß £Á¯ÉÆä½PÉÆñÀgÀgÉAzÀÄ CAzÀgÉ £Á®ÄÌ £ÀÄr (¨sÁµÉ)UÀ¼À£ÀÄß §®èªÀgÀÄ DVzÀÝgÉAzÀÄ ªÀÄzsÀÄgÉÊPÁÌAa PÀÈwAiÀÄ°è ºÉýzÉ.14
MnÖ£À°è EzÀĪÀgÉUÉ ¥ÁæaãÀ vÀļÀÄ£ÁqÀ PÉÆñÀgÀ «ÃgÀ d£ÁAUÀzÀ §UÉUÉ ZÀað¹gÀĪÀ «zÁééA¸ÀgÀÄ ¸ÀAWÀA ¸Á»vÀåzÀ G¯ÉèÃRUÀ¼À£Éßà DzsÀj¹zÀÝgÀÄ. DzÀgÉ PÀ£ÁðlPÀzÀ PÁªÀåUÀ¼À¯ÁèUÀ°Ã ±Á¸À£ÀUÀ¼À¯ÁèUÀ°Ã G¯ÉèÃRUÀ¼ÀÄ zÉÆgÉAiÀÄzÉ PÀ£ÁðlPÀzÉÆA¢V£À PÉÆñÀgÀgÀ PÉÆAr C¸ÀàµÀÖªÁVvÀÄÛ. F vÉƼÀîUÁæªÀÄzÀ ±Á¸À£ÀUÀ¼À G¯ÉèÃRUÀ¼ÀÄ PÉÆñÀgÀjUÀÆ vÀļÀÄ£Ár£À CgÀ¸ÀgÁ¼ÀÄwÛzÀÝ vÀUÀgÉ£Ár£À ¥ÀæzÉñÀ (FV£À ¨ÉîÆgÀÄ, aPÀ̪ÀÄUÀ¼ÀÆgÀÄ, PÉÆ¥Àà)PÀÆÌ E°è£À CgÀ¸ÀgÉÆA¢V£À CªÀgÀ MqÀ£Ál, CªÀgÀ vÉƼÀî CxÀªÁ vÉÆ¿®Ä UÁææªÀÄzÀ°è£À CªÀgÀ £É¯ÉAiÀÄ£ÀÄß PÀÄjvÀÄ w½¹PÉÆqÀÄvÀÛzÉ. eÉÊ£À zsÀªÀÄðzÀ zÁ£À gÀPÀëuÉ ªÀiÁqÀÄwÛzÀÝ «ZÁgÀ, CªÀgÀ «ÃgÀ ¹zÁÞAvÀªÀ£ÁßzsÀj¹zÀ fêÀ£ÀPÀæªÀÄ, ªÉʨsÀªÀUÀ¼À «ZÁgÀUÀ¼À£ÀÄß, CvÀåAvÀ ¸ÀAQë¥ÀÛªÁVzÀÝgÀÆ  ¸ÀÄálªÁV MAzÉÆAzÉà «±ÉõÀtUÀ½AzÀ F ±Á¸À£ÀUÀ¼ÀÄ ©aÑnÖªÉ.
vÀļÀ®PÉÆòUÀjUÀÆ vÀĿ®¸ÀAzÀPÀÄ®zÀªÀjUÀÆ EgÀĪÀ fêÀ£ÀPÀæªÀÄzÀ ¸ÁªÀÄåvÉ ºÉÆÃgÁlzÀ §zÀÄPÀÄ MAzÉà JA§ÄzÀÄ w½zÀħA¢zÉ.
F J¯Áè PÁgÀtUÀ½AzÀ £ÀgÀ¹AºÀgÁd¥ÀÅgÀ ¹AºÀt UÀzÉÝAiÀÄ eÉÊ£ÀªÀÄoÀzÀ°è zÉÆgÉwgÀĪÀ vÉƼÀ® UÁæªÀÄzÀ eÉÊ£À zÁ£ÀvÁªÀÄæ¥ÀlUÀ¼ÀÄ ºÁUÀÆ £ÀgÉÃUÀ°è£À PÉÆÃZÁgÀgÀ PÉÆÃmÉAiÀĪÀÄä£À ªÀÄUÀ vÉÆìĪÀÄä£À Qæ.±À.8 ªÀÄvÀÄÛ 9£ÉAiÀÄ ±ÀvÀªÀiÁ£ÀzÀ ±Á¸À£ÀUÀ¼ÀÄ PÀ£ÁðlPÀzÀ°è zÉÆgÀQgÀĪÀ PÉÆñÀgÀgÀ ªÉÆlÖ ªÉÆzÀ® zÁR¯ÉUÀ¼ÁVªÉ. ºÀÄqÀÄQzÀgÉ ªÀÄvÀÛµÀÄÖ ±Á¸À£ÀUÀ¼À°è EªÀgÀ G¯ÉèÃR zÉÆgÀPÀĪÀ ¸ÁzsÀåvɬÄzÉ.15
[F ¯ÉÃR£ÀzÀ°è£À PÉ®ªÀÅ «ªÀgÀUÀ¼À£ÀÄß ¸ÀA±ÉÆÃzsÀPÀgÁzÀ J¸ï. PÁjÛPï CªÀgÀÄ ¥ÀjµÀÌj¹ PÉÆnÖzÁÝgÉ. CªÀjUÉ £À£Àß PÀÈvÀdÕvÉUÀ¼ÀÄ.]
£ÀA. 335, ªÀ¹µÀ×, ¸ÀgÀ¸Àéw £ÀUÀgÀ, «dAiÀÄ£ÀUÀgÀ, ¨ÉAUÀ¼ÀÆgÀÄ - 560040.

DzsÁgÀ¸ÀÆa ªÀÄvÀÄÛ n¥ÀàtÂUÀ¼ÀÄ
1.    J¦UÁæ¦üAiÀÄ PÀ£ÁðnPÀ (¥ÀjµÀÌøvÀ, aPÀ̪ÀÄUÀ¼ÀÆgÀÄ f¯Éè), ¸ÀA¥ÀÅl 12. £ÀgÀ¹AºÀgÁd¥ÀÅgÀ ±Á¸À£À ¸ÀASÉå - 5,6,7. Qæ.±À. 8£ÉAiÀÄ ±ÀvÀªÀiÁ£À.
2.    vÀ«Ä¼ï PÀ¯ÉàlÄÖ ZÉÆ®èUÀgÁ¢AiÀÄ°è (¥ÀÅl 218) PÉÆÃZÀgï; MgÀÄ EtA Qæ.±À. 700. PÉÆøÀgÀÄ, ªÀÄļÀªÀgÀÄA, MqÀªÀÄgÀÄ vÀAqÀvÉÆÛÃgÀÄ JA§ G¯ÉèÃR«zÉ.
3.    ºÁ£ÀUÀ¯ï vÁ®ÆQ£À PÉ®ªÀÅ gÁµÀÖçPÀÆl ±Á¸À£ÀUÀ¼ÀÄ, ºÀ£ÀĪÀiÁQë UÉÆÃV, EwºÁ¸À zÀ±Àð£À, ¸ÀA¥ÀÅl-14, 1999, ¥ÀÅl 45-46. [EzÀgÀ°è ¥ÀæPÀlªÁVgÀĪÀ ºÁªÉÃj f¯Éè, ºÁ£ÀUÀ¯ï vÁ®ÆèQ£À £ÀgÉÃUÀ®Äèè ±Á¸À£À] ¥ÀæPÀÈvÀ «ªÉÃZÀ£ÉUÉ CUÀvÀåªÁzÀ ±Á¸À£À ¥ÁoÀ«AwzÉ.
JgÀqÀ£ÉAiÀÄ ¸ÀÛgÀ :
6 [¸ÀAªÀ*]vÀìgÀ ±ÀvÀAUÀ¼ÉtÄé £ÀÆ(¾õÉ*)¿àvÀÛ K¿
7       gÁPÀë¸À ¸ÀAªÀvÀìgÀzÀ ±ÁæªÀtzÀ ¥ÀÄtߪÉÄAiÀÄÄ D¢vÀåªÁgÀ
8         £ÀgÉAiÀÄAUÀ®è PÉÆÃZÁgÀgÀ PÉÆÃmÉAiÀĪÀÄä£À ªÀÄUÀ vÉÆìĪÀÄä£À°è
9 vÀÄ[¾Ä*]¥ÀjAiÉÄ PÁzÀÄ ¸ÀvÀÄÛ ¸Àé[UÀÎð¯ÉÆÃPÀ¥Áæ*]¥ÀÛ£ÁzÀA
4.   Munagir Plates of Devapaladeva-(Ed) L.D.Barnett, Epigraphia Indica, Volume-18,  ¥ÀÅl 304.
5.    §AlgÀ ªÀÄÆ® MAzÀÄ CzsÀåAiÀÄ£À, ¥ÀæPÀl£É : §AlgÀ AiÀiÁ£É £ÁqÀªÀgÀ ¸ÀAWÀ, ªÀÄAUÀ¼ÀÆgÀÄ-1995.
6.    J »¸ÀÖj D¥sï ¸Ëvï PÉ£ÀgÁ, PÉ.«. gÀªÉÄñï, PÀ£ÁðlPÀ «±Àé«zÁå®AiÀÄ, zsÁgÀªÁqÀ-1970, ¥ÀÅl 8-34.
7.    ±ÀAUÀA vÀ«Ä¼ÀUÀA ªÀÄvÀÄÛ PÀ£ÀßqÀ £ÁqÀÄ £ÀÄr, C©ü£ÀªÀ ¥ÀæPÁ±À£À, ¨ÉAUÀ¼ÀÆgÀÄ-2010, ¥ÀÅl 177.
8.    J¦UÁæ¦üAiÀÄ PÀ£ÁðnPÀ (¥ÀjµÀÌøvÀ, aPÀ̪ÀÄUÀ¼ÀÆgÀÄ f¯Éè), ¸ÀA¥ÀÅl-12. £ÀgÀ¹AºÀgÁd¥ÀÅgÀ, ±Á.¸ÀA. 5.6.7 Qæ.±À. ¸ÀÄ.8 £ÉAiÀÄ ±ÀvÀªÀiÁ£À.
9.    E°è ¥À¹Ar UÀAUÀ PÀÄ® AiÀiÁªÀÅzÀÄ JA§ PÀÄvÀƺÀ® PÉgÀ½¸ÀÄvÀÛzÉ. F UÀAUÀ PÀÄ®PÀÆÌ PÀzÀA§ PÀÄ®PÀÆÌ EzÀÝ ªÉʪÁ»PÀ       ¸ÀA§AzsÀªÀ£ÀÄß  ¸ÀÆa¸ÀÄwÛzÉ.  vÀļÀÄCr JA§ ºÉ¸ÀgÀÆ «±ÉõÀªÁVzÉ. ºÀ°är ±Á¸À£ÀzÀ ªÀÄƼÀªÀ½îAiÀÄ£ÀÄß «dCgÀ¸À¤UÉ ¤ÃrzÀÄÝ w½zÀ «µÀAiÀĪÉÃ. ¥Àæ¸ÀÄÛvÀ ±Á¸À£ÀzÀ®Æè ªÀļÀªÀ½îîAiÀÄ£ÀÄß zÁ£À ¤ÃqÀ¯ÁVzÉ. F UÁæªÀÄ C¼ÀPÀzÀA§gÀÄ D¼ÀÄwÛzÀÝ ¥ÀæzÉñÀªÁVzÀÄÝ, Qæ.±À.425gÀ ºÉÆwÛUÁUÀ¯Éà CªÀgÀ C¢üãÀzÀ°èvÀÄÛ. vÀļÀÄCrAiÀÄ£ÀÄß PÀzÀA§ PÀÄ®¨sÁ¸ÀÌgÀ£ÉA¢gÀĪÀÅzÀjAzÀ CªÀ£ÀÄ vÀļÀÄ (D¼ÀÄ¥À) PÀzÀA§ªÀA±ÀUÀ¼À ªÉʪÁ»PÀ ¸ÀA§AzsÀzÀ ¸ÀAvÁ£À JA§ HºÉUÉ CªÀPÁ±À«zÉ.
10.   J¦UÁæ¦üAiÀÄ PÀ£ÁðnPÀ (¥ÀjµÀÌøvÀ, aPÀ̪ÀÄUÀ¼ÀÆgÀÄ f¯Éè), ¸ÀA¥ÀÅl-12. £ÀgÀ¹AºÀgÁd¥ÀÅgÀ ±Á.¸ÀASÉå. 6.
11.  J.PÀ. CzÉÃ, ±Á¸À£À ¸ÀASÉå 7. 
12.   J.PÀ. CzÉÃ, ±Á¸À£À. ¸ÀASÉå 5.
13.   JPÀÌnUÀ«ÃgÀ ¥ÀqÉ, J£ï.Dgï. ®°vÁA§, EwºÁ¸À zÀ±Àð£À, 25, 2010, ¥ÀÅl 263-267.
14.   History of The Tamils From The Earliest Times To 600 A.D- P.T. Srinivas Iyengar, Asian Educational Services-1929,  5 pMunagir Plates of Devapaladeva-(Ed) L.D.Barnett, Epigraphia Indica, Volume-18, ¥ÀÅl 304. 526.
15.  F ¥ÁæaãÀ PÉÆñÀgÀ «ÃgÀ¥ÀqÉ ºÁUÀÆ ºÉÆAiÀÄì¼ÀgÀ PÁ®zÀ ¨sÉÃgÀÄAqÀzÀ ªÉÆvÀÛzÀ PÀƸÀgÀ «ÃgÀ¥ÀqÉAiÀÄ £ÀqÀÄªÉ C£ÉÃPÀ ¸ÁªÀÄåvÉUÀ¼ÀÄ PÀAqÀħgÀÄwÛzÀÄÝ PÉÆòUÀgÉà PÀƸÀgÁVgÀ§ºÀÄzÉA§ £À£Àß HºÉUÉ EwÛÃZÉUÉ ¥ÀæPÀlªÁVgÀĪÀ ªÀÄAqÀå f¯Éè, PÀȵÀÚgÁd¥ÉÃmÉ vÁ®ÆèPÀÄ ¹Ã¼À£ÉgÉ UÁæªÀÄzÀ Qæ.±À.1215, CPÉÆÖçgï-5, ¸ÉÆêÀĪÁgÀzÀ vÉâAiÀÄļÀî ±Á¸À£ÀzÀ°è [²ªÀ±ÉÆÃzsÀ-JZï.JA. £ÁUÀgÁdgÁªï, gÀZÀ£Á ¥ÀæPÁ±À£À, ªÉÄʸÀÆgÀÄ-2008, ¥ÀÅl 354-355] vÀÄgÀÄUÁ¼ÀUÀzÀ°è ªÀÄrzÀ PÉƹUÀ JA§ ¥ÀǪÀð £ÁªÀĪÀżÀî «ÃgÀ£ÉƧâ£À G¯ÉèÃRªÀÅ ¥ÀÅ¶Ö ¤ÃqÀÄvÀÛzÉ.



Wednesday, May 22, 2013

ನಾಗಾವಿಯ ಕೋಡಿ ಬಸವಣ್ಣ ದೇವಾಲಯ


ಸಾಂಸ್ಕೃತಿಕ ಕೇಂದ್ರವಾಗಿ ನಾಗಾವಿಯ ಕೋಡಿ ಬಸವಣ್ಣ ದೇವಾಲಯ

ಡಾ. ಎಂ.ಎಸ್. ನರೇಗಲ್ಲ
ಮುಖ್ಯಸ್ಥರು ಇತಿಹಾಸ ವಿಭಾಗ ,
ಕೆ.ಎಸ್.ಎಸ್. ಮಹಾವಿದ್ಯಾಲಯ
, ಗದಗ-೫೮೨೧೦೧.



ದಗದಿಂದ ದಕ್ಷಿಣ-ಪೂರ್ವ ಭಾಗ ಅಂದರೆ ಆಗ್ನೇಯ ದಿಕ್ಕಿನ ದಾರಿಯಲ್ಲಿ ಮೊದಲಿಗೆ ಬರುವ ಗ್ರಾಮವೇ ಕಳಸಾಪೂರ. ಅಲ್ಲಿಂದ ಮುಂದೆ ತಿರುವು ಮುರುವುಗಳಿಂದ ಸಾಗಿದರೆ ನಮಗೆ ಕಾಣುವುದು ನಾಗಾವಿ ಗ್ರಾಮ. ಈ ದಾರಿಯ ತಿರುವಿನಲ್ಲಿ ಎಡಗಡೆ ಗುಡ್ಡದ ಅಡಿಯಲ್ಲಿ ಕಾಣುವುದೆ ಬಸವಣ್ಣನ ದೇವಾಲಯ. ಇದಕ್ಕೆ ಸ್ಥಳೀಯರು ಕೋಡಿ ಬಸವಣ್ಣನ ದೇವಾಲಯವೆಂದು ಕರೆಯುತ್ತಾರೆ. ಕೋಡಿ ಎಂದರೆ ಒಂದು ವಿಶಾಲವಾದ ಕೆರೆಯಲ್ಲಿ ಪೂರ್ಣ ಪ್ರಮಾಣದ ನೀರು ತುಂಬಿದ ನಂತರ ಅದರ ರಕ್ಷಣಾತ್ಮಕವಾಗಿ ಕೋಡಿ ಮೂಲಕ ನೀರು ಹೊರಹಾಕಲಾಗುತ್ತದೆ. ಇದೊಂದು ಕೆರೆಗಳಿಗೆ ಸೇಪ್ಟಿವಾಲ್ ಇದ್ದಂತೆ. ಈ ಸ್ಥಳದ ಪಕ್ಕಕ್ಕೆ ನಿರ್ಮಿಸಿದ ದೇವಾಲಯವೇ ಕೋಡಿ ಬಸವೇಶ್ವರ ದೇವಾಲಯ. ಆದರೆ ಈ ದೇವಾಲಯದಲ್ಲಿನ ಯಾವುದೇ ಶಾಸನದಲ್ಲಿ ಈ ಹೆಸರು ಉಲ್ಲೇಖವಿಲ್ಲ. ಅದರ ಬದಲಾಗಿ ಕೋಡಿ ಮಹಾಬಳೇಶ್ವರ ದೇವಾಲಯ ಎಂದು ಉಲ್ಲೇಖವಿದೆ. ಈ ದೇವಾಲಯವು ಕಲ್ಯಾಣ ಚಾಲುಕ್ಯರ ಪತನದ ನಂತರ ಅಧಿಕಾರಕ್ಕೆ ಬಂದ ಯಾದವ ದೊರೆಗಳ ಕಾಲದಲ್ಲಿ ನಿರ್ಮಾಣವಾಗಿದೆ.
ಕಲ್ಯಾಣ ಚಾಲುಕ್ಯ ಮತ್ತು ಕಳಚೂರಿ ವಂಶಗಳ ಅವಸಾನವು ಕರ್ನಾಟಕದಲ್ಲಿ ಅನೇಕ ಸಣ್ಣಪುಟ್ಟ ರಾಜವಂಶಗಳ ಉಗಮಕ್ಕೆ ದಾರಿಯಾಯಿತು. ಇವರಲ್ಲಿ ಸೇವುಣರು ಪ್ರಮುಖರು. ಇವರನ್ನು ದೇವಗಿರಿ ಯಾದವರೆಂದೂ ಕರೆಯಲಾಗುತ್ತದೆ. ಇವರು ನೆಲೆಸಿದ ನಾಡಿಗೆ ಸೇವುಣ ದೇಶವೆಂದು ಕರೆಯಲಾಯಿತು. ಇಂತಹ ಸೇವುಣರು ೧೨ನೇ ಶತಮಾನದ ಕೊನೆಯಿಂದ ೧೩ನೇ ಶತಮಾನದ ಕೊನೆಯವರೆಗೆ ಆಡಳಿತ ನಡೆಸಿದರು. ೧೩ನೇ ಶತಮಾನದ ವೇಳೆಗೆ ಯಾದವರ (ಸೇವುಣರು) ಹೊಯ್ಸಳರ ಹಾಗೂ ಮುಸ್ಲಿಂ ಅರಸರ ಮಧ್ಯ ಘರ್ಷಣೆಗಳು ಆರಂಭವಾಗಿ ದಕ್ಷಿಣ ಭಾರತ ಅರಸೊತ್ತಿಗೆ ದುರ್ಬಲವಾಯಿತು. ಉತ್ತರ ಭಾರತದ ಮುಸ್ಲಿಂ ದಾಳಿಕೋರರು ದಕ್ಷಿಣಕ್ಕೆ ತಮ್ಮ ಗಮನ ಹರಿಸಿದರು. ಇದರ ಪ್ರತಿಫಲವಾಗಿ ಕ್ರಿ.ಶ.೧೨೯೬ರಲ್ಲಿ ಅಲ್ಲಾವುದ್ದೀನ ಖಿಲ್ಜಿ ದೇವಗಿರಿಯನ್ನು ಲೂಟಿ ಮಾಡಿದನು. ಕ್ರಿ.ಶ.೧೩೦೭ರಲ್ಲಿ ಮಲ್ಲಿಕಾಪುರ್ ದೇವಗಿರಿ ಸಂಪತ್ತನ್ನು ದೋಚಿ ಅಲ್ಲಿನ ದೊರೆ ರಾಮಚಂದ್ರದೇವನನ್ನು ದೆಹಲಿಗೆ ಒಯ್ದನು. ಮುಂದೆ ಮಲ್ಲಿಕಾಪುರ್ ಕ್ರಿ.ಶ.೧೩೧೩ರಲ್ಲಿ ರಾಮಚಂದ್ರದೇವನ ಮಗ ಶಂಕರದೇವನನ್ನು ಕೊಂದನು. ಹೀಗೆ ದಕ್ಷಿಣದ ದೇವಗಿರಿ ಮುಸ್ಲಿಂ ರಾಜ್ಯವಾಯಿತು.
ಗದಗ ಪ್ರದೇಶವನ್ನು ಯಾದವರು ಆಳಿದ ಬಗ್ಗೆ ಹಲವಾರು ಶಾಸನಗಳು ಹಾಗೂ ಅರಸರು ಕಟ್ಟಿಸಿದ ದೇವಾಲಯಗಳು ಇಂದಿಗೂ ಈ ಭಾಗದಲ್ಲಿ ಕಂಡುಬರುತ್ತವೆ. ಅಂತಹ ದೇವಾಲಯಗಳಲ್ಲಿ ವಿನಾಶದ ಅಂಚಿನಲ್ಲಿರುವ ನಾಗಾವಿಯ ಕೋಡಿ ಬಸವೇಶ್ವರ ದೇವಾಲಯ.
ಈ ದೇವಾಲಯದ ಮುಂಭಾಗದ ಮುಖಮಂಟಪದ ನಾಲ್ಕು ಕಂಬಗಳ ಅಡಿಯಲ್ಲಿ ನಾಲ್ಕು ಯಾದವ ದೊರೆಗಳ ಶಾಸನಗಳಿವೆ. ಇವು ಈಗಾಗಲೇ ಪ್ರಕಟಗೊಂಡ ಶಾಸನಗಳಾಗಿವೆ. ಈ ನಾಲ್ಕೂ ಶಾಸನಗಳು ಯಾದವ ದೊರೆ ಸಿಂಘಣದೇವನ ಕಾಲಕ್ಕೆ ಸಂಬಂಧಿಸಿದವುಗಳಾಗಿವೆ. ಕ್ರಿ.ಶ.೧೨೦೦ರಿಂದ ೧೨೪೬ರ ಅವಧಿಯಲ್ಲಿ ಗದಗ ಪ್ರದೇಶವು ಸಿಂಘಣನ ಆಳ್ವಿಕೆಗೆ ಒಳಪಟ್ಟಿತ್ತು.
ಮೊದಲನೇ ಶಾಸನವು ೮ ಸಾಲುಗಳಿಂದ ಕೂಡಿದ್ದು, ಇದರಲ್ಲಿ ಯಾದವ ದೊರೆ ಸಿಂಘಣದೇವನ ಆಳ್ವಿಕೆಯ ೫ನೇ ವರ್ಷದಲ್ಲಿ ಅಂದರೆ ಕ್ರಿ.ಶ.೧೨೧೫ರ ಯುವಸಂವತ್ಸರ ಚೈತ್ರ ಅಷ್ಟಮಿ ಸೋಮವಾರದಂದು ನಾಗಾವಿಯ ಮಹಾಬಳೇಶ್ವರ ದೇವರಿಗೆ (ಈಗಿನ ಕೋಡಿ ಬಸವೇಶ್ವರ ದೇವಾಲಯ) ನಾಗಾವಿ ಗ್ರಾಮದ ಕಮ್ಮಾರ ವೃತ್ತಿ ಮಾಡುವ ಬಮ್ಮೋಜ ಎಂಬುವನು ತಾನು ತಯಾರಿಸಿದ ಕಬ್ಬಿಣ ಸಲಕರಣೆಗಳ ಮೇಲಿನ ಸುಂಕವನ್ನು ದೇವಾಲಯದ ಅರ್ಚಕ ಸೋಮೇಶ್ವರದೇವರ ಪಾದ ತೊಳೆದು ದಾನ ನೀಡಿದನೆಂದು ತಿಳಿದುಬರುತ್ತದೆ.
೨ನೇ ಶಾಸನವು ಕ್ರಿ.ಶ.೧೨೪೪ರಲ್ಲಿ ಕೆತ್ತಲಾಗಿದ್ದು ಇದು ೨೩ ಸಾಲುಗಳಿಂದ ಕೂಡಿದೆ. ಈ ಶಾಸನವೊಂದರಲ್ಲಿ ಮಾತ್ರ ಈ ದೇವಾಲಯವನ್ನು ಕೊಡಿ ಮಹಾಬಳ ದೇವರ್ಗೆ ಎಂದು ಕರೆಯಲಾಗಿದೆ. ಇದೇ ಹೆಸರು ಮುಂದೆ ಸ್ಥಳೀಯರಲ್ಲಿ ಕೋಡಿ ಬಸವಣ್ಣ ಎಂದು ರೂಢಿಯಲ್ಲಿದೆ. ಆದರೆ ಬಸವಣ್ಣ ದೇವರು ಎಂದು ಯಾವುದೇ ಶಾಸನದಲ್ಲಿ ಉಲ್ಲೇಖವಿಲ್ಲ. ಶಾಸನದಲ್ಲಿ ನಾಗಾವಿಯ ೧೦೪ ಮಹಾಜನರು ಈ ದೇವಾಲಯಕ್ಕೆ ಭೂಮಿ ದಾನ ನೀಡಿದ ಉಲ್ಲೇಖವಿದೆ.
೩ನೇ ಶಾಸನವು ಕ್ರಿ.ಶ.೧೨೪೬-೪೭ ರಲ್ಲಿ ರಚನೆಯಾಗಿದೆ. ಇದು ೧೪ ಸಾಲುಗಳಿಂದ ಕೂಡಿದೆ. ನಾಗಾವಿಯ ತೆರಿಗೆ ಅಧಿಕಾರಿಯೊಬ್ಬನು ದೇವಾಲಯಕ್ಕೆ ತೆರಿಗೆಯಿಂದ ಬಂದ ಹಣವನ್ನು ದಾನ ನೀಡಿದ ಉಲ್ಲೇಖವಿದೆ.
೪ನೇ ಕಂಬದ ಕೊನೆಯ ಶಾಸನ ೧೯ ಸಾಲುಗಳಿಂದ ಕೂಡಿದ್ದು ಸಿಂಘಣನ ನಂತರ ಅಧಿಕಾರಕ್ಕೆ ಬಂದ ಕೃಷ್ಣನ ಕಾಲದಲ್ಲಿ ಅಂದರೆ ೧೨೫೫ರಲ್ಲಿ ಇದನ್ನು ರಚಿಸಲಾಗಿದೆ. ಇದರಲ್ಲಿ ಶ್ರೀ ಕೋಡಿ ಮಹಾಬಳೇಶ್ವರ ದೇವರಿಗೆ ಲಾಳಗೌಸಟ ನಾಯಕನು ಭೂಮಿಯನ್ನು ದಾನ ನೀಡಿದನೆಂದು ತಿಳಿದುಬರುತ್ತದೆ. ಇವನು ದಾನ ನೀಡಿದ ಭೂಮಿಯನ್ನು ಕಾಲಡಿ ಎಂಬ ಗ್ರಾಮದಿಂದ ಖರೀದಿಸಿದ್ದನೆಂದು ತಿಳಿದುಬರುತ್ತದೆ. ಕಾಲಡಿ ಎಂಬುದು ಇಂದಿನ ಕದಡಿ ಗ್ರಾಮವಿರಬಹುದು.
ಹೀಗೆ ನಾಲ್ಕು ಶಾಸನಗಳ ಈ ದೇವಾಲಯ ನಮ್ಮ ಪರಂಪರೆಯನ್ನು ಬಿಂಬಿಸುತ್ತದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಅದರ ಬಲಭಾಗದಲ್ಲಿ ಗೋಡೆಗೆ ಹೊಂದಿಕೊಂಡು ದೊಡ್ಡದಾದ ತಗ್ಗು ಕಂಡುಬಂದಿದೆ. ಬಹುಶಃ ವಿಗ್ರಹಚೋರರು ವಿಗ್ರಹದ ಪಕ್ಕದಲ್ಲಿ ಸಂಪತ್ತು ಇರಬಹುದೆಂದು ಈ ಕೆಲಸವನ್ನು ಮಾಡಿರಬಹುದು. ಈ ಗರ್ಭಗೃಹ ಇಂದು ಅವಸಾನದ ಅಂಚಿನಲ್ಲಿದೆ. ಇದರ ಬಾಗಿಲು ತೋರಣದ ಭಾಗದಲ್ಲಿ ಸುಂದರವಾದ ಕೆತ್ತನೆ ಇದೆ. ದೇವಾಲಯದ ಕಂಬಗಳು ಕಲ್ಯಾಣ ಚಾಲುಕ್ಯರ ವಾಸ್ತು ಶಿಲ್ಪದ ಅಂಶಗಳನ್ನು ಬಿಂಬಿಸುತ್ತವೆ.
ದೇವಾಲಯದ ಪೂರ್ವ ಮತ್ತು ಪಶ್ಚಿಮದ ಗೋಡೆಗಳು ಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತದಲ್ಲಿವೆ. ಗೋಡೆಯ ರಕ್ಷಣೆಗೆ ತಾತ್ಕಾಲಿಕವಾಗಿ ಕಲ್ಲಿನ ತಡೆಗೋಡೆಗಳನ್ನು ಸ್ಥಳೀಯರು ನಿರ್ಮಿಸಿದ್ದಾರೆ. ದೇವಾಲಯದ ಶಿಖರವು ದ್ರಾವಿಡ ಶೈಲಿಯಲ್ಲಿ ಉತ್ಕೃಷ್ಟ ಕುಸುರಿನ ಕೆಲಸದೊಂದಿಗೆ ನಿರ್ಮಿಸಲಾಗಿದೆ. ಇದೂ ಕೂಡ ಶಿಥಿಲಾವಸ್ಥೆಯಲ್ಲಿದೆ. ಸುಂದರವಾದ ಕೆತ್ತನೆಯಿಂದ ಕೂಡಿದ ಶಿಖರದ ಮೇಲೆ ಗಿಡ-ಗಂಟೆಗಳು ಬೆಳೆದು ಬೀಳುವ ಸ್ಥಿತಿಯಲ್ಲಿದೆ. ಶಿಖರದ ತುದಿಯ ಕಲ್ಲು (ಆಮಲಕ) ಕೆಳಗೆ ಬಿದ್ದು ಒಡೆದುಹೋಗಿದೆ. ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಸಾಂಪ್ರದಾಯಕವಾಗಿ ಜಾತ್ರೆ ನಡೆಯುತ್ತದೆ. ಎನ್ನುವುದು ಸ್ಥಳೀಯರ ಅಭಿಪ್ರಾಯ. ಆದರೆ ಜಾತ್ರೆ ಎಂದರೆ ಕೇವಲ ದೇವರ ಪೂಜೆ ಮಾಡಿ ಕಲ್ಲಿನ ದೇವರಿಗೆ ನೈವೇದ್ಯ ಮಾಡುವುದಲ್ಲ, ಆ ದೇವಾಲಯದ ಸ್ಥಿತಿ-ಗತಿಯನ್ನು ಗಮನಿಸಿ ಅದರ ರಕ್ಷಣೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದೇ ನಿಜವಾದ ಜಾತ್ರೆ.
ಒಟ್ಟಿನಲ್ಲಿ ಈ ಕೋಡಿ ಬಸವಣ್ಣ ದೇವಾಲಯವು ನಾಗಾವಿ ಗ್ರಾಮದ ಧಾರ್ಮಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಇಂದಿಗೂ ಸ್ಥಳೀಯ ಜನರು ಈ ದೇವಾಲಯದ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಊರಿನ ಆರಾಧ್ಯ ದೇವರೆಂದು ಪೂಜಿಸುತ್ತಿದ್ದರು.






Sunday, May 19, 2013

ನರಸಪ್ಪನ ಬೆಟ್ಟ



ನರಸಪ್ಪನ ಬೆಟ್ಟ ಒಂದು ಐತಿಹಾಸಿಕ ಪರಿಶೀಲನೆ
ಪ್ರೊ. ಜೆ.ಕೆ. ಮಲ್ಲಿಕಾರ್ಜುನಪ್ಪ
ಮುಖ್ಯಸ್ಥರುಇತಿಹಾಸ ವಿಭಾಗ,
ಎ.ಆರ್.ಜೆ. ಕಲಾ ಮತ್ತು ವಾಣಿಜ್ಯ ಕಾಲೇಜು,
ದಾವಣಗೆರೆ-೫೭೭೦೦೪.


ರಪನಹಳ್ಳಿ ತಾಲ್ಲೂಕಿನ ಹೋಬಳಿ ಕೇಂದ್ರ ಅರಸೀಕೆರೆ, ಇದೊಂದು ಐತಿಹಾಸಿಕ ಕೇಂದ್ರವಾಗಿದ್ದು ಪ್ರಾಚೀನ ಕಾಲದಲ್ಲಿ ನೊಳಂಬರ ಆಳ್ವಿಕೆಗೆ ಒಳಪಟ್ಟಿರುವ ನೊಳಂಬ ನರಸೀಕೆರೆ ಎಂಬ ಹೆಸರು ಇತ್ತು. ಹಾಗೂ ಹೊನ್ನರಸೀಕೆರೆ ಎಂದು ಸಹ ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ನೊಳಂಬ ಪಲ್ಲವರು, ಉಚ್ಚಂಗಿಯ ಪಾಂಡ್ಯರು ಮುಂತಾದವರ ಆಳ್ವಿಕೆಗೆ ಒಳಪಟ್ಟಿತ್ತು. ವಿಜಯನಗರ ಕಾಲದಲ್ಲಿ ಅವರ ಆಳ್ವಿಕೆಗೆ ಒಳಪಟ್ಟಿದ್ದ ಅರಸೀಕೆರೆ ಆ ನಂತರ ಹರಪನಹಳ್ಳಿ ಪಾಳೆಯಗಾರರ ಆಳ್ವಿಕೆಗೆ ಒಳಪಟ್ಟಿತು.
ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ ಸುಮರು ೧೬ ಕಿ.ಮೀ. ದೂರದಲ್ಲಿ ಇರುವ ಈ ಊರಿನಲ್ಲಿ ಹರಪನಹಳ್ಳಿ ಪಾಳೆಯಗಾರರ ಕಾಲದ ಶಾಸನವೊಂದು ದೊರೆತಿದೆ. ಇತಿಹಾಸ ಪ್ರಸಿದ್ಧ ಪಂಚಗಣಾಧೀಶ್ವರರಲ್ಲಿ ಒಬ್ಬರಾಗಿದ್ದ ಶ್ರೀ ಕೋಲಶಾಂತೇಶ್ವರರ ಕೇಂದ್ರ ಸ್ಥಾನವೂ ಇದಾಗಿತ್ತು. ಹರಪನಹಳ್ಳಿ ಪಾಳೆಯಗಾರರ ಕಾಲದ ಅನೇಕ ಕಟ್ಟಡಗಳು ಇಲ್ಲಿ ಕಂಡುಬರುತ್ತವೆ. ಹರಪನಹಳ್ಳಿ ಪಾಳೆಯಗಾರರಲ್ಲಿ ಅತ್ಯಂತ ಪ್ರಸಿದ್ಧವಾದ ಒಂದನೇ ಸೋಮಶೇಖರ ನಾಯಕನ ಮಗನ ಸಮಾಧಿಯೂ ಇಲ್ಲಿಯ ಕೆರೆದಂಡೆಯ ಮೇಲೆ ಕಂಡುಬರುತ್ತದೆ.
ಅರಸೀಕೆರೆಯಿಂದ ಕಂಚೀಕೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೨ ಕಿ.ಮೀ. ಸಾಗಿ ಬಲಗಡೆ ತಿರುವು ಪಡೆದುಕೊಂಡು ಸಾಗಿದರೆ ‘ಯರಬಳ್ಳಿ ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದಲ್ಲಿ ಅತಿ ಪ್ರಾಚೀನವಾದ ಶಿವ ದೇವಾಲಯವಿದೆ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಭೂಮಟ್ಟದಿಂದ ಸುಮಾರು ೮೦೦-೧೦೦೦ ಅಡಿಗೂ ಹೆಚ್ಚು ಎತ್ತರವಾದ ಹಾಗೂ ಸುಮಾರು ೭೦೦ ಎಕರೆ ಭೂಪ್ರದೇಶವನ್ನು ಆವರಿಸಿಕೊಂಡ ಒಂದು ಬೆಟ್ಟ ಪ್ರದೇಶವಿದೆ. ಈ ಬೆಟ್ಟವನ್ನು ಯರಬಳ್ಳಿ ಬೆಟ್ಟ, ನರಸಪ್ಪನ ಬೆಟ್ಟ, ನರಸದೇವರ ಬೆಟ್ಟ, ನರಸಿಂಹದೇವರ ಬೆಟ್ಟ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಭೌಗೋಳಿಕವಾಗಿ ಬಹು ಆಯಕಟ್ಟಿನ ಸ್ಥಳದಲ್ಲಿ ಇರುವ ಈ ಬೆಟ್ಟದ ಸುತ್ತಲೂ ಅರಣ್ಯ ಆವರಿಸಿತ್ತು. ಆದರೆ ಇಂದು ಈ ಅರಣ್ಯ ಪ್ರದೇಶ ಮಾಯವಾಗಿದ್ದು ಭೂಮಿ ಸಾಗುವಳಿಗೆ ಒಳಪಟ್ಟಿದೆ. ಈ ಪ್ರದೇಶದ ಸುತ್ತಮುತ್ತ ಅಡವಿಹಳ್ಳಿ, ಅಡವಿ ಮಲ್ಲನಕೇರೆ, ಅಡವಿಆನಂದಹಳ್ಳಿ, ಅಡವಿಮಲ್ಲಾಪುರ ಮುಂತಾದ ಹೆಸರಿನ ಗ್ರಾಮಗಳು ಕಂಡುಬರುತ್ತವೆ.
ಬೆಟ್ಟಶ್ರೇಣಿಗೆ ಹೊಂದಿಕೊಂಡಂತೆ ಪ್ರಾಚೀನ ಕಾಲದಲ್ಲಿ ಅರಸನಹಳ್ಳಿ ಅರಸಾಪುರ ಎಂಬ ಹೆಸರಿನ ಗ್ರಾಮವೊಂದು ಇತ್ತಂತೆ. ಆ ಗ್ರಾಮದ ಅವಶೇಷಗಳು ಕಂಡುಬರುತ್ತವೆ. ಮುಖ್ಯವಾಗಿ ರೈತರ ಹಗೇವುಗಳು ಕಂಡುಬರುತ್ತವೆ. ಈ ಬೆಟ್ಟದಲ್ಲಿ ನರಸಿಂಹದೇವರ ದೇವಾಲಯ ಇದ್ದುದರಿಂದಾಗಿ ಈ ‘ಬೇಚಿರಾಕ್ ಗ್ರಾಮಕ್ಕೆ ನರಸಾಪುರ ಎಂದು ಸಹ ಕರೆಯಲಾಗುತ್ತಿತ್ತು. ಒಟ್ಟಾರೆ ಈ ಬೆಟ್ಟ ಶ್ರೇಣಿಯನ್ನು ನರಸಿಂಹ ಬೆಟ್ಟ, ನರಸಪ್ಪನ ಬೆಟ್ಟ, ನರಸಿಂಹ ದೇವರ ಬೆಟ್ಟ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಅರಸೀಕೆರೆಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೪ ಕಿ.ಮೀ. ದೂರದಲ್ಲಿ ಇರುವ ಈ ನರಸಪ್ಪನ ಬೆಟ್ಟ ಒಂದು ಐತಿಹಾಸಿಕ ಕೇಂದ್ರವಾಗಿದ್ದು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸುಮಾರು ೨೫-೩೦ ಕಿ.ಮೀ.ಗಳ ವ್ಯಾಪ್ತಿಯಲ್ಲಿ ಕಂಡುಬರುವ ಬೆಟ್ಟಗುಡ್ಡಗಳಲ್ಲಿ ಅತ್ಯಂತ ಎತ್ತರವಾದ ಬೆಟ್ಟ ಶ್ರೇಣಿ ಇದಾಗಿದೆ.
ನರಸಪ್ಪನ ಬೆಟ್ಟದ ಮಧ್ಯಭಾಗದಲ್ಲಿ ಬೃಹತ್ ಗುಹೆ ಯೊಂದು ಕಂಡುಬರುತ್ತದೆ. ಇಲ್ಲಿಯ ಲಕ್ಷಣಗಳನ್ನು ಅವಲೋಕಿ ಸಿದರೆ ಇದು ಮಾನವ ನಿರ್ಮಿತ ಗುಹೆಯಾಗಿರಲಿಕ್ಕೆ ಸಾಧ್ಯ. ಇದನ್ನು ಪರಿಗಣಿಸಿದರೆ ಇಲ್ಲಿ ಬೃಹತ್ ಶಿಲಾಯುಗದ ಮಾನವ ನೆಲೆಸಿದ್ದಿರಬಹುದೆಂದು ಹೇಳಬಹುದು. ಇದಕ್ಕೆ ಪೂರಕವಾಗಿ ಹೇಳುವಂತೆ ನೀರಿನ ಆಸರೆಗಳು ಬೆಟ್ಟದ ಕೆಳಭಾಗದಲ್ಲಿ ಕಂಡುಬರುತ್ತವೆ.
ಐತಿಹಾಸಿಕ ಕಾಲಕ್ಕೆ ಬಂದರೆ ಈ ಬೆಟ್ಟ ಪರಿಸರದಲ್ಲಿ ಅನೇಕ ಕುರುಹುಗಳು ಕಂಡುಬರುತ್ತವೆ. ಈ ಬೆಟ್ಟಕ್ಕೆ ಹೊಂದಿಕೊಂಡಿರುವ ಯರಬಳ್ಳಿ ಗ್ರಾಮದಲ್ಲಿ ಅತಿಪ್ರಾಚೀನ ಈಶ್ವರ ದೇವಾಲಯ ಕಂಡುಬರುತ್ತದೆ. ಈ ಬೆಟ್ಟದ ಪರಿಸರದಲ್ಲಿ ಎರಡು ಶಾಸನಗಳು ಕಂಡುಬರುತ್ತವೆ. ಗುಹೆಗೆ ಅಂಟಿ ಕೊಂಡಿರುವ ಬೃಹತ್ ಶಿಲಾ ಬಂಡೆಯಲ್ಲಿ ಒಂದು ಶಾಸನ ಕಂಡುಬರುತ್ತಿದ್ದು ಓದುವ ಸ್ಥಿತಿಯಲ್ಲಿ ಇರದೆ ಹಾಳಾಗಿದೆ. ಈ ಶಾಸನ ಬಾದಾಮಿ ಚಲುಕ್ಯ ಚಕ್ರವರ್ತಿ ೨ನೇ ಪುಲಕೇಶಿಯ ಕಾಲಕ್ಕೆ ಸಂಬಂಧಿಸಿದ್ದು ಜೈನ ಮುನಿಗಳು ಈ ಬೆಟ್ಟಶ್ರೇಣಿಯಲ್ಲಿ ತಪಸ್ಸು, ಸಲ್ಲೇಖವ್ರತವನ್ನು ಆಚರಿಸುತ್ತಿದ್ದರೆಂದು ಹೇಳಲಾಗಿದೆ. ಆದರೆ ಈ ಪರಿಸರದಲ್ಲಿ ಯಾವುದೇ ಜೈನ ಅವಶೇಷಗಳು ಇಂದು ಕಂಡುಬರುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕ್ಷೇತ್ರಕಾರ‍್ಯದಲ್ಲಿ ನನ್ನೊಂದಿಗೆ ಇದ್ದ ಇಲ್ಲಿನ ನರಸಿಂಹನ ಪೂಜಾರಿ ಮನೆತನದ ಅಡ್ಡಿ ನಾಗಪ್ಪ ಅವರು ಇಂದಿಗೂ ಸಹ ಅನೇಕ ಜೈನರು ಈ ಸ್ಥಳಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ. ಇದನ್ನು ಪರಿಗಣಿಸಿದಲ್ಲಿ ಬಾದಾಮಿ ಚಲುಕ್ಯರ ಕಾಲದಲ್ಲಿ ಈ ಬೆಟ್ಟ ಜೈನರ, ಜೈನಮುನಿಗಳ ಕೇಂದ್ರವಾಗಿತ್ತು ಎಂದು ಅಭಿಪ್ರಾಯಪಡಬಹುದಾಗಿದೆ.
ನರಸಪ್ಪನ ಬೆಟ್ಟದ ಮಧ್ಯಭಾಗದಲ್ಲಿ ಇರುವ ಗುಹೆಯ ಪ್ರವೇಶದಲ್ಲಿ ಶಿವಲಿಂಗದ ಬೃಹತ್ ಶಿಲ್ಪವಿದೆ. ಇದು ಸುಮಾರು ೪-೫ ಅಡಿ ಎತ್ತರದ ಬೃಹತ್ ಶಿವಲಿಂಗವಾಗಿದ್ದು ಈ ಪರಿಸರ ಶೈವಕೇಂದ್ರವಾಗಿತ್ತು ಎಂಬುದನ್ನು ದೃಢಪಡಿಸುತ್ತದೆ. ಇದಕ್ಕೆ ಹೊಂದಿಕೊಂಡಂತೆ ೫ ಅಡಿ ಎತ್ತರದ ಭೈರವನ ಶಿಲ್ಪ ಮತ್ತು ೨ ಅಡಿ ಎತ್ತರದ ದುರ್ಗಾಮಾತೆಯ ಶಿಲ್ಪ ಕಂಡುಬರುತ್ತವೆ. ಇದನ್ನು ಪರಿಗಣಿಸಿ ಇಲ್ಲಿ ಭೈರವ ಆರಾಧನೆ ಕಾಳಾಮುಖ ಶೈವ ಆರಾಧನೆ ಇತ್ತು ಎನ್ನಬಹುದು. ಭೈರವನ ಶಿಲ್ಪ ವಿಶಿಷ್ಟವಾಗಿದ್ದು ೬ ಕೈಗಳು, ತ್ರಿಶೂಲ, ರುಂಡ, ಖಡ್ಗಳಿದ್ದು ಬಿಲ್ಲು ಹಿಡಿದಂತೆ ಕಂಡುಬರುತ್ತದೆ. ಕೊರಳಿಗೆ ರುಂಡ ಮಾಲೆಯನ್ನು ಧರಿಸಿದ್ದಾನೆ. ಪಾದತಳದ ಎಡಭಾಗದಲ್ಲಿ ನಾಯಿ ಬಲಭಾಗದಲ್ಲಿ ಒಬ್ಬ ಮಹಿಳೆ ಕೈ ಮುಗಿದು ಕುಳಿತಂತೆ ಇದೆ.
ದುರ್ಗಾಮಾತೆಯ ಶಿಲ್ಪ ನಾಟ್ಯಭಂಗಿಯಲ್ಲಿ ಇದ್ದು ೮ ಕೈಗಳೊಂದಿಗೆ ನರ್ತಿಸುವಂತೆ ಇದೆ. ಇವುಗಳನ್ನು ನಾವು ಪರಿಗಣಿಸಿದಾಗ ಇಲ್ಲಿ ಶೈವ ಕಾಳಾಮುಖ ಶೈವ ಆಚರಣೆ ಪ್ರಚಲಿತ ಇದ್ದವು ಎನ್ನಬಹುದು.
ಇದೇ ಗುಹೆಯಿಂದ ಹರಪನಹಳ್ಳಿ ಪಾಳೆಯಗಾರರ ಬಹುಮುಖ್ಯ ಕೇಂದ್ರವಾದ ಕೂಲಹಳ್ಳಿಯವರೆಗೆ ಸುರಂಗ ಮಾರ್ಗವಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಹೇಳಿಕೆಯನ್ನು ಪರಿಗಣಿಸಿದ್ದಲ್ಲಿ; ಈ ನರಸಪ್ಪನ ಬೆಟ್ಟ ಹರಪನಹಳ್ಳಿ ಪಾಳೆಯಗಾರರ ಕಾಲದ ಒಂದು ಮುಖ್ಯ ಕೇಂದ್ರವಾಗಿತ್ತು ಎಂದು ಹೇಳಬಹುದು. ಇದನ್ನು ಸಮರ್ಥಿಸಲು ಕೂಲಹಳ್ಳಿಯಲ್ಲಿಯೂ ಸಹ ಒಂದು ಸುರಂಗ ಮಾರ್ಗ ಕಂಡುಬರುತ್ತದೆ. ಗುಹೆಯನ್ನು ದಾಟಿ ಮುಂದೆ ಸಾಗಿದಲ್ಲಿ ನಮಗೆ ಕ್ರಿ.ಶ. ೧೫೧೦ ದಿನಾಂಕವನ್ನೊಳಗೊಂಡ ಶಾಸನವೊಂದು ಕಂಡುಬರುತ್ತದೆ. ಇದು ಸುಸ್ಥಿತಿಯಲ್ಲಿ ಇದ್ದು ದೇವರಸ ಮತ್ತು ಗಂಗೆಯ ಮಗನಾದ ಗಿರಿದೇವನು ಇಲ್ಲಿಯ ಯೋಗಾನರಸಿಂಹ ದೇವಾಲಯಕ್ಕೆ ಶಿಖರವನ್ನು ನಿರ್ಮಿಸಿದನು ಎಂಬ ಮಾಹಿತಿ ನೀಡುತ್ತದೆ. ಪ್ರಸ್ತುತ ಈ ಬೆಟ್ಟದ ಮಧ್ಯಭಾಗದಲ್ಲಿ ಇರುವ ಈ ಯೋಗಾನರಸಿಂಹ ದೇವಾಲಯವನ್ನು ಅವಲೋಕಿಸಿ ದರೆ ಇದಕ್ಕೆ ಯಾವ ಶಿಖರವು ಕಂಡುಬರುವುದಿಲ್ಲ. ಹೆಬ್ಬಂಡೆಯನ್ನು ಮೇಲ್ಛಾವಣಿ ಯಾಗಿ ಬಳಸಿ ಕೇವಲ ಸಣ್ಣ ಎರಡು ಗೋಡೆಗಳನ್ನೊಳ ಗೊಂಡು ಈ ದೇವಾಲಯ ನಿರ್ಮಾಣಗೊಂಡಿದೆ. ಈ ದೇವಾಲಯದ ಎದುರುಗಡೆ ದೀಪಸ್ತಂಭ ಕಂಡುಬರುತ್ತದೆ. ಇಲ್ಲಿಯ ಪೂಜಾರಿ ಮನೆತನದ ಅರಸೀಕೆರೆಯ ಅಡ್ಡಿ ನಾಗಪ್ಪ ಹೇಳುವಂತೆ; ಇಲ್ಲಿಯ ಯೋಗಾ ನರಸಿಂಹನ ಪೂಜೆಯನ್ನು ಈತನ ಪೂರ್ವಿಕರು ಮುತ್ತಜ್ಜನ ಕಾಲದಿಂದಲೂ ನಿರ್ವಹಣೆ ಮಾಡಿಕೊಂಡು ಬರುತ್ತಿರು ವರಂತೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಕಂಡುಬರುವುದಿಲ್ಲ. ಇಲ್ಲಿಯ ಪೂಜೆಗೆ ಜೈನ ಧರ್ಮದವರು ಸಹ ಬರುತ್ತಾರಂತೆ. ಈ ಅಂಶಗಳನ್ನು ಪರಿಗಣಿಸಿದಲ್ಲಿ ವಿಜಯನಗರ ಕಾಲದಲ್ಲಿ ಇತರೆಡೆ ಕಂಡುಬಂದಂತೆ ಇಲ್ಲಿಯೂ ಸಹ ವೈಷ್ಣವ ಆರಾಧನೆ ಬಲಗೊಂಡಂತೆ ಕಾಣುತ್ತದೆ. ಹೀಗಾಗಿ ಇಲ್ಲಿ ಯೋಗಾ ನರಸಿಂಹನ ದೇವಾಲಯ ಸ್ಥಾಪನೆಯಾಗಿರಬಹುದು. ದೇವಾಲಯದ ಒಳಗೆ ಉಗ್ರನರಸಿಂಹನ ರೂಪದಂತೆ ಕಾಣುವ ಯೋಗಾನರಸಿಂಹನ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪದ ಎದುರಿಗೆ ಬಸವನ ನೂತನ ವಿಗ್ರಹವನ್ನು ಮಾಡಿಸಿ ಕ್ರಿ.ಶ. ೨೦೦೩ರಲ್ಲಿ ಸ್ಥಾಪಿಸಿದರಂತೆ. ಭಗ್ನಗೊಂಡ ಹಳೆಯ ಶಿಲ್ಪವನ್ನು ಮರುಜೋಡಿಸಿ ಇನ್ನೊಂದು ಭಾಗದಲ್ಲಿ ಇಟ್ಟಿದ್ದಾರೆ. ಕುಂ.ಬಾ. ಸದಾಶಿವಪ್ಪನವರು ಕ್ರಿ.ಶ. ೧೭೦೦ ರಲ್ಲಿ ಅರಸೀಕೆರೆಯ ಕೋಲುಶಾಂತೇಶ್ವರರು ಜೈನರನ್ನು ಮತಾಂತರ ಗೊಳಿಸಿ ಅವರನ್ನು ಲಿಂಗವಂತರನ್ನಾಗಿ ಮಾಡಿದರು ಎಂದು ತಮ್ಮ ಹರಪನಹಳ್ಳಿ ತಾಲ್ಲೂಕು ಪರಿಚಯ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಅಂಶಗಳನ್ನು ಪರಿಗಣಿಸಿದಲ್ಲಿ ಈ ನರಸಪ್ಪನ ಬೆಟ್ಟ ಶೈವ, ವೈಷ್ಣವ, ಜೈನರ ಕೇಂದ್ರವಾಗಿತ್ತು. ಈ ನರಸಪ್ಪನ ಬೆಟ್ಟ ಪ್ರಸ್ತುತ ಯೋಗಾನರಸಿಂಹಸ್ವಾಮಿಯ ಆರಾಧನೆಯ ಕೇಂದ್ರವಾಗಿದ್ದು ಬರಗಾಲ ಬಂದಾಗ ರೈತರು ಇಲ್ಲಿಗೆ ಬಂದು ಮಳೆಕೀಲು ಪರ್ವ ನಡೆಸುತ್ತಾರೆ.
ನರಸಪ್ಪನ ಬೆಟ್ಟದ ವಿಶೇಷ ಐತಿಹಾಸಿಕ ಮಹತ್ವ ಮತ್ತು ಪ್ರಾಮುಖ್ಯತೆಯೊಂದಿಗೆ ಇಲ್ಲಿಯ ಆಕರ್ಷಣೆ ಏನೆಂದರೆ, ಬೆಟ್ಟದ ತುದಿಯಲ್ಲಿ ಕಂಡುಬರುವ ಕೋಟೆ ಮತ್ತು ವೀಕ್ಷಣಾ ಬತೇರಿಗಳು. ಬೆಟ್ಟದ ತುದಿಗೆ ಬುರುಜು ಏರಿಕೊಂಡು ಹೋಗಲು ಹಿಂದೆ ಸುಸಜ್ಜಿತವಾದ ಮಾರ್ಗ ಇದ್ದಿರಬಹುದು ಇಂದು ಅದರ ಕುರುಹುಗಳು ಕಾಣಿಸುತ್ತವೆ. ಈಗಲೂ ಸಹ ಹೆಚ್ಚಿನ ಪ್ರಯಾಸವಿಲ್ಲದೆ ಸುಲಭವಾಗಿ ಬೆಟ್ಟವನ್ನು ಏರಿ ತುದಿಯನ್ನು ತಲುಪಬಹುದು. ಆ ತುದಿಯನ್ನು ತಲುಪಿ ವೀಕ್ಷಣೆ ಮಾಡಿದಾಗ ಸುಮಾರು ೫೦-೬೦ ಕಿ.ಮೀ. ದೂರದವರೆಗೆ ಬರಿಗಣ್ಣಿನಿಂದ ನೋಡಬಹುದಾದ ಬಯಲು ಪ್ರದೇಶ ಕಂಡುಬರುತ್ತದೆ. ಈ ಬೆಟ್ಟದ ತುದಿಯ ಭೂ ಪ್ರದೇಶ ಸೀಮಿತವಾಗಿದ್ದು ಸುಮಾರು ೧೦-೧೫ ಸಾವಿರ ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಈ ತುದಿಯ ಸುತ್ತಲೂ ರಕ್ಷಣಾ ಗೋಡೆ ಇದ್ದು ಎಂಟು ದಿಕ್ಕಿನಲ್ಲಿ ವೀಕ್ಷಣಾ ಬತೇರಿಗಳಿವೆ. ಇವುಗಳಲ್ಲಿ ೪ ಸುಸ್ಥಿತಿಯಲ್ಲಿದ್ದು ಉಳಿದ ನಾಲ್ಕು ಹಾಳಾಗಿವೆ. ಕೋಟೆಯ ಎಲ್ಲಾ ಲಕ್ಷಣಗಳನ್ನು ಗುರುತಿಸಬಹುದು. ಪ್ರವೇಶದ್ವಾರವನ್ನು ಕೇವಲ ಕುರುಹುಗಳಿಂದ ಗುರುತಿಸ ಬಹುದಾಗಿದೆ. ಈ ಬೆಟ್ಟದ ಮೇಲುತುದಿಯಲ್ಲಿ ಎರಡು ಹಂತಗಳ ರಕ್ಷಣಾ ವ್ಯವಸ್ಥೆ ಇದ್ದಂತೆ ಕಂಡುಬರುವುದು. ಈ ಎರಡೂ ಹಂತಗಳನ್ನು ಪ್ರತ್ಯೇಕ ಗೋಡೆ ಬೇರ್ಪಡಿಸುತ್ತದೆ. ಈ ಗೋಡೆಯ ಸುತ್ತಲೂ ವೀಕ್ಷಣೆ ಮಾಡಲು ಬಂದೂಕಿನ ನಳಿಕೆಗಳ ಕಿಂಡಿಗಳಿವೆ. ಬತೇರಿಗಳ ಮೇಲಿಂದ ನೋಡಿದಾಗ ಉಚ್ಚಂಗಿದುರ್ಗದ ಕೋಟೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಕೋಟೆಯ ಒಳಗಡೆ ಗಾರೆಯಿಂದ ನಿರ್ಮಿಸಿದ ಕೆಲವು ಚಿಕ್ಕ ಚಿಕ್ಕ ಕಟ್ಟಡ ಅವಶೇಷಗಳಿವೆ. ಕೋಟೆಯ ಕಟ್ಟಡಗಳಲ್ಲಿ ವಿಜಯನಗರದ ಅಂತಿಮಕಾಲದ ಹಾಗೂ ಹರಪನಹಳ್ಳಿ ಪಾಳೆಯಗಾರರ ಕಾಲದ ಕಟ್ಟಡ ಲಕ್ಷಣಗಳನ್ನು ಗುರುತಿಸ ಬಹುದು, ಹೆಚ್ಚಿನ ಜನವಸತಿಯ ಲಕ್ಷಣಗಳು ಕಂಡುಬರುವು ದಿಲ್ಲ. ಗಾರೆ, ಇಟ್ಟಿಗೆ, ಮಡಿಕೆ ಕುಡಿಕೆಯ ಅವಶೇಷಗಳು ಕಂಡುಬರುತ್ತವೆ. ಇಲ್ಲಿಯ ಮಣ್ಣನ್ನು ಪರೀಕ್ಷಿಸಿದಾಗ ಬೃಹತ್ ಪ್ರಮಾಣದಲ್ಲಿ ಬೂದಿಯ ಮಿಶ್ರಣ ಕಂಡುಬರುತ್ತದೆ. ಈ ಕೋಟೆ ಹರಪನಹಳ್ಳಿ ಮತ್ತು ಉಚ್ಚಂಗಿದುರ್ಗಕ್ಕೆ ಮಧ್ಯಭಾಗ ದಲ್ಲಿದೆ. ಕೋಟೆಯ ಒಳಗಡೆ ವಾಸಿಸುವವರಿಗಾಗಿ ನೀರಿನ ಸೌಕರ‍್ಯಕ್ಕಾಗಿ ಮಳೆಗಾಲದಲ್ಲಿ ಬೀಳುವ ನೀರನ್ನು ಸಂಗ್ರಹಿಸಲು ಬೃಹತ್ ಹೊಂಡವನ್ನು ನಿರ್ಮಿಸಿಕೊಂಡಿದ್ದರು.  ಇಲ್ಲಿ ನಿಧಿಚೋರರು ಆಗಾಗ ದಾಳಿಯಿಟ್ಟು ಭೂಮಿಯನ್ನು ಅಗೆದಿರುವ ಗುರುತುಗಳು ಕಂಡುಬರುತ್ತವೆ. ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ಕಂಡುಬರುವುದೇನೆಂದರೆ; ವಿಜಯನಗರ ಕಾಲದಲ್ಲಿ ಈ ಕೋಟೆ ಈ ಪ್ರದೇಶದ ಆಯಕಟ್ಟಿನ ಸ್ಥಳವಾಗಿತ್ತು ಹಾಗೂ ನಾಣ್ಯ ಟಂಕಿಸುವ ಕೇಂದ್ರವಾಗಿತ್ತು ಎಂದು ಅಭಿಪ್ರಾಯ ಪಡಬಹುದಾಗಿದೆ. ಇದನ್ನು ಸಮರ್ಥಿಸುವ ಅನೇಕ ಅಂಶಗಳು ಪರಿವೀಕ್ಷಣೆಯ ಸಂದರ್ಭದಲ್ಲಿ ಕಂಡುಬರುತ್ತದೆ.
ಸ್ಥಳೀಯರು ಅಭಿಪ್ರಾಯಪಡುವಂತೆ ಹರಪನಹಳ್ಳಿ ಪಾಳೆಯಗಾರರ ಕಾಲದಲ್ಲಿ ಇದೊಂದು ರಕ್ಷಣಾ ಕೇಂದ್ರ ಹಾಗೂ ಸೈನಿಕ ವೀಕ್ಷಣೆ ಕೇಂದ್ರವಾಗಿತ್ತು ಎಂದು ಹೇಳುತ್ತಾರೆ. ಉಚ್ಚಂಗಿದುರ್ಗದ ಕೋಟೆಯ ಕಾವಲುಗಾರರಿಗೆ ಇಲ್ಲಿಯ ರಕ್ಷಣಾಪಡೆಯ ಕಾವಲುಗಾರರು ಮುನ್ನೆಚ್ಚರಿಕೆಗಳನ್ನು ಪಂಜುಗಳನ್ನು ಉರಿಸುವ ಮೂಲಕ ನೀಡುತ್ತಿದ್ದರಂತೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಈ ನರಸಪ್ಪನ ಬೆಟ್ಟ ವಿಜಯನಗರ ಹಾಗೂ ಹರಪನಹಳ್ಳಿ ಪಾಳೆಯಗಾರರ ಕಾಲದ ನಾಣ್ಯ ಟಂಕಸಾಲೆ ಆಗಿದ್ದಿರಬಹುದು ಮತ್ತು ಹರಪನಹಳ್ಳಿ ಪಾಳೆಯಗಾರರ ಕಾಲದಲ್ಲಿ ಒಂದು ರಕ್ಷಣಾ ಆಯಕಟ್ಟಿನ ಕೇಂದ್ರ ಅಥವಾ ರಕ್ಷಣಾ ವೀಕ್ಷಣಾಲಯ ಆಗಿದ್ದಿರಬಹುದೆಂದು ಅಭಿಪ್ರಾಯ ಪಡಬಹುದಾಗಿದೆ.
ಈ ಬೆಟ್ಟದ ಮೇಲೆ ಪದೇಪದೇ ನಡೆಯುವ ನಿಧಿ ಚೋರರ ಆಕ್ರಮಣಗಳು ಹಾಗೂ ಈ ಭಾಗದ ಸ್ಥಳೀಯರು ಹೇಳುವಂತೆ; ಒಮ್ಮೆ ಇಲ್ಲಿ ಹೊನ್ನಿನ ಮಳೆಯಾಗಿತ್ತಂತೆ, ಮಳೆಯ ನೀರಿನ ಜೊತೆಗೆ ಬೃಹತ್ ಸಂಖ್ಯೆಯಲ್ಲಿ ನಾಣ್ಯಗಳು ಹರಿದು ಬಂದಿದ್ದವಂತೆ. ಇದರಿಂದಾಗಿ ಅರಸೀಕೆರೆಗೆ ಹೊನ್ನರಸೀಕೆರೆ ಎಂದು ಸಹ ಕರೆಯುತ್ತಾರಂತೆ. ಅನೇಕರಿಗೆ ನಾಣ್ಯಗಳು ದೊರೆತ್ತಿದ್ದವಂತೆ, ಈ ಎಲ್ಲ ಅಂಶಗಳನ್ನು ಗಣನೆಗೆ  ತೆಗೆದುಕೊಂಡಲ್ಲಿ ಬಹುತೇಕ ಈ ನರಸಪ್ಪನ ಬೆಟ್ಟದ ತುದಿಯಲ್ಲಿ ಇರುವ ಕೋಟೆ ವಿಜಯನಗರ ಕಾಲ ಅಥವಾ ಹರಪನಹಳ್ಳಿ ಪಾಳೆಯಗಾರರ ಕಾಲದ ನಾಣ್ಯ ಟಂಕಿಸುವ ಒಂದು ಕೇಂದ್ರವಾಗಿತ್ತು ಎಂದು ಹೇಳಬಹುದು ಇದನ್ನು ಸಮರ್ಥಿಸಲು ಲಿಖಿತ ದಾಖಲೆಗಳು ಬೇಕಾಗಿವೆ.
ಈ ನರಸಪ್ಪನ ಬೆಟ್ಟ ಇಲ್ಲಿರುವ ಕೋಟೆ ಪರಿಸರದ ಅವಶೇಷಗಳು ಹರಪನಹಳ್ಳಿ ಪಾಳೆಯಗಾರರ ಕಾಲಕ್ಕೆ ಅತಿ ಸಮೀಪದ ಹೋಲಿಕೆ ಇರುವುದರಿಂದಾಗಿ ಹಾಗೂ ಪಾಳೆಯಗಾರರ ಕೇಂದ್ರ ಸ್ಥಾನ ಹರಪನಹಳ್ಳಿ ಮತ್ತು ಉಚ್ಚಂಗಿದುರ್ಗಕ್ಕೆ ಮಧ್ಯವರ್ತಿ ಸ್ಥಾನದಲ್ಲಿರುವುದರಿಂದಾಗಿ ಈ ನರಸಪ್ಪನ ಬೆಟ್ಟ ಹರಪನಹಳ್ಳಿ ಪಾಳೆಯಗಾರರ ಒಂದು ಸೈನಿಕ ವೀಕ್ಷಣೆ ಕೇಂದ್ರವಾಗಿತ್ತು ಎಂದು ಅಭಿಪ್ರಾಯ ಪಡಬಹುದಾಗಿದೆ.
[ಪ್ರಬಂಧವನ್ನು ಸಿದ್ಧಪಡಿಸಲು ಪ್ರೇರಣೆ ನೀಡಿದ ನನ್ನ ಸಂಶೋಧನಾ ಮಾರ್ಗದರ್ಶಕರಾದ ಡಾ. ಎಂ. ಕೊಟ್ರೇಶ್ ಅವರಿಗೂ ಹಾಗೂ ಕ್ಷೇತ್ರಕಾರ‍್ಯದಲ್ಲಿ ನನ್ನೊಂದಿಗೆ ಇದ್ದು ಸಹಕರಿಸಿದ ಗೆಳೆಯ ಅಜ್ಜಪ್ಪ ಹಾಗೂ ಸ್ಥಳೀಯ ಮಾಹಿತಿ ನೀಡಿದ ಪೂಜಾರಿ ಅಡ್ಡಿ ನಾಗಪ್ಪ ಹಾಗೂ ರೈತರಾದ ಹನುಮಂತಪ್ಪ ಇವರಿಗೂ ಮತ್ತು ನನ್ನ ಜೊತೆಗೆ ಇದ್ದು ಈ ಕಾರ‍್ಯಕ್ಕೆ ನೆರವಾದ ಉಪನ್ಯಾಸಕ ಮಿತ್ರರಾದ ಶಂಕರಯ್ಯ, ಜೆ.ವಿ. ಮಲ್ಲಿಕಾರ್ಜುನ ಹಾಗೂ ನನ್ನ ಪುತ್ರ ಅಶ್ವಿನ್‌ಕುಮಾರ್ ಜವಳಿ ಇವರಿಗೆ ಧನ್ಯವಾದಗಳು.]

ಆಧಾರಸೂಚಿ
೧.         ದೇವರಕೊಂಡಾರೆಡ್ಡಿ ಇತರರು (ಸಂ). ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಕ.ವಿ.ವಿ., ಹಂಪಿ, ೧೯೯೮.
೨.         ಡಾ. ಎಂ. ಕೊಟ್ರೇಶ್, ಹರಪನಹಳ್ಳಿ ತಾಲ್ಲೂಕಿನ ರಕ್ಷಣಾ ಸ್ಮಾರಕಗಳು, ಕ.ವಿ.ವಿ., ಹಂಪಿ-೨೦೧೦.
೩.         ಬಸವರಾಜ ಡಿ., ದಂಡಿ ದುರುಗಮ್ಮನ ಸಾಂಸ್ಕೃತಿಕ ಅಧ್ಯಯನ, (ಎಂ.ಫಿಲ್., ಅಪ್ರಕಟಿತ ಪ್ರಬಂಧ), ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೭.
೪.         ಗಿರಿಜ ಟಿ., ದಾವಣಗೆರೆ ಇದು ನಮ್ಮ ಜಿಲ್ಲೆ, ನಿಹಾರಿಕಾ ಪ್ರಕಾಶನ, ದಾವಣಗೆರೆ, ೨೦೦೧.
೫.         ಕುಂ.ಬಾ. ಸದಾಶಿವಪ್ಪ, ಹರಪನಹಳ್ಳಿ ತಾಲ್ಲೂಕು ಪರಿಚಯ, ಮಾಲತೇಶ ಪ್ರಕಾಶನ, ಹರಪನಹಳ್ಳಿ, ೨೦೦೮.
೬.         ಕುಂ.ಬಾ. ಸದಾಶಿವಪ್ಪ, ಹರಪನಹಳ್ಳಿ ಪಾಳೆಗಾರರು, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೧೯೯೬.
೭.         ಡಾ. ಜೆ.ಎಂ. ನಾಗಯ್ಯ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಲೋಹಿಯಾ ಪ್ರಕಾಶನ, ಬಳ್ಳಾರಿ.

ಮುಖ್ಯಸ್ಥರು, ಇತಿಹಾಸ ವಿಭಾಗ,
ಎ.ಆರ್.ಜೆ. ಕಲಾ ಮತ್ತು ವಾಣಿಜ್ಯ ಕಾಲೇಜು,
ದಾವಣಗೆರೆ-೫೭೭೦೦೪.